ಜಗಳಕ್ಕೆ ಕಾಲ್ ಕೆರೆದು ಬಂದವರಗೆ ಪುಷ್ಪರಾಜ್ ಖಡಕ್ ಉತ್ತರ; ಅಲ್ಲು ಅರ್ಜುನ್ ಪುಷ್ಪ2 ಹೊಸ ರೆಕಾರ್ಡ್..!

By Shriram Bhat  |  First Published Sep 1, 2024, 8:39 PM IST

ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ. 2021 ರಲ್ಲಿ ಬಿಡುಗಡೆ ಆಗಿದ್ದ ಮೊದಲ ಭಾಗ ಬಾಕ್ಸಾಫೀಸ್ನಲ್ಲಿ ಅಲ್ಲು ದರ್ಬಾರ್ ಮಾಡೇ ಮಾಡ್ತಾರೆ ಅಂತ ಶ್ರೀಕಾರ ಹಾಕಿತ್ತು. ಈಗ 'ಪುಷ್ಪ2' ಟೈಂ  ಬಂದಿದೆ. ..


ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಈಗ ಆಂಧ್ರದಲ್ಲಿ ಟಾಕ್ ಆಫ್ ದಿ ಟೌನ್.. ಅದಕ್ಕೆ ಕಾರಣ ಅಲ್ಲು ಅರ್ಜುನ್ ಹಾಗು ಪವನ್ ಕಲ್ಯಾಣ್ ಮಧ್ಯೆಯ ಕೋಲ್ಡ್ ವಾರ್ ಮತ್ತು ಜನ ಸೇನಾ ಪಕ್ಷದ ಸದಸ್ಯರ ಜೊತೆ ಅಲ್ಲು ಕಿತ್ತಾಟ. ಇದೀಗ ಆ ಕೋಲ್ಡ್ ವಾರ್ ಮತ್ತು ಕಿತ್ತಾಟಕ್ಕೆ ಕೌಂಟರ್ ಆಗಿ ಅಲ್ಲು ಭರ್ಜರಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಅದೇನು ಅಂತ ನೋಡಿದ್ರೆ ಅಲ್ಲು ಫ್ಯಾನ್ಸ್ ದಿಲ್ ಖುಷ್ ಹುವಾ ಅನ್ನೋದು ಗ್ಯಾರಂಟಿ.. 

ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಹಾಗು ನಿರ್ದೇಶಕ ಸುಕುಮಾರ್ ಕಿತ್ತಾಡಿಕೊಂಡಿದ್ದಾರೆ ಅಂತ ದೊಡ್ಡ ಸುದ್ದಿ ಟಾಲಿವುಡ್ಅನ್ನ ಆವರಿಸಿತ್ತು. ಆದ್ರೆ ಅಲ್ಲು ಸುಕುಮಾರ್ ಒಂದೇ ವೇದಿಕೆ ಮೇಲೆ ಬಂದು ಆ ಕಿತ್ತಾಟಕ್ಕೆ ತೆರೆ ಎಳೆದಿದ್ರು. ಆ ಬಳಿಕ ಆಗಿದ್ದು ಅಲ್ಲು ಅರ್ಜುನ್ ಮಾವ ಪವನ್ ಕಲ್ಯಾಣ್ ಮಾಧ್ಯೆ ಕೋಲ್ಡ್ ವಾರ್ ಅನ್ನೋ ಟಾಕ್ಸ್. ಇದಕ್ಕೆ ಪುಷ್ಟಿ ಕೊಡುವಂತೆ, ಪವನ್ ಕಲ್ಯಾಣ್ ಪುಷ್ಪ ಸಿನಿಮಾ ಹೆಸರು ಹೇಳದೇ ಈಗ ಅರಣ್ಯದಲ್ಲಿ ಶ್ರೀಗಂಧದ ಕಳ್ಳಸಾಗಣೆ ಮಾಡುವವನೇ ಸಿನಿಮಾದಲ್ಲಿ ನಾಯಕ ಆಗಿದ್ದಾನೆ ಅಂತ ಕಾಲೆಳೆದಿದ್ರು.

Tap to resize

Latest Videos

ಅಪರ್ಣಾ ನುಡಿಮುತ್ತುಗಳು ಭಾರೀ ವೈರಲ್ ಆಗ್ತಿವೆ; ಕಾಲೇಜಿನಲ್ಲಿ ಅದೆಂಥ ಮುತ್ತಿನಂಥ ಮಾತು..!

