ದುಬೈ ಏರ್‌ಪೋರ್ಟ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್‌

By Suvarna News  |  First Published Sep 1, 2024, 9:35 PM IST

ಐಶ್ವರ್ಯಾ ರೈ ಹಾಗೂ ಪತಿ ಅಭಿಷೇಕ್ ದುಬೈ ಏರ್‌ಪೋರ್ಟ್‌ನಲ್ಲಿ ಜೊತೆಯಾಗಿ ಓಡಾಡ್ತಿರುವ ವೀಡಿಯೋವೊಂದು ಪಪಾರಾಜಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಜೋಡಿ ಮತ್ತೆ ಹಬ್ಬುತ್ತಿದ್ದ ತಮ್ಮ ಡಿವೋರ್ಸ್ ರೂಮರ್ಸ್‌ಗೆ ತೆರೆ ಎಳೆದಂತೆ ಕಂಡು ಬರುತ್ತಿದೆ.


ಹಲವು ದಿನಗಳಿಂದ ಏಕೆ ಹಲವು ವರ್ಷಗಳಿಂದಲೂ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಡಿವೋರ್ಸ್‌ ಪಡೆಯುತ್ತಿದ್ದಾರೆ. ಬೇರೆ ಬೇರೆ ವಾಸ ಮಾಡುತ್ತಿದ್ದಾರೆ ಎಂಬ ಊಹಾಪೋಹಾಗಳು ಸುದ್ದಿಯಾಗುತ್ತಲೇ ಇದೆ. ಇದರ ಮಧ್ಯೆ ಐಶ್ವರ್ಯಾ ರೈ ಕೂಡ ಅಭಿಷೇಕ್ ಬಿಟ್ಟು ಕೇವಲ ಮಗಳ ಜೊತೆ ಇತ್ತೀಚೆಗೆ ಅಮೆರಿಕಾ ಪ್ರವಾಸ ಹೋಗಿ ಬಂದಿದ್ದು, ಕೂಡ ಮನರೋರಂಜನ ಮಾಧ್ಯಮ ಲೋಕದಲ್ಲಿ ಭಾರಿ ಸುದ್ದಿ ಮಾಡಿತ್ತು. ಈ ಮಧ್ಯೆ ಐಶ್ವರ್ಯಾ ರೈ ಹಾಗೂ ಪತಿ ಅಭಿಷೇಕ್ ದುಬೈ ಏರ್‌ಪೋರ್ಟ್‌ನಲ್ಲಿ ಜೊತೆಯಾಗಿ ಓಡಾಡ್ತಿರುವ ವೀಡಿಯೋವೊಂದು ಪಪಾರಾಜಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಜೋಡಿ ಮತ್ತೆ ಹಬ್ಬುತ್ತಿದ್ದ ತಮ್ಮ ಡಿವೋರ್ಸ್ ರೂಮರ್ಸ್‌ಗೆ ತೆರೆ ಎಳೆದಂತೆ ಕಂಡು ಬರುತ್ತಿದೆ. ಇತ್ತೀಚೆಗೊಮ್ಮೆ ಅಭಿಷೇಕ್ ಬಚ್ಚನ್‌ ಡಿವೋರ್ಸ್ ಸಂಬಂಧಿ ಸುದ್ದಿಗೆ ಲೈಕ್ ಬಟನ್ ಒತ್ತುವ ಮೂಲಕ ಸಂಚಲನ ಸೃಷ್ಟಿಸಿದ್ದರು. 

ಈಗ ದುಬೈನಲ್ಲಿ ಸೆರೆ ಆದ ವೀಡಿಯೋದಲ್ಲಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಜೊತೆಯಾಯಿ ದುಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಈ ಮೂವರು ಏರ್‌ಪೋರ್ಟ್‌ ಬಸ್‌ ಏರುವುದನ್ನು ಕಾಣಬಹುದಾಗಿದೆ. ಅಭಿಷೇಕ್ ಬಚ್ಚನ್ ಮೊದಲು ಬಸ್ ಏರಿದರೆ ನಂತರ ಐಶ್ವರ್ಯಾ ಹಾಗೂ ಆರಾಧ್ಯಾ ಅಭಿಷೇಕ್ ಬಚ್ಚನ್‌ನ ಫಾಲೋ ಮಾಡ್ತಾರೆ. ಫ್ಯಾನ್ ಫೇಜೊಂದು ಈ ವೀಡಿಯೋವನ್ನು ಪೋಸ್ಟ್ ಮಾಡಿದೆ. 

Tap to resize

Latest Videos

ಅಭಿಷೇಕ್‌ ಬಚ್ಚನ್‌ಗಿಂತ ಐಶ್ವರ್ಯಾ ರೈ ಆಸ್ತಿ ಹೆಚ್ಚು: ವಿವರ ಗೊತ್ತಾದ್ರೆ ನೀವು ಶಾಕ್ ಆಗ್ತೀರ!

