ವಿಜಯ್​ ಸೇತುಪತಿಯನ್ನು ಮದ್ವೆಯಾಗಲಿದ್ದಾರಂತೆ ಶಾರುಖ್​ ಖಾನ್​: ಟೈಮ್​ ಕೂಡ ಫಿಕ್ಸ್​!

By Suvarna News  |  First Published Sep 17, 2023, 12:50 PM IST

ವಿಜಯ್​ ಸೇತುಪತಿಯನ್ನು ಮದ್ವೆಯಾಗಲಿದ್ದಾರಂತೆ ಶಾರುಖ್​ ಖಾನ್​: ಟೈಮ್​ ಕೂಡ ಫಿಕ್ಸ್​! ಏನಿದು ವಿಷಯ?
 


ಜವಾನ್​ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ  439 ಕೋಟಿ ಗಳಿಸಿದ್ದರೆ,  ಜಾಗತಿಕವಾಗಿ  700 ಕೋಟಿ ಗಳಿಸಿದೆ. ಬಾಲಿವುಡ್​ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ. ಇಷ್ಟು ಗಳಿಸಿದ್ದರಿಂದ ಈ ಚಿತ್ರದ ಸಕ್ಸಸ್​ ಮೀಟ್​ ನಡೆದಿತ್ತು. ಈ ಸಂದರ್ಭದಲ್ಲಿ ಶಾರುಖ್​ ಖಾನ್​ ವಿಚಿತ್ರ ಬೇಡಿಕೆಯನ್ನು ನಟ ವಿಜಯ್​ ಸೇತುಪತಿಯ ಮುಂದೆ ಇಟ್ಟಿದ್ದು, ಅದೀಗ ಸಕತ್​ ಸುದ್ದಿ ಮಾಡುತ್ತಿದೆ. ಅದೇನೆಂದರೆ ಜವಾನ್​ ಚಿತ್ರದಲ್ಲಿ ನಟಿಸಿರುವ ವಿಜಯ್​ ಸೇತುಪತಿಯನ್ನು ಮದುವೆಯಾಗುವುದಾಗಿ ಶಾರುಖ್​ ಹೇಳಿದ್ದಾರೆ. ಇದಕ್ಕಾಗಿ ಟೈಮ್​ ಕೂಡ ಫಿಕ್ಸ್​ ಮಾಡಿದ್ದಾರೆ. ವಿಜಯ್​ ಸೇತುಪತಿ ಅವರಿಗೆ L LOVE YOU ಎಂದಿರುವ ಶಾರುಖ್​ ಮದ್ವೆಯ ಪ್ರಪೋಸಲ್​ ಇಟ್ಟಿದ್ದಾರೆ!

ಹೌದು.  ಈ ಚಿತ್ರದಲ್ಲಿ ಎಂಟು ವಿಭಿನ್ನ ಶೇಡ್​ಗಳಲ್ಲಿ ನಾಯಕ ನಟ ಶಾರುಖ್​ ಕಾಣಿಸಿಕೊಂಡಿದ್ದರೆ, ಕಾಳಿ ಗಾಯಕ್ವಾಡ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಘಟಾನುಘಟಿ ತಾರೆಯರ ದಂಡು ಈ ಚಿತ್ರದಲ್ಲಿದೆ.  ಜವಾನ್​ ಚಿತ್ರದ   ಗೆಲುವನ್ನು ಸಂಭ್ರಮಿಸಲು ಚಿತ್ರತಂಡ ಮುಂಬೈನಲ್ಲಿ ಸಕ್ಸಸ್‌ ಪಾರ್ಟಿ ಆಯೋಜಿಸಿತ್ತು. ಇಲ್ಲಿ ಶಾರುಖ್​ ಮದ್ವೆಯ ಪ್ರಸ್ತಾಪ ಮಾಡಿದ್ದಾರೆ.  ಅಷ್ಟಕ್ಕೂ ಈ ಪಾರ್ಟಿಯಲ್ಲಿ ಹೈಲೈಟ್​ ಆದದ್ದು ವಿಜಯ್​ ಸೇತುಪತಿಯವರೇ. ಏಕೆಂದರೆ ಉಳಿದ ಬಹುತೇಕ ನಟರು  ಸೂಟು ಬೂಟಿನಲ್ಲಿ ಬಂದಿದ್ದರೆ, ಸದಾ ಸರಳತೆಯನ್ನೇ ಇಷ್ಟಪಡುವ  ವಿಜಯ್ ಸೇತುಪತಿ  ತೀರಾ ಸರಳ ಪ್ಯಾಂಟ್‌ ಮತ್ತು ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಇದು ಎಲ್ಲರನ್ನೂ ಸೆಳೆಯುತ್ತಿದೆ.

