ಕತ್ರಿನಾ ಕೈಫ್ ಜೊತೆ ಬಲವಂತದ ಕಿಸ್ ಅನುಭವ ಹೇಳಿಕೊಂಡ ನಟ ಶಾರುಖ್ ಖಾನ್​​!

Published : Jul 03, 2023, 09:13 PM ISTUpdated : Nov 21, 2023, 06:38 PM IST
ಕತ್ರಿನಾ ಕೈಫ್ ಜೊತೆ ಬಲವಂತದ ಕಿಸ್ ಅನುಭವ  ಹೇಳಿಕೊಂಡ ನಟ ಶಾರುಖ್ ಖಾನ್​​!

ಸಾರಾಂಶ

ರೊಮಾಂಟಿಕ್​ ಹೀರೋ ಎನಿಸಿಕೊಂಡಿರುವ ನಟ ಶಾರುಖ್​ ಖಾನ್​ ಹಿಂದೊಮ್ಮೆ ಕಿಸ್​ ಮಾಡಲು ಹಿಂದೇಟು ಹಾಕಿದ್ರಂತೆ. ಅವರು ಹೇಳಿದ್ದೇನು?  

ಒಂದರ ಮೇಲೊಂದರಂತೆ ಸೋಲನ್ನುಂಡು ನಾಲ್ಕೈದು ವರ್ಷ ತೆರೆಮರೆಗೆ ಸರಿದಿದ್ದ ನಟ ಬಾಲಿವುಡ್ ನಟ ಶಾರುಖ್​ ಖಾನ್​ (Shah Rukh Khan) , ಕೊನೆಗೂ ಪಠಾಣ್​ ಚಿತ್ರದ ಭರ್ಜರಿ ಯಶಸ್ಸಿನಿಂದ ಚಿಗುರಿಕೊಂಡಿದ್ದಾರೆ. ಜೊತೆಗೆ ಮಕಾಡೆ ಮಲಗಿದ್ದ ಬಾಲಿವುಡ್​ಗೂ ಜೀವ ತುಂಬಿದ್ದಾರೆ.   ಈ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಮೂಲಕ ಶಾರುಖ್​ ಖಾನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಸಾಬೀತಾಗಿದೆ. 1992ರಲ್ಲಿ, ದೀವಾನಾ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಶಾರುಖ್ ಖಾನ್, ಕೆಲವೇ ಚಿತ್ರಗಳ ಮೂಲಕ ಸೂಪರ್ ಸ್ಟಾರ್ ಆಗಿ ಬೆಳೆದರು. ಇದೀಗ ಶಾರುಖ್​ ಅವರ ಬಹು ನಿರೀಕ್ಷಿತ ಜವಾನ್​ಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ (Nayanatara) ಅಭಿನಯದ ಜವಾನ್ ಚಿತ್ರ 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಸೌತ್ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.  ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ತಿಂಗಳು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು.   

ಈ 57ರ ಹರೆಯದಲ್ಲಿಯೂ ಹುಡುಗಿಯರ ಹೃದಯ ಗೆಲ್ಲುತ್ತಿರುವ ನಟ ಶಾರುಖ್ ಖಾನ್ (Shahrukh Khan) ಇನ್ನು 90ರ ದಶಕದಲ್ಲಿ ಇನ್ನು ಹೇಗಿರಬೇಡ? ಅನೇಕ ಹುಡುಗಿಯರ ಹೃದಯ ಕದ್ದ ನಟ ಶಾರುಖ್​ ರೊಮ್ಯಾಂಟಿಕ್​ ಹೀರೋ ಎಂದೇ ಪರಿಚಿತರಾದವರು.   ಈ ವಯಸ್ಸಿನಲ್ಲಿ ಪಠಾಣ್​ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ರೊಮ್ಯಾಂಟಿಕ್ ಆಗಿ ನಟಿಸಿರುವುದು ಮರೆಯಲು ಸಾಧ್ಯನಾ? ಇದೇ ಕಾರಣಕ್ಕೆ  ಕಿಂಗ್ ಆಫ್ ರೋಮ್ಯಾನ್ಸ್ ಎಂದೇ ಶಾರುಖ್​ ಅವರನ್ನು ಕರೆಯುತ್ತಾರೆ.

