ದರ್ಶನ ನೀಡೋಕೆ ಹೋದ್ರಾ ಮಾಡೋಕೆ ಹೋದ್ರ: ಶಾರ್ಟ್ಸ್‌ ಧರಿಸಿ ದೇಗುಲಕ್ಕೆ ಬಂದ ಏಕ್ತಾಗೆ ನೆಟ್ಟಿಗರ ಫುಲ್ ಕ್ಲಾಸ್

Published : Aug 02, 2023, 02:40 PM ISTUpdated : Aug 02, 2023, 02:50 PM IST
ದರ್ಶನ ನೀಡೋಕೆ ಹೋದ್ರಾ ಮಾಡೋಕೆ ಹೋದ್ರ: ಶಾರ್ಟ್ಸ್‌ ಧರಿಸಿ ದೇಗುಲಕ್ಕೆ ಬಂದ ಏಕ್ತಾಗೆ ನೆಟ್ಟಿಗರ ಫುಲ್ ಕ್ಲಾಸ್

ಸಾರಾಂಶ

ಹಿಂದಿ ಧಾರವಾಹಿಗಳ ಖ್ಯಾತ  ನಿರ್ದೇಶಕಿ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್ ಶಾರ್ಟ್ಸ್ ಧರಿಸಿ ದೇಗುಲಕ್ಕೆ ಹೋಗಿದ್ದು,  ಇವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈ: ದೇಗುಲಕ್ಕೆ ಆಗಮಿಸುವ ವೇಳೆ ಸಂಪ್ರದಾಯಿಕ ಧಿರಿಸು ಧರಿಸಿ ಬರಬೇಕೆಂಬ ನಿಯಮವಿದೆ. ದೇಶದ ಹಲವು ದೇಗುಲಗಳಲ್ಲಿ ಆಯಾಯ ರಾಜ್ಯಗಳ ಮುಜರಾಯಿ ಇಲಾಖೆಯೇ ಈ ಬಗ್ಗೆ ಸೂಚನೆ ಹೊರಡಿಸಿದೆ. ಹಲವು ಪ್ರಸಿದ್ಧ ದೇಗುಲಗಳಲ್ಲಿ ಈ ಬಗ್ಗೆ ಬೋರ್ಡ್‌ಗಳಿವೆ. ಶಾರ್ಟ್ಸ್‌, ಸ್ಲೀವ್‌ಲೆಸ್‌ (ತೋಳಿಲ್ಲದ) ಜೀನ್ಸ್‌ ಪ್ಯಾಂಟ್ಸ್, ಲೆಗಿನ್ಸ್‌ ಮೊದಲಾದ ಪಾಶ್ಚಿಮಾತ್ಯ ಶೈಲಿಯ ಅರಬರೆ ಮೈ ತೋರಿಸುವ ಬಟ್ಟೆಗಳಿಗೆ ದೇಗುಲಗಳಲ್ಲಿ ನಿಷೇಧವಿದೆ. ಈ ನಿಷೇಧ ಜನ ಸಾಮಾನ್ಯರಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯ. ಹಾಗಿದ್ದೂ ನಟಿ ಹಾಗೂ ಹಿಂದಿ ಧಾರವಾಹಿಗಳ ಖ್ಯಾತ  ನಿರ್ದೇಶಕಿ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್ ಶಾರ್ಟ್ಸ್ ಧರಿಸಿ ದೇಗುಲಕ್ಕೆ ಹೋಗಿದ್ದು,  ಇವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋ ನೋಡಿದ ಜನ ನಟಿ ಏಕ್ತಾಗೆ ಸಭ್ಯತೆ ಶಿಷ್ಟಾಚಾರದ ಪಾಠ ಮಾಡಿದ್ದಾರೆ.  ಕೆಲವರು ನೀವು ದೇವರ ದರ್ಶನ ಪಡೆಯಲು ಹೋಗಿದ್ರಾ ಅಥವಾ ನೀವೇ ದರ್ಶನ ಕೊಡುವುದಕ್ಕಾಗಿ ಹೋಗಿದ್ರಾ ಅಂತ ಏಕ್ತಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದಹಾಗೆ ನಿನ್ನೆ ಈ ಏಕ್ತಾ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇಗುಲಕ್ಕೆ ಹೀಗೆ ಶಾರ್ಟ್ಸ್‌ ಧರಿಸಿ ಹೋಗಿದ್ದರು.  ಕೆಂಪು ಬಣ್ಣದ ಲಾಂಗ್ ಜಾಕೆಟ್ ಹಾಗೂ ಕಪ್ಪು ಬಣ್ಣದ ಶಾರ್ಟ್ಸ್‌  ಧರಿಸಿ ದೇಗುಲಕ್ಕೆ ಹೋದ ಏಕ್ತಾಳ ವೀಡಿಯೋ ನೋಡಿದ ಜನ ಕಾಮೆಂಟ್‌ ಸೆಕ್ಷನ್‌ನಲ್ಲಿ ಬೈಗುಳಗಳ ಸುರಿಮಳೆ ಸುರಿಸಿದ್ದಾರೆ. ನೀವು ದೇಗುಲಕ್ಕೆ ಹೋಗಿದ್ದ ಅಥವಾ ಮಾರ್ನಿಂಗ್ ವಾಕ್‌ಗೆ ತೆರಳಿದ್ದ ಎಂದು ಅನೇಕರು ಏಕ್ತಾಳನ್ನ ಟೀಕೆ ಮಾಡಿದ್ದಾರೆ. ಬಾಲಿವುಡ್‌ನ ಪಪಾರಾಜಿಗಳ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಆದ ಈ ವೀಡಿಯೋ  ಈಗ ವೈರಲ್ ಆಗಿದೆ. 

