
ಬಾಲಿವುಡ್ ಚಾಕಲೇಟ್ ಬಾಯ್ ಎಂದೇ ಚಿರಪರಿಚಿತರಾಗಿರುವವರು ಶಾಹೀದ್ ಕಪೂರ್. ಇವರು 2015ರಲ್ಲಿ ಮೀರಾ ರಜಪೂತ್ ಅವರನ್ನು ಮದುವೆಯಾಗಿದ್ದು, ದಂಪತಿಗೆ ಈಗ ಇಬ್ಬರು ಮಕ್ಕಳು. ಮಗಳು ಮಿಶಾ ಕಪೂರ್ ಮತ್ತು ಮಗ ಜೈನ್ ಕಪೂರ್. ಮಿಶಾ 2016 ರಲ್ಲಿ ಜನಿಸಿದ್ದು, 2018 ರಲ್ಲಿ ಜೈನ್ ಕಪೂರ್ ಜನಿಸಿದ್ದಾನೆ. ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹೊಸ್ತಿನಲ್ಲಿ ಇರುವ ಈ ಜೋಡಿಯ ಮೊದಲ ಮಗಳು ಹುಟ್ಟಿರುವುದೇ ಪವಾಡ. ಈ ಕುರಿತು ಶಾಹಿದ್ ಕಪೂರ್ ಅವರು ಇದೀಗ ಮೌನ ಮುಗಿದಿದ್ದಾರೆ. ಪತ್ನಿ ಮೀರಾ ಅವರು ಮೊದಲ ಗರ್ಭಧಾರಣೆಯಲ್ಲಿ ಅನುಭವಿಸಿದ ನೋವು ಹಾಗೂ ಮಗಳು ಬದುಕಿರುವ ಪವಾಡದ ಕುರಿತು ಅವರು, ಹೇಳಿಕೊಂಡಿದ್ದಾರೆ.
ಪ್ರಖರ್ ಕೆ ಪ್ರವಚನದ ಜೊತೆಗಿನ ಸಂದರ್ಶನದಲ್ಲಿ ನಟ, ಈ ವಿಷಯವನ್ನು ಹೇಳಿದ್ದಾರೆ. ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಿದ್ದಾಗ, ಸೋನೋಗ್ರಫಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ಪರೀಕ್ಷೆ ಮಾಡಿದ ವೈದ್ಯರು ಗರ್ಭಪಾತವಾಗುವ ಎಲ್ಲಾ ಸೂಚನೆಗಳೂ ಇವೆ. ಯಾವುದೇ ಸಮಯದಲ್ಲಿ ಗರ್ಭಪಾತವಾಗಬಹುದು, ಮಗು ಸರಿಯಾಗಿ ಬೆಳೆಯುತ್ತಿಲ್ಲ. ಗರ್ಭಧಾರಣೆ ತುಂಬಾ ಕ್ಲಿಷ್ಟಕರವಾಗಿದೆ ಎಂದರಂತೆ. ಮುಂದಿನ ಮೂರು ತಿಂಗಳು ಅತ್ಯಂತ ಮುತುವರ್ಜಿ ಅವಶ್ಯಕ. ಪತ್ನಿಗೆ ಬೆಡ್ರೆಸ್ಟ್ ಬೇಕು. ಆದರೂ ಮಗು ಹುಟ್ಟುವುದು ಡೌಟ್ ಎಂದು ವೈದ್ಯರು ಹೇಳಿರುವುದಾಗಿ ನಟ ಹೇಳಿಕೊಂಡಿದ್ದಾರೆ.
