
ಬಾಲಿವುಡ್ ನಟಿ, ಖ್ಯಾತ ಗಾಯಕಿ ತುಳಸಿ ಕುಮಾರ್ ಅವರು ಭಾರಿ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಶೂಟಿಂಗ್ ಸಮಯದಲ್ಲಿ ಈ ಅನಾಹುತ ಸಂಭವಿಸಿದೆ. ವಾಸ್ತವವಾಗಿ, ತುಳಸಿ ಕುಮಾರ್ ತಮ್ಮ ಹೊಸ ಮ್ಯೂಸಿಕ್ ವಿಡಿಯೋಗಾಗಿ ಸೆಟ್‌ನಲ್ಲಿ ಕ್ಯಾಮೆರಾದ ಮುಂದೆ ನಟಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಹಿಂದೆ ಇದ್ದ ಬ್ಯಾಕ್ಡ್ರಾಪ್ ಭಾಗ ಬೀಳುತ್ತಿರುವುದನ್ನು ಕಾಣಬಹುದಾಗಿದೆ. ಅದು ಬೀಳುತ್ತಿರುವುದಂತೆಯೇ, ನಟಿ ಓಡಿ ಇತ್ತ ಕಡೆ ಬಂದಿದ್ದಾರೆ. ಆದರೆ ಗಾಬರಿಯಿಂದ ಓಡಿ ಬಂದ ಹಿನ್ನೆಲೆಯಲ್ಲಿ ತುಳಸಿ ಅವರ ಬೆನ್ನು ತುಂಬಾ ನೋಯುತ್ತಿದೆ ಎಂದು ವಿಡಿಯೋದಲ್ಲಿ ನೋಡಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ತುಳಸಿಯವರು, ಕ್ಯಾಮೆರಾ ಮುಂದೆ ನಿಂತು ಶೂಟಿಂಗ್ಗೆ ರೆಡಿ ಆಗುತ್ತಿರುವುದನ್ನು ನೋಡಬಹುದು. ಆದರೆ ಇದ್ದಕ್ಕಿದ್ದಂತೆ ಆಕೆಯ ಹಿಂದಿರುವ ಬ್ಯಾಕ್ಡ್ರಾಪ್ ಬೀಳುವುದನ್ನು ನೋಡಬಹುದು. ಅದೇ ಸಮಯದಲ್ಲಿ ಅಲ್ಲಿದ್ದ ಸಿಬ್ಬಂದಿಯೊಬ್ಬರು ಓಡಿ ಬಂದು ಅದನ್ನು ಹಿಡಿದಿದ್ದಾರೆ. ಅಷ್ಟರಲ್ಲಿಯೇ ನಟಿ ಗಾಬರಿಯಿಂದ ಇತ್ತ ಕಡೆ ಧಾವಿಸಿದ್ದಾರೆ. ಅವರು ಸುಲಭದಲ್ಲಿ ತಪ್ಪಿಸಿಕೊಂಡಿದ್ದಾರೆ. ಸಿಬ್ಬಂದಿ ಬ್ಯಾಕ್ಡ್ರಾಪ್ ಅನ್ನು ಕೈಯಿಂದ ತಡೆದು ಹಿಡಿದ ಕಾರಣ, ಅದು ಕೆಳಕ್ಕೆ ಬೀಳಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿದ್ದವರಿಗೂ ಅಪಾಯ ತಪ್ಪಿದೆ. ಒಂದು ವೇಳೆ ನಟಿ ಕೂಡಲೇ ಅಲ್ಲಿಂದ ಓಡಿ ಬರದಿದ್ದರೆ, ಭಾರಿ ಅವಘಡ ಸಂಭವಿಸುತ್ತಿತ್ತು ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಅಂದು ಆಲಿಯಾ ಅಳುತ್ತಾ ಲಾಕ್ ಮಾಡಿ ಕುಳಿತು ಹೊರಗೆ ಬರ್ಲೇ ಇಲ್ಲ! ಘಟನೆ ನೆನೆದ ನಿರ್ಮಾಪಕ ಬನ್ಸಾಲಿ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ತುಳಸಿಯ ಪ್ರತಿಕ್ರಿಯೆಯೂ ಸೆರೆಯಾಗಿದ್ದು, ಅವರಿಗೆ ನೋವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದರೆ, ಅವರ ಗಾಯದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ನಟ-ನಟಿಯರ ಬಗ್ಗೆ ಕಾಳಜಿ ತೋರದೇ ಇರುವುದಕ್ಕೆ ಇದೇ ವೇಳೆ ನೆಟ್ಟಿಗರಿಂದ ಭಾರಿ ಆಕ್ಷೇಪವೂ ವ್ಯಕ್ತವಾಗುತ್ತಿದೆ.
ಇನ್ನು ತುಳಸಿ ಕುಮಾರ್ ಕುರಿತು ಹೇಳುವುದಾದರೆ, ಈಕೆ ಮೊದಲೇ ಹೇಳಿದಂತೆ ಭಾರತೀಯ ಹಿನ್ನೆಲೆ ಗಾಯಕಿ, ರೇಡಿಯೋ ಜಾಕಿ, ಸಂಗೀತಗಾರ್ತಿ ಮತ್ತು ಬಾಲಿವುಡ್ ನಟಿ . ಇವರು ಚಲನಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಟಿ ಖುಶಾಲಿ ಕುಮಾರ್ ಅವರ ಸಹೋದರಿ. ಕಿಡ್ಸ್ ಹಟ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಇವರು, ನರ್ಸರಿ ರೈಮ್‌ಗಳು ಮತ್ತು ಕಥೆಗಳನ್ನು ಒಳಗೊಂಡಂತೆ ಮಕ್ಕಳ ವಿಷಯವನ್ನು ಒಳಗೊಂಡಿರುವ ರೆಕಾರ್ಡ್ ಲೇಬಲ್ ಟಿ-ಸೀರೀಸ್ ಮಾಲೀಕತ್ವ ಹೊಂದಿದ್ದಾರೆ. ಇವರ "ಸೋಚ್ ನಾ ಸಾಕೆ", "ಸನಮ್ ರೇ", "ನಾಚಾಂಗೆ ಸಾರಿ ರಾತ್", "ಇಷ್ಕ್ ದಿ ಲತ್", "ಸಲಾಮತ್", "ದೇಖ್ ಲೇನಾ", "ವಜಾ ತುಮ್ ಹೋ", "ದಿಲ್ ಕೆ ಪಾಸ್", ಮತ್ತು "ದಿಲ್ ಮೇ" ಸೇರಿದಂತೆ ಇವರ ಹಲವಾರು ಸಂಗೀತ ಆಲ್ಬಂಗಳು ಸಾಕಷ್ಟು ಖ್ಯಾತಿ ಗಳಿಸಿವೆ.
ಸೀತಾರಾಮ ಸೀತಾಳ ಬಾಡಿ ಶೇವಿಂಗ್, ಬಾಡಿ ಮಸಾಜ್ ವಿಡಿಯೋ ವೈರಲ್: ಸುಸ್ತಾದ ಫ್ಯಾನ್ಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.