ಸ್ಮೃತಿ ಇರಾನಿ ಮತ್ತು ಏಕ್ತಾ ಕಪೂರ್ ನಂಟಿನ ಬಗ್ಗೆ ಸತ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ!

ಮತ್ತೆ ಕೆಲವರು ಆಕೆ ರಾಧೆ ಮಾ ಸರಿಯಾಗಿ ನೋಡಿ ಎಂದು ವ್ಯಂಗ್ಯವಾಡಿದ್ದಾರೆ.  ಇಂತಹವರಿಗೆಲ್ಲಾ ಯಾರೂ ಹೇಳೋರು ಕೇಳೋರು ಇಲ್ಲ, ಆದರೆ ನಮ್ಮಂತಹ ಸಾಮಾನ್ಯ ಜನ ಹೋದರೆ ಯುದ್ಧಕ್ಕೆ ಬಂದು ಬಿಡುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ವೀಡಿಯೋದಲ್ಲಿ ನಟಿ ನಿರ್ದೇಶಕಿ ಪಪಾರಾಜಿಗಳಿಗೆ ಫೋಟೋ ಕ್ಲಿಕ್ ಮಾಡದೇ ಸುಮ್ಮನಿರುವಂತೆ ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.  ಇದಕ್ಕೂ ಮೊದಲು ಏಕ್ತಾ ಬಟ್ಟೆಯ ಕಾರಣಕ್ಕೆ ಟ್ರೋಲ್ ಆಗಿದ್ದರು, ಸೋದರನ ತುಷಾರ್ ಕಪೂರ್ ಪುತ್ರ ಲಕ್ಷ್ಯ ಕಪೂರ್ ಬರ್ತ್‌ಡೇ ತೆರಳಿದ್ದ ವೇಳೆ  ಲಕ್ಷ್ಯ ಪಾಪಾರಾಜಿಗಳ ಮುಂದೆಯೂ ತಮ್ಮ ಬಟ್ಟೆಯನ್ನು ಸರಿ ಪಡಿಸಿಕೊಳ್ಳುವ ಕಾರಣಕ್ಕೆ ಟ್ರೋಲ್‌ಗೆ ಒಳಗಾಗಿದ್ದರು. 

ಲಕ್ಷ್ಮೀ ದೇವಿಗೆ ಇದೆಂಥ ಅವಮಾನ! ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು 'ಗಂಧೀಬಾತ್​' ಪೋಸ್ಟರ್​  

