Sharmila Vs Sara Ali: ಮೊಮ್ಮಗಳಿಗಿಂತ ಅಜ್ಜಿನೇ ಹಾಟ್‌ ಎಂದ ನೆಟ್ಟಿಗರು

Published : Jun 19, 2023, 11:19 PM ISTUpdated : Jun 20, 2023, 01:15 PM IST
Sharmila Vs Sara Ali: ಮೊಮ್ಮಗಳಿಗಿಂತ ಅಜ್ಜಿನೇ ಹಾಟ್‌ ಎಂದ ನೆಟ್ಟಿಗರು

ಸಾರಾಂಶ

ಭಾರಿ ಸಂಪ್ರದಾಯವನ್ನು ಮುರಿದು ಒಂದು ಕಾಲದಲ್ಲಿ ಬಿಕಿನಿ ತೊಟ್ಟಿದ್ದ ನಟಿ ಶರ್ಮಿಳಾ ಟ್ಯಾಗೋರ್‌ರಂತೆಯೇ ಅವರ ಮೊಮ್ಮಗಳು ಸಾರಾ ಅಲಿ ಖಾನ್‌ ಬಿಕಿನಿ ತೊಟ್ಟು ಪೋಸ್‌ ಕೊಟ್ಟಿದ್ದಾರೆ. ನೆಟ್ಟಿಗರು ಹೇಳಿದ್ದೇನು?   

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ತಾಯಿ, ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ (Sharmila Tagore)  ಕೂಡ ಒಂದು ಕಾಲದ ಅದ್ಭುತ ನಟಿ.  ಬಾಲಿವುಡ್​ ಸಿನಿಮಾ ಕಂಡ ಅಪರೂಪದ ನಟಿ ಇವರು. 1960ರಿಂದ 80ರ ದಶಕದವರೆಗೂ ಬಹುಬೇಡಿಕೆಯುಳ್ಳ ನಟಿ. ಬಣ್ಣದ ಲೋಕಕ್ಕೆ ಹೆಣ್ಣೊಬ್ಬಳು ಎಂಟ್ರಿ ಕೊಡುತ್ತಾಳೆಂದರೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಕಾಲದಲ್ಲಿಯೇ  ಅಂದರೆ 60-70ರ ದಶಕದಲ್ಲಿಯೇ ಬಿಕಿನಿ ಬಟ್ಟೆ ತೊಟ್ಟು ಸುದ್ದಿಯಾಗಿದ್ದವರು ನಟಿ ಶರ್ಮಿಳಾ ಟ್ಯಾಗೋರ್​.  1966ರಲ್ಲಿ ಬಿಕಿನಿ (Bikini) ಡ್ರೆಸ್​ ಹಾಕಿಕೊಂಡು ಮ್ಯಾಗಝೀನ್​ ಒಂದಕ್ಕೆ ಫೋಟೋಶೂಟ್​ ಮಾಡಿಸಿಕೊಂಡು ಸಕತ್​ ಸುದ್ದಿ ಮಾಡಿದ್ದರು. ಅವರ ಮೊಮ್ಮಗಳೇ ಸಾರಾ ಅಲಿ ಖಾನ್‌. ಶರ್ಮಿಳಾ ಅವರ ಮಗ ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್ (Sara Ali Khan)​  ಚಿತ್ರರಂಗದಲ್ಲಿ ಈಗತಾನೆ ನೆಲೆ ಕಂಡುಕೊಳ್ಳುತ್ತಿದ್ದಾರೆ. ಈಗಿನ ಚಿತ್ರತಾರೆಯರು ಬಿಕಿನಿ ಹಾಕುವುದು ದೊಡ್ಡದೇನಲ್ಲ. ಒಂದು ಕಾಲದಲ್ಲಿ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಕ್ಕಳು ಎಂಬಂತೆ ಬಿಂಬಿಸಿಕೊಂಡ ನಟಿಯರೂ ಇಂದು ಧಾರಾಳವಾಗಿ ಅಂಗಾಂಗ ಪ್ರದರ್ಶನ ಮಾಡುತ್ತಿದ್ದಾರೆ. ಅವರ ಪೈಕಿ ಸಾರಾ ಅಲಿ ಖಾನ್‌ ಕೂಡ ಒಬ್ಬರು. ಅವರು ನಟಿಸಿದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಒಂದು ಮಟ್ಟದ ಕಲೆಕ್ಷನ್​ ಮಾಡಿದೆ. 

