Bigg Boss ಮಹಿಳಾ ಸ್ಪರ್ಧಿಗೆ ಕಿಸ್​: ಹೊಸ ವಿವಾದದಲ್ಲಿ ಮಹೇಶ್​ ಭಟ್​

By Suvarna News  |  First Published Aug 2, 2023, 12:30 PM IST

ಬಿಗ್​ಬಾಸ್​​ ಓಟಿಟಿ-2ನಲ್ಲಿ ನಿರ್ದೇಶಕ ಮಹೇಶ್​ ಭಟ್​ ಅವರು ಇನ್ನೋರ್ವ ಸ್ಪರ್ಧಿ ಮನಿಷಾ ರಾಣಿಯವರಿಗೆ ಕಿಸ್​ ಮಾಡಿದ್ದು, ಇದು ಸಕತ್​ ಟ್ರೋಲ್​  ಆಗುತ್ತಿದೆ. 
 


ನಟಿಯರಾದ ಪೂಜಾ ಭಟ್​, ಆಲಿಯಾ ಭಟ್​ ತಂದೆಯೂ ಆಗಿರುವ, ಬಾಲಿವುಡ್​ನ ಖ್ಯಾತ  ನಿರ್ದೇಶಕ ಮಹೇಶ್ ಭಟ್ (Mahesh Bhatt) ಅವರು ಸದಾ ಒಂದಲ್ಲಾ ಒಂದು ವಿವಾದ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಚಿತ್ರ ನಿರ್ಮಾಪಕ ಮಹೇಶ್ ಭಟ್ ಹಿಂದಿ ಚಿತ್ರರಂಗಕ್ಕೆ ಅನೇಕ ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅವರ ಸಿನಿಮಾಗಳು ಎಷ್ಟು ಫೇಮಸ್‌ ಆಗಿದ್ಯೋ, ಅವರ ಮಾತುಗಳು ಅಷ್ಟೇ ವಿವಾದದಿಂದ ಕೂಡಿರುತ್ತದೆ. ಅವರು ಹಿಂದೊಮ್ಮೆ ಸಂದರ್ಶನದಲ್ಲಿ ತಾವು ಮದ್ಯಪಾನ ವ್ಯಸನಿಯಾಗಿ ಹೇಗೆ ಲೈಫ್ ಹಾಳುಮಾಡಿಕೊಂಡೆ ಎಂಬ ಬಗ್ಗೆ ಮಾತನಾಡಿದ್ದರು.  ನಂತರ ಕುಡಿಯುವುದನ್ನು ಬಿಡುವ ನಿರ್ಧಾರವನ್ನು ಏಕೆ ಮತ್ತು ಹೇಗೆ ತೆಗೆದುಕೊಂಡರು ಎಂದೂ ವಿವರಿಸಿದ್ದರು. ಕಳೆದ 36 ವರ್ಷಗಳಿಂದ ಮದ್ಯವನ್ನು ಮುಟ್ಟುತ್ತಲೂ ಇಲ್ಲ ಎಂಬ ಬಗ್ಗೆ 75 ವರ್ಷದ ಮಹೇಶ್​ ಭಟ್​ ತೆರೆದಿಟ್ಟಿದ್ದರು. ಇದರ ಹೊರತಾಗಿಯೂ ಇವರು ವಿವಾದಗಳಿಂದ ಹೊರತೇನಲ್ಲ. ಬಾಲಿವುಡ್​ ನಟ ಸುಶಾಂತ್ ಸಿಂಗ್ ನಿಗೂಢವಾಗಿ ಮೃತಪಟ್ಟಿದ್ದು, ಆ ಸಾವಿನ ಬಗ್ಗೆ ಇನ್ನೂ ಪೂರ್ಣ ವಿಷಯ ಬಹಿರಂಗಗೊಂಡಿಲ್ಲ. ಆದರೆ ನಟನ ಸಾವಿನ ಹಿಂದೆ ಕೆಲವು ಸೆಲೆಬ್ರಿಟಿಗಳ ಹೆಸರು ಕೇಳಿಬಂದಿದ್ದು, ಅವರಲ್ಲಿ  ಮಹೇಶ್ ಭಟ್ ಕೂಡ ಒಬ್ಬರು. ಸುಶಾಂತ್​ ಸಿಂಗ್​ ಅವರ ಗರ್ಲ್​ಫ್ರೆಂಡ್​ ಆಗಿದ್ದ ರಿಯಾ ಚಕ್ರವರ್ತಿಗೆ ಕುಮ್ಮಕ್ಕು ಕೊಟ್ಟಿದ್ದರ ಹಿಂದೆ ಇವರ ಕೈವಾಡ ಇದೆ ಎಂಬ ಗಂಭೀರ ಆರೋಪ ಇವರ ಮೇಲಿದೆ.

