ಕಿಂಗ್ ಖಾನ್ ಅಳಿಯ ಆಗ್ತಾರಾ ಅಗಸ್ತ್ಯ ನಂದಾ: ಮಗನ ಗರ್ಲ್‌ಫ್ರೆಂಡ್‌ ಫೋಟೋಗೆ ಶ್ವೇತಾ ಬಚ್ಚನ್ ಕಾಮೆಂಟ್ ವೈರಲ್

By Suvarna News  |  First Published Sep 1, 2024, 10:51 PM IST

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಫೋಟೋವೊಂದಕ್ಕೆ ಸುಹಾನಾ ಗೆಳೆಯ ಆಗಸ್ತ್ಯ ನಂದಾ ತಾಯಿ ಶ್ವೇತಾ ಬಚ್ಚನ್ ಕಾಮೆಂಟ್ ಮಾಡಿದ್ದು, ಇದು ಇವರಿಬ್ಬರ ಲವ್ ಗಾಸಿಪ್‌ಗೆ ಮತ್ತಷ್ಟು ನೀರೆರೆದಂತೆ ಕಾಣ್ತಿದೆ.


ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಗಾಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ. ಅದೇ ರೀತಿ ಈ ಬಾರಿ ಅವರು ಕ್ರೀಮ್ ಬಣ್ಣದ ಸೀರೆಯುಟ್ಟು ನಿಂತಿರುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಇದಕ್ಕೆ ಅಮಿತಾಭ್‌ ಬಚ್ಚನ್ ಪುತ್ರಿ ಹಾಗೂ ಸುಹಾನಾ ಖಾನ್‌ ರೂಮರ್ಡ್‌ ಬಾಯ್‌ಫ್ರೆಂಡ್ ಎಂದೇ ಹೇಳಲಾಗುತ್ತಿರುವ ಅಗಸ್ತ್ಯ ನಂದಾ ಅವರ ತಾಯಿ ಶ್ವೇತಾ ಬಚ್ಚನ್ ಅವರು ಕಾಮೆಂಟ್ ಮಾಡಿದ್ದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. 

2023ರ ದೀಪಾವಳಿಯ ಥ್ರೋಬ್ಯಾಕ್ ವೀಡಿಯೋ ಇದಾಗಿದ್ದು, ಇದರಲ್ಲಿ ಸುಹಾನಾ ಗೋಲ್ಡನ್ ಬಣ್ಣದ ಸೀರೆಯುಟ್ಟಿದ್ದಾರೆ. ಈ ಸೀರೆಯನ್ನು ಡಿಸೈನರ್ ಪಾಲ್ಗುಣಿ  ಶಾನೆ ಪಿಕಾಕ್ ಅವರು ಡಿಸೈನ್ ಮಾಡಿದ್ದಾರೆ. ಇನ್ನು ಈ ಸೀರೆಯಿಂದ ಹೊರಬರಲಾಗುತ್ತಿಲ್ಲ ಎಂದು ಕ್ಯಾಪ್ಷನ್ ನೀಡಿ ಸುಹಾನಾ ಖಾನ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋ ನೋಡಿದ ಶ್ವೇತಾ ಬಚ್ಚನ್ ಬ್ಯೂಟಿ ಎಂದು ಹೃದಯದಾಕಾರದ ಕಣ್ಣುಗಳಿರುವ ಇಮೋಜಿಯನ್ನು ಸುಹಾನಾಗೆ ಕಾಮೆಂಟ್ ಮಾಡಿದ್ದಾರೆ. ಶ್ವೇತಾ ಅವರದಲ್ಲದೇ ಇನ್ನು ಅನೇಕ ಸೆಲೆಬ್ರಿಟಿಗಳು ಸುಹಾನಾ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಕರಣ್ ಜೋಹರ್ ಗಾರ್ಜಿಯಸ್ ಮೈ ಡಾರ್ಲಿಂಗ್ ಎಂದು ಕಾಮೆಂಟ್ ಮಾಡಿದ್ದರೆ, ಅಮೆರಿಕನ್ ರಾಪರ್ ರಾಜಾ ಕುಮಾರ್, ಬ್ರಿಟಿಷ್ ಫ್ಯಾಷನ್ ಡಿಸೈನರ್ ಸೇರಿದಂತೆ ಅನೇಕರು ಪ್ರತಿಕ್ರಿಯಿಸಿದ್ದಾರೆ. 

Tap to resize

Latest Videos

ಒಟ್ಟಿಗೆ ಇಬ್ಬರ ಜೊತೆ ಡೇಟ್ ಮಾಡ್ಬೇಡ: ಮಗಳಿಗೆ ಗೌರಿ ಖಾನ್ ಕಿವಿಮಾತು, ಮಗನಿಗಿಲ್ಲ ಯಾವುದೇ ಕಂಡೀಷನ್!

