ನನ್ನ ಹೆಂಡ್ತಿಯನ್ನೇ ಸಂಭಾಳಿಸಲಿಕ್ಕೆ ಆಗ್ತಿಲ್ಲ; ಫ್ಯಾನ್ಸ್​ ಎದುರು ಶಾರುಖ್ ವೇದನೆ​!

By Suvarna News  |  First Published Aug 27, 2023, 2:22 PM IST

ಶಾರುಖ್​ ಖಾನ್​ ಅವರಿಗೆ ಅವರ ಪತ್ನಿಯನ್ನೇ ಸಂಭಾಳಿಸಲು ಆಗ್ತಿಲ್ಲವಂತೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಶಾರುಖ್​ ಹೇಳಿದ್ದೇನು?
 


ಬಾಲಿವುಡ್ ನಟ ಶಾರುಖ್​ ಖಾನ್​ (Shah Rukh Khan)  ಅವರ ಬಹು ನಿರೀಕ್ಷಿತ ಜವಾನ್​ಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ (Nayanatara) ಅಭಿನಯದ ಜವಾನ್ ಚಿತ್ರ 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಸೌತ್ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.  ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜವಾನ್ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಇದಾಗಲೇ ಇದರ ಪ್ರಿವ್ಯೂ ಕೂಡ ಬಿಡುಗಡೆಯಾಗಿದೆ. ಜವಾನ್ ಪ್ರಿವ್ಯೂ 20 ಗಂಟೆಯಲ್ಲಿ 4 ಕೋಟಿ ಬಾರಿ ವೀಕ್ಷಣೆ ಕಂಡು ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್ ಆಗಿ ಹೊರಹೊಮ್ಮಿದೆ. ಶಾರುಖಾನ್ ಜೊತೆ ನಯನತಾರ , ದೀಪಿಕಾ, ವಿಜಯ್​ ಸೇತುಪತಿ ಸಹಕಲಾವಿದರಾಗಿ ನಟಿಸಿದ್ದಾರೆ. ತಮಿಳು ನಟ ಅಟ್ಲಿ ಜವಾನ್ ನಿರ್ದೇಶನ ಮಾಡಿದ್ದಾರೆ. 

ಎಲ್ಲರಿಗೂ ತಿಳಿದಿರುವಂತೆ ನಟ ಶಾರುಖ್​ ಕೆಲ ತಿಂಗಳಿನಿಂದ ತಮ್ಮ ಟ್ವಿಟರ್​ (Twitter) ಖಾತೆಯಲ್ಲಿ ಫ್ಯಾನ್ಸ್​ ಜೊತೆ ಸಂಭಾಷಣೆ ನಡೆಸುತ್ತಿದ್ದಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳ ಪೈಕಿ ಹಲವಕ್ಕೆ ಉತ್ತರ ಕೊಡುತ್ತಿದ್ದಾರೆ. #AskSRK ಎಂಬ ಪ್ರಶ್ನೋತ್ತರ ಸೆಷನ್ ಇದಾಗಿದೆ.  ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಇತ್ತೀಚೆಗೆ 31 ವರ್ಷಗಳಾಗಿರುವ ಸಂಭ್ರಮದಲ್ಲಿ ಈ ಒಂದು ಸೆಷನ್​ ಶುರು ಮಾಡಿದ್ದು, ಇದಾಗಲೇ ನೂರಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅವುಗಳ ಪೈಕಿ ಹಲವು ಹಾಸ್ಯಭರಿತ ಉತ್ತರಗಳಿಂದ ಕೂಡಿದ್ದರೆ, ಕೆಲವು ಮಾತ್ರ ಸ್ವಲ್ಪ ಗರಂ ಆಗಿದೆ ಉತ್ತರಿಸುತ್ತಿದ್ದಾರೆ.

Tap to resize

Latest Videos

ಶಾರುಖ್​ಗೆ ಛೀಮಾರಿ ಹಾಕ್ತಿರೋ ಜನ, ದುಡ್ಡಿನ ಆಸೆಗೆ ಇದೆಂಥ ಕೆಲ್ಸ ಅಂತಿದ್ದಾರೆ ಪ್ರತಿಭಟನಾಕಾರರು!

