'ಜವಾನ್​'ನ ಜಿಂದಾಬಂದಾ ಹಾಡಿಗೆ ಹುಚ್ಚೆದ್ದು ಕುಣೀತಿದ್ದಾರೆ ಫ್ಯಾನ್ಸ್​- ಒಂದೇ ದಿನ 46 ಮಿಲಿಯನ್​ ವ್ಯೂಸ್​!

By Suvarna News  |  First Published Aug 2, 2023, 2:44 PM IST

ಜವಾನ್​ ಚಿತ್ರದ ಬಹುನಿರೀಕ್ಷಿತ ಜಿಂದಾ ಬಂದಾ ಹಾಡು ರಿಲೀಸ್​ ಆಗಿದ್ದು, 24 ಗಂಟೆಯಲ್ಲಿ 46 ಮಿಲಿಯನ್​ ವ್ಯೂಸ್​ ಕಂಡು ದಾಖಲೆ ಬರೆದಿದೆ. 
 


‘ಪಠಾಣ್’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಈಗ ಶಾರುಖ್​ ಖಾನ್​ ಅಭಿಮಾನಿಗಳ ಗಮನ ಅವರ ಮುಂಬರುವ ಚಿತ್ರ ಜವಾನ್​ ಮೇಲೆ ನೆಟ್ಟಿದೆ. ಇದೇ ಕಾರಣಕ್ಕೆ  'ಜವಾನ್' (Jawan) ಚಿತ್ರ ರಸಿಕರ ಪಾಲಿಗೆ ಸದ್ಯದ ಹಾಟ್​ ಟಾಪಿಕ್​  ಆಗಿದೆ.  ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ. ಈ ಚಿತ್ರವನ್ನು ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ನಟಿಸಿದ್ದಾರೆ. ಚಿತ್ರದ ಮುನ್ನೋಟ ಮತ್ತು ಟ್ರೇಲರ್​ ಕಳೆದ ವಾರ ಬಿಡುಗಡೆಯಾಗಿದ್ದಾಗಲೇ ಸಕತ್​ ರೆಸ್​ಪಾನ್ಸ್​ ಬಂದಿತ್ತು.  ಈ ಸಿನಿಮಾದಲ್ಲಿ  6 ಹಾಡುಗಳಿವೆ ಎನ್ನಲಾಗುತ್ತಿದೆ. ಇದರ ಪೈಕಿ ಜಿಂದಾ ಬಂದಾ ಹಾಡು ರಿಲೀಸ್​ ಆಗಿದ್ದು, ಫ್ಯಾನ್ಸ್​ ಹುಚ್ಚೆದ್ದು ಕುಣಿಯುತ್ತಿದ್ದಾರೆ. 

ಹೌದು. 57ರ ಹರೆಯದಲ್ಲಿಯೂ ಈ ಹಾಡಿನಲ್ಲಿ ಶಾರುಖ್​ 27ರ ಯುವಕರಂತೆ ಕುಣಿದು ಕುಪ್ಪಳಿಸಿದ್ದಾರೆ. ಅವರ ಎನರ್ಜಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಹಾಡು ಬಿಡುಗಡೆಯಾಗುತ್ತಲೇ ಕೇವಲ 24 ಗಂಟೆಯೊಳಗೆ 46 ಮಿಲಿಯನ್​ ವ್ಯೂಸ್​ ಅಂದರೆ 4.6 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಇದೊಂದು ದೊಡ್ಡ ದಾಖಲೆಯೇ ಎನ್ನಲಾಗುತ್ತಿದೆ. ಜಿಂದಾ ಬಂದಾ (ಜೀವಂತ ವ್ಯಕ್ತಿ) ಹಾಡಲ್ಲಿ ಲುಂಗಿ ಬಳಸಲಾಗಿದೆ.  ‘ಜಿಂದಾ ಬಂದಾ’ ಹಾಡಿನಲ್ಲಿ ಸಾವಿರಾರು ಹುಡುಗಿಯರು ಸೊಂಟ ಬಳುಕಿಸಿದ್ದಾರೆ. ಹುಡುಗಿಯರು ಇಲ್ಲಿ ಲುಂಗಿ ಧರಿಸಿ ಡ್ಯಾನ್ಸ್ ಕೂಡ ಮಾಡಿರುವುದು ವಿಶೇಷ. ಶಾರುಖ್ ಮತ್ತು ದೀಪಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸಪ್ರೆಸ್‌ನಲ್ಲಿ ಈ ಲುಂಗಿ ಡ್ಯಾನ್ಸ್ ಹಾಡಿತ್ತು. ಆ ಒಂದು ಕ್ರೇಜ್‌ ಅನ್ನ ಜವಾನ್ ಸಿನಿಮಾದ ಈ ಗೀತೆಯಲ್ಲಿ ಬಳಸಿಕೊಂಡಿದ್ದಾರೆ.  

