ಸದನದಲ್ಲಿ ಚಿರಾಗ್​- ಕಂಗನಾ ಜೊತೆ ಜೊತೆಯಲಿ.... 'ಮಿಲೇ ನಾ ಮಿಲೇ' ಪಾರ್ಟ್​-2 ಎಂದ ನೆಟ್ಟಿಗರು!

By Suchethana D  |  First Published Jun 26, 2024, 11:53 AM IST

ಸದನದಲ್ಲಿ ಚಿರಾಗ್​- ಕಂಗನಾ ಜೊತೆ ಜೊತೆಯಲಿ.... 'ಮಿಲೇ ನಾ ಮಿಲೇ' ಪಾರ್ಟ್​-2 ಎಂದು ತಮಾಷೆ ಮಾಡುತ್ತಿರೋ ನೆಟ್ಟಿಗರು. 
 


ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ  ಕಂಗನಾ ರಣಾವತ್​ ಹಾಗೂ ಬಿಹಾರದ ಜುಮೈ ಸಂಸದ, ನ್ಯಾಷನಲ್​  ಕ್ರಷ್​ ಎಂದೇ ಫೇಮಸ್​ ಆಗಿರೋ ಚಿರಾಗ್​ ಪಾಸ್ವಾನ್​ ಸದನದಲ್ಲಿ ಒಟ್ಟಿಗೇ ಕೈಕೈ ಹಿಡಿದು ಹೋಗುವ ವಿಡಿಯೋ ವೈರಲ್​ ಆಗಿದೆ. ಇಂದು ನಡೆದ ಸ್ಪೀಕರ್​ ಚುನಾವಣೆಯಲ್ಲಿ ಇವರಿಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಇವರಿಬ್ಬರೂ ಇದೀಗ ಲೋಕಸಭೆಯಲ್ಲಿ ಸ್ಟಾರ್​ ಅಟ್ರಾಕ್ಷನ್​.   ಕುತೂಹಲದ ವಿಷಯವೇನೆಂದರೆ ಇಬ್ಬರೂ ಒಂದೇ ಪಕ್ಷದವರು. ಕಂಗನಾ ಬಿಜೆಪಿಯವರಾದರೆ, ಲೋಕ್​ ಜನ ಶಕ್ತಿ ಪಕ್ಷದವರಾಗಿರುವ ಚಿರಾಗ್​ ಅವರ ತಂದೆ ರಾಮ್​ವಿಲಾಸ್ ಪಾಸ್ವಾನ್​ ಅವರು , ವಾಜಪೇಯಿ ಕಾಲದಿಂದಲೂ ಎನ್​ಡಿಎ ಜೊತೆ ಗುರುತಿಸಿಕೊಂಡವರು.  ಇನ್ನೂ ಕುತೂಹಲದ ವಿಷಯ ಏನೆಂದರೆ, ಚಿರಾಗ್ ಪಾಸ್ವಾನ್​ ಮತ್ತು ಕಂಗನಾ ಅವರು, 2011ರಲ್ಲಿ ಬಿಡುಗಡೆಯಾದ ಮಿಲೇ ನಾ ಮಿಲೇ ಚಿತ್ರದ ನಾಯಕ-ನಾಯಕಿ. 

ಸದನದಲ್ಲಿ ಇಬ್ಬರೂ ಒಟ್ಟಾಗಿ ಕೈಕೈ ಹಿಡಿದು ಹೋಗುತ್ತಿರುವ ವಿಡಿಯೋ ವೈರಲ್​ ಆಗುತ್ತಲೇ ಈ ಚಿತ್ರವನ್ನು  ನೆನಪಿಸಿಕೊಂಡಿರುವ ನೆಟ್ಟಿಗರು, ಮಿಲೇ ನಾ ಮಿಲೇ ಪಾರ್ಟ್​-2 ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಚಿತ್ರದಲ್ಲಿ ಮೂವರು ನಾಯಕಿಯರು. ಚಿರಾಗ್​ ಹೆಸರು ಈ ಚಿತ್ರದಲ್ಲಿಯೂ ಚಿರಾಗ್​ ಎಂದೇ ಇದೆ. ಸಿನಿಮಾದಲ್ಲಿ ನಾಯಕನ ಅಪ್ಪ-ಅಮ್ಮ ಬೇರೆ ಬೇರೆಯಾಗಿರುತ್ತಾರೆ. ಅಮ್ಮ ಒಬ್ಬಳನ್ನು ಮಗನಿಗೆ ಆಯ್ಕೆ ಮಾಡಿದರೆ, ತಾನು ನೋಡಿದ ಹುಡುಗಿಯನ್ನು ಮದುವೆಯಾಗಬೇಕು ಎನ್ನುವುದು ಅಪ್ಪನ ಪಟ್ಟು. ಇಬ್ಬರ ಸಹವಾಸ ಬೇಡ ಎಂದು ತಾನೊಬ್ಬಳನ್ನು ಪ್ರೀತಿಸುತ್ತಿದ್ದೇನೆ ಎಂದು ನಾಯಕ ಹೇಳುತ್ತಾನೆ. ನಂತರ ಕುತೂಲದ ತಿರುವಿನಲ್ಲಿ ನಾಯಕಿ ಕಂಗನಾ ಪರಿಚಯವಾಗುತ್ತದೆ. ನಂತರ ಪ್ರೀತಿ, ಪ್ರೇಮ, ಮದುವೆ... ಹೀಗೆ ಕುತೂಹಲದ ತಿರುವಿನಲ್ಲಿ ಸಿನಿಮಾ ಸಾಗುತ್ತದೆ. ಅದನ್ನೇ ಈಗ ಸಿನಿ ಪ್ರೇಮಿಗಳು ನೆನಪಿಸಿಕೊಂಡು ತಮಾಷೆ ಮಾಡುತ್ತಿದ್ದಾರೆ.