ಇದೀಗ ಈ ಅಜ್ಜಿ ಶರ್ಮಿಳಾ ಟ್ಯಾಗೋರ್‌ ಮತ್ತು  ಮೊಮ್ಮಗಳು ಸಾರಾ ಅಲಿ ಖಾನ್‌ ಅವರ ಬಿಕಿನಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ಸದ್ದು ಮಾಡುತ್ತಿದೆ.  ಹಲವಾರು ದಶಕಗಳ ಕಾಲ ಬೆಳ್ಳಿತೆರೆ ಆಳಿದ್ದ ಶರ್ಮಿಳಾ ಅವರು  ಸಿನಿಮಾಗಳಿಂದ ದೂರ ಉಳಿದಿದ್ದರೂ ಬಹಳ ವರ್ಷಗಳ ನಂತರ ‘ಗುಲ್ಮೊಹರ್’ (Gulmohar) ಚಿತ್ರದ ಮೂಲಕ ಬಾಲಿವುಡ್‌ಗೆ ಕಮ್‌ಮ್ಯಾಕ್ ಮಾಡಿದ್ದಾರೆ. 70ರ ದಶಕದಲ್ಲಿ ತಮ್ಮ ಸೌಂದರ್ಯ ಮತ್ತು ಅದ್ಭುತ ನಟನೆಯಿಂದ ಮನ ಗೆದ್ದಿದ್ದ ಶರ್ಮಿಳಾ ಟ್ಯಾಗೋರ್ ಅವರಿಗೆ ಈಗ 70 ವರ್ಷ. ಇತ್ತೀಚೆಗಷ್ಟೇ ಇವರು ಎಲ್ಲರ ಮನಸ್ಸನ್ನು ಗೆದ್ದದ್ದು ಸೊಸೆ ಹಾಗೂ ನಟಿ ಕರೀನಾ ಕಪೂರ್‌ ಕುರಿತು ಮಾತನಾಡಿದ್ದರಿಂದ, ಸೈಫ್‌ ಅಲಿ ಖಾನ್‌ ಅವರ ಎರಡನೆಯ ಪತ್ನಿಯಾಗಿ ಬಂದಿದ್ದ ಕರೀನಾ ಅವರನ್ನು ತುಂಬು ಮನದಿಂದ ಸ್ವಾಗತಿಸಿರೋ ಶರ್ಮಿಳಾ ಅವರು,  ಮಗಳು ಮತ್ತು ಸೊಸೆಯ ನಡುವಿನ ವ್ಯತ್ಯಾಸವನ್ನು ಹೇಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಲ್ಲಿ ಅವರು ಸೊಸೆಯಾದವಳನ್ನು ಎಷ್ಟು ಅಕ್ಕರೆಯಿಂದ ನೋಡಿಕೊಳ್ಳಬೇಕು ಎಂಬ ಬಗ್ಗೆ ಮಾತನಾಡಿ ನೆಟ್ಟಿಗರ ಮನಸ್ಸನ್ನು ಗೆದ್ದವರು.

