ಸೆನ್ಸಾರ್‌ಗೆ ಬಲಿಯಾದ ವಿಶ್ವದಾದ್ಯಂತ ಪ್ರಶಂಸೆ ಗಳಿಸಿದ ಭಾರತದ ಸಿನಿಮಾ; ಭಾರತೀಯರಿಗೆ ನೋಡೋ ಭಾಗ್ಯ ಇಲ್ಲ!

Published : Apr 05, 2025, 12:13 PM ISTUpdated : Apr 05, 2025, 12:55 PM IST
ಸೆನ್ಸಾರ್‌ಗೆ ಬಲಿಯಾದ ವಿಶ್ವದಾದ್ಯಂತ ಪ್ರಶಂಸೆ ಗಳಿಸಿದ ಭಾರತದ ಸಿನಿಮಾ; ಭಾರತೀಯರಿಗೆ ನೋಡೋ ಭಾಗ್ಯ ಇಲ್ಲ!

ಸಾರಾಂಶ

Indian Cinema: ಈ ಸಿನಿಮಾ ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ದಲಿತ ಯುವತಿಯ ಸಾವಿನ ಪ್ರಕರಣವನ್ನು ಪೊಲೀಸ್ ಕಾನ್‌ಸ್ಟೇಬಲ್ ಸಂತೋಷ್ ಹೇಗೆ ಎದುರಿಸುತ್ತಾಳೆ ಎಂಬುವುದೇ ಕಥೆ.

Indian Cinema: ಭಾರತದ ಸಿನಿಮಾವೊಂದು ಪ್ರಪಂಚದಾದ್ಯಂತ ಮನ್ನಣೆ ಗಳಿಸಿ ವ್ಯಾಪಕ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಆದ್ರೆ ಸೆನ್ಸಾರ್ ಮಂಡಳಿ ನಿಷೇಧ ವಿಧಿಸಿದ್ದರಿಂದ ಈ ಸಿನಿಮಾ ಭಾರತದಲ್ಲಿ ಈವರೆಗೂ ಬಿಡುಗಡೆಯಾಗಿಲ್ಲ. 'ಸಂತೋಷ್' ಭಾರತದಲ್ಲಿ ಸೆನ್ಸಾರ್ ಮಂಡಳಿಯಿಂದ ನಿಷೇಧಕ್ಕೊಳಗಾದ ಸಿನಿಮಾ. ಈ ಚಿತ್ರದ ಕಥೆ ಏನು? ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದು ಯಾಕೆ ಎಂಬುದರ ಮಾಹಿತಿ ಇಲ್ಲಿದೆ . 

ಸಂತೋಷ್ ಅನ್ನೋ ಉತ್ತರ ಭಾರತದ ಮಹಿಳೆಯ ಕಥೆಯೇ ಈ ಚಿತ್ರ. ಪತಿಯ ಸಾವಿನ ಬಳಿಕ ಸಂತೋಷ್‌ಗೆ ಪೊಲೀಸ್ ಕಾನ್‌ಸ್ಟೇಬಲ್ ಉದ್ಯೋಗ ಸಿಗುತ್ತದೆ. ಇದೇ ನೌಕರಿಯನ್ನು ಆಕೆಯ ಗಂಡ ಮಾಡುತ್ತಿರುತ್ತಾನೆ. ಅನುಕಂಪ ಆಧಾರದ ಮೇಲೆ ಸಿಗುವ ಈ ಉದ್ಯೋಗದಿಂದ ಸಂತೋಷ್ ಆರ್ಥಿಕ ಜೀವನ ಉತ್ತಮವಾಗುತ್ತದೆ. ಆದರೆ ಸಂತೋಷ್ ಒಂದು ಸಾಮಾಜಿಕ ಸಂಘರ್ಷದಲ್ಲಿ ಸಿಲುಕುತ್ತಾಳೆ. ಪುರುಷ ಪ್ರಾಬಲ್ಯದ ವ್ಯವಸ್ಥೆಯಲ್ಲಿ ಮಹಿಳೆಯಾಗಿ ಸಂತೋಷ್ ಹಲವು ಸವಾಲುಗಳನ್ನು ಎದುರಿಸುತ್ತಾಳೆ. ಹಾಗೆ ಭ್ರಷ್ಟಾಚಾರ, ಜಾತಿವಾದವನ್ನು ಸಂತೋಷ್ ತುಂಬಾ ಹತ್ತಿರದಿಂದ ನೋಡುತ್ತಾಳೆ.

ದಲಿತ ಯುವತಿಯ ಸಾವಿನ ಪ್ರಕರಣವೊಂದು ಸಂತೋಷ್ ಜೀವನದಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ ಪುರುಷ ಪ್ರಧಾನ, ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯಲ್ಲಿ ದಲಿತ ಯುವತಿಗೆ ನ್ಯಾಯ ಸಿಗುತ್ತಾ? ಪೊಲೀಸ್ ವೃತ್ತಿಯಲ್ಲಿರುವ ಸಂತೋಷ್, ಹೇಗೆ ಈ ಪ್ರಕರಣವನ್ನು ಎದುರಿಸುತ್ತಾಳಾ ಎಂಬುವುದು ಚಿತ್ರದ ಒನ್ ಲೈನ್ ಕಥೆಯಾಗಿದೆ. 

