ಬಿಡಿ ಬಿಡಿ ಎಂದ್ರೂ ಹುಡುಗನನ್ನು ಹಿಡಿದು ಶೆರ್ಲಿನ್ ಮಾಡ್ತಿರೋದೇನು​? ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!

By Suchethana D  |  First Published Jun 22, 2024, 9:42 PM IST

ಬಿಡಿ ಬಿಡಿ ಎಂದ್ರೂ ಹುಡುಗನನ್ನು ಹಿಡಿದು ಶೆರ್ಲಿನ್ ಮಾಡ್ತಿರೋದೇನು​? ವಿಡಿಯೋ ನೋಡಿ ನಟಿಗೆ ಛೀಮಾರಿ ಹಾಕ್ತಿರೋ  ನೆಟ್ಟಿಗರು!
 


 ದೇಹಕ್ಕೆ ಪ್ಲಾಸ್ಟಿಕ್​  ಸರ್ಜರಿ ಮಾಡಿಸಿಕೊಂಡು ಯಥೇಚ್ಛವಾಗಿ ಅದನ್ನು ಪ್ರದರ್ಶಿಸುತ್ತಲೇ ಸದಾ ಸುದ್ದಿಯಲ್ಲಿರುವ ನಟಿ ಎಂದರೆ ಶೆರ್ಲಿನ್​ ಚೋಪ್ರಾ. ವಯಸ್ಸು 40 ಆದರೂ, ಇನ್ನೂ ಇಂಥ ವೇಷಗಳಿಂದಲೇ ಸಕತ್​ ಸುದ್ದಿ ಮಾಡುತ್ತಿರುತ್ತಾರೆ. ಆದ್ದರಿಂದ ನಟಿ ಶೆರ್ಲಿನ್​ ಚೋಪ್ರಾ ಎಂದಾಕ್ಷಣ ಸಿನಿ ಪ್ರಿಯರಿಗೆ ಕಾಣಿಸುವ ರೂಪವೇ ಬೇರೆಯದ್ದು.  ಪ್ಲಾಸ್ಟಿಕ್​ ರಾಣಿ ಎಂದೇ ಈಕೆ ಫೇಮಸ್​ ಆದವರು. ದೇಹದ ಭಾಗಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರುವ ಶೆರ್ಲಿನ್​ ಅದರ ಮೂಲಕವೇ ಪ್ರಸಿದ್ಧಿಗೆ ಬಂದವರು. ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಇವರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು.  ಇದೇ ಕಾರಣಕ್ಕೆ ಈಕೆ ಹೋದಲ್ಲಿ, ಬಂದಲ್ಲಿ ಪಾಪರಾಜಿಗಳ ಕಣ್ಣು ಇವರ ಮೇಲೆ ನೆಟ್ಟಿರುತ್ತದೆ.  

ಇದೀಗ ಚಿಕ್ಕ ಹುಡುಗನನ್ನು ಎಳೆದು ತಂದಿದ್ದಾರೆ. ಆತನ ಮುಖ ನೋಡಿದರೆ ಈ ನಟಿಯನ್ನು ನೋಡಿ ಇರಿಟೇಟ್ ಆದಂತಿದೆ. ಆದರೆ ಎಷ್ಟೇ ಹೇಳಿದ್ರೂ ಶೆರ್ಲಿನ್​ ಅವನನ್ನು ಹಿಡಿದುಕೊಂಡಿದ್ದಾರೆ. ಆತ ಬಿಡಿ ಬಿಡಿ ಎನ್ನುತ್ತಿದ್ದಾನೆ. ಆದರೆ ಶೆರ್ಲಿನ್​ ಎಳೆದುಕೊಂಡು ಬೋರ್ಡ್​ ಹಿಂದೆ ಹೋಗಿ ಕಿಸ್​ ಮಾಡಿದ್ದಾರೆ. ನಂತರ ಹೊರಗಡೆ ಬಂದು ಲಿಪ್​ಸ್ಟಿಕ್​ ಕಲೆಯನ್ನು ಒರೆಸಿದ್ದಾರೆ. ಇದನ್ನು ಕಂಡು ನೆಟ್ಟಿಗರು ಹೆಣ್ಣು ಜನ್ಮಕ್ಕೇ ಕಳಂಕ ನೀನು ಎನ್ನುತ್ತಿದ್ದಾರೆ.  ನಿನ್ನಂಥ ಹೆಣ್ಣುಗಳಿಂದಲೇ ಗಂಡು ಕುಲದ ಮರ್ಯಾದೆ ಹೋಗುತ್ತಿದೆ. ಹೆಣ್ಣು ಮಕ್ಕಳು ಮಾಡುವುದೆಲ್ಲಾ ಮಾಡಿ ಕೊನೆಗೆ ಗಂಡಸರದ್ದೇ ತಪ್ಪು ಎನ್ನುವುದಕ್ಕೆ ನೀನೇ ಸಾಕ್ಷಿ ಎಂದೆಲ್ಲಾ ಬೈಯುತ್ತಿದ್ದಾರೆ. 

