
ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಸದ್ಯ ಲಿಯೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆ ಮೂಡಿಸಿದೆ. ದಳಪತಿ ವಿಜಯ್ ಜೊತೆ ನಟಿ ತ್ರಿಷಾ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ದಳಪತಿ ವಿಜಯ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ವಿಜಯ್ ದಳಪತಿ ಸಿನಿಮಾದಿಂದ ಬ್ರೇಕ್ ಪಡೆಯಲಿದ್ದಾರೆ ಎನ್ನಲಾಗಿದೆ. ಹೌದು 68ನೇ ಸಿನಿಮಾ ಬಳಿಕ ನಟ ವಿಜಯ್ ನಟನೆಯಿಂದ ವಿರಾಮ ಪಡೆಯಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಅಂದಹಾಗೆ ದಳಪತಿ ವಿಜಯ್ ಸಿನಿಮಾದಿಂದ ಬ್ರೇಕ್ ಪಡೆಯುತ್ತಿರುವುದು ರಾಜಕೀಯ ಎಂಟ್ರಿ ಯಿಂದ ಎಂದು ಹೇಳಲಾಗುತ್ತಿದೆ. ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಕೂಡ ಇದೆ. ವಿಜಯ್ ಈಗಾಗಲೇ ತಮಿಳುನಾಡಿನ ಮೂಲೆ ಮೂಲೆ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಶಾಲಾ ಟಾಪರ್‌ಗಳಿಗೆ ಅನುಕೂಲ ಮಾಡಿಕೊಡುವ ರೀತಿ ನೋಡಿ ವಿಜಯ್ ರಾಜಕೀಯ ಎಂಟ್ರಿ ಪಕ್ಕ ಎನ್ನಲಾಗಿದೆ. 2026ರ ಎಲೆಕ್ಷನ್ ಟಾರ್ಗೆಟ್ ಮಾಡಿದ್ದಾರೆ ವಿಜಯ್ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ‘ದಳಪತಿ’ ಕ್ರೇಜ್: ರಾಜಕೀಯಕ್ಕೆ ವಿಜಯ್ ಎಂಟ್ರಿ?
ದಳಪತಿ ವಿಜಯ್ 68 ಸಿನಿಮಾ ವಿಜಯ್ ಕೊನೆಯ ಸಿನಿಮಾ ಆಗಲಿದೆ ಅಂತನೂ ಹೇಳಲಾಗುತ್ತಿದೆ. ನಟನೆಯಿಂದ ನಿವೃತ್ತಿ ಆಗಲ್ಲ ಆದರೆ ಬ್ರೇಕ್ ಪಡೆಯಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ವಿಜಯ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ವಿಜಯ್ ಸಿನಿಮಾದಿಂದ ಬ್ರೇಕ್ ಪಡೆಯುತ್ತಾರೆ ಎನ್ನುವ ಸುದ್ದಿ ಕೇಳಿಯೇ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.
ಡ್ರಗ್ಸ್ ವೈಭವೀಕರಣ: 'ಲಿಯೋ' ಸ್ಟಾರ್ ದಳಪತಿ ವಿಜಯ್ ವಿರುದ್ಧ ದೂರು ದಾಖಲು
ಲಿಯೋ ಬಳಿಕ ವಿಜಯ್ ಮತ್ತೊಂದು ಸಿನಿಮಾ ಪ್ರಾರಂಭವಾಗಲಿದೆ. ಇನ್ನೂ ಹೆಸರಿಡದ ಮುಂದಿನ ಸಿನಿಮಾದ ಬಳಿಕ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ವಿಜಯ್ ಸಂಪೂರ್ಣರಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಾರಾ ಅಥವಾ ನಟನಾ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಾರಾ ಕಾದುನೋಡಬೇಕಿದೆ. ಒಟ್ನಲ್ಲಿ ವಿಜಯ್ ರಾಜಕೀಯ ಎಂಟ್ರಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಜಕ್ಕೂ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಅಥವಾ ಇದು ಕೇವಲ ಗಾಸಿಪ್ ಅಷ್ಟೆನಾ ಎನ್ನುವುದು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.