ಬಾಡಿಗೆ ತಾಯಿ ಪ್ರಕರಣದಲ್ಲಿ ನಟಿ ನಯತನಾರಾ ದಂಪತಿಗೆ ಕ್ಲೀನ್ ಚಿಟ್, ಆಸ್ಪತ್ರೆಗೆ ಎದುರಾಯ್ತು ಸಂಕಷ್ಟ!

By Suvarna NewsFirst Published Oct 26, 2022, 7:44 PM IST
Highlights

ನಟಿ ನಯನತಾರಾ ಹಾಗೂ ವಿಘ್ನೇಶ್ ದಂಪತಿ ಜೋಡಿದೆ ದೀಪಾವಳಿ ಹಬ್ಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಅವಳಿ ಮಕ್ಕಳ ಪಡೆದ ಬೆನ್ನಲ್ಲೇ ತನಿಖೆ ಎದುರಿಸಿದ ಈ ಸ್ಟಾರ್ ಜೋಡಿಗೆ ಇದೀಗ ಕ್ಲೀನ್ ಚಿಟ್ ಸಿಕ್ಕಿದೆ. ಆದರೆ ಲೋಪ ಎಸಗಿರುವ ಆಸ್ಪತ್ರೆಯನ್ನು ಯಾಕೆ ಮುಚ್ಚಬಾರದು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಚೆನ್ನೈ(ಅ.26): ಸೌತ್ ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ದಂಪತಿಗಳಿಗೆ ರಿಲೀಫ್ ಸಿಕ್ಕಿದೆ. ಮದುವೆಯಾದ ನಾಲ್ಕೇ ತಿಂಗಳಲ್ಲಿ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪಡೆದ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪಡೆಯುವಾಗಿ ನಿಯಮ ಉಲ್ಲಂಘಿಸಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಈ ಕುರಿತು ಚೆನ್ನೈ ವೈದ್ಯಕೀಯ ಸೇವೆ ನಿರ್ದೇಶಕರ ಸಮಿತಿ ತನಿಖೆ ನಡೆಸಿತ್ತು. ಇದೀಗ ತನಿಖಾ ವರದಿ ಬಹಿರಂಗವಾಗಿದೆ. ಬಾಡಿಗೆ ತಾಯ್ತನದ ವೇಳೆ ನಟಿ ನಯನತಾರಾ ಹಾಗೂ ವಿಘ್ನೇಶ್ ಜೋಡಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ವರದಿ ನೀಡಿದೆ. ಸಾರ್ವಜನಿಕವಾಗಿ ಇವರ ಮದುವೆ ನಾಲ್ಕು ತಿಂಗಳ ಹಿಂದೆ ನಡೆದಿತ್ತು. ಆದರೆ ಅಧಿಕೃತವಾಗಿ 2016ರಲ್ಲಿ ಮದುವೆ ನಡೆದಿದೆ. ಕಳೆದ ವರ್ಷ  ಬಾಡಿಗೆ ತಾಯ್ತತನದ ಮೂಲಕ ಮಗು ಪಡೆಯುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಬಾಡಿಗೆ ತಾಯ್ತನಕ್ಕಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ICMR) ಮಾರ್ಗಸೂಚಿಗಳ ಪ್ರಕಾರ ನಡೆದುಕೊಳ್ಳಲಾಗಿದೆ ಎಂದು ವರದಿ ಹೇಳಿದೆ.  ಆದರೆ ಬಾಡಿಗೆ ತಾಯ್ತನದಲ್ಲಿ ಆಸ್ಪತ್ರೆ ಕೆಲ ಲೋಪ ಎಸಗಿದೆ. ಇದು ICMR ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಆಸ್ಪತ್ರೆಯ ಕೃತಕ ಗರ್ಭಧಾರಣೆ ಕೇಂದ್ರವನ್ನು ಯಾಕೆ ಮುಚ್ಚಬಾರದು ಎಂದು ನೋಟಿಸ್ ಕಳುಹಿಸಿದೆ.  ಚೆನ್ನೈ ವೈದ್ಯಕೀಯ ನಿರ್ದೇಶಕರು ನಡೆಸಿದ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇದೀಗ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ.