ಅದೇನೇ ಇದ್ದರೂ ಈಗ ಮಹೇಶ್​ ಭಟ್​ (Mahesh Bhatt) ಬಿಗ್​ಬಾಸ್​ನಲ್ಲಿ ಸದ್ದು ಮಾಡುತ್ತಿದ್ದಾರೆ. ಹಿಂದಿ ಬಿಗ್​ಬಾಸ್​ನ  ಒಟಿಟಿ ಸೀಸನ್ 2 ನಲ್ಲಿ ಮಗಳು ಪೂಜಾ ಭಟ್​ ಜೊತೆ ಅಪ್ಪ ಮಹೇಶ್​ ಭಟ್​ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ತಮ್ಮ ಮಗಳಿನ ವಯಸ್ಸಿನ ಒಬ್ಬಳಿಗೆ ಕಿಸ್​ ಮಾಡಿದ್ದು, ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಮಹೇಶ್​ ಭಟ್​ ತಮ್ಮ ಚಾಳಿ ಬಿಟ್ಟಿಲ್ಲ ಎಂದು ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.  ಬಿಗ್​ಬಾಸ್​ ಎಲ್ಲರಿಗೂ ಗೊತ್ತಿರುವಂತೆಯೇ ಅಸಭ್ಯ, ಅಶ್ಲೀಲ, ಕೆಟ್ಟ ದೃಶ್ಯಗಳಿಂದಲೇ ಫೇಮಸ್​ ಆಗುತ್ತಿರುವಂಥದ್ದು. ಇದೇ ಕಾರಣಕ್ಕೆ ಒಂದು ವರ್ಗ ಇದನ್ನು ತುಂಬಾ ಇಷ್ಟಪಟ್ಟು ನೋಡುವುದೂ ಇದೆ. ಇದೀಗ ಅಂಥದ್ದೇ ಒಂದು ವಿಷಯದಲ್ಲಿ ಮಹೇಶ್​ ಭಟ್​ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಇದರಲ್ಲಿ ಅವರು,  ಮನಿಶಾ ರಾಣಿ ಕೈ ಅನ್ನು ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಅವರ ಕೈಗೆ ಮುತ್ತಿಟ್ಟಿದ್ದಾರೆ. ಅನೇಕರು ಇದನ್ನು ಟೀಕಿಸಿದ್ದಾರೆ.

Tap to resize

Latest Videos

ಹಸುಗೂಸು ನೋಡಿ ಮದ್ಯಪಾನ ತ್ಯಜಿಸಿದ್ದೆ: ಕುತೂಹಲದ ಘಟನೆ ನೆನಪಿಸಿಕೊಂಡ ನಿರ್ಮಾಪಕ ಮಹೇಶ್​ ಭಟ್​

ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈ ಕಾರಣಕ್ಕೆ ಪೂಜಾ ಭಟ್​ ಕೂಡ ಬಿಗ್​ಬಾಸ್​ ಮನೆಯಲ್ಲಿ ಇದ್ದಾರೆ. ಆದರೆ ಮಗಳ ಎದುರೇ ಇನ್ನೋರ್ವ ಸ್ಪರ್ಧಿ  ಮನಿಷಾ ರಾಣಿ  (Manisha Rani) ಕೈಗೆ ಮಹೇಶ್​ ಭಟ್​ ಚುಂಬಿಸಿದ್ದಾರೆ. ಇದೇನು ದೊಡ್ಡ ಪ್ರಮಾದವಲ್ಲ.  ಆಕೆಯನ್ನು ತಮ್ಮ ಮಗಳಂತೆ ಭಾವಿಸಿರಬಹುದು ಎಂದು ಹಲವರು ಸಮಜಾಯಿಷಿ ಕೊಡುತ್ತಿದ್ದರೂ ಅನೇಕರು ಈ ಬಗ್ಗೆ ತಕರಾರು ತೆಗೆಯುತ್ತಿದ್ದಾರೆ.

ಇದೇ ವೇಳೆ ಮಹೇಶ್​ ಭಟ್​ ತಮ್ಮ ಪುತ್ರಿ ಪೂಜಾ ಭಟ್​ ಬಗ್ಗೆಯೂ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ತಾವು 100 ರೂ. ಗಳಿಸಲು ಕಷ್ಟಪಡುತ್ತಿದ್ದಾಗ ಪೂಜಾ  ಮನೆಯನ್ನು ನಡೆಸಲು ಹೇಗೆ ಸಹಾಯ ಮಾಡಿದರು ಎಂಬುದನ್ನು ಮಹೇಶ್ ಭಟ್ ಸ್ಮರಿಸಿದ್ದಾರೆ. ಮನೆಯ ಜವಾಬ್ದಾರಿಯನ್ನು ಹೊತ್ತ  ಮಗಳು ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲಿಂಗ್​ಗೆ ಸೇರಿ ಮನೆ ನಡೆಸಲು 1500 ರೂಪಾಯಿ ಸಹಾಯ ಮಾಡಿರುವ ಬಗ್ಗೆ ಮಹೇಶ್​ ಭಟ್​ ನೆನಪಿಸಿಕೊಂಡಿದ್ದಾರೆ. ತಮ್ಮ  ಚಲನಚಿತ್ರಗಳು ಯಾವುದೂ ಓಡುತ್ತಿಲ್ಲದೇ ನಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ, ಹಣಕ್ಕಾಗಿ ಪರದಾಟ ಪಡುವ ಸ್ಥಿತಿ ಇತ್ತು. ಅಂಥ ಸಂದರ್ಭದಲ್ಲಿ ಪೂಜಾ ಚಿಕ್ಕವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿ ವಹಿಸಿಕೊಂಡಳು.  ಮಾಡೆಲಿಂಗ್‌ ಮಾಡಿ ಸಂಸಾರ ನಿಭಾಯಿಸಿದಳು ಎಂದಿರುವ ಮಹೇಶ್​ ಅವರು,  ತಮ್ಮ ಮಗಳು ದೇವಮಗು ಇದ್ದಂತೆ ಎಂದರು.

ಮೈ ಮರೆತು ತಂದೆಗೇ ಲಿಪ್‌ ಲಾಕ್‌ ಮಾಡಿದ್ದ ನಟಿ, ಪೋಷಕರ ಮೇಲೆಯೇ ಲೈಂಗಿಕಾಸಕ್ತಿ, ಏನಿದು ಈಡಿಪಸ್ ಕಾಂಪ್ಲೆಕ್ಸ್?

!!
Mahesh Bhatt ne ke hath pe kiss kiya!! pic.twitter.com/mt1ZVVKmuD

— BB LF Videos (@BBosslivefeed1)
click me!