ಮದ್ವೇಲಿ ಸಿಂಧೂರ ಇಟ್ಟಿದ್ದಕ್ಕೆ ಅನ್ಯ ಕೋಮಿನವರಿಂದ ಸೋನಾಕ್ಷಿ ಸಿನ್ಹಾಗೆ ಕ್ಲಾಸ್!

Published : Jun 26, 2024, 01:28 PM IST
ಮದ್ವೇಲಿ ಸಿಂಧೂರ ಇಟ್ಟಿದ್ದಕ್ಕೆ ಅನ್ಯ ಕೋಮಿನವರಿಂದ ಸೋನಾಕ್ಷಿ ಸಿನ್ಹಾಗೆ ಕ್ಲಾಸ್!

ಸಾರಾಂಶ

ಜಹೀರ್ ಇಕ್ಬಾಲ್ ಜೊತೆ ಮದುವೆಯಾಗುವ ಸಂದರ್ಭದಲ್ಲಿ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ನಟಿ ಸೋನಾಕ್ಷಿ ಸಿಂಧೂರ ಇಟ್ಟಿರುವುದಕ್ಕೆ ಇದೀಗ ಅನ್ಯಕೋಮಿನರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.  

ಸೋನಾಕ್ಷಿ ಸಿನ್ಹಾ ಮತ್ತು ಆಕೆಯ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು  ಭರ್ಜರಿ ಮದುವೆ ನಡೆದಿದೆ. ಏಳು ವರ್ಷಗಳ ಡೇಟಿಂಗ್​ ಬಳಿಕ ಈಗ ಜೋಡಿ ದಾಂಪತ್ಯಕ್ಕೆ  ಕಾಲಿಟ್ಟಿದೆ. 37 ವರ್ಷದ ಸೋನಾಕ್ಷಿ 35 ವರ್ಷದ ಜಹೀರ್​ ಅವರ ಪತ್ನಿಯಾಗಿ ದಾಂಪತ್ಯ ಜೀವನಕ್ಕೆ  ಕಾಲಿಟ್ಟಿದ್ದಾರೆ.  ಮದುವೆ ಇನ್ನೂ ಮದುವೆ ಶಾಸ್ತ್ರಗಳು ನಡೆಯುತ್ತಲೇ ಇವೆ. ಇದು ಹಿಂದೂ-ಮುಸ್ಲಿಂ ಆಗಿರುವ ಕಾರಣ ಮೊದಲಿನಿಂದಲೂ ಸಾಕಷ್ಟು ವಿವಾದ ಸೃಷ್ಟಿಸುತ್ತಲೇ ಇದೆ. ಆದರೆ ಏಳು ವರ್ಷ ಪರಸ್ಪರ ಅರ್ಥ ಮಾಡಿಕೊಂಡಿರುವ ಜೋಡಿ ಈಗ ಅತ್ಯಂತ ಖುಷಿಯಿಂದಲೇ ಮದುವೆಯಾಗಿದ್ದಾರೆ. 

ಆದರೆ ಅಂತರ್​ಧರ್ಮೀಯ ವಿವಾಹವಾಗಿರುವ ಕಾರಣ, ಎರಡೂ ಕಡೆಯವರಿಂದ ಇನ್ನೂ ಟೀಕೆಗಳು ಮುಂದುವರೆದಿವೆ. ಅದೇ ಇನ್ನೊಂದೆಡೆ, ನಿನ್ನೆಯಷ್ಟೇ ವೈರಲ್​ ಆಗಿರುವ ವಿಡಿಯೋದಲ್ಲಿ ಇಕ್ಬಾಲ್​ ತೂರಾಡುತ್ತಾ ನರ್ತಿಸಿರುವಂತೆ ಕಂಡಿತ್ತು. ಮದ್ವೆ ದಿನವೇ ಹೀಗೆಲ್ಲಾ ಡ್ಯಾನ್ಸ್​ ಮಾಡುತ್ತಿದ್ದಾರೆ ಎನ್ನುತ್ತಲೇ ಕೆಲವರು,  ನೋಡು ನಿನ್ನ ಕಥೆ ಅಷ್ಟೇ. ಮದ್ವೆ ದಿನವೇ ಇಷ್ಟೆಲ್ಲಾ ಕುಡಿದಿದ್ದಾನೆ. ನೀನು ಹೀಗೆ ಬಿಟ್ಟರೆ ಕಥೆ ಅಷ್ಟೇ. ಇನ್ನೂ ಕಾಲ ಮಿಂಚಿಲ್ಲ, ಯೋಚ್ನೆ ಮಾಡು... ಎಂದೆಲ್ಲಾ ಕಮೆಂಟ್​ ಹಾಕುತ್ತಿದ್ದರೆ, ಅತ್ತ ಸೋನಾಕ್ಷಿ ಮದುವೆಯ ದಿನ ಸಿಂಧೂರ ಹಚ್ಚಿಕೊಂಡಿರುವುದಕ್ಕೆ ತೀವ್ರ  ಆಕ್ಷೇಪ ವ್ಯಕ್ತವಾಗುತ್ತಿದೆ. ಇದು ಮಿಸ್​ ಆ್ಯಂಡ್​ ಮಿಸಸ್​ ಇಕ್ಬಾಲ್​ ಜೋಡಿ ರೀತಿ ಕಾಣಿಸುತ್ತಿಲ್ಲ, ಬದಲಿಗೆ ಮಿಸ್​ ಆ್ಯಂಡ್​ ಮಿಸಸ್​ ಸೋನಾಕ್ಷಿ ರೀತಿ ಕಾಣಿಸುತ್ತಿದೆ, ಇದು ಸರಿಯಲ್ಲ.  ಆಕೆ ಸಿಂಧೂರ ತೆಗೆಯಬೇಕು, ಮತಾಂತರವಾಗಬೇಕು ಎಂದೆಲ್ಲಾ ಕಮೆಂಟ್​ಗಳು ಬರುತ್ತವೆ. 