ಇದೀಗ ನೆಟ್ಟಿಗರೊಬ್ಬರು ತಮ್ಮ ಪತ್ನಿಯ ಸಮಸ್ಯೆಯನ್ನು ನಟನಿಗೆ ಕೇಳಿದ್ದಾರೆ.  ಹೆಂಡತಿಯಿಂದ ನನಗೆ ಸಮಸ್ಯೆ ಆಗುತ್ತಿದೆ. ಏನು ಮಾಡಬೇಕು ಎಂದು ಕೇಳಿದ್ದಾರೆ. ‘ಹೆಂಡತಿ ಜೊತೆ ಜವಾನ್​ ಸಿನಿಮಾ ನೋಡಬೇಕು ಅಂತ ಪ್ಲ್ಯಾನ್​ ಮಾಡಿದ್ದೇನೆ ಸರ್​. ಆದರೆ ಪ್ರತಿ ಬಾರಿ ಆಕೆ ಲೇಟ್​ ಮಾಡುತ್ತಾಳೆ. ಪಠಾಣ್​ ನೋಡಲು ಹೋದಾಗಲೂ ಹೀಗೆಯೇ ಆಗಿತ್ತು. ಬೇಗ ಚಿತ್ರಮಂದಿರವನ್ನು (Film) ತಲುಪಲು ಏನಾದರೂ ಟಿಪ್ಸ್​ ಕೊಡಿ’ ಎಂದು ಅಭಿಮಾನಿಯು ಕೇಳಿದ್ದಾರೆ. ಅದಕ್ಕೆ  ಶಾರುಖ್​ ಖಾನ್​ ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.  ‘ದಯವಿಟ್ಟು ಹೆಂಡತಿಯಂದಿರ ವಿಷಯವನ್ನೆಲ್ಲಾ ನನ್ನ ಬಳಿ ಕೇಳಬೇಡಿ. ನನಗೆ ನನ್ನ ಹೆಂಡತಿಯನ್ನೇ ನಿಭಾಯಿಸೋಕೆ ಆಗ್ತಿಲ್ಲ, ಇನ್ನು ನಿಮ್ಮದೇನು ಹೇಳೋದು’ ಎಂದು ಹೇಳಿದ್ದಾರೆ. ಯಾವುದೇ ಸ್ಟ್ರೆಸ್​ ಇಲ್ಲದೇ  ಜವಾನ್​ ಚಿತ್ರ ನೋಡಿ ಎಂದಿದ್ದಾರೆ. ಅವರ ಈ ಟ್ವೀಟ್​ ಸಖತ್​ ವೈರಲ್​ ಆಗಿದೆ. 

ಅಂದಹಾಗೆ ‘ಜವಾನ್​’ ಚಿತ್ರಕ್ಕೆ ಶಾರುಖ್​ ಪತ್ನಿ ಗೌರಿ ಖಾನ್ (Gauri Khan)​ ಅವರು ಬಂಡವಾಳ ಹೂಡಿದ್ದಾರೆ. ಇನ್ನೇನು ಚಿತ್ರ ಬಿಡುಗಡೆಗೆ ಸನ್ನಿಹವಾಗಿದ್ದು, ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ ನಿನ್ನೆಯಷ್ಟೇ ಶಾರುಖ್​ ಖಾನ್​ ಚಿತ್ರದ ಟ್ರೇಲರ್​ ಅನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. 

ಜರ್ಮನಿಯಲ್ಲಿ ಶಾರುಖ್ ಖಾನ್​ ದಾಖಲೆ​; ಇತಿಹಾಸ ಸೃಷ್ಟಿಸಲಿದೆ ಜವಾನ್!
 

Ok guys no more wife problem solving questions anymore!! Please!! Mujhse meri nahi sambhalti tum apni problems bhi mujh par daal rahe ho!!!! All wives please just go for without stress https://t.co/SMQzeP89yS

— Shah Rukh Khan (@iamsrk)
click me!