ಅಮಿತಾಭ್​ ಬಚ್ಚನ್​ ವಿರುದ್ಧ ಹೀಗೆ ಫೋಟೋ ಮೂಲಕ ಸೇಡು ತೀರಿಸಿಕೊಂಡ ಪುತ್ರಿ ಶ್ವೇತಾ!

By Suvarna News  |  First Published Jun 15, 2023, 5:55 PM IST

ಅಮಿತಾಭ್​ ಬಚ್ಚನ್​ ಅವರ ಮಗಳು ಬಿಗ್​ ಬಿಯ ಹಳೆಯ ಫೋಟೋ ಒಂದನ್ನು ಶೇರ್​ ಮಾಡಿದ್ದು, ತಂದೆ ವಿರುದ್ಧ ಸೇಡು ತೀರಿಸಿಕೊಂಡಿರುವುದಾಗಿ ಹೇಳಿದ್ದಾರೆ. ಏನಿದೆ ಫೋಟೋದಲ್ಲಿ? 
 


ಅಮಿತಾಭ್​ ಬಚ್ಚನ್ (Amitabh Bachchan) ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಹಳೆಯ ಚಿತ್ರಗಳು ಮತ್ತು ತಮಾಷೆಯ ಶೀರ್ಷಿಕೆಗಳೊಂದಿಗೆ ಆಗಾಗ್ಗೆ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಮೊನ್ನೆ ಅವರು ತಮ್ಮ ಮಗಳು ಶ್ವೇತಾ ಬಚ್ಚನ್ ತಮ್ಮ ಮತ್ತು ನಟಿ ಟ್ವಿಂಕಲ್ ಖನ್ನಾ ಅವರ ಚಿತ್ರದೊಂದಿಗೆ ಫೋಟೋ ಶೇರ್​ ಮಾಡಿಕೊಂಡಿದ್ದರು.  ತಮಾಷೆಯ ಶೀರ್ಷಿಕೆಯೊಂದನ್ನು ಅದಕ್ಕೆ ನೀಡಿದ್ದರು.  ಇದು ಅಭಿಮಾನಿಗಳು  ನಗುವಂತೆ ಮಾಡಿದೆ. ಈಗ ತಮ್ಮ ಹಳೆಯ ಫೋಟೋಗಳನ್ನು ಹಂಚಿಕೊಂಡಿರುವ ತಂದೆ ಅಮಿತಾಭ್​ ಬಚ್ಚನ್​ ಅವರ ಹಳೆಯ ಫೋಟೋವನ್ನು ಶ್ವೇತಾ ಅವರು ಶೇರ್​ ಮಾಡಿಕೊಂಡಿದ್ದು, ತಂದೆಯ ವಿರುದ್ಧ ಸೇಡು ತೀರಿಸಿಕೊಂಡಿರುವುದಾಗಿ ಬರೆದಿದ್ದಾರೆ.  ಶ್ವೇತಾ ಬಚ್ಚನ್ ಕೂಡ ಹಳೆಯ ನೆನಪುಗಳ ಭಂಡಾರದಿಂದ ತಂದೆ ಅಮಿತಾಭ್​  ಅವರ  ಚಿತ್ರವನ್ನು ಹಂಚಿಕೊಂಡಿದ್ದು,  ಅಭಿಮಾನಿಗಳು ಕಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. 

ವಾಸ್ತವವಾಗಿ, ಹಿಂದಿನ ದಿನ, ಅಮಿತಾಭ್​  ಬಚ್ಚನ್ ತಮ್ಮ ಮಗಳು ಶ್ವೇತಾ ಬಚ್ಚನ್ (Swetha Bacchan) ಮತ್ತು ಟ್ವಿಂಕಲ್ ಖನ್ನಾ ಅವರ ತಮಾಷೆಯ ಬಾಲ್ಯದ ಮುಖಗಳನ್ನು ಮಾಡುವ ಚಿತ್ರವನ್ನು ಹಂಚಿಕೊಂಡಿದ್ದರು. ಅದಕ್ಕೆ ಅವರು ತಮಾಷೆಯ ಶೀರ್ಷಿಕೆ ಕೊಟ್ಟಿದ್ದರು.  'ಎಡಭಾಗದಲ್ಲಿ  ಬಿಳಿಯಾಗಿ ಕಾಣುವವಳು  ಟ್ವಿಂಕಲ್ ಖನ್ನಾ ಮತ್ತು ಬಲಭಾಗದಲ್ಲಿ ಶ್ವೇತಾ ಇದ್ದಾಳೆ. ಶ್ವೇತಾಳ  ಹುಟ್ಟುಹಬ್ಬದ ದಿನ ಇದನ್ನು ತೆಗೆದದ್ದು ಎಂದಿದ್ದರು. ಟ್ವಿಂಕಲ್ ಈಗ ಅಕ್ಷಯ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ನನ್ನ ಮಗಳು ಶ್ವೇತಾ   ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ನವ್ಯಾ ನಂದ ಮತ್ತು ಅಗಸ್ತ್ಯ ನಂದಾ ಅವರ ತಾಯಿ. ಈಕೆ ನಿಖಿಲ್ ನಂದಾ (Nikhil Nanda) ಅವರನ್ನು ವಿವಾಹವಾಗಿದ್ದಾರೆ ಎಂದು ಬರೆದಿದ್ದರು. ಅದರಲ್ಲಿ ಶ್ವೇತಾ ಬಾಯಿಯನ್ನು ದೊಡ್ಡದಾಗಿ ಬಿಟ್ಟಿರುವುದನ್ನು ನೋಡಬಹುದಾಗಿದೆ. ಇದು ತಮಾಷೆಯ ಚಿತ್ರವಾಗಿದ್ದು, ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

Tap to resize

Latest Videos

ಚಪ್ಪಲಿ ಬಿಟ್ಟು ಫ್ಯಾನ್ಸ್​ ಮೀಟ್ ಆದ ಬಿಗ್ ಬಿ ಕಾರಣವೂ ಹೇಳಿದ್ದಾರೆ!

