ಕೋತಿಗಳ ಮದ್ವೆ ಫೋಟೋ ಶೇರ್​ ಮಾಡಿದ ರಾಖಿ ಸಾವಂತ್​: ನಟಿ ಪ್ರಕಾರ ಇವರು ಯಾರು ಗೊತ್ತಾ?

Published : Mar 25, 2024, 02:33 PM IST
 ಕೋತಿಗಳ ಮದ್ವೆ ಫೋಟೋ ಶೇರ್​ ಮಾಡಿದ  ರಾಖಿ ಸಾವಂತ್​: ನಟಿ ಪ್ರಕಾರ ಇವರು ಯಾರು ಗೊತ್ತಾ?

ಸಾರಾಂಶ

ಕೋತಿಗಳ ಮದ್ವೆ ಫೋಟೋವನ್ನು ನಟಿ ರಾಖಿ ಸಾವಂತ್​ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.  ನಟಿ ಪ್ರಕಾರ ಇವರು ಯಾರು ಗೊತ್ತಾ?  

ಕಾಂಟ್ರವರ್ಸಿ ಕ್ವೀನ್​ ರಾಖಿ ಸಾವಂತ್​ ಎರಡು ಮಂಗಗಳ ಫೋಟೋ ಶೇರ್​ ಮಾಡಿದ್ದಾರೆ. ಅಷ್ಟಕ್ಕೂ ಈ ಎರಡು ಮಂಗಗಳು ಮದುವೆ ಮಾಡಿಕೊಂಡಿರುವ ಫೋಟೋಗಳು ಇದಾಗಿದೆ. ಹಾಗಿದ್ದರೆ ನಟಿಯ ಪ್ರಕಾರ ಈ ಎರಡು ಮಂಗಗಳು ಯಾರು ಎಂದು ಗೆಸ್​ ಮಾಡುವಿರಾ? ರಾಖಿಯ ಪತಿ ಆದಿಲ್​ ಖಾನ್​ ದುರ್ರಾನಿ ಮತ್ತು ಆತನ ಈಗಿನ ಪತ್ನಿಯ ಫೋಟೋ ಇದು ಎನ್ನುವುದು ನಟಿಯ ಮಾತು. ಅಷ್ಟಕ್ಕೂ ಮೈಸೂರಿನ ಆದಿಲ್​ ಖಾನ್​, ರಾಖಿ ಸಾವಂತ್​ರನ್ನು ಮದ್ವೆಯಾಗಿ ವಿಚ್ಛೇದನ ಕೊಟ್ಟಿಲ್ಲ. ಆದರೆ ಇದಾಗಲೇ ಇನ್ನೊಂದು ಮದ್ವೆಯಾಗಿದ್ದಾರೆ. ಅದಕ್ಕಾಗಿಯೇ ನಟಿ ಮಂಗಗಳ ಮದುವೆಯ ಫೋಟೋ ಶೇರ್​ ಮಾಡಿದ್ದಾರೆ. ಆದರೆ ರಾಖಿಯನ್ನೇ ಟ್ರೋಲ್​ ಮಾಡಲಾಗುತ್ತಿದೆ. ಇದು ರಾಖಿಯ ಮುಂದಿನ ಪತಿ ಇದ್ದಿರಬಹುದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಡ್ರಾಮಾ ಕ್ವೀನ್‌, ಕಾಂಟ್ರವರ್ಸಿ ಲೇಡಿ ಎಂದೇ ಖ್ಯಾತ ಆಗಿರೋರು ಎಂದರೆ ರಾಖಿ ಸಾವಂತ್‌. ಕೆಲ ತಿಂಗಳ ಹಿಂದೆ ರಾಖಿ ಸಾವಂತ್‌ ಮತ್ತು ಮೈಸೂರಿನ ಆದಿಲ್‌ ಖಾನ್‌ ದುರ್‍ರಾನಿ ಮದ್ವೆ ವಿಷಯ ಸಕತ್‌ ಚರ್ಚೆಯಲ್ಲಿತ್ತು. ಇನ್ನು ರಾಖಿ ಬಗ್ಗೆಯಂತೂ ಎಲ್ಲರಿಗೂ ತಿಳಿದದ್ದೇ. ರಾಖಿ ಸಾವಂತ್ ಇತ್ತೀಚೆಗಷ್ಟೇ ಧರ್ಮ ಬದಲಿಸಿ ಫಾತಿಮಾ ಆಗಿದ್ದಾರೆ. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ, ನಂತರ ಆದಿಲ್ ಮತ್ತು ರಾಖಿ ನಡುವೆ ಜಗಳ ಪ್ರಾರಂಭವಾಗಿತ್ತು. ರಾಖಿ ಆದಿಲ್‌ ಖಾನ್​ರನ್ನುಜೈಲಿಗೆ ತಳ್ಳಿದ್ದು, ಅವರೀಗ  ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇದರ ನಡುವೆಯೇ, ರಾಖಿ ಮೆಕ್ಕಾಕ್ಕೆ ಹೋಗಿ ಉಮ್ರಾ  ನೆರವೇರಿಸಿದ್ದಾರೆ. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು. ಅದಾದ ಬಳಿಕ ಇವರಿಬ್ಬರ ಡಿವೋರ್ಸ್ ಕೂಡ ಆಯಿತು ಎನ್ನಲಾಗಿತ್ತು. ಆದರೆ ಇವರಿಬ್ಬರ ಡಿವೋರ್ಸ್​ ಆಗಲಿಲ್ಲ ಎನ್ನಲಾಗುತ್ತಿದೆ. 

ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ಅಧಿಕಾರಿ ಸಮೀರ್​ ವಾಂಖೆಡೆ!

ಇವೆಲ್ಲವುಗಳ ನಡುವೆಯೇ, ಇದೀಗ ಆದಿಲ್‌ ಖಾನ್‌ ರಾಖಿಗೂ ಶಾಕ್‌ ಕೊಟ್ಟಿದ್ದಾರೆ.   ಅವರು ಮತ್ತೊಂದು ಮದುವೆ ಆಗಿದ್ದಾರೆ. ಆದರೆ ಇದೀಗ ಬಂದಿರೋ ಟ್ವಿಸ್ಟ್‌ ಏನೆಂದರೆ, ಆದಿಲ್‌ ಖಾನ್‌,  ಇದು ತಮ್ಮ ಮೊದಲ ಮದುವೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ತಂದಿದ್ದಾರೆ. ಅಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ,   ಆದಿಲ್ ಖಾನ್ ಮತ್ತೊಮ್ಮೆ ಮದ್ವೆಯಾಗಿದ್ದು, ರಾಜಸ್ಥಾನದ ಜೈಪುರದಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ಸೋಮಿ ಖಾನ್ ಜೊತೆ ಹಸೆಮಣೆ ತುಳಿದಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ಮದ್ವೆಯ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ. ಸೋಮಿ ಖಾನ್ ಅವರು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ 2018ರಲ್ಲಿ ಕಾಣಿಸಿಕೊಂಡಿದ್ದರು. ಇವರ ಜೊತೆ ಇವರ ಸೋದರಿ ಸಭಾ ಖಾನ್‌ ಕೂಡ ಭಾಗಿಯಾಗಿದ್ದರು.  

ಇದೀಗ ವೈರಲ್‌ ಆಗುತ್ತಲೇ ರಾಖಿಯ ತಲೆ ತಿರುಗುವಂಥ ಹೇಳಿಕೆಯನ್ನು ಆದಿಲ್ ಖಾನ್ ನೀಡಿದ್ದರು. ‘ಇದು ನನ್ನ ಮೊದಲ ಮದುವೆ, ಎಲ್ಲೆಡೆ ವರದಿಯಾಗಿರುವಂತೆ ಎರಡನೆಯ ಮದ್ವೆಯಲ್ಲ. ನಾವು ಬೆಂಗಳೂರಿನಲ್ಲಿ ಇದ್ದೇವೆ. ಮುಂಬೈಗೆ ಬಂದ ಬಳಿಕ ಮದುವೆಯ ಕುರಿತು ಅಧಿಕೃತ ಘೋಷಣೆ ಮಾಡುತ್ತೇವೆ. ನಾನು ಎಲ್ಲವನ್ನೂ ಇಂಚಿಂಚಾಗಿ ವಿವರಿಸುತ್ತೇನೆ ಎಂದಿದ್ದರು. ಹಾಗಿದ್ದರೆ ರಾಖಿ ಜೊತೆ ಆದಿಲ್‌ ಖಾನ್‌ ಮದ್ವೆ ಆಗಿರಲಿಲ್ವಾ? ಹಾಗಿದ್ರೆ ರಾಖಿ ಮತಾಂತರಗೊಂಡಿದ್ದು ಏಕೆ ಎಂಬ ಪ್ರಶ್ನೆಗಳು ಈಗ ಸುಳಿದಾಡುತ್ತಿವೆ. ಅಂದಹಾಗೆ, ಆದಿಲ್ ಹಾಗೂ ಸೋಮಿ ಖಾನ್ ಅವರು ಮಾರ್ಚ್ 2ರಂದು ವಿವಾಹ ಆದರು. ಮುಸ್ಲಿಂ ಧರ್ಮದ ಪ್ರಕಾರ ಈ ಮದುವೆ ನಡೆದಿದೆ. ಸೋಮಿ ಊರಾದ ಜೈಪುರದಲ್ಲಿ ಈ ಮದುವೆ ನಡೆದಿದೆ ಎನ್ನಲಾಗಿದೆ.  ರಾಖಿ ಸಾವಂತ್ ಈ ಮೊದಲು ಕೂಡ ಒಂದು ಮದುವೆ ಆಗಿದ್ದರು. ರಾಖಿ ಹಾಗೂ ರಿತೇಶ್ ವಿವಾಹ ನೆರವೇರತ್ತು. ಆದರೆ, ಇವರ ಸಂಬಂಧ ಹೆಚ್ಚು ದಿನ ಉಳಿದಿರಲಿಲ್ಲ. 

ರಗಡ್​ ಲುಕ್​ನಲ್ಲಿ ಸತ್ಯ ಸೀರಿಯಲ್ ಮಾಜಿ ಕೀರ್ತನಾ: ಪ್ಲೀಸ್​ ಸೀರಿಯಲ್​ಗೆ ವಾಪಸ್​ ಬನ್ನಿ ಅಂತಿದ್ದಾರೆ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