Tap to resize

Latest Videos

ಶಾರುಖ್​ v/s ಪ್ರಭಾಸ್: ಮೇಲುಗೈ ಯಾರಿಗೆ? 'ಜವಾನ್'​ಗೆ 21 ದಿನಗಳ ಚಾಲೆಂಜ್​!

 ಅನಿರುದ್ಧ ರವಿಚಂದರ್ ವಿನ್ಯಾಸಗೊಳಿಸಿದ ಮತ್ತು ಶೋಬಿ ಅವರ ನೃತ್ಯ ಸಂಯೋಜನೆಯಲ್ಲಿ ಸಾವಿರಾರು ಹುಡುಗಿಯರು ಆಕರ್ಷಕವಾದ ಬೀಟ್‌ಗಳಿಗೆ ನೃತ್ಯ ಮಾಡಿದ್ದಾರೆ.   ‘ವೈ ದಿಸ್ ಕೊಲವೆರಿ ಡಿ’ ಹಾಡಿನ ಖ್ಯಾತಿಯ ಅನಿರುದ್ಧ ರವಿಚಂದರ್​, ಈ ಹಾಡನ್ನೂ ಸಂಯೋಜಿಸಿದ್ದಾರೆ.  2012 ರಲ್ಲಿ ತಮಿಳು ಚಿತ್ರ ‘3’ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟಿರೋ ಅನುರುದ್ಧ ಅವರು, ಇದಾಗಲೇ ಹಿಂದಿ ಜೊತೆ  ತೆಲುಗು, ತಮಿಳಿನಲ್ಲಿ 50ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ (Music compose). ಇವರದ್ದೇ ಸಂಯೋಜನೆಯಲ್ಲಿ ಬಂದಿದೆ ಜವಾನ್​ನ ‘ಜಿಂದಾ ಬಂದಾ’ (Zinda banda). ಈ ಹಾಡಿಗೆ ಧ್ವನಿ ಕೂಡ ಅವರದ್ದೇ. ಹಾಡಿನ ಆರಂಭದಲ್ಲಿ ಬರುವ ಡೈಲಾಗ್‌ಳನ್ನ ಸ್ವತಃ ಶಾರುಖ್ ಖಾನ್ ಹೇಳಿದ್ದಾರೆ. ಈ ಹಾಡಿಗೆ  ಚೆನ್ನೈ, ಹೈದರಾಬಾದ್, ಬೆಂಗಳೂರು, ಮಧುರೈ, ಮುಂಬೈಗಳಿಂದ ಸಾವಿರಕ್ಕೂ ಅಧಿಕ ಲಲನೆಯರನ್ನು ಕರೆಸಿದ್ದಾರೆ ಎನ್ನಲಾಗಿದೆ. ಈ ಹಾಡಿನ ಶೂಟಿಂಗ್​ ಒಂದಕ್ಕೇ  15 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆಯಂತೆ! 

ಅಂದಹಾಗೆ, ಜವಾನ್​ ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್​ ಸ್ಟಾರ್​ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ದಕ್ಷಿಣದ ಬಹುತೇಕ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಮುಖ್ಯ ವಿಲನ್ ರೀತಿನೇ ಕಾಣಿಸುತ್ತಿದ್ದಾರೆ.  ನಟಿ ದೀಪಿಕಾ ಪಡುಕೋಣೆ (Deepika Padukone) ಇಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ನಯನತಾರಾ ಇಲ್ಲಿ ಹೊಸ ಖದರ್ ಅಲ್ಲಿಯೇ ಬರ್ತಿದ್ದಾರೆ. ಕನ್ನಡದ ಪ್ರಿಯಾಮಣಿ ಕೂಡ ಅಭಿನಯಿಸಿದ್ದಾರೆ.

JAWAN:​ 'ಜಿಂದಾ ಬಂದಾ' ಹಾಡಲ್ಲಿ ಸಾವಿರಾರು ಲಲನೆಯರು- ಖರ್ಚು 15 ಕೋಟಿ ರೂ!

 

click me!