Tap to resize

Latest Videos

ವಿಜಯ್​ ಸೇತುಪತಿ ಲವ್​ ಮಾಡಿದ ಹುಡುಗಿ, ಶಾರುಖ್​ ಲವರ್​! ಇಂಟರೆಸ್ಟಿಂಗ್​ ಗುಟ್ಟು ರಟ್ಟು... 

ಈ ಕಾರ್ಯಕ್ರಮದಲ್ಲಿ ಸಿನಿಮಾ ಮೇಲೆ ವಿಜಯ್​ ಅವರಿಗೆ ಇರುವ  ಡೆಡಿಕೇಷನ್‌ ಕುರಿತು ಶಾರುಖ್​ ಮಾತನಾಡುತ್ತಾ,   ಜವಾನ್‌ ಚಿತ್ರದಲ್ಲಿ ವಿಜಯ್​ ಅವರ ಡೆಡಿಕೇಷನ್​ ನೋಡಿ ನಾನು ಸೋತು ಹೋದೆ. ಅವರು ತಮ್ಮ ಪ್ರತಿಯೊಂದು ದೃಶ್ಯವನ್ನು ಎರಡು ಬಾರಿ ಶೂಟ್‌ ಮಾಡಿಸಿದ್ದರು.  ಮೊದಲು ತಮಿಳಿನಲ್ಲಿ ನಂತರ ಹಿಂದಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಹಿಂದಿಯೇನೂ ಅವರಿಗೆ ಅಷ್ಟೆಲ್ಲಾ ಕರಗತವಲ್ಲ. ಆದರೂ ಅವರು ಅಚ್ಚುಕಟ್ಟಾಗಿ ಎಲ್ಲವನ್ನೂ ನಿಭಾಯಿಸಿದರು.  ಸೆಟ್‌ನಲ್ಲಿ ಅವರ ಭಾಗವಹಿಸುವಿಕೆ ಎಲ್ಲರಿಗೂ ಇಷ್ಟವಾಗಿತ್ತು ಎಂದು ಕೊಂಡಾಡಿದರು.

ಕೂಡಲೇ ಪಕ್ಕದಲ್ಲಿದ್ದ ವಿಜಯ್​ ಅವರನ್ನು ನೋಡಿ, ನೀವು ನಮ್ಮ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇ ದೊಡ್ಡ ಖುಷಿ. ಐ ಲವ್‌ ಯೂ ಸರ್.‌ ನಾನು ನಿಮಗೆ ಪ್ರಪೋಸ್‌ ಮಾಡಲಿದ್ದೇನೆ. ನಾವಿಬ್ಬರೂ ಮದುವೆ ಆಗೋಣ ಎಂದರು. ಇದರಲ್ಲಿ ತಪ್ಪು ಇಲ್ಲ ಎಂದು ವಿಜಯ್​ ಹೇಳಿದಾಗ, ಮದ್ವೆಗೆ ಟೈಮ್​ ಕೂಡ ಫಿಕ್ಸ್​ ಮಾಡಿದ ಶಾರುಖ್​, ನನಗನಿಸಿದ ಮಟ್ಟಿಗೆ ಈ ಕಾರ್ಯಕ್ರಮ  ಮುಗಿದ ಮೇಲೆ ಮದ್ವೆಯಾಗೋಣ ಎಂದರು. ಎಲ್ಲರೂ ಮನಸಾರೆ ನಕ್ಕರು. ಈ ಸಮಯದಲ್ಲಿ ವಿಜಯ್​ ಕೂಡ ಶಾರುಖ್​ ಅವರನ್ನು ಕೊಂಡಾಡಿದರು.  ಜನರನ್ನು ನೀವು ನಡೆಸಿಕೊಳ್ಳುವ ರೀತಿ ತುಂಬಾ ಇಷ್ಟವಾಯಿತು ಎಂದರು.
 

ಹಾಟ್​ ಬ್ಯೂಟಿ ತ್ರಿಶಾ ಓಕೆ ಅಂದ್ರೂ ಲಿಪ್‌ಲಾಕ್‌​ಗೆ ನಿರಾಕರಿಸಿದ ವಿಜಯ ಸೇತುಪತಿ: ಆಗಿದ್ದೇನು?

click me!