ಜುಲೈನಲ್ಲಿ ಸುಹಾನಾ ಖಾನ್ ಹಾಗು ಅಗಸ್ತ್ಯ ನಂದಾ ಲಂಡನ್‌ಗೆ ಜೊತೆಯಾಗಿ ಲಂಡನ್‌ಗೆ ತೆರಳಿದ್ದರು. ಬಾಲಿವುಡ್‌ನ ಮತ್ತೊಂದು ಲವ್‌ಬರ್ಡ್‌ಗಳಿವರು ಎಂದು ಗಾಸಿಪ್ ಹಬ್ಬಿರುವ ಬೆನ್ನಲೇ ಇವರಿಬ್ಬರು ಲಂಡನ್‌ನ ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿರುವ ವೀಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅದರಲ್ಲಿ ಸುಹಾನಾ ಹಾಗೂ ಅಗಸ್ತ್ಯ ಜೊತೆಯಾಗಿ ಡಾನ್ಸ್ ಮಾಡುತ್ತಿರುವ ವೀಡಿಯೋಗಳಿದ್ದವು, ಈ ವೀಡಿಯೋಗಳಲ್ಲಿ ಸುಹಾನಾ ಬಿಳಿ ಬಣ್ಣದ ಟಾಪ್ ನೀಲಿ ಜೀನ್ಸ್‌ನಲ್ಲಿ ಸುಂದರವಾಗಿ ಕಾಣಿಸುತ್ತಿದ್ದರೆ, ಅತ್ತ ಅಗಸ್ತ್ಯಕಪ್ಪು ಟೀ ಶರ್ಟ್‌ ಹಾಗೂ ಪ್ಯಾಂಟ್ ಧರಿಸಿದ್ದ. 

ಅಂಬಾನಿ ಮದುವೆ ಸುಹಾನಾ ಖಾನ್ ಶೇರ್‌ ಮಾಡಿದ ಫೊಟೋಗೆ ಆರ್ಯನ್‌ ಗರ್ಲ್‌ಫ್ರೆಂಡ್‌ ಪ್ರತಿಕ್ರಿಯೆ, ವೈರಲ್‌!

ಇತ್ತ ಅಗಸ್ತ್ಯ ಬಾಲಿವುಡ್‌ ಹಿರಿಯ ನಟ ಅಮಿತಾಭ್ ಬಚ್ಚನ್ ಮೊಮ್ಮಗನಾದರೆ ಸುಹಾನಾ ಖಾನ್ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರಿಯಾಗಿದ್ದಾರೆ. ಇವರಿಬ್ಬರು ಜೊತೆಯಾಗಿ ದಿ ಆರ್ಚೀಸ್ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಪ್ರಮೋಷನ್ ಹಾಗೂ ಶೂಟಿಂಗ್ ವೇಳೆ ನಂತರ ಸಿನಿಮಾ ಬಿಡುಗಡೆಯ ಪ್ರೀಮಿಯರ್ ಶೋದ ವೇಳೆ ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ರೂಮರ್ಸ್ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಹರಿದಾಡುತ್ತಿತ್ತು. ಜೋಯಾ ಅಖ್ತರ್ ನಿರ್ದೇಶನದ ಈ ಸಿನಿಮಾದಲ್ಲಿ ಸುಹಾನಾ ವೆರೊನಿಕಾ ಪಾತ್ರವನ್ನು ಮಾಡಿದ್ದರೆ, ಅತ್ತ ಅಗಸ್ತ್ಯ ಆರ್ಚೀ ಆಂಡ್ರ್ಯೂಸ್ ಪಾತ್ರ ಮಾಡಿದ್ದ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಇವರಿಬ್ಬರಲ್ಲದೇ ಖುಷಿ ಕಪೂರ್, ವೇದಾಂಗ್ ರೈನಾ, ಮಿಹಿರ್ ಅಹುಜಾ, ಅದಿತಿ ಸೈಗಲ್ ಹಾಗೂ ಯುವರಾಜ್ ಮೆಂಡಾ ನಟಿಸಿದ್ದಾರೆ. ಸ್ಟಾರ್‌ಕಿಡ್‌ಗಳೆ ಸೇರಿದ್ದ ಕಾರಣಕ್ಕೆ ಈ ಸಿನಿಮಾ ಬಿಡುಗಡೆಗೆ ಮೊದಲು ಸಾಕಷ್ಟು ಹೈಪ್ ನೀಡಲಾಗಿತ್ತು.

Urfi Kisses to Orry : ಒರಿಗೆ ಮುತ್ತಿಟ್ಟ ಉರ್ಫಿ, ನೀವಿಬ್ಬರು ಮದ್ವೆಯಾಗಿ ಎಂದರೆ?

ಇತ್ತ ಅಗಸ್ತ್ಯ ನಂದಾ ತಮ್ಮ ಮುಂದೆ ಇಕ್ಕಿಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತ ಸುಹಾನಾ ಖಾನ್ ತನ್ನ ತಂದೆ ಶಾರುಖ್ ಖಾನ್‌ ಅಭಿನಯದ ಕಿಂಗ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Suhana Khan (@suhanakhan2)

So apparently Khans fam is still in London. Suhana from last night pic.twitter.com/eyDcEBPdQ1

— •Just• | viciouslady (@jviciouslady)


 

click me!