ನಟಿ ಸೋನಾಕ್ಷಿ ಸಿನ್ಹಾ ಮತಾಂತರ? ಭಾವಿ ಪತಿ ಜಹೀರ್‌ ಇಕ್ಬಾಲ್‌ ತಂದೆ ಮಾತೀಗ ವೈರಲ್‌!

ಅಷ್ಟಕ್ಕೂ ಸೋನಾಕ್ಷಿ ವಿವಾಹವಾದ ಮೇಲೆ ಮತಾಂತರ ಆಗುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಇದಾಗಲೇ ಜಹೀರ್‌ ತಂದೆ ಇಕ್ಬಾಲ್ ರತನ್ಸಿ, ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ. ಇದು ನಾಗರಿಕ ವಿವಾಹವಾಗಲಿದೆ ಎಂದಿದ್ದರು.  ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಳ್ಳುತ್ತಾಳೆ ಎಂಬ ವರದಿಯಲ್ಲಿ ಸತ್ಯವಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದಿದ್ದರು.  ಅವಳು ಮತಾಂತರಗೊಳ್ಳುತ್ತಿಲ್ಲ. ಇದು ನಿಶ್ಚಿತ. ಅವರಿಬ್ಬರದ್ದೂ  ಹೃದಯಗಳು ಒಂದಾಗಿವೆ. ಇದರ ನಡುವೆ  ಧರ್ಮವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಸೋನಾಕ್ಷಿ ಮತಾಂತರವಾಗುವುದಿಲ್ಲ.  ನಾನು ಮಾನವೀಯತೆಯನ್ನು ನಂಬುತ್ತೇನೆ. ದೇವರನ್ನು ಹಿಂದೂಗಳು ಭಗವಾನ್ ಮತ್ತು ಮುಸ್ಲಿಮರು ಅಲ್ಲಾ ಎಂದು ಕರೆಯುತ್ತಾರೆ. ಆದರೆ ದಿನದ ಕೊನೆಯಲ್ಲಿ, ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ. ಸುಮ್ಮನೇ ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಅವರು ಹೇಳಿದ್ದರು. 

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ಸುದ್ದಿ ಹೊರ ಬಂದಾಗಿನಿಂದ ಹಿಂದೂ ನಟಿಯರು ಮುಸ್ಲಿಂ ನಟರನ್ನು ಮದುವೆ ಆಗೋದೇಕೆ? ಇದು ಲವ್ ಜಿಹಾದ್ ಅಲ್ಲವೇ? ರಾಮಾಯಣ ಹೆಸರಿನ ಮನೆಗೆ ಮುಸ್ಲಿಂ ಅಳಿಯ ಎಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅದಕ್ಕೆ ನಟಿ, ಇದು ನನ್ನ ವೈಯಕ್ತಿಕ ವಿಷಯ ಮತ್ತು ನನ್ನದೇ ಆಯ್ಕೆ. ಈ ವಿಷಯದಲ್ಲಿ ಬೇರೆಯವರ ಹಸ್ತಕ್ಷೇಪ ಬೇಕಿಲ್ಲ. ನನ್ನ ಪೋಷಕರಿಗಿಂತ ಜನರು ಯಾಕೆ ಇಷ್ಟು ಕುತೂಹಲ ಹೊಂದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಮದುವೆ ಬಗ್ಗೆ ಪೋಷಕರಿಗಿಂತ ಬೇರೆಯವರೇ ಹೆಚ್ಚು ಕೇಳುತ್ತಾರೆ. ಹಾಗಾಗಿ ಇದು ನನಗೆ ತುಂಬಾ ತಮಾಷೆಯಾಗಿ ಕಾಣುತ್ತದೆ ಎಂದಿದ್ದಾರೆ. ಇದೀಗ ಮತಾಂತರದ ವದಂತಿಗೆ ಭಾವಿ ಮಾವ ತೆರೆ ಎಳೆದಿದ್ದಾರೆ. ಆದರೆ ಟ್ರೋಲಿಗರೂ ಇಲ್ಲೂ ಬಿಡುತ್ತಿಲ್ಲ. ಮತಾಂತರ ಮಾಡಲ್ಲ ಸರಿ, ಫ್ರಿಜ್‌ನಲ್ಲಿ ಮಾತ್ರ ಇಡಬೇಡಿ ಎಂದಿದ್ದರು. 

ಮದ್ವೆ ದಿನವೇ ಸೋನಾಕ್ಷಿ ಪತಿ ಫುಲ್​ ಟೈಟ್​ ? ವಿಡಿಯೋ ನೋಡಿ... ಮುಗೀತು ನಿನ್​ ಕಥೆ ಅಂತಿರೋ ಫ್ಯಾನ್ಸ್​!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?