ಶಾಹೀದ್ಗೆ ಇಬ್ಬರು ಅಪ್ಪಂದಿರು, ಮೂವರು ಅಮ್ಮಂದಿರು! ಚಾಕಲೇಟ್ ಹೀರೋ ಫ್ಯಾಮಿಲಿ ಕಥೆಯೇ ಕುತೂಹಲ
ಅದಾದ ಬಳಿಕ, ಮೀರಾ ಅವರನ್ನು ಆಸ್ಪತ್ರೆಯಲ್ಲಿಯೇ ಮೂರು ತಿಂಗಳು ಕಳೆಯಬೇಕಾದ ಸ್ಥಿತಿ ಉಂಟಾಯಿತು. ಗರ್ಭದಲ್ಲಿರುವ ಮಗುವಿನ ಪ್ರಾಣಕ್ಕೆ ಅಪಾಯವಿದೆ, ಯಾವ ಕ್ಷಣದಲ್ಲಾದರೂ ಗರ್ಭಪಾತವಾಗಬಹುದು ಎಂದುಕೊಳ್ಳುತ್ತಲೇ ಆಸ್ಪತ್ರೆಯಲ್ಲಿ ಇರುವ ಅಮ್ಮನ ನೋವು ಯಾರಿಗೂ ಬೇಡ. ಆದರೆ ಮೀರಾಗೆ ಅದು ಅನಿವಾರ್ಯವಾಗಿ ಹೋಯಿತು. ಆದರೆ ಎರಡೂವರೆ ತಿಂಗಳು ಹಾಗೂ ಹೀಗೂ ಆಸ್ಪತ್ರೆಯಲ್ಲಿ ಇದ್ದಳು. ಆದರೆ ಆಸ್ಪತ್ರೆಯಲ್ಲಿ ಇನ್ನಷ್ಟು ದಿನ ಇರುವುದು ಆಕೆಯಿಂದ ಅಸಾಧ್ಯವಾಯಿತು ಎಂದು ಶಾಹಿದ್ ಹೇಳಿದ್ದಾರೆ.
ಈ ಗರ್ಭಾವಸ್ಥೆಯು ಮೀರಾ ಅವರ ಮಾನಸಿಕ ಆರೋಗ್ಯದ ಮೇಲೆ ಸಿಕ್ಕಾಪಟ್ಟೆ ನೋವು ಕೊಟ್ಟಿತು. ಎರಡೂವರೆ ತಿಂಗಳಿಗೆ ಆಸ್ಪತ್ರೆಯಿಂದ ಮನೆಗೆ ಬಂದು ಬೆಡ್ರೆಸ್ಟ್ ಮಾಡಿ ಆತಂಕದಲ್ಲಿಯೇ ಇದ್ದರಂತೆ ಮೀರಾ. ಆಮೇಲೆ ಮಗಳ ಜನನವಾದಾಗ ಪುನರ್ಜನ್ಮ ಸಿಕ್ಕಷ್ಟು ಖುಷಿಯಾಯಿತು. ಮಗು ಹುಟ್ಟಿದ್ದೇ ಪವಾಡ ಎಂದು ವೈದ್ಯರೂ ಹೇಳಿದ್ದರಂತೆ. ಮಗಳು ಆರಾಮಾಗಿದ್ದಳು. ಇದೊಂದು ಅದ್ಭುತ ಪವಾಡ ಎಂದಿದ್ದಾರೆ. ನಂತರ ಎರಡು ವರ್ಷಗಳ ಬಳಿಕ ದಂಪತಿ ಇನ್ನೊಂದು ಮಗುವನ್ನು ಬರಮಾಡಿಕೊಂಡರು. ಈಗ ಮಗಳಿಗೆ ಎಂಟು ವರ್ಷ ಹಾಗೂ ಮಗನಿಗೆ ಆರು ವರ್ಷ ವಯಸ್ಸು.
ಭಾಗ್ಯಲಕ್ಷ್ಮಿ ಅಮ್ಮ-ಮಗಳ ಸಕತ್ ರೀಲ್ಸ್: ಇವರಿಬ್ಬರ ನಿಜ ಜೀವನದ ಕುತೂಹಲ ವಿಷ್ಯ ಇಲ್ಲಿದೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.