1.3 ಲಕ್ಷದ ನೆಕ್ಲೇಸ್ ಧರಿಸಿ ಲಂಡನ್ ಮನೆಯಲ್ಲಿ ಚಿಲ್ ಮಾಡ್ತಿದ್ದಾರೆ ಪಿಗ್ಗಿ

Published : Apr 18, 2021, 05:42 PM IST
1.3 ಲಕ್ಷದ ನೆಕ್ಲೇಸ್ ಧರಿಸಿ ಲಂಡನ್ ಮನೆಯಲ್ಲಿ ಚಿಲ್ ಮಾಡ್ತಿದ್ದಾರೆ ಪಿಗ್ಗಿ

ಸಾರಾಂಶ

ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಮರಳು ಬಣ್ಣದ ರಿಬ್ಬಡ್ ಸ್ವೆಟರ್ ಧರಿಸಿ ಕ್ಯಾಮೆರಾವನ್ನು ನೋಡುತ್ತಿದ್ದಂತೆಯೇ ಬೆರಗುಗೊಳಿಸುವವರಂತೆ ಕಾಣುತ್ತಿದ್ದರು. ಗಮನ ಸೆಳೆದಿದ್ದು ನಟಿಯ ಕೊರಳನ್ನು ಅಲಂಕರಿಸಿದ್ದ ಶನೆಲ್ ಸರಪಳಿ.

ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಲಂಡನ್‌ನಲ್ಲಿ ಪತಿಯ ಜೊತೆ ಜಾಲಿ ಮೂಡ್‌ನಲ್ಲಿದ್ದಾರೆ. ದಿ ವೈಟ್ ಟೈಗರ್ ನಟಿ ತನ್ನ ಜೀವನದ ಪ್ರತಿ ನಿಮಿಷವನ್ನು ಆನಂದಿಸುತ್ತಿದ್ದಾರೆ.

ನಟಿ, ರೂಪದರ್ಶಿ, ಉದ್ಯಮಿ, ರೆಸ್ಟೋರೆಂಟ್ ಮಾಲಕಿ ಮತ್ತು ಅನ್‌ಫಿನಿಶ್ಡ್ ಲೇಖಕಿ ಪ್ರಸ್ತುತ ಪತಿ ನಿಕ್ ಜೊನಸ್ ಅವರೊಂದಿಗೆ ಲಂಡನ್‌ನಲ್ಲಿದ್ದಾರೆ. ದಂಪತಿ ತಮ್ಮ ಸುಂದರವಾದ ಮತ್ತು ವಿಶಾಲವಾದ ಮನೆಯಲ್ಲಿ ಮೂರು ಸಾಕುಪ್ರಾಣಿಗಳಾದ ಡಯಾನಾ, ಗಿನೋ ಮತ್ತು ಪಾಂಡಾಗಳೊಂದಿಗೆ ಫ್ರೀ ಟೈಂ ಎಂಜಾಯ್ ಮಾಡುತ್ತಿದ್ದಾರೆ.

ಪಿಗ್ಗಿಯ ಈ ಸಮ್ಮರ್ ಡ್ರೆಸ್ ಬೆಲೆಗೆ ಒಂದಲ್ಲ, 4 ಗೇಮಿಂಗ್ ಲ್ಯಾಪ್‌ಟಾಪ್ ಬರ್ತಿತ್ತು..!

ಕ್ವಾಂಟಿಕೊ ನಟಿ ಇತ್ತೀಚೆಗೆ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮದೊಂದು ಫೋಟೋ ಶೇರ್ ಮಾಡಿದ್ದಾರೆ. ಹಸಿರು ಮಂಚದ ಮೇಲೆ ಮಲಗಿದ್ದರು ಪಿಗ್ಗಿ. ಎಂದಿನಂತೆ, ಪ್ರಿಯಾಂಕಾ ಕನಿಷ್ಟ ಮೇಕಪ್‌ನಲ್ಲಿ ತನ್ನ ಸ್ವಂತ ಫೋನ್ ಮೂಲಕ ಫೋಟೋ ಕ್ಲಿಕ್ ಮಾಡಿದ್ದಾರೆ.

ನಟಿ ಬೆಳಕಿನಲ್ಲಿ ವಾಸ ಎಂಬ ಕ್ಯಾಪ್ಶನ್ ಕೊಟ್ಟಿದ್ದು ಫೋಟೋ ಆಕರ್ಷಕವಾಗಿ ಮೂಡಿ ಬಂದಿದೆ. ಮರಳು ಬಣ್ಣದ ರಿಬ್ಬಡ್ ಸ್ವೆಟರ್, ಕಿತ್ತಳೆ ಬಣ್ಣದ ಲಿಪ್ಸ್ಟಿಕ್, ಕಿವಿಯಲ್ಲಿ ಸಣ್ಣ ಹೂಪ್ಸ್ ಮತ್ತು ಕುತ್ತಿಗೆಯಲ್ಲಿ ಸೂಕ್ಷ್ಮವಾದ ಶನೆಲ್ ಸರ ಧರಿಸಿದ್ದರು ಪ್ರಿಯಾಂಕಾ.

'ಡ್ಯಾನ್ಸ್ ಕಲಿತು ಸೆಟ್‌ಗೆ ಬನ್ನಿ': ಪ್ರಿಯಾಂಕಾಗೆ ಬೈದ ಕೊರಿಯೋಗ್ರಫರ್

ಕಪ್ಪು, ಬಿಳಿ ಗ್ಲಾಸ್ ಪರ್ಲ್ ಮತ್ತು ಕ್ರಿಸ್ಟಲ್ ಬೀಡ್ಸ್‌ನಿಂದ ಮಾಡಿದ ಸರವಾಗಿತ್ತು ಅದು. ಈ ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಈ ಸರದ ಬೆಲೆ ಬರೋಬ್ಬರಿ 1,34,172 ರೂಪಾಯಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!