ಶಾರುಖ್ ಬಳಿಕ ಮತ್ತೋರ್ವ ಹಿಂದಿ ಸ್ಟಾರ್‌ಗೆ ಆಟ್ಲೀ ಕುಮಾರ್ ಸಿನಿಮಾ: ಯಾರದು?

Published : Jul 03, 2023, 05:56 PM IST
ಶಾರುಖ್ ಬಳಿಕ ಮತ್ತೋರ್ವ ಹಿಂದಿ ಸ್ಟಾರ್‌ಗೆ ಆಟ್ಲೀ ಕುಮಾರ್ ಸಿನಿಮಾ: ಯಾರದು?

ಸಾರಾಂಶ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಜವಾನ್ ಸಿನಿಮಾ ಬಳಿಕ ನಿರ್ದೇಶಕ ಅಟ್ಲೀ ಮತ್ತೋರ್ವ ಹಿಂದಿ ಸ್ಟಾರ್ಗೆ ಸಿನಿಮಾ ಮಾಡುತ್ತಿದ್ದಾರೆ. ಆದರೆ ನಿರ್ದೇಶನ ಮಾಡುತ್ತಿಲ್ಲ. 

ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಸದ್ಯ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಜೊತೆ ಜವಾನ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳು ಸಿನಿಮಾಗಳನ್ನು ಮಾಡುತ್ತಿದ್ದ ನಿರ್ದೇಶಕ ಆಟ್ಲೀ ಕುಮಾರ್ ಶಾರುಖ್‌ಗೆ ಸಿನಿಮಾ ಮಾಡುತ್ತಿದ್ದಂತೆ ಅವರ ಬೇಡಿಕೆ ಮತ್ತಷ್ಟು ಹೆಚ್ಚಾಯಿತು. ಅಷ್ಟೆಯಲ್ಲದೇ ಆಟ್ಲಿ ಕುಮಾರ್ ಮೇಲಿನ ನಿರೀಕ್ಷೆ ಕೂಡ ಹೆಚ್ಚಾಗಿದೆ. ಶಾರುಖ್ ಜೊತೆ ಸಿನಿಮಾ ಮಾಡಲು ಅನೇಕ ನಿರ್ದೇಶಕರು ಕಾಯುತ್ತಿದ್ದಾರೆ. ಶಾರುಖ್‌ಗೆ ಆಕ್ಷನ್ ಹೇಳುವುದು ಅನೇಕ ನಿರ್ದೇಶಕರ ಕನಸಾಗಿದೆ. ಹಾಗಿರುವಾಗ ತಮಿಳಿನ ನಿರ್ದೇಶಕ ಅಟ್ಲೀ ಕುಮಾರ್ ಆ ಅವಕಾಶ ಗಿಟ್ಟಿಸಿಕೊಂಡಿರುವುದು ಅಚ್ಚರಿಯ ವಿಚಾರ.

ಶಾರುಖ್ ಜೊತೆ ಸಿನಿಮಾ ಮಾಡುತ್ತಿದ್ದಂತೆ ಅಟ್ಲೀ ಕುಮಾರ್ ಬೇಡಿಕೆ ಕೂಡ ಹೆಚ್ಚಾಗಿದೆ. ಬಾಲಿವುಡ್‌ನ  ಅನೇಕ ಸ್ಟಾರ್ ಅಟ್ಲೀ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಜವಾನ್ ಸಿನಿಮಾ ಮುಗಿಯೊದ್ರೊಳಗೆ ಆಟ್ಲೀ ಮತ್ತೊಂದು ಹಿಂದಿ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಬಾಲಿವುಡ್‌ನ ಮತ್ತೋರ್ವ ಸ್ಟಾರ್‌ಗೆ ಅಟ್ಲೀ ಸಿನಿಮಾ ಮಾಡುತ್ತಿದ್ದಾರೆ. ಅಂದಹಾಗೆ ಅಟ್ಲೀ ನಿರ್ದೇಶನ ಮಾಡುತ್ತಿಲ್ಲ. ನಿರ್ಮಾಣ ಮಾಡುತ್ತಿದ್ದಾರೆ. ಆಟ್ಲೀ ಮತ್ತು ಪತ್ನಿ ಪ್ರಿಯಾ ಅಟ್ಲೀ ನಿರ್ಮಾಣದ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ವರುಣ್ ಧವನ್ ನಟಿಸುತ್ತಿದ್ದಾರೆ. 

ಇದೊಂದು ಪಕ್ಕ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು ಈ ಚಿತ್ರಕ್ಕೆ ಕಲೀಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.ವಿಶೇಷ ಎಂದರೆ ರಿಲೀಸ್ ಡೇಟ್ ಕೂಡ ಬಹಿರಂಗವಾಗಿದೆ. ಇನ್ನೂ ಹೆಸರಿಡದ ಈ ಸಿನಿಮಾ ಮೇ 31, 2024ಕ್ಕೆ ರಿಲೀಸ್ ಆಗುತ್ತಿದೆ. ಅಟ್ಲೀ ನಿರ್ದೇಶನದ ಜೊತೆಗೆ ಬಾಲಿವುಡ್ ಸ್ಟಾರ್‌ಗೆ ನಿರ್ಮಾಣ ಕೂಡ ಮಾಡುತ್ತಿರುವುದು ದೊಡ್ಡ ವಿಚಾರವಾಗಿದೆ.

ರಿಲೀಸ್‌ಗೂ ಮುನ್ನ 36 ಕೋಟಿ ಗಳಿಸಿದ ಶಾರುಖ್ ಖಾನ್ ನಟನೆಯ ಜವಾನ್! 

ಅಂದಹಾಗೆ ವರುಣ್ ಧವನ್ ಸದ್ಯ ಬವಾಲ್ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಬವಾಲ್ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾವಾಗಿದೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 6ಕ್ಕೆ ರಿಲೀಸ್ ಆಗುತ್ತಿದೆ.

Cannes: ಪತ್ನಿ ಜೊತೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಶಾರುಖ್ 'ಜವಾನ್' ನಿರ್ದೇಶಕ ಅಟ್ಲೀ: ಫೋಟೋ ವೈರಲ್

ಅಟ್ಲೀ ಕುಮಾರ್ ತಮಿಳಿನಲ್ಲಿ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ರಾಜ ರಾಣಿ, ತೇರಿ, ಮರ್ಸೆಲ್, ಬಿಗಿಲ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅಟ್ಲೀ ಆಕ್ಷನ್ ಕಟ್ ಹೇಳಿರುವ ಈ ಎಲ್ಲಾ ಸಿನಿಮಾಗಳು ಸೂಪರ್ ಹಿಟ್. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾಗಳಾಗಿವೆ. ಇದೀಗ ಶಾರುಖ್ ಖಾನ್ ಜೊತೆ ಮಾಡುತ್ತಿರುವ ಜವಾನ್ ಸಿನಿಮಾ ಕೂಡ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ಸೌತ್ ನಿರ್ದೇಶಕರ ಸಿನಿಮಾದಿಂದ ಶಾರುಖ್ ಮತ್ತೊಮ್ಮೆ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಾರಾ ಎಂದು ಕಾದು ನೋಡಬೇಕಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?