ಇನ್ನು ಏಕ್ತಾ ಕಪೂರ್ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಹಿಂದಿ ಟಿವಿ ಲೋಕದಲ್ಲಿ ಅವರದ್ದು ಅಚ್ಚಳಿಯದ ಹೆಸರು, ಹಿಂದಿಯ ಸೀರಿಯಲ್ ಲೋಕಕ್ಕೆ ವೈಭವ, ಭಿನ್ನ ಕತೆ, ದೊಡ್ಡ ನಟರನ್ನು ತಂದವರು ಏಕ್ತಾ ಕಪೂರ್. ಕಸೌಟಿ ಜಿಂದಗಿ ಕೀ,  ಕಹಾನಿ ಘರ್ ಘರ್ ಕಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ಬಡೇ ಅಚೇ ಲಗ್ತೇ ಹೈ, ಕಸಮ್ ಸೇ, ಪವಿತ್ರ ರಿಶ್ತಾ, ಕುಂಕುಮ್ ಭಾಗ್ಯ, ನಾಗಿನ್ ಮುಂತಾದ ಹಿಟ್ ಧಾರಾವಾಹಿಗಳನ್ನು ನೀಡಿದ್ದಾರೆ.  ಇವರ ಒಂದು ವಿಶೇಷತೆ ಎಂದರೆ,  ಇವರ ಹಲವಾರು ಧಾರಾವಾಹಿಗಳು ಕ ಅಕ್ಷರದಿಂದ ಪ್ರಾರಂಭವಾಗುವಂಥದ್ದು.  ಏಕ್ತಾ ಕಪೂರ್ ಈವರೆಗೆ 134 ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. 38 ಸಿನಿಮಾಗಳನ್ನು ನಿರ್ಮಿಸಿದ್ದಾರೆ. 28 ವೆಬ್ ಸರಣಿಗಳನ್ನು (Web Series) ನಿರ್ಮಾಣ ಮಾಡಿದ್ದಾರೆ. ಪ್ರಖ್ಯಾತ ಬಾಲಾಜಿ ಟೆಲಿಫಿಲಮ್ಸ್‌ ಏಕ್ತಾ ಕಪೂರ್ ಒಡೆತನದ್ದೇ. 1975ರ ಜೂನ್​ 7ರಂದು ಹುಟ್ಟಿರುವ ಏಕ್ತಾ ಕಪೂರ್ ಅವರಿಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ. ಇದಾಗಲೇ ಗಂಡು ಮಗುವಿನ ತಾಯಿಯಾಗಿದ್ದಾರೆ ಏಕ್ತಾ. ಆದರೆ ಕುತೂಹಲದ ವಿಷಯ ಏನೆಂದರೆ ಅವರಿಗೆ ಇನ್ನೂ ಮದುವೆಯಾಗಲಿಲ್ಲ!

ಹೌದು.  ಏಕ್ತಾ ಕಪೂರ್​ (Ektha Kapoor) ಅವರಿಗೆ ಇನ್ನೂ ಮದುವೆಯಾಗಲಿಲ್ಲ. ಇವರ ಮದುವೆ ಚಿತ್ರ ನಿರ್ಮಾಪಕ ಕರಣ್ ಜೋಹರ್ ಜೊತೆ ಎಂದು ಒಮ್ಮೆ ಬಹಳ ಸುದ್ದಿ ಹರಡಿತ್ತು.  ಇಬ್ಬರೂ ಅನೇಕ ವರ್ಷಗಳಿಂದ ಒಟ್ಟಿಗೇ ಇದ್ದಾರೆ  ಮತ್ತು ಬಾಲ್ಯದಿಂದಲೂ ಪರಸ್ಪರ ಸಂಪರ್ಕದಲ್ಲಿದ್ದವರು. ಕೆಲವು ವರ್ಷಗಳ ಹಿಂದೆ, ಏಕ್ತಾ ಮತ್ತು ಕರಣ್ ಪರಸ್ಪರ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು.  ಆದರೆ ಅವರಿಬ್ಬರು ಯಾವುದನ್ನೂ ಖಚಿತಪಡಿಸಿರಲಿಲ್ಲ.  2006-07 ರಲ್ಲಿ ನಡೆದ, ಸಂದರ್ಶನವೊಂದರಲ್ಲಿ  ಕರಣ್ ಅವರು ಬೇರೆ ಯಾರನ್ನೂ ಹುಡುಕದಿದ್ದರೆ ಏಕ್ತಾ ಅವರನ್ನು ಮದುವೆಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಇದುವರೆಗೆ ಕರಣ್​ ಅವರಿಗೂ ಮದುವೆಯಾಗಲಿಲ್ಲ. ಏಕ್ತಾ ಕಪೂರ್​ ಕೂಡ ಅವಿವಾಹಿತೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?