ಶಾರುಖ್ ಖಾನ್​​ ಫ್ಯಾನ್ಸ್​ ಕಾತುರದಿಂದ ಕಾಯ್ತಿರೋ 'ಜವಾನ್'​ ಡೇಟ್​ ಕೊನೆಗೂ ಫಿಕ್ಸ್​

ಆದರೆ ಕುತೂಹಲದ ಸಂಗತಿ ಗೊತ್ತಾ?  ಹಿಂದೊಮ್ಮೆ ಶಾರುಖ್ ಖಾನ್ ತೆರೆಯ ಮೇಲೆ ಕಿಸ್ಸಿಂಗ್ ಸೀನ್ ಕಾಣಿಸಿಕೊಳ್ಳಲು ಹಿಂದೇಟು ಹಾಕಿದ್ದರಂತೆ! ಹೌದು. 2012 ರಲ್ಲಿ ಬಿಡುಗಡೆಯಾದ 'ಜಬ್ ತಕ್ ಹೈ ಜಾನ್' (Jab Tak Hai Jaan) ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಕತ್ರಿನಾ ಕೈಫ್ (Katrina Kaif) ಮತ್ತು ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದರು. ಶಾರುಖ್ ಖಾನ್ ಈ ಚಿತ್ರದಲ್ಲಿ ಕತ್ರಿನಾ ಕೈಫ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ, ರೊಮಾನ್ಸ್​ ಟೈಮ್​ನಲ್ಲಿ ಕಿಸ್ಸಿಂಗ್​ ಕೂಡ ಮಾಡಿದ್ದಾರೆ. ಆದರೆ ಶಾರುಖ್​ ಅವರು ಈ ಸೀನ್​ ಮಾಡಲು ಇಷ್ಟಪಟ್ಟಿರಲಿಲ್ಲವಂತೆ! ಕತ್ರಿನಾಗೆ ಕಿಸ್​ ಕೊಡಬೇಕು ಎನ್ನುವ ಕಾರಣಕ್ಕೆ ತಾವು ಇದರಿಂದ ವಾಪಸ್​ ಹೋಗುವುದಾಗಿ ಹೇಳಿದ್ದರಂತೆ. ಆದರೆ ಕೊನೆಗೆ  ಶಾರುಖ್ ಖಾನ್ ಅವರನ್ನು ಬಲವಂತವಾಗಿ ತೆರೆಯ ಮೇಲೆ ಕಿಸ್ ಮಾಡಲು ಒಪ್ಪಿಸಿದ್ದರು ಎನ್ನುವ ವಿಚಾರ ಹೊರಬಿದ್ದಿದೆ. ಅನಿವಾರ್ಯವಾಗಿ ಕೊನೆಗೆ ಶಾರುಖ್ ಖಾನ್ ಒಪ್ಪಿಕೊಂಡಿದ್ದರಂತೆ!
 
ಇದರ ಹೊರತಾಗಿಯೂ ಈ ಕಿಸ್ಸಿಂಗ್​ (Kissing) ದೃಶ್ಯದಲ್ಲಿ ನಟಿಸಲು ಶಾರುಖ್ ಖಾನ್ ಭಾರೀ ಸಂಭಾವನೆಯನ್ನೇ ಪಡೆದಿದ್ದಾರೆ. ತೆರೆ ಮೇಲೆ ಕಿಸ್ಸಿಂಗ್ ಸೀನ್​ನಲ್ಲಿ  ನಟಿಸಲು ಇಷ್ಟವಿಲ್ಲದೆ ಒಪ್ಪಿಕೊಂಡಿದ್ದೆ ಎಂದು ಶಾರುಖ್ ಹೇಳಿದ್ದು, ವಿಡಿಯೋ ವೈರಲ್ ಆಗಿದೆ. ತಾವು ಅಂದು ಅನುಭವಿಸಿದ ಘಟನೆಯ ಕುರಿತು ಅವರು ಹೇಳಿದ್ದಾರೆ. ನಿರ್ದೇಶಕರು ಕೆಲ ಷರತ್ತು ಹಾಕಿದ್ದರು. ಸೆಟ್​ನಲ್ಲಿ  ಅವರು  ಕಿಸ್ ಮಾಡಲು ಹೇಳಿದರು. ನಾನು  ಇಷ್ಟವಿಲ್ಲದಿದ್ದರೂ ಈ ಸೀನ್​ ಮಾಡಬೇಕಾಯಿತು ಎಂದು ಶಾರುಖ್  ಹೇಳಿದ್ದಾರೆ. ಈ ಸೀನ್​ಗಾಗಿ ನಾನು ಭಾರೀ ಸಂಭಾವನೆ ಪಡೆದಿದ್ದೇನೆ ಎಂಬುದನ್ನೂ ಬಹಿರಂಗವಾಗಿ ಶಾರುಖ್​ ಹೇಳಿದ್ದಾರೆ. ಈ  ಸಿನಿಮಾ ಸಕತ್​ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ಇಂಡಿಯಾ ಅಂಕಿಅಂಶಗಳ ಪ್ರಕಾರ, ಚಿತ್ರದ ಬಜೆಟ್ 78 ಕೋಟಿ ಆಗಿತ್ತು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿ ವಿಶ್ವಾದ್ಯಂತ ರೂ 210 ಕೋಟಿ ಗಳಿಸಿದೆ. 

ಅತ್ತೆ ತೊಡೆ ಮೇಲೆ ಶಾರುಖ್‌: ಪತಿ ಮೇಲೆ ಕಾಲಿಟ್ಟು ಕೂತ ಗೌರಿ- ಇದೆಂಥ ಸಂಸ್ಕಾರ ಎಂದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!