Tap to resize

Latest Videos

ಕರಾಳ ದಿನದ 50ನೇ ವರ್ಷ 'ಎಮರ್ಜೆನ್ಸಿ' ಅಪ್​ಡೇಟ್​ ನೀಡಿದ ಸಂಸದೆ ಕಂಗನಾ: ಇದು ನಟಿಯ ಕೊನೆಯ ಚಿತ್ರವೆ?

ಇದೀಗ ಇವರಿಬ್ಬರೂ ಲೋಕಸಭೆಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ದಿಲ್ ದೋಸ್ತಿ ದೀವಾನಗಿ, ಮರಾಠಿ ಪಾಲ್ ಪಡ್ತೆ ಪುಧೆ, ನಾಯಕಾ ದೇವಿ: ದಿ ವಾರಿಯರ್ ಕ್ವೀನ್, ಹ್ಯಾಂಗೊವರ್ ಮತ್ತು ಬದ್ರಿ: ದಿ ಕ್ಲೌಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರ ಕಂಗನಾ ರಣಾವತ್​ ಅವರ ಜೊತೆ ನಟಿಸಿರುವ ಮಿಲೇ ನಾ ಮಿಲೇ ಚಿತ್ರ.  ಅಂದಹಾಗೆ ಕಂಗನಾ ರಣಾವತ್​ ಅವರು 40ಕ್ಕೂ ಅಧಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಚಿತ್ರ ಇವರ ಕೈಹಿಡಿಯುತ್ತಿಲ್ಲ ಎನ್ನುವ ಕೊರಗು ಕೂಡ ಇದೆ. ಆದರೆ ರಾಜಕೀಯದಲ್ಲಿ ಮೊದಲನೇ ಚಾನ್ಸ್​ನಲ್ಲಿಯೇ ಸಂಸದೆಯ ಪಟ್ಟ ಸಿಕ್ಕಿದೆ. ಕಂಗನಾ ಅವರಿಗೆ ಈಗ 38 ವರ್ಷ ವಯಸ್ಸಾದರೆ, ಚಿರಾಗ್​ ಅವರಿಗೆ 41 ವರ್ಷ ವಯಸ್ಸು. 

ಅಂದಹಾಗೆ ಕಂಗನಾ ಅವರ ಕುರಿತು ಹೇಳುವುದಾದರೆ, ಮನಸ್ಸಿಗೆ ಅನ್ನಿಸಿದ್ದನ್ನು ನೇರಾನೇರವಾಗಿ ಹೇಳಿ, ಯಾರಿಗೂ ಹೆದರದೇ ಧೈರ್ಯದಿಂದ ಮುನ್ನುಗ್ಗುತ್ತಲೇ ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರು ಪಡೆದಿರುವವರು ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ಸಂಸದೆ.  ಸದ್ಯ ನಟಿಯ ಕೈಯಲ್ಲಿ ಎಮರ್ಜೆನ್ಸಿ ಚಿತ್ರವಿದೆ.  ಅಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರ ನಿರ್ವಹಿಸಿದ್ದಾರೆ.  1975 ರಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಆಧರಿಸಿದ ಚಿತ್ರವಿದು. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುತ್ತದೆ ಈ ಸಿನಿಮಾ. 1975ರಲ್ಲಿ ತುರ್ತು ಪರಿಸ್ಥಿತಿ ( Emergency) ಘೋಷಣೆ ಮಾಡಿದಾಗ ದೇಶದಲ್ಲಿ ಆಗಿರುವ ಅಲ್ಲೋಲ ಕಲ್ಲೋಲಗಳೇನು? ದೇಶ ಯಾವ ಸ್ಥಿತಿಗೆ ತಲುಪಿತ್ತು ಈ ಕುರಿತು ಎಳೆಎಳೆಯಾಗಿ ಚಿತ್ರ ಬಿಚ್ಚಿಟ್ಟಿದ್ದು, ಇದರ ಬಿಡುಗಡೆ ಸೆಪ್ಟೆಂಬರ್​ 6ರಂದು ಆಗಲಿದೆ ಎಂದು ನಟಿ ನಿನ್ನೆಯಷ್ಟೇ ಹೇಳಿದ್ದಾರೆ.  

ಅಂತರ್​ಧರ್ಮೀಯ ಪ್ರೇಮಿಗಳ ಕೌತುಕದ ಕಥೆ: ಗಂಟೆಗೊಮ್ಮೆ ಸ್ಮಾರಕಗಳ ಸಮಾಗಮ! ಡಾ.ಬ್ರೋ ಬಾಯಲ್ಲಿ ಕೇಳಿ...
 

click me!