ಅಲ್ಲು ಅರ್ಜುನ್ ನಟನೆಯ ಪುಷ್ಪ2 ಹೊಸ ರೆಕಾರ್ಡ್, ಜಗಳಕ್ಕೆ ಕಾಲ್ ಕೆರದು ಬಂದವರಗೆ ಪುಷ್ಪರಾಜ್ ಖಡಕ್ ಉತ್ತರ: ಅದಾದ್ಮೇಲೆ ಪವನ್ ಕಲ್ಯಾಣ್ರ ಜನಸೇನಾ ಪಕ್ಷದ ನಾಯಕ ಬೋಲಿ ಶೆಟ್ಟಿ, ಅಲ್ಲು ಅರ್ಜುನ್ ಏನು ದೊಡ್ಡ ಪುಡಾಂಗಾ.,.? ಅವನಿಗೆ ಯಾವ್ ಸೀಮೆ ಫ್ಯಾನ್ಸ್ ಇದ್ದಾರೆ ಅಂದಿದ್ರು. ತನ್ನ ಜೊತೆ ಜಗಳಕ್ಕೆ ಬಂದವರಿಗೆ ಅಲ್ಲು ಅರ್ಜುನ್ ಪುಷ್ಪ2 ಮೂಲಕ ಸಖತ್ತಾಗೆ ಉತ್ತರ ಕೊಟ್ಟಿದ್ದಾರೆ. ಅಲ್ಲು ನಟನೆಯ ಪುಷ್ಪ2 ಸಿನಿಮಾ ದೊಡ್ಡ ರೆಕಾರ್ಡ್ ಒಂದನ್ನ ತನ್ನ ಹೆಸರಿಗೆ ಗೀಚಿಕೊಂಡಿದೆ. 

ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ. 2021 ರಲ್ಲಿ ಬಿಡುಗಡೆ ಆಗಿದ್ದ ಮೊದಲ ಭಾಗ ಬಾಕ್ಸಾಫೀಸ್ನಲ್ಲಿ ಅಲ್ಲು ದರ್ಬಾರ್ ಮಾಡೇ ಮಾಡ್ತಾರೆ ಅಂತ ಶ್ರೀಕಾರ ಹಾಕಿತ್ತು. ಈಗ 'ಪುಷ್ಪ2' ಟೈಂ  ಬಂದಿದೆ. ಪುಷ್ಪ2 ಒಟಿಟಿ ಹಕ್ಕುಗಳನ್ನು ಭಾರಿ ದೊಡ್ಡ ಮೊತ್ತಕ್ಕೆ  ಮಾರಾಟ ಆಗಿದೆ. 'ಪುಷ್ಪ 2' ಸಿನಿಮಾದ ಒಟಿಟಿ ಬಿಡುಗಡೆ ಹಕ್ಕನ್ನು ನೆಟ್ಫ್ಲಿಕ್ಸ್ಗೆ ಮಾರಾಟ ಆಗಿದ್ದು, ಎಲ್ಲಾ ಭಾಷೆಯ ಪುಷ್ಪ2ಗೆ ಬರೋಬ್ಬರಿ   270 ಕೋಟಿ ರೂಪಾಯಿ ಸಿಕ್ಕಿದೆ. 

ಖಳನಟ ಸುಧೀರ್ ಬಗ್ಗೆ ಫ್ಯಾನ್ಸ್ ಕ್ರೇಜ್ ಹೀಗಿತ್ತು ಎಂದರೆ ಯಾರೂ ನಂಬಲಿಕ್ಕೇ ಅಸಾಧ್ಯ!

ಇನ್ನು, ಪುಷ್ಪ-2ಗೆ ಖರ್ಚಾಗಿದ್ದು 500 ಕೋಟಿ..  ಒಟಿಟಿಯಿಂದ ಬಂದಿದ್ದು 270 ಕೋಟಿ..: ಪುಷ್ಪ ಪಾರ್ಟ್ ಒನ್ ಕಲೆಕ್ಷನ್ ಮಾಡಿದ್ದು 370 ಕೋಟಿ ಹಣವನ್ನ. ಆದ್ರೆ ಪುಷ್ಪ2 ಸಿನಿಮಾ ಬಡ್ಜೆಟ್ 500 ಕೋಟಿ. ಇಷ್ಟೊಂದು ಇನ್ವೆಸ್ಟ್ ಮಾಡಿರೋ ಈ ಸಿನಿಮಾಗೆ ಬರಿ ಒಟಿಟಿಯಿಂದಲೇ ಬರೋಬ್ಬರಿ 270 ಕೋಟಿ ಬಂದಿದೆ ಅಂತ ವರದಿ ಆಗಿದೆ. ಅಲ್ಲಿಗೆ ಪುಷ್ಪ2 ಗಿರೋ ಬೇಡಿಕೆ ಎಂಥಾದ್ದು ಅಂತ ಗೊತ್ತಾಗುತ್ತೆ. 'ಪುಷ್ಪ 2' ಡಿಸೆಂಬರ್ನಲ್ಲಿ ರಿಲೀಸ್ ಆಗಲಿದೆ. 

click me!