
ಭೋಪಾಲ್: ನಟಿ ದೀಪಿಕಾ ಅಶ್ಲೀಲ ವಸ್ತ್ರ ಧರಿಸಿದ್ದಾರೆ, ಚಿತ್ರದಲ್ಲಿ ಕೇಸರಿ ಬಣ್ಣವನ್ನು ಅವಮಾನಿಸುವ ಅಂಶಗಳಿಗೆ ಎನ್ನುವ ಕಾರಣಕ್ಕೆ ಹಿಂದೂ ಸಂಘಟನೆಗಳಿಂದ ಬಹಿಷ್ಕಾರದ ಕರೆಗೆ ತುತ್ತಾಗಿರುವ ಶಾರುಖ್, ದೀಪಿಕಾ ಅಭಿನಯದ ಪಠಾಣ್ ಚಿತ್ರಕ್ಕೆ ಇದೀಗ ಮುಸ್ಲಿಂ ಸಂಘಟನೆಗಳಿಂದಲೂ ವಿರೋಧ ವ್ಯಕ್ತವಾಗಿದೆ. ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ನೀಡಬಾರದು ಎಂದು ಮಧ್ಯಪ್ರದೇಶದ ಮುಸ್ಲಿಂ ಸಂಘಟನೆಯೊಂದು ಒತ್ತಾಯಿಸಿದೆ.
ಚಿತ್ರದಲ್ಲಿ ಅಶ್ಲೀಲ ದೃಶ್ಯಗಳಿವೆ (obscene scenes). ಆದ ಕಾರಣ ಈ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಮಧ್ಯಪ್ರದೇಶದ (Madhya Pradesh) ಉಲೇಮಾ ಬೋರ್ಡ್ (Ulema Board) ಹೇಳಿದೆ. ಪಠಾಣ್ ಸಿನಿಮಾದಲ್ಲಿ ಅಸಭ್ಯತೆ ಹೆಚ್ಚಾಗಿದೆ ಎಂದು ಅನೇಕರು ಕರೆ ಮಾಡಿ ದೂರುತ್ತಿದ್ದಾರೆ. ಅಶ್ಲೀಲತೆ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿನಿಮಾದಲ್ಲಿ ಇಸ್ಲಾಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ. ಶಾರುಖ್‌ನನ್ನು ಜನ ಇಷ್ಟಪಡುತ್ತಾರೆ. ಆದರೆ ಇಸ್ಲಾಂ ಅನ್ನು ಟೀಕಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಉಲೇಮಾ ಮುಖ್ಯಸ್ಥ ಸೈಯದ್ ಅನಾಸ್ ಅಲಿ (Syed Anas Ali) ಹೇಳಿದ್ದಾರೆ.
Left Right & Centre: ಪಠಾಣ್ ಬಾಯ್ಕಾಟ್ ಬೇಕಾ?
Pathaan Boycott Trend: ಹಸಿರು ಬಣ್ಣವಾಯ್ತು ದೀಪಿಕಾ ಧರಿಸಿದ ಕೇಸರಿ ಬಿಕನಿ: ಮತ್ತೆ ನೆಟ್ಟಿಗರ ಆಕ್ರೋಶ
Boycott Pathaan ಅಶ್ಲೀಲವಾಗಿ ಕಾಣಿಸಿಕೊಂಡ ದೀಪಿಕಾ; ಶಾರುಖ್ 'ಪಠಾಣ್' ಚಿತ್ರ ಬಹಿಷ್ಕಾರಕ್ಕೆ ಒತ್ತಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.