ಮಗಳು-ಸೊಸೆ ನಡುವಿನ ವ್ಯತ್ಯಾಸ ತಿಳಿಸಿದ ನಟಿ Sharmila Tagore

ಅದೇ ರೀತಿ ಈಗ ಅಜ್ಜಿ ಮತ್ತು ಮೊಮ್ಮಗಳ ಬಿಕಿನಿ ಫೋಟೋಶೂಟ್‌ನಲ್ಲಿಯೂ ಈ ಅಜ್ಜಿ ಅರ್ಥಾತ್‌ ಶರ್ಮಿಳಾ ಟ್ಯಾಗೋರ್‌ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಇತ್ತೀಚೆಗಷ್ಟೇ ಸಾರಾ ಅಲಿ ಖಾನ್‌ ಅವರು  ಅಜ್ಜಿ ಶರ್ಮಿಳಾ ಟ್ಯಾಗೋರ್ ಕೂಡ ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ (Reels) ಕಾಣಿಸಿಕೊಂಡಿದ್ದರು.  ರೀಲ್‌ನಲ್ಲಿ, ಇಬ್ಬರು ತಮ್ಮ 1969 ರ ಚಲನಚಿತ್ರ ಆರಾಧನಾದಿಂದ ಹಿರಿಯ ನಟನ ಹಿಟ್ ಹಾಡು ಚಂದಾ ಹೈ ತು ಅನ್ನು ಮರುಸೃಷ್ಟಿಸಿದ್ದರು. ಬಹಳ ಸಮಯದ ನಂತರ ಎರಡು ಪಟೌಡಿ ಪೀಳಿಗೆಯನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಇಷ್ಟಪಟ್ಟಿದ್ದರು.   ವೀಡಿಯೊದಲ್ಲಿ ಸಾರಾ ಗುಲಾಬಿ ಬಣ್ಣದ ಟ್ಯಾಂಕ್ ಟಾಪ್ ಮತ್ತು ಗುಲಾಬಿ ಬಣ್ಣದ ಶಾರ್ಟ್ಸ್‌ನಲ್ಲಿ ಕಾಣಿಸಿಕೊಂಡಿದ್ದರೆ, ಶರ್ಮಿಳಾ ನೀಲಿ ಬಣ್ಣದ ಜೀನ್ಸ್‌ನೊಂದಿಗೆ ನೀಲಿ ಹೂವಿನ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದರು. ಆಗಲೂ ಫ್ಯಾನ್ಸ್‌ ಶರ್ಮಿಳಾ ಅವರ ಸೌಂದರ್ಯವನ್ನೇ ಹೊಗಳಿದ್ದರು.

ಈಗ ಇಬ್ಬರೂ ಸುಮಾರು ಒಂದೇ ರೀತಿಯ ನೀಲಿ ಬಿಕಿನಿ ತೊಟ್ಟಿರುವ ಫೋಟೋ ವೈರಲ್‌ ಆಗಿದೆ. ಈ ಫೋಟೋದಲ್ಲಿಯೂ  ಅಜ್ಜಿಯನ್ನು ಮೊಮ್ಮಗಳು ಸರಿಗಟ್ಟಲು ಸಾಧ್ಯವೇ ಇಲ್ಲ ಎನ್ನುವ ಮಾತುಗಳು ಕಮೆಂಟ್‌ನಲ್ಲಿ ತುಂಬಿಹೋಗಿದೆ. ಹೆಚ್ಚಿನವರು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾರಾ ಅಲಿ ಖಾನ್‌ ಬ್ಯೂಟಿ (Beauty) ಎನ್ನುವಲ್ಲಿ ಎರಡು ಮಾತೇ ಇಲ್ಲ. ಆದರೆ ಅಜ್ಜಿ ಶರ್ಮಿಳಾ ಅವರ ಸೌಂದರ್ಯಕ್ಕೆ ಸಾರಾ ಅವರನ್ನು ಹೋಲಿಸುವುದು ಸಾಧ್ಯವಿಲ್ಲ. ಶರ್ಮಿಳಾ ಎಂದೆಂದಿಗೂ ಹಾಟ್‌ ತಾರೆಯೇ. ಅದೂ ಆಗಿನ ಕಾಲದಲ್ಲಿ ದಿಟ್ಟತನದಲ್ಲಿ ಬಿಕಿನಿ ತೊಟ್ಟಿದ್ದ ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. ಒಟ್ಟಿನಲ್ಲಿ ಅಜ್ಜಿ ಮತ್ತು ಮೊಮ್ಮಗಳನ್ನು ಕಂಪೇರ್‌ ಮಾಡುವುದಾದರೆ ಅಜ್ಜಿಯೇ ಹಾಟ್‌ ಎನ್ನುತ್ತಿದ್ದಾರೆ. 

Sara Ali Khan: ಬಾಯ್​ಫ್ರೆಂಡ್​ ಶುಭ್​ಮನ್​ ಗಿಲ್​ ಕುರಿತ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!