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಡಿವೋರ್ಸ್ ರೂಮರ್ಸ್ ಇಂದು ನಿನ್ನೆಯದಲ್ಲ,   ಅವರು ಒಬ್ಬರನ್ನು ಬಿಟ್ಟು ಒಬ್ಬರೇ ಕಾಣಿಸಿಕೊಂಡಾಗಲೆಲ್ಲಾ ಈ ರೂಮರ್ಸ್ ಇಂಟರ್‌ನೆಟ್‌ನಲ್ಲಿ ಸೌಂಡ್ ಮಾಡುತ್ತಲೇ ಇರುತ್ತದೆ. ಅದೇ ರೀತಿ ಕಳೆದ ಜುಲೈನಲ್ಲಿ ನಡೆದ ಹೈ ಪ್ರೊಫೈಲ್ ಮದುವೆಯೊಂದರಲ್ಲಿ ಈ ಜೋಡಿ ಬೇರೆ ಬೇರೆಯಾಗಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ಹಾಗೂ ಮಗಳು ಆರಾಧ್ಯ ಜೊತೆಯಾಗಿ ಬಂದರೆ, ಇತ್ತ ಅಭಿಷೇಕ್ ಬಚ್ಚನ್ ಅಪ್ಪ ಅಮಿತಾಭ್ ಬಚ್ಚನ್ ಹಾಗೂ ಅಮ್ಮ ಜಯಾ ಬಚ್ಚನ್, ಸೋದರಿ ಶ್ವೇತಾ ಬಚ್ಚನ್ ಹಾಗೂ ಸೊಸೆ ನವ್ಯಾ ನವೇಲಿ ಜೊತೆ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಊಹಾಪೋಹಕ್ಕೆ ಮತ್ತೆ ರೆಕ್ಕೆಪುಕ್ಕ ಸಿಕ್ಕಿತ್ತು. 

ಇದೇ ಸಮಯದಲ್ಲಿ ಗ್ರೇ ಡಿವೋರ್ಸ್ ಸಂಬಂಧಿ ಪೋಸ್ಟ್‌ವೊಂದಕ್ಕೆ ಅಭಿಷೇಕ್ ಬಚ್ಚನ್ ಲೈಕ್ ಕೊಡುವ ಮೂಲಕ ಡಿವೋರ್ಸ್ ಊಹಾಪೋಹಾದ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. (ಗ್ರೇ ಡಿವೋರ್ಸ್ ಎಂದರೆ ದಶಕಗಳಿಗೂ ಅಧಿಕ ಕಾಲ ಜೊತೆಗೆ ಇದ್ದು ಇಳಿವಯಸ್ಸಲ್ಲಿ ದೂರಾಗುವುದು)  ಈ ಪೋಸ್ಟ್‌ನಲ್ಲಿ ಡಿವೋರ್ಸ್ ಅನ್ನು ನಿರ್ವಹಿಸುವುದು ಯಾರಿಗೂ ಅಷ್ಟೊಂದು ಸುಲಭವಲ್ಲ, ವೃದ್ಧ ದಂಪತಿಗಳು ರಸ್ತೆ ದಾಟುತ್ತಿರುವಾಗ  ಪರಸ್ಪರ ಕೈ ಹಿಡಿದುಕೊಂಡಿರುವ ಭಾವುಕ ವೀಡಿಯೊಗಳನ್ನು ಮರುಸೃಷ್ಟಿಸಲು ಯಾರು ಸಂತೋಷದ ನಂತರ ಕನಸು ಕಾಣುವುದಿಲ್ಲ ಆದರೂ, ಕೆಲವೊಮ್ಮೆ ನಾವು ನಿರೀಕ್ಷಿಸಿದಂತೆ ಜೀವನವು ಇರುವುದಿಲ್ಲ. ಆದರೆ ಜನರು ದಶಕಗಳ ನಂತರ ಒಟ್ಟಿಗೆ ಇದ್ದು ಬೇರ್ಪಟ್ಟಾಗ, ತಮ್ಮ ಜೀವನದ ಗಮನಾರ್ಹ ಭಾಗವನ್ನು ದೊಡ್ಡ ಮತ್ತು ಸಣ್ಣ ವಿಷಯಗಳಿಗೆ ಪರಸ್ಪರ ಅವಲಂಬಿಸಿರುವ ನಂತರ ಹೇಗೆ ಒಬ್ಬರಿಲ್ಲದೇ ಇರುವ ಸ್ಥಿತಿಯನ್ನು ನಿಭಾಯಿಸುತ್ತಾರೆ? ಸಂಬಂಧಗಳನ್ನು ಕಡಿದುಕೊಳ್ಳಲು ಅವರನ್ನು ಯಾವುದು ಪ್ರೇರೇಪಿಸುತ್ತದೆ ಮತ್ತು ಅವರು ಯಾವ ಸವಾಲುಗಳನ್ನು ಅವರು ಎದುರಿಸುತ್ತಾರೆ? ಎಂದು ಬರೆದಿತ್ತು. ಸಾಮಾನ್ಯವಾಗಿ 50 ವರ್ಷ ವಯಸ್ಸಿನ ನಂತರ ವೈವಾಹಿಕ ಜೀವನದಿಂದ ಪರಸ್ಪರ ದೂರಾಗುವುದನ್ನು ಜಾಗತಿಕವಾಗಿ ಗ್ರೇ ಡಿವೋರ್ಸ್ ಅಥವಾ ಸಿಲ್ವರ್ ಸ್ಪ್ಲಿಟರ್ಸ್ ಎಂದು ಕರೆಯುತ್ತಾರೆ.

ಎಷ್ಟೇ ಮುನಿಸಿದ್ರೂ ಈ ಕಾರಣಕ್ಕ ಡಿವೋರ್ಸ್‌ ನೀಡೋಲ್ವಂತೆ ಅಭಿಷೇಕ್‌ - ಐಶ್!

ಅಂದಹಾಗೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್  ಅವರು 2007ರ ಏಪ್ರಿಲ್‌ನಲ್ಲಿ ಮದುವೆಯಾಗಿದ್ದು, 2011ರಲ್ಲಿ ಇವರಿಬ್ಬರಿಗೆ ಮಗಳು ಆರಾಧ್ಯ ಬಚ್ಚನ್ ಜನಿಸಿದರು. ಇಲ್ಲಿಯವರೆಗೂ ಈ ಡಿವೋರ್ಸ್ ರೂಮರ್ಸ್ ಬಗ್ಗೆ ಜೋಡಿ ಯಾವತ್ತೂ ಮಾತನಾಡಿಲ್ಲ.

 

click me!