
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಡಿವೋರ್ಸ್ (Abhishek Bachchan and Aishwarya Rai Bachchan divorce) ಸದ್ಯ ಟ್ರೆಂಡ್ ನಲ್ಲಿರುವ ವಿಷ್ಯ. ಇಬ್ಬರು ವರ್ಷದ ಹಿಂದೆಯೇ ದೂರವಾಗಿದ್ದಾರೆ ಎನ್ನುವ ಸುದ್ದಿ ಇದೆ. ಅಭಿಷೇಕ್ ಮತ್ತು ಐಶ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡ್ತಿವೆ. ಇಬ್ಬರು ಬೇರೆ ಬೇರೆ ವಾಸ ಶುರು ಮಾಡಿದ್ದು, ಯಾವುದೇ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಇಷ್ಟಪಡ್ತಿಲ್ಲ. ಈ ಮಧ್ಯೆ ಅವರ ಮದುವೆ ಹಾಗೂ ಪ್ರೀತಿ- ಸಂಸಾರದ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಅವರ ಹಳೆಯ ವಿಡಿಯೋಗಳು ವೈರಲ್ ಆಗ್ತಿವೆ. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಅವರನ್ನು ಯಾಕೆ ಮದುವೆಯಾದರು ಎಂಬ ಪ್ರಶ್ನೆ ಎದ್ದಿದ್ದು, ಅದಕ್ಕೆ ಉತ್ತರ ಸಿಕ್ಕಿದೆ.
ಐಶ್ – ಅಭಿಷೇಕ್ ಮದುವೆ ಸತ್ಯ (Marriage Truth) : ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಇದ್ರಲ್ಲಿ ಡೌಟ್ ಇಲ್ಲ. ಅಭಿಷೇಕ್ ಬಚ್ಚನ್, ಐಶ್ ಅವರನ್ನು ತುಂಬಾ ಪ್ರೀತಿ ಮಾಡ್ತಿದ್ದರು. ಹೊಟೇಲ್ ಬಾಲ್ಕನಿ ಮೇಲೆ ನಿಂತು ಐಶ್ ಗೆ ಪ್ರಪೋಸ್ ಮಾಡಿದ್ದರು. ಇದಕ್ಕೆ ಐಶ್ವರ್ಯ ಒಪ್ಪಿಗೆ ಕೂಡ ನೀಡಿದ್ದರು. ನಂತ್ರ ಇಬ್ಬರ ಮದುವೆ ನಡೆದಿತ್ತು. ಬಿಗ್ ಬಿ ಅಮಿತಾಬ್ ಬಚ್ಚನ್ (Big B Amitabh Bachchan) ಹಾಗೂ ಜಯಾ ಬಚ್ಚನ್ (Jaya Bachchan) ಕೂಡ, ಐಶ್ ಅವರನ್ನು ಮುದ್ದಿನ ಸೊಸೆ ಎಂದು ಒಪ್ಪಿಕೊಂಡಿದ್ದರು. ಆದ್ರೆ ಅಭಿಷೇಕ್, ಐಶ್ವರ್ಯ ಅವರನ್ನು ಮದುವೆಯಾಗಲು ಮುಖ್ಯ ಕಾರಣವೊಂದಿದೆ. ಅಭಿಷೇಕ್, ತಮ್ಮ ಕುಟುಂಬಕ್ಕೆ ಆದ್ಯತೆ ನೀಡುವ ಪತ್ನಿಯ ಹುಡುಕಾಟ ನಡೆಸಿದ್ದರು. ತನಗಿಂತ ತನ್ನ ಕುಟುಂಬಕ್ಕೆ ಮೊದಲು ಆದ್ಯತೆ ನೀಡುವ ಪತ್ನಿಯ ಅಗತ್ಯತೆ ಅವರಿಗಿತ್ತು. ಐಶ್ ಇದಕ್ಕೆ ಹೇಳಿ ಮಾಡಿಸಿದ ಹುಡುಗಿ. ಐಶ್ ಸದಾ ತಮಗಿಂತ ತಮ್ಮ ಕುಟುಂಬಕ್ಕೆ ಮಹತ್ವ ನೀಡ್ತಾರೆ. ಇದನ್ನು ಅರಿತಿದ್ದ ಅಭಿಷೇಕ್, ಐಶ್ವರ್ಯ ಮದುವೆಯಾಗಲು ಮುಂದಾದ್ರು. ತನ್ನ ಅತ್ತೆಯನ್ನು ಹೆತ್ತ ಅಮ್ಮನಂತೆ ನೋಡಿಕೊಳ್ಳುವ ಐಶ್, ವಿಶ್ವ ಸುಂದರಿಯಾದ್ರೂ ಅಹಂಕಾರವಿಲ್ಲ. ಮೌಲ್ಯಗಳನ್ನು ಎಂದಿಗೂ ಮರೆಯದ ಐಶ್ವರ್ಯ ರೈ ಬಚ್ಚನ್, ಬಿಗ್ ಬಿ ಮನೆಯಲ್ಲಿ ಹೇಗಿರಬೇಕು ಎಂಬುದನ್ನು ತಿಳಿದಿದ್ದರು. ಐಶ್ ನಲ್ಲಿ ತನಗೆ ಬೇಕಾದ ಎಲ್ಲ ಗುಣವನ್ನು ಕಂಡಿದ್ದ ಅಭಿಷೇಕ್, ಐಶ್ ಮದುವೆಯಾದ್ರು ಎನ್ನುವ ಮಾತುಗಳು ಕೇಳಿ ಬಂದಿವೆ.
