
ನಟಿ ಶೆರ್ಲಿನ್ ಚೋಪ್ರಾ ತಮ್ಮ ಅಂಗಾಂಗ ಪ್ರದರ್ಶನಗಳಿಂದಲೇ ಖ್ಯಾತಿ ಗಳಿಸಿದ ತಾರೆ. ಈಕೆ (Sherlyn Chopra) ಆಗಾಗ ಶಾಕಿಂಗ್ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ. ತಮ್ಮ ವೈಯಕ್ತಿಕ ಮಾಹಿತಿ ಮತ್ತು ತಮ್ಮ ಜೀವನದಲ್ಲಿ ಎದುರಿಸಿದ ಹೋರಾಟಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹೆದರುವುದಿಲ್ಲ. ಇತ್ತೀಚೆಗಷ್ಟೇ ಆಕೆ ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು. 'ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳಿದ್ದರು. ಅದಾದ ಬಳಿಕ, ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು.
ಎದೆ ಭಾಗ ದೊಡ್ಡದಾಗಿ ಕಾಣಿಸಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಧಾರಾಳವಾಗಿ ದೇಹ ಪ್ರದರ್ಶನ ಮಾಡುವಲ್ಲಿ ನಟಿಯದ್ದು ಎತ್ತಿದ ಕೈ. ಇತ್ತೀಚೆಗೆ ಇನ್ನೋರ್ವ ಡ್ರಾಮಾ ಕ್ವೀನ್ ರಾಖಿ ಸಾವಂತ್ ಕುಟುಂಬದ ವಿಚಾರದಲ್ಲಿ ಶೆರ್ಲಿನ್ ಎಂಟ್ರಿ ಕೊಟ್ಟಿದ್ದರು. ನಟಿ ರಾಖಿ ತಮ್ಮ ಪತಿ ಆದಿಲ್ ಖಾನ್ ದುರ್ರಾನಿ ಮೋಸ ಮಾಡಿರುವ ಕುರಿತು ಹೇಳಿದ್ದ ಸಂದರ್ಭದಲ್ಲಿ ದಂಪತಿ ನಡುವೆ ವಾಕ್ಸಮರ ಶುರುವಾಗಿತ್ತು. ಆರಂಭದಲ್ಲಿ ಆದಿಲ್ ಖಾನ್ ಪರ ವಹಿಸಿಕೊಂಡು ಮಾತನಾಡಿದ್ದ ನಟಿ, ನಂತರ ಪ್ಲೇಟ್ ಬದಲಿಸಿ ರಾಖಿ ಪರ ಪತ್ರಿಕಾಗೋಷ್ಠಿ ಮಾಡಿದ್ದರು. ಆದಿಲ್ ಖಾನ್ ರಾಖಿ ಅವರ ನಗ್ನ ದೇಹದ ವಿಡಿಯೋ ಮಾಡಿ ತಮಗೆ ತೋರಿಸಿದುದಾಗಿ ಹೇಳಿಕೊಂಡಿದ್ದರು. ಇದಕ್ಕೂ ಮುನ್ನ ರಾಖಿ ಸಾವಂತೇ ತಮ್ಮ ನಗ್ನ ದೇಹದ ವಿಡಿಯೋ ವೈರಲ್ ಮಾಡಿರುವುದಾಗಿಯೂ ಕಂಪ್ಲೇಂಟ್ ಮಾಡಿದ್ದರು.
ಉರ್ಫಿ ಬೆಂಬಲಿಸೋ ಭರದಲ್ಲಿ ನಮ್ದು ಕಾಮಸೂತ್ರದ ಭೂಮಿ ಎನ್ನೋದಾ ನಟಿ ಶೆರ್ಲಿನ್ ಚೋಪ್ರಾ?