ICMR ಮಾರ್ಗಸೂಚಿಗಳ ಪ್ರಕಾರ ನಯನತಾರಾ ಜೋಡಿಯ ಬಾಡಿಗೆ ತಾಯಿ ನಿಗದಿತ ವಯಸ್ಸು ಹೊಂದಿದ್ದಾರೆ. ಜೊತೆಗೆ ಒಂದು ಮಗುವಿನೊಂದಿಗೆ ವಾಸವಾಗಿದ್ದಾರೆ. ನಯನತಾರಾ ಜೋಡಿ 2016, ಮಾರ್ಚ್ 11 ರಂದು ಮದುವೆಯಾಗಿರುವ ಮ್ಯಾರೇಜ್ ರಿಜಿಸ್ಟ್ರೇಶನ್ ಪತ್ರವನ್ನು ಸಲ್ಲಿಸಿದ್ದಾರೆ. 2020ರ ಆಗಸ್ಟ್ ತಿಂಗಳಲ್ಲಿ ನಯನತಾರಾ ದಂಪತಿಗಳ  ಆಂಡಾಣು ಹಾಗೂ ವೀರ್ಯ ಸಂಗ್ರಹಿಸಲಾಗಿದೆ. ಬಳಿಕ ಕ್ರಯೋಪ್ರಿಸರ್ವೇಶನ್ ಮೂಲಕ ಮೂಲಕ ಭ್ರೂಣ ಅಭಿವೃದ್ಧಿಪಡಿಸಲಾಗಿತ್ತು. ಸ್ಟಾರ್ ಸೆಲೆಬ್ರೆಟಿಗಳು 2021ರ  ನವೆಂಬರ್ ತಿಂಗಳಲ್ಲಿ ಬಾಡಿಗೆ ತಾಯ್ತನದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 2022ರ ಮಾರ್ಚ್ ತಿಂಗಳಲ್ಲಿ ಅಂಡಾಣುಗಳನ್ನು ಬಾಡಿಗೆ ತಾಯಿಯ ಗರ್ಭಾಶಯಕ್ಕೆ ಅಳವಡಿಸಲಾಗಿದೆ. ಒಟ್ಟು ಭ್ರೂಣ ಬೆಳೆದು ಮಗುವಿನ ರೂಪದಲ್ಲಿ ಜನ್ಮತಾಳಲು 9 ತಿಂಗಳ ಸಮಯ ತೆಗೆದುಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಬಾಡಿಗೆ ತಾಯಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯಕೀಯ ನಿರ್ದೇಶಕರು ತನಿಖಾ ವರದಿಯಲ್ಲಿ ಹೇಳಿದ್ದಾರೆ. 

Latest Videos

 

ಮುದ್ದಾದ ಅವಳಿ ಮಕ್ಕಳ ಜೊತೆ ನಯನತಾರಾ ದೀಪಾವಳಿ; ವಿಡಿಯೋ ಮೂಲಕ ವಿಶ್ ಮಾಡಿದ ಜೋಡಿ

ಆದರೆ ಈ ತನಿಖಾ ವರದಿಯಲ್ಲಿ ಕೆಲ ಅಂಶಗಳನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಅಂಡಾಣು ಚಿಕಿತ್ಸೆ ಕುರಿತು ಬಾಡಿಗೆ ತಾಯ್ತನದ ಚಿಕಿತ್ಸಾ ದಾಖಲೆಗಳನ್ನು ಆಸ್ಪತ್ರೆ ಸರಿಯಾಗಿ ನಿರ್ವಹಿಸಿಲ್ಲ  ಎಂದಿದೆ.  ICMR ನಿಯಮಳ ಪ್ರಕಾರ ಆಸ್ಪತ್ರೆ ದಂಪತಿಗೆ ನೀಡಿದ ಚಿಕಿತ್ಸೆ, ಬಾಡಿಗೆ ತಾಯಿಯ ವೈದ್ಯಕೀಯ ಮಾಹಿತಿಗಳು ಸ್ಪಷ್ಟವಾಗಿರಬೇಕು. ಆದರೆ ಆಸ್ಪತ್ರೆ ಈ ದಾಖಲೆಗಳನ್ನು ನಿರ್ವಹಿಸಿಲ್ಲ. ಹೀಗಾಗಿ ನಿಯಮಗಳನ್ನು ಪಾಲಿಸಿದ ಆಸ್ಪತ್ರೆಯ ಕೃತಕ ಗರ್ಭಧಾರಣೆ ಕೇಂದ್ರವನ್ನು ಯಾಕೆ ಮುಚ್ಚಬಾರದು ಎಂದು ನೋಟಿಸ್ ಕಳುಹಿಸಲಾಗಿದೆ.  

6 ವರ್ಷದ ಹಿಂದೆಯೇ ಮದುವೆ ರಿಜಿಸ್ಟರ್ ಆಗಿತ್ತು, ಬಾಡಿಗೆ ತಾಯಿ ನಮ್ಮ ಸಂಬಂಧಿ- ನಯನತಾರಾ ಸ್ಪಷ್ಟನೆ

ಅಕ್ಟೋಬರ್ 9ಕ್ಕೆ ಅವಳಿ ಮಕ್ಕಳ ಜನನ
ಜೂನ್‌ 9ರಂದಷ್ಟೇ ಮದುವೆ ಆಗಿದ್ದ ಖ್ಯಾತ ತಮಿಳು ನಟಿ ನಯತಾರಾ ಹಾಗೂ ಚಿತ್ರ ನಿರ್ದೇಶಕ ವಿಘ್ನೇಶ್‌ ಶಿವನ್‌ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಜನನವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಷಯ ಹಂಚಿಕೊಂಡಿರುವ ಶೀವನ್‌, ‘ನಯನ್‌ ಮತ್ತು ನಾನು ಅಮ್ಮ-ಅಪ್ಪ ಆಗಿದ್ದೇವೆ. ನಮಗೆ ಅವಳಿ ಮಕ್ಕಳ ಜನನವಾಗಿದೆ. ಜೀವನ ಹೆಚ್ಚು ಪ್ರಕಾಶಮಾನವಾಗಿ ಹಾಗೂ ಸುಂದರವಾಗಿ ಕಾಣುತಿದೆ. ಇದಕ್ಕೆಲ್ಲ ಹಿರಿಯರ ಆಶೀರ್ವಾದ ಕಾರಣ’ ಎಂದಿದ್ದಾರೆ. ಇದರ ಜತೆಗೆ ಇಬ್ಬರೂ ಮಕ್ಕಳ ಕಾಲಿಗೆ ಮುತ್ತಿಕ್ಕುತ್ತಿರುವ ಚಿತ್ರ ಹಾಕಿಕೊಂಡಿದ್ದರು.

click me!