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಸಿನಿಮಾ
ವಿವಾದಾತ್ಮಕ ಕಥೆ ಎಂಬ ಕಾರಣ ನೀಡಿ 'ಸಂತೋಷ್' ಚಿತ್ರವನ್ನು ನಿಷೇಧಿಸಲಾಯ್ತು. ಆದ್ರೆ ಈ ಚಿತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ  ವೀಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಕೇನ್ಸ್ ಚಲನಚಿತ್ರೋತ್ಸವದ Un Certain Regard ವಿಭಾಗದಲ್ಲಿ ಸಂತೋಷ್ ಸಿನಮಾ ಸ್ಥಾನ ಪಡೆದುಕೊಂಡಿತ್ತು. ಅಷ್ಟು ಮಾತ್ರವಲ್ಲದೇ ಇಂಗ್ಲೆಂಡ್‌ನಿಂದ ಅಧಿಕೃತ ಆಸ್ಕರ್ ಪ್ರವೇಶಕ್ಕಾಗಿ ಸಂತೋಷ್ ಚಿತ್ರವನ್ನು ಆಯ್ಕೆ ಮಾಡಲಾಗಿತ್ತು. BAFTAನಲ್ಲಿ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿತು. ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಸಂತೋಷ್ ಸಿನಿಮಾವನ್ನು 024 ರ ಅಗ್ರ ಐದು ಅಂತರರಾಷ್ಟ್ರೀಯ ಚಲನಚಿತ್ರಗಳಲ್ಲಿಒಂದು ಎಂದು ಹೇಳಿದೆ. 

ಶೆಹನಾ ಗೋಸ್ವಾಮಿಯ ಅದ್ಭುತ ನಟನೆ.
ಈ ಚಿತ್ರದ ಸಂತೋಷ್ ಪಾತ್ರದಲ್ಲಿ ನಟಿಸಿರುವ ಶೆಹನಾ ಗೋಸ್ವಾಮಿ ಅವರ ನಟನೆ ನೋಡುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ.  ಶೆಹನಾ ಗೋಸ್ವಾಮಿ ತಮ್ಮ ಕಣ್ಣುಗಳಿಂದಲೇ ಎಲ್ಲವನ್ನು ಹೇಳುತ್ತಾರೆ. ಸಂಯಮ ಮತ್ತು ಮೌನ ಸಂಭಾಷಣೆಯಿಂದ ಶೆಹನಾ ಗೋಸ್ವಾಮಿಯ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಈ ಚಿತ್ರದ ನಟನೆಗಾಗಿ ಶೆಹನಾ ಗೋಸ್ವಾಮಿ ಏಷಿಯನ್ ಫಿಲಂ ಅವಾರ್ಡ್ ನಲ್ಲಿ  ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 

ಇದನ್ನೂ ಓದಿ: ಕಪಟಿ ಚಿತ್ರ ವಿಮರ್ಶೆ: ಡಾರ್ಕ್ ವೆಬ್‌ನ ಕರಾಳತೆಯಲ್ಲಿ ದುರ್ಬಲ ಮನಸ್ಸುಗಳ ಜತೆಗೆ ಚೆಲ್ಲಾಟ

ಭಾರತದಲ್ಲಿ ನಿಷೇಧಕ್ಕೆ ಒಳಗಾಗಿದ್ದು ಏಕೆ?
ವಿವಾದಾತ್ಮಕ ಕಥೆಯನ್ನು ಹೊಂದಿದೆ ಎಂದು ಭಾರತೀಯ ಸೆನ್ಸಾರ್ ಬೋರ್ಡ್ ಚಿತ್ರಕ್ಕೆ ತಡೆ ನೀಡಿ ಕೆಲವು ಕಾರಣಗಳನ್ನು ನೀಡಿದೆ. 
1. ಈ ಚಿತ್ರದಲ್ಲಿ ಪೊಲೀಸರ ದೌರ್ಜನ್ಯವನ್ನು ನೈಜವಾಗಿ ತೋರಿಸಲಾಗಿದೆ. 
2.ಚಿತ್ರದಲ್ಲಿ ಜಾತಿ ಭೇದಭಾವ ಮತ್ತು ಸರ್ವಾಧಿಕಾರಿಯ ದಮನಕಾರಿಯ ಆಡಳಿತ ತೋರಿಸಲಾಗಿದೆ. 
3.ಸಿನಿಮಾದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಜೊತೆಗಿನ ಭೇದಭಾವ ತೋರಿಸಲಾಗಿದೆ.

ಸೆನ್ಸಾರ್ ಬೋರ್ಡ್ ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಆದರೆ ಚಿತ್ರತಂಡ ಇದಕ್ಕೆ ಒಪ್ಪದೇ ಸಿನಿಮಾವನ್ನು ವಿದೇಶದಲ್ಲಿ ಬಿಡುಗಡೆ ಮಾಡಿದೆ. ಚಿತ್ರದ ನಟಿ ಶೆಹನಾ ಗೋಸ್ವಾಮಿ, ಸೆನ್ಸಾರ್ ಬೋರ್ಡ್ ಹೇಳಿದ ಮಾತನ್ನು ನಾನು ಒಪ್ಪಲ್ಲ ಎಂದು ಹೇಳಿದ್ದಾರೆ. ಸದ್ಯ ಈ ಚಿತ್ರ OTTಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಇದನ್ನೂ ಓದಿ: Manada Kadalu Movie Review: ಹುಚ್ಚು ಮಳೆ ತಾರುಣ್ಯ, ವಿನೋದ ವಿಷಾದ ಜೀವನ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