ಕುಸ್ತಿಪಟು ವಿನೇಶ್ ಫೋಗಟ್ ಜೊತೆ ನಟ ಆಮೀರ್ ಖಾನ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು, ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ. ಏನಿದು ವಿಷ್ಯ?
100 ಗ್ರಾಂ ತೂಕದಿಂದಾಗಿ ಒಲಿಂಪಿಕ್ಸ್‌ನ ಅಂತಿಮ ಸ್ಪರ್ಧೆಗೆ ಹೋಗಲು ವಿಫಲರಾದ ಓಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಸದ್ಯ ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿಗಾಗಿ ಆಗ್ರಹಿಸಿ ರೈತರು ಪ್ರತಿಭಟನೆ ಪ್ರತಿಭಟನೆ 200 ನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲಿ ಭಾಗವಹಿಸುವ ಮೂಲಕ ವಿನೇಶ್ ಅವರು ಸದ್ದು ಮಾಡುತ್ತಿದ್ದಾರೆ. ಇದರ ನಡುವೆಯೇ ಬಾಲಿವುಡ್ ನಟ ಆಮೀರ್ ಖಾನ್ ವಿನೇಶ್ ಅವರಿಗೆ ಕರೆ ಮಾಡಿದ್ದು, ಇದೀಗ ಬಿ-ಟೌನ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಕಾರಣ, ಮಿಸ್ಟರ್ ಪರ್ಫಕ್ಷನಿಸ್ಟ್ ಎಂದೇ ಫೇಮಸ್ ಆಗಿರೋ ಆಮೀರ್ ಖಾನ್ ದಂಗಲ್-2 ಚಿತ್ರ ಮಾಡುತ್ತಾರೆಯೇ ಎನ್ನುವ ಪ್ರಶ್ನೆ ಕಾಡುತ್ತದೆ. ಏಕೆಂದರೆ ಆಮೀರ್ ಖಾನ್ ಅವರು ದಂಗಲ್-1 ಮಾಡಿದ್ದರು. ಇದು ಸತ್ಯ ಘಟನೆ ಆಧರಿತ ಹಾಗೂ ಕುಸ್ತಿಪಟುಗಳನ್ನೇ ಆಧರಿಸಿದ ಚಿತ್ರವಾಗಿತ್ತು. ಇದು ಬ್ಲಾಕ್‌ಬಸ್ಟರ್ ಎಂದು ಸಾಬೀತಾಗಿತ್ತು. ಇದೀಗ ಇದರ ಮುಂದುವರೆದ ಭಾಗವಾಗಿ ದಂಗಲ್-2 ಮಾಡುತ್ತಾರೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ನಟ ಆಮಿರ್ ಖಾನ್ ವಿನೇಶ್ ಫೋಗಟ್ ಅವರಿಗೆ ಕಾಲ್ ಮಾಡಿರುವ ಫೋಟೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಆಮೀರ್ ಖಾನ್ ಅವರನ್ನು ನೋಡಿ ವಿನೇಶ್ ಅವರು ಭಾವುಕರಾಗಿದ್ದನ್ನು ನೋಡಬಹುದು.
undefined
ದೀಪಿಕಾ ಡೆಲಿವರಿ ಡೇಟ್ ರಿವೀಲ್! ಮಗುವಿಗೂ- ನಟಿಯ ಎಕ್ಸ್ ರಣಬೀರ್ ಕಪೂರ್‌ಗೂ ಇದೆಂಥ ನಂಟು!
ಅಷ್ಟಕ್ಕೂ ಆಮೀರ್ ಖಾನ್ ಅವರು ಏನು ಮಾತನಾಡಿದ್ದಾರೆ ಎನ್ನುವುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಆದರೆ, ಅಂತಿಮ ಸುತ್ತಿನವರೆಗೆ ಹೋಗುವಂಥ ಸೆಣಸಾಟ ಮಾಡಿದ ವಿನೇಶ್ ಅವರಿಗೆ ನಟ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಮಾತ್ರವಲ್ಲದೇ, ಆಟದ ಬಗ್ಗೆ ವಿನೇಶ್ ಅವರು ತೋರಿದ ಶ್ರದ್ಧೆ ಹಾಗೂ ಅಂತಿಮ ಸುತ್ತಿಗೆ ಅರ್ಹತೆ ಪಡೆಯುವ ಸಲುವಾಗಿ ಅವರು ತೂಕ ಇಳಿಸಲು ಮಾಡಿದ ಪ್ರಯತ್ನಗಳೆಲ್ಲವನ್ನು ಹೊಗಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದರ ನಡುವೆಯೇ ದಂಗಲ್ 2 ಸದ್ದು ಮಾಡುತ್ತಿದೆ. ಒಂದು ವೇಳೆ ಅದು ನಿಜವೇ ಆಗಿದ್ದರೆ, ಬೆಳ್ಳಿ ತೆರೆಯ ಮೇಲೆ ಆಮೀರ್ ಖಾನ್ ಮತ್ತೊಮ್ಮೆ ಕುಸ್ತಿ ಆಧರಿತ ಸಿನಿಮಾದಿಂದ ಧೂಳೆಬ್ಬಿಸಲಿದ್ದಾರೆ ಎನ್ನಲಾಗುತ್ತಿದೆ.
ಅದೇ ಇನ್ನೊಂದೆಡೆ, ವಿನೇಶ್ ಅವರು ರೈತರ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಭಾಷಣ ಮಾಡಿರುವ ಅವರು, ಧರಣಿಗೆ ರೈತರು ಕುಳಿತು 200 ದಿನಗಳಾಗಿವೆ. ಇದನ್ನು ನೋಡಲು ತುಂಬಾ ನೋವಾಗುತ್ತದೆ. ಇವರೆಲ್ಲರೂ ಈ ದೇಶದ ಪ್ರಜೆಗಳು. ರೈತರು ಈ ದೇಶವನ್ನು ನಡೆಸುತ್ತಿದ್ದಾರೆ. ಅವರಿಲ್ಲದೆ ಏನೂ ಸಾಧ್ಯವಿಲ್ಲ. ಅಥ್ಲೀಟ್‌ಗಳೂ ಕೂಡ ಅವರು ನಮಗೆ ಆಹಾರ ನೀಡದೆ ಹೋದರೆ ನಾವು ಸ್ಪರ್ಧಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.
ದಾಂಪತ್ಯ ಜೀವನ ಸುಖವಾಗಿ ನಡೆಯೋದು ಇದಕ್ಕಂತೆ! ಲಕ್ಷ ಲೈಕ್ಸ್ ಪಡೆದ ಕಂಗನಾ ಮಾತಿಗೆ ಪುರುಷರು ಗರಂ