ಲಿಪ್‌ಸ್ಟಿಕ್ ಹಚ್ಚಿ ಮಲಗುವುದ್ಯಾಕೆ ನಾಗಿಣಿ ನಮ್ರತಾ? ಇದೇನು ರೋಗನಾ?
ಈ ಕಾರಣಕ್ಕೆ ಹಾಳಾಯ್ತು ಅಭಿ – ಐಶ್ ಸಂಬಂಧ : ಈ ಜೋಡಿ ಮದುವೆಯಾಗಿ 17 ವರ್ಷ ಕಳೆದಿದೆ. ಇಬ್ಬರು ಮಾದರಿ ಜೋಡಿಯಾಗಿ ಬಾಲಿವುಡ್ ನಲ್ಲಿ ರಾರಾಜಿಸಿದ್ದಾರೆ. ಮಗಳು ಆರಾಧ್ಯಳಿಗೆ ಉತ್ತಮ ಪೇರೆಂಟ್ ಆಗಿದ್ದ ಐಶ್ ಹಾಗೂ ಅಭಿ, ಪ್ರತಿಯೊಂದು ಕಾರ್ಯಕ್ರಮಕ್ಕೂ ಒಟ್ಟಿಗೆ ಹೋಗ್ತಿದ್ದರು. ಆದ್ರೆ ಈಗ ಎಲ್ಲವೂ ಬದಲಾಗಿದೆ. ಐಶ್ ತನ್ನ ಕೆಲಸದಲ್ಲಿ ಬ್ಯುಸಿ ಇದ್ರೆ, ಅಭಿ ತಮ್ಮ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳದೆ ಅದೆಷ್ಟೋ ದಿನವಾಗಿದೆ.
ರಾಕಿಂಗ್ ಸ್ಟಾರ್ ಡಿಪ್ರೆಷನ್ ಬಗ್ಗೆ ಡೈರೆಕ್ಟರ್ ಶ್ರುತಿ ನಾಯ್ಡುಗೇಕೆ ಭಯವಿತ್ತು?
ಮೊದಲು ಅಭಿಷೇಕ್ ಹಾಗೂ ಕರೀಶ್ಮಾ ಕಪೂರ್ ಮದುವೆ ಫಿಕ್ಸ್ ಆಗಿತ್ತು. ಆದ್ರೆ ಮನೆ ಸೊಸೆ ಸಿನಿಮಾದಲ್ಲಿ ಕಾಣಿಸಿಕೊಳ್ಬಾರದು ಎನ್ನುವ ಕಂಡೀಷನ್ ಕಾರಣಕ್ಕೆ ಕರೀಶ್ಮಾ ಮದುವೆ ಮುರಿದುಬಿದ್ದಿತ್ತು. ಆ ನಂತ್ರ ಐಶ್ ಮದುವೆಯಾದ್ರು ಅಭಿಷೇಕ್. ಮದುವೆ ನಂತ್ರ ಐಶ್ ಅನೇಕ ವರ್ಷಗಳ ಕಾಲ ಸಿನಿಮಾದಿಂದ ದೂರವಿದ್ರು. ಮನೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಅವರು ವೃತ್ತಿ ಜೀವನ ಮಿಸ್ ಮಾಡಿಕೊಂಡಿದ್ದಂತೂ ಸತ್ಯ. ಆ ನಂತ್ರ ದೃಢ ನಿರ್ಧಾರಕ್ಕೆ ಬಂದಿದ್ದ ಐಶ್, ಹೆಚ್ಚು ರೋಮ್ಯಾನ್ಸ್ ಇಲ್ಲದ ಸಿನಿಮಾ ಆಯ್ಕೆ ಮಾಡಿಕೊಂಡ್ರು. ಇದಕ್ಕೂ ಒಂದು ಕಾರಣವಿದೆ. ಅಭಿಷೇಕ್ ಗೆ, ಪತ್ನಿ ಬೇರೆ ನಾಯಕನ ಜೊತೆ ರೋಮ್ಯಾನ್ಸ್ ಮಾಡೋದು ಇಷ್ಟವಿರಲಿಲ್ಲ. ಇದಕ್ಕೆ ಒಪ್ಪಿದ್ದ ಐಶ್ವರ್ಯ, ಸಿನಿಮಾ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದರು. ಇದೇ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಿಸ್ತು ಎಂದು ನೆಟ್ಟಿಗರು ಊಹಿಸ್ತಿದ್ದಾರೆ. ಮತ್ತೆ ಕೆಲವರು ಜಯಾ ಬಚ್ಚನ್ ಕಾರಣ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.