 

ಈಗ ಮಗಳು ಶ್ವೇತಾ, ಅಮಿತಾಭ್​ ಅವರು ನಾಲಿಗೆಯನ್ನು ಹೊರಕ್ಕೆ ಚಾಚಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ತಾವು ಬಾಯಿ ಬಿಟ್ಟುಕೊಂಡಿದ್ದ ಫೋಟೋ ಶೇರ್  ಮಾಡಿದ್ದ ತಂದೆಯ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವುದಾಗಿ ಶ್ವೇತಾ ತಮಾಷೆ ಮಾಡಿದ್ದಾರೆ.    ಶ್ವೇತಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ  ಮೆಗಾಸ್ಟಾರ್ ಬಿಗ್​ ಬಿ ಅವರು, ತನ್ನ ನಾಲಿಗೆಯನ್ನು ಚಾಚುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಚಿತ್ರದಲ್ಲಿ ನೋಡಬಹುದು. 

ಈ ತಮಾಷೆಯ ಚಿತ್ರಕ್ಕೆ (Funny post) ಶೀರ್ಷಿಕೆ ಕೊಟ್ಟಿರುವ ಶ್ವೇತಾ ಬಚ್ಚನ್,  'ಅಪ್ಪ, ಅಮಿತಾಭ್​ ಬಚ್ಚನ್, ನಾನು ನಿಮ್ಮ ಪೋಸ್ಟ್ ಅನ್ನು ನೋಡಿದ್ದೇನೆ ಮತ್ತು ನಾನು ನಿಮ್ಮ ಮುಂದೆ ಇದ್ದೇನೆ' ಎಂದು ಬರೆದುಕೊಂಡಿದ್ದಾರೆ. ಅದರೊಂದಿಗಿದೆ  ತಮ್ಮ ನಾಲಿಗೆಯನ್ನು ಚಾಚಿದ ಸ್ಮೈಲಿ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಗಳು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಮತ್ತು ತಂದೆ ಮತ್ತು ಮಗಳ ಈ ತಮಾಷೆಯ ಜೋಡಿಯನ್ನು ಹೊಗಳುತ್ತಿದ್ದಾರೆ. ಈ ಬಗ್ಗೆ ಅಮಿತಾಭ್​ ಬಚ್ಚನ್ ಪ್ರತಿಕ್ರಿಯೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಗಮನಾರ್ಹವಾಗಿ, ಶ್ವೇತಾ ಬಚ್ಚನ್ ಆಗಾಗ್ಗೆ ತಂದೆ ಅಮಿತಾಭ್​ ಬಚ್ಚನ್ ಅವರ ಹಳೆಯ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಪೋಷಕರ ವಾರ್ಷಿಕೋತ್ಸವದಂದು ವಿಶೇಷ ಪೋಸ್ಟ್ (Special post) ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ವಿಶೇಷ ಶೀರ್ಷಿಕೆಯನ್ನು ಸಹ ಹಂಚಿಕೊಂಡಿದ್ದರು. 

Amitabh, Jaya Bacchan ದಾಂಪತ್ಯಕ್ಕೆ 50 ವರ್ಷ: ಬಿಗ್​-ಬಿ ಸಾವಿನ ಸಮೀಪವಿದ್ದಾಗ ಡಾನ್​ ಬಳಿ ಹೋಗಿದ್ದ ಜಯಾ!

ಅಂದಹಾಗೆ, ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ (Amitabh Bachchan ) ಮತ್ತು ಮೋಹಕ ತಾರೆ ಎನಿಸಿಕೊಂಡಿದ್ದ ಜಯಾ ಬಾಧುರಿಯವರು ಇದೇ ಜೂನ್​ 3ರಂದು 50 ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.  ಅಮಿತಾಭ್ ಮತ್ತು ಜಯಾ ಜೋಡಿಯನ್ನು ಬಾಲಿವುಡ್‌ನ ಅತ್ಯಂತ ವಿಶಿಷ್ಟ ಜೋಡಿ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ಹಲವಾರು ಗಣ್ಯರ ಜೊತೆ ಮಗಳು ಶ್ವೇತಾ ಬಚ್ಚನ್​ (Shwetha Bacchan) ಕೂಡ ಅಪ್ಪ-ಅಮ್ಮನ ಕಪ್ಪು ಬಿಳುಪಿನ ಫೋಟೋ ಶೇರ್​ ಮಾಡಿಕೊಂಡು ಶುಭ ಹಾರೈಸಿದ್ದರು.

 

 
 
 
 
 
 
 
 
 
 
 
 
 
 
 

A post shared by S (@shwetabachchan)

click me!