ಇವೆಲ್ಲವುಗಳ ಮಧ್ಯೆ ಈಗ ಶಾಕಿಂಗ್ ಹೇಳಿಕೆಯೊಂದನ್ನು ನಟಿ ಹೇಳಿದ್ದಾರೆ. ಅದೇನೆಂದರೆ ತಾವು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ತಮಗೆ ಮೂರು ತಿಂಗಳ ಗಡುವು ನೀಡಿದ್ದನ್ನು, ಮೂರು ತಿಂಗಳಿನಲ್ಲಿ ತಾವು ಸಾಯುವುದಾಗಿ ವೈದ್ಯರು ಹೇಳಿದ್ದನ್ನು ನಟಿ ಸ್ಮರಿಸಿಕೊಂಡಿದ್ದಾರೆ. ಅಷ್ಟಕ್ಕೂ ಇದು, 2021 ರಲ್ಲಿ ನಡೆದ ಘಟನೆ. ಆಗ ತಮ್ಮ ಒಂದು ಕಿಡ್ನಿ ಫೇಸ್ ಆಗಿತ್ತು. ಅನಿವಾರ್ಯವಾಗಿ ಅದನ್ನು ತೆಗೆದು ಹಾಕಬೇಕಿತ್ತು. ವೈದ್ಯರು ಬದುಕುವ ಮೂರು ತಿಂಗಳ ಗಡುವು ನೀಡಿದ್ದರು ಎಂದಿರೋ ನಟಿ, ವೈದ್ಯರು ತಮಗೆ ಎರಡು ಅವಕಾಶ ನೀಡಿದ್ದನ್ನು ನೆನಪಿಸಿಕೊಂಡರು. ಒಂದು, ಮೂತ್ರಪಿಂಡ ಕಸಿ ಅಥವಾ ಇನ್ನೊಂದು ಡಯಾಲಿಸಿಸ್. ಈ ಸಮಯದಲ್ಲಿ ತಾವು ವಾರಕ್ಕೆ ಮೂರು ಬಾರಿ ಆಸ್ಪತ್ರೆಗೆ ಭೇಟಿ ನೀಡಬೇಕಾಗಿತ್ತು. ಮೂರು ತಿಂಗಳ ಔಷಧಿಯ ನಂತರ ಮೂತ್ರಪಿಂಡದ ವೈಫಲ್ಯವು ವ್ಯತಿರಿಕ್ತವಾಯಿತು ಎಂದಿರೋ ನಟಿ, ಅದನ್ನು ಎದುರಿಸಿ ಸಾಧಿಸಿ ತೋರಿಸಿದೆ ಎಂದಿದ್ದಾರೆ. ಮರು ಜನ್ಮ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ನಟಿ, ಇದು ಹೇಗೆ ಎನ್ನುವ ಕುರಿತು ವಿವರಣೆ ನೀಡಲಿಲ್ಲ.
ಸದ್ಯ ನಟಿ ಹೇಳಿರುವ ಹೇಳಿಕೆ ಸಕತ್ ವೈರಲ್ ಆಗುತ್ತಿದೆ. ನಿಜಕ್ಕೂ ಇದು ನಡೆದದ್ದು ಹೌದಾ ಅಥವಾ ಕರುಣೆ ಗಿಟ್ಟಿಸಿಕೊಳ್ಳಲು ನಟಿ ಆಡುತ್ತಿರುವ ನಾಟಕನಾ ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ. ಕಿಡ್ನಿ ವೈಫಲ್ಯವಾದಾಗ ಅದನ್ನು ಹೇಗೆ ನಿಭಾಯಿಸಿದೆ, ಹೇಗೆ ಅದನ್ನು ಗೆದ್ದೆ ಎನ್ನುವ ಬಗ್ಗೆ ನಟಿ ಯಾವುದೇ ಸ್ಪಷ್ಟತೆ ನೀಡುತ್ತಿಲ್ಲ ಎಂದು ಹಲವರು ಅನುಮಾನ ವ್ಯಕ್ತಪಡಿಸಿದರೆ, ಕೆಲವರು ಇಂಥ ಸಮಸ್ಯೆಗಳ ಬಗ್ಗೆ ಸುಳ್ಳು ಹೇಳಿ ನಟಿಗೆ ಏನು ಲಾಭ ಎಂದು ಪ್ರಶ್ನಿಸುತ್ತಿದ್ದಾರೆ.
ಬುರ್ಖಾಧಾರಿ ರಾಖಿ ಎದುರು ಶೆರ್ಲಿನ್ ತುಂಡುಡುಗೆ ಡ್ಯಾನ್ಸ್! ನಿನ್ನೆ ವೈರಿ, ಇಂದು ಕಿಸ್ಸಿಂಗ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.