ಹೋಳಿ ಹಬ್ಬವನ್ನು ನಟಿ ಶೆರ್ಲಿನ್ ಚೋಪ್ರಾ ಆಚರಿಸಿದ ರೀತಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈಕೆಯ ವಿರುದ್ಧ ಥಹರೇವಾರಿ ಕಮೆಂಟ್ಗಳು ಬರುತ್ತಿವೆ.
ಹೋಳಿ ಹಬ್ಬದ ಸಡಗರ- ಸಂಭ್ರಮ ಇನ್ನೂ ಮುಗಿದಿಲ್ಲ. ಹೋಳಿ ಆಚರಣೆ ಮಾಡಿದ ಸೆಲೆಬ್ರಿಟಿಗಳ ಫೋಟೋ, ವಿಡಿಯೋಗಳು ಒಂದೊಂದಾಗಿ ವೈರಲ್ ಆಗುತ್ತಿವೆ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹೋಳಿ ಆಟದಲ್ಲಿ ನಂಗಾ ನಾಚ್ ಮಾಡುವ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ ನಟಿ ಶೆರ್ಲಿನ್ ಚೋಪ್ರಾ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮದ್ವೆಯಾಗಲು ರೆಡಿ ಎನ್ನುವ ಮೂಲಕ ಹಲ್ಚಲ್ ಸೃಷ್ಟಿಸಿದ್ದ ನಟಿ ಶೆರ್ಲಿನ್ ಚೋಪ್ರಾ ಅತ್ಯಂತ ಕಡಿಮೆ ಉಡುಪಿನಲ್ಲಿ ತಮ್ಮ ದೇಹ ಪ್ರದರ್ಶನ ಮಾಡುತ್ತಾ ಹೋಳಿ ಆಚರಿಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
ಅಷ್ಟಕ್ಕೂ ಬಹುತೇಕ ಬಾಲಿವುಡ್ ಪ್ರಿಯರಿಗೆ ತಿಳಿದಿರುವಂತೆ ಬಳಕುವ ಬಳ್ಳಿಯಂತೆ ಇರುವ ನಟಿ ಶೆರ್ಲಿನ್ ಚೋಪ್ರಾ ಫೇಮಸ್ ಆಗಿರೋದು ಅವರ ಮಾದಕವಾಗಿರುವ ಎದೆಯ ಗಾತ್ರದಿಂದ. ಎದೆ ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಧಾರಾಳವಾಗಿ ಪ್ರದರ್ಶನ ಮಾಡುತ್ತಿರುವ ಕೆಲವು ನಟಿಯರ ಪೈಕಿ ಮೊದಲ ಸ್ಥಾನದಲ್ಲಿರುವವರು ನಟಿ ಶೆರ್ಲಿನ್ ಚೋಪ್ರಾ. ಇನ್ನೋರ್ವ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸ್ನೇಹಿತೆಯೆಂದು ಪೋಸ್ ಕೊಟ್ಟು ಕೊನೆಗೆ ಆಕೆಯ ಗಂಡ ಆದಿಲ್ ಖಾನ್ ದುರ್ರಾನಿಯ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದ ಶೆರ್ಲಿನ್, ಅಂಗಾಂಗ ಪ್ರದರ್ಶನದಿಂದಲೇ ಸದ್ದು ಮಾಡುತ್ತಿರುವ ನಟಿ. ಯಾವುದೇ ಸಂಕೋಚವಿಲ್ಲದೇ ತನ್ನ ಖಾಸಗಿ ಜೀವನದ ಕುರಿತು ಮಾತನಾಡಿದ್ದ ಶೆರ್ಲಿನ್, ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು. 'ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳಿದ್ದರು. ಅದೇ ಇನ್ನೊಮ್ಮೆ, ರಾಹುಲ್ ಗಾಂಧಿಯವರನ್ನು ಮದುವೆಯಾಗಲು ರೆಡಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದ ನಟಿ, ಒಂದು ಕಂಡೀಷನ್ ಹಾಕಿದ್ರು. ಅದೇನೆಂದ್ರೆ, ರಾಹುಲ್ ಗಾಂಧಿಯವರನ್ನು ಮದ್ವೆಯಾಗಲು ರೆಡಿ. ಆದ್ರೆ ನನ್ನ ಸರ್ನೇಮ್ ಮಾತ್ರ ಗಾಂಧಿ ಆಗಲ್ಲ, ಚೋಪ್ರಾನೇ ಆಗಿರುತ್ತದೆ. ಈ ಕಂಡೀಷನ್ಗೆ ಒಪ್ಪಿದ್ರೆ ನಾನು ರೆಡಿ ಎಂದಿದ್ದರು.
ಶೆರ್ಲಿನ್ ಬರ್ತ್ಡೇ ಆಚರಿಸಿಕೊಂಡದ್ದು ಹೀಗೆ- ಹುಟ್ಟುಡುಗೆಯಲ್ಲಿ ಬರೋದೊಂದೇ ಬಾಕಿ ಎಂದ ನೆಟ್ಟಿಗರು!
ಅದಾದ ಬಳಿಕ, ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು.
ಇದೀಗ ನಟಿ ಹೋಳಿಹಬ್ಬ ಆಚರಿಸಿಕೊಂಡಿದ್ದಾರೆ. ಇವರ ವೇಷ ನೋಡಿದ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಹೋಳಿ ಹಬ್ಬಕ್ಕೆ ಅದರದ್ದೇ ಆದ ಘನತೆ ಇದೆ. ಈ ರೀತಿಯ ಅಶ್ಲೀಲ ಬಟ್ಟೆ ಧರಿಸಿ ಹಬ್ಬ ಆಚರಿಸಲು ನಾಚಿಕೆ ಆಗಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಹೋಳಿ ಹಬ್ಬದ ದಿನ ಕಾಮದಹನ ಮಾಡಲಾಗುತ್ತದೆ, ಇಂಥ ಅಶ್ಲೀಲತೆ ಮೆರೆವವರ ದಹನವಾದರೂ ದೇಶ ಉದ್ಧಾರವಾಗುತ್ತದೆ ಎಂದೆಲ್ಲಾ ಹೇಳುತ್ತಿದ್ದಾರೆ. ಈಕೆಯ ಜೊತೆ ನರ್ತಿಸುತ್ತಿರುವ ವ್ಯಕ್ತಿಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ನಟಿ ಆತನನ್ನು ತಳ್ಳಿದರೂ ನಟಿಯ ಹಿಂದೆ ಹೋಗುವ ಇಂಥ ಜನರಿಗೆ ಮರ್ಯಾದೆ ಇಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಶಿವ ಮತ್ತು ಪಾರ್ವತಿಯನ್ನು ಒಂದು ಮಾಡಲು ಕಾಮ ಬಾಣ ಬಿಟ್ಟ. ಆತ ನಿನ್ನನ್ನೇನಾದ್ರೂ ನೋಡಿದ್ರೆ ಅಲ್ಲಿಯೇ ಸ್ಯೂಸೈಡ್ ಮಾಡಿಕೊಳ್ಳುತ್ತಿದ್ದ ಎಂದು ಕೆಲವರು ಹೇಳುತ್ತಿದ್ದಾರೆ.
ಕಡಲ ಕಿನಾರೆಯಲ್ಲಿ ಸ್ಯಾಂಡಲ್‌ವುಡ್‌ನ ಸ್ವೀಟಿ ರಾಧಿಕಾ ಹೋಳಿ ಆಚರಣೆ: ಎದುರಿಗಿದ್ದವರು ಯಾರು ಕೇಳಿದ ಫ್ಯಾನ್ಸ್