Tap to resize

Latest Videos

ನನ್ನ ಶರೀರದ ತುಂಬೆಲ್ಲಾ ವಿಷವಿದೆ ಎಂದ ಶೆರ್ಲಿನ್​! ಸತ್ತವರ ಲೆಕ್ಕ ಕೊಡಿ ಅನ್ನೋದಾ ನೆಟ್ಟಿಗರು?


ಅಂದಹಾಗೆ ನಟಿಗೆ ಈ ರೀತಿಯ ವಿಷಯಗಳೆಲ್ಲಾ ಹೊಸತು ಅಲ್ಲವೇ ಅಲ್ಲ. ಇದಾಗಲೇ ನಟಿಯ ಹೆಸರು ಹಲವರ ಜೊತೆ ಕೇಳಿಬಂದಿದೆ. ಮಾತ್ರವಲ್ಲದೇ, ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಖುದ್ದು ನಟಿಯೇ ಹೇಳಿಕೊಂಡಿದ್ದರು. ಅದಾದ ಬಳಿಕ,  ಉದ್ಯಮಿಯೊಬ್ಬರ ವಿರುದ್ಧ  ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನಟಿ ದೂರಿನಲ್ಲಿ ತಿಳಿಸಿದ್ದರು.  
​ 

ಕೆಲ ದಿನಗಳ ಹಿಂದೆ ನಟಿ, ಐಸ್​ಕ್ರೀಂ ಹೇಗೆ ತಿನ್ನಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದರು. ಐಸ್​ಕ್ರೀಂ ಷಾಪ್​ ಒಂದರಲ್ಲಿ ಕೋನ್​ ಐಸ್​ಕ್ರೀಂ ಖರೀದಿ ಮಾಡಿರುವ ಶೆರ್ಲಿನ್​ ಹೆಣ್ಣುಮಕ್ಕಳು ಐಸ್​ಕ್ರೀಂ ಹೀಗೆ ತಿನ್ನಬೇಕು ಎಂದು ಹೇಳಿದ್ದರು. ಈ ಹಿಂದೆ ನಟಿ ಫ್ರೀ ಆಗಿ  ರೋಡ್​ಸೈಡ್​ನಲ್ಲಿ ಕೋನ್​ ಐಸ್​ಕ್ರೀಂ ತಿಂದಿದ್ದು, ಅದಕ್ಕೆ ದುಡ್ಡು ಕೊಡದೇ ಭಾರಿ ಟೀಕೆಗೆ ಒಳಗಾಗಿದ್ದರು. ಇದೀಗ  ಅದೇ ರೀತಿ ಮತ್ತೆ ಐಸ್​​ಕ್ರೀಂ ಸೇವನೆ ಮಾಡಿದ್ದರು. ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬಂದಿದ್ದು, ನಟಿಯ ವಿರುದ್ಧ ಟೀಕೆಗಳ ಸುರಿಮಳೆಯೇ ಆಗಿತ್ತು.   

 

ಐಶ್ವರ್ಯಾಳ ಬ್ಯೂಟಿಯನ್ನು ಈ ರೀತಿ ಹಾಳು ಮಾಡಿದ್ದೇ ಪ್ಲಾಸ್ಟಿಕ್​! ನಟಿ ಕಸ್ತೂರಿ ಶಂಕರ್​ ಶಾಕಿಂಗ್​ ಹೇಳಿಕೆ

 
click me!