ನಟಿ ತಮನ್ನಾ ಭಾಟಿಯಾ ಸಿನಿಮಾದಿಂದ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಾರೆ. ಇದರ ಜೊತೆಗೆ ಮುಂಬೈನಲ್ಲಿರುವ ಒಂದು ವಾಣಿಜ್ಯ ಕಟ್ಟಡವನ್ನು ಬಾಡಿಗೆ ನೀಡಿದ್ದಾರೆ. ಇದರ ತಿಂಗಳ ಬಾಡಿಗೆ ಎಷ್ಟು ಗೊತ್ತಾ?
ಮುಂಬೈ(ಜು.01) ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಚಿತ್ರದಲ್ಲಿ ಅಭಿನಯಿಸಲು 5 ರಿಂದ 7 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇನ್ನು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು 2 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಸಿನಿಮಾದಿಂದ ಕೋಟಿ ಕೋಟಿ ಆದಾಯಗಳಿಸುವ ನಟಿ ತಮನ್ನಾ ಬಾಡಿಗೆ ಮೂಲಕವೂ ಲಕ್ಷ ರೂಪಾಯಿ ಎಣಿಸುತ್ತಿದ್ದಾರೆ. ನಟಿ ತಮನ್ನಾ ಮುಂಬೈನಲ್ಲಿ ತಮ್ಮ ವಾಣಿಜ್ಯ ಕಟ್ಟಡವನ್ನು ಬಾಡಿಗೆ ನೀಡಿದ್ದಾರೆ. ಜುಹು ತಾರಾ ರಸ್ತೆಯಲ್ಲಿರುವ ಈ ವಾಣಿಜ್ಯ ಕಟ್ಟಡದ ಪ್ರತಿ ತಿಂಗಳ ಬಾಡಿಗೆ 18 ಲಕ್ಷ ರೂಪಾಯಿ.
ಹೌದು, ಪ್ರತಿ ತಿಂಗಳು ಜುಹು ತಾರ ರಸ್ತೆಯ ವಾಣಿಜ್ಯ ಕಟ್ಟದಿಂದ ನಟಿ ತಮನ್ನಾ 18 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಈ ಕಟ್ಟವನ್ನು 5 ವರ್ಷಗಳ ಅವಧಿಗೆ ಬಾಡಿಗೆ ನೀಡಲಾಗಿದೆ. ಪ್ರತಿ ತಿಂಗಳು 18 ಲಕ್ಷ ರೂಪಾಯಿಯಂತೆ ತಮನ್ನಾ ಬಾಡಿಗೆ ಪಡೆಯುತ್ತಿದ್ದಾರೆ. ಆರಂಭಿಕ ಮೂರು ವರ್ಷ ಪ್ರತಿ ತಿಂಗಳು 18 ಲಕ್ಷ ರೂಪಾಯಿ ಬಾಡಿಗೆ ಪಡೆದರೆ, 4ನೇ ವರ್ಷ ಪ್ರತಿ ತಿಂಗಳು 20.16 ಲಕ್ಷ ರೂಪಾಯಿ ಹಾಗೂ 5ನೇ ವರ್ಷ ಪ್ರತಿ ತಿಂಗಳ ಬಾಡಿಗೆ 20.96 ಲಕ್ಷ ರೂಪಾಯಿ ಬಾಡಿಗೆ ಪಡೆಯಲಿದ್ದಾರೆ.
ರೋಮ್ಯಾನ್ಸ್, ಲಿಪ್‌ಲಾಕ್ ದೃಶ್ಯದಲ್ಲಿ ನಟರಿಗೆ ಈ ಸಮಸ್ಯೆ ಕಾಡುತ್ತೆ, ತಮನ್ನಾ ಬೋಲ್ಡ್ ಮಾತು !
6065 ಚದರ ಅಡಿಯ ಈ ವಾಣಿಜ್ಯ ಕಟ್ಟಡವನ್ನು ಜೂನ್ 27, 2024ರಲ್ಲಿ ಒಪ್ಪಂದ ಮಾಡಿ ಬಾಡಿಗೆ ನೀಡಲಾಗಿದೆ. ಸೆಕ್ಯೂರಿಟಿ ಮೊತ್ತವನ್ನು 74 ಲಕ್ಷ ರೂಪಾಯಿ ತಮನ್ನಾ ಪಡೆದಿದ್ದಾರೆ. ಮೂಲಗಳ ಪ್ರಕಾರ ಮುಂದಿನ 5 ವರ್ಷದ ಬಳಿಕ ಇದೇ ವಾಣಿಜ್ಯ ಕಟ್ಟಡದ ತಿಂಗಳ ಬಾಡಿಗೆ 50 ಲಕ್ಷ ರೂಪಾಯಿ ಸಮೀಪಿಸಲಿದೆ ಎಂದು ಹೇಳಲಾಗುತ್ತಿದೆ.
ಒಂದೆಡೆ ತಮನ್ನಾ ಲಕ್ಷ ಲಕ್ಷ ರೂಪಾಯಿ ಬಾಡಿಗೆಯಿಂದ ಆದಾಯ ಪಡೆಯುತ್ತಿದ್ದರೆ, ಅಂಧೇರಿ ವೆಸ್ಟ್‌ನಲ್ಲಿರುವ ಮೂರು ಮನೆಗಳನ್ನು ನಟಿ ತಮನ್ನಾ ಅಡವಿಟ್ಟಿದ್ದಾರೆ. ಮೂರು ಮನೆಗಳನ್ನು ಒಟ್ಟಿ 7.84 ಕೋಟಿ ರೂಪಾಯಿಗೆ ಅಡವಿಟ್ಟಿದ್ದಾರೆ. ಇಂಡಿಯನ್ ಬ್ಯಾಂಕ್‌ನಲ್ಲಿ ಮೂರು ಫ್ಲ್ಯಾಟ್ ಅಡವಿಟ್ಟಿದ್ದಾರೆ. ಜೂನ್ 14, 2024ರಂದು ಈ ಮೂರು ಮನೆಗಳನ್ನು ಅಡವಿಡಲಾಗಿದೆ.
ಮುಂಬೈನಲ್ಲಿರುವ ತಮನ್ನಾ ಭಾಟಿಯಾ ಐಶಾರಾಮಿ ಮನೆ ಹೇಗಿದೆ ನೋಡಿ, ಇದರ ಬೆಲೆ ಎಷ್ಟು ಗೊತ್ತಾ?
ತಮನ್ನಾ ಮುಂಬೈನ ಜುಹು ವರ್ಸೋವಾ ರಸ್ತೆಯಲ್ಲಿರುವ ಬೆವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಹೊಂದಿದ್ದಾರೆ. 14ನೇ ಮಹಡಿಯಲ್ಲಿರುವ ಈ ಮನೆಯಲ್ಲಿ ತಮನ್ನಾ ವಾಸವಿದ್ದಾರೆ. ಇದನ್ನು 16 ಕೋಟಿ ರೂಪಾಯಿಗೆ ತಮನ್ನಾ ಖರೀದಿಸಿದ್ದರು. 9 ವರ್ಷಗಳಿಂದ ತಮನ್ನಾ ಇದೇ ಮನೆಯಲ್ಲಿ ವಾಸವಿದ್ದಾರೆ.