ಸಾವಿರ ಕೋಟಿ ಕ್ಲಬ್​ ಸೇರಿದ ಜವಾನ್​: ಅಮುಲ್​ ಬೇಬಿ ಅವತಾರವೆತ್ತಿದ ಶಾರುಖ್​ ಖಾನ್!

Published : Sep 28, 2023, 07:29 PM IST
ಸಾವಿರ ಕೋಟಿ ಕ್ಲಬ್​ ಸೇರಿದ ಜವಾನ್​: ಅಮುಲ್​ ಬೇಬಿ ಅವತಾರವೆತ್ತಿದ ಶಾರುಖ್​ ಖಾನ್!

ಸಾರಾಂಶ

ಶಾರುಖ್​ ಖಾನ್​ ಅವರ ಜವಾನ್​ ಚಿತ್ರ 100 ಕೋಟಿ ಕ್ಲಬ್​ ಸೇರಿದ ಹಿನ್ನೆಲೆಯಲ್ಲಿ ಶಾರುಖ್​ ಅಮುಲ್​ ಬೇಬಿಯಾಗಿ ಮಿಂಚಿದ್ದಾರೆ. ಏನಿದು ವಿಷ್ಯ?  

ಜವಾನ್​ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ  439 ಕೋಟಿ ಗಳಿಸಿದ್ದರೆ,  ಜಾಗತಿಕವಾಗಿ  1000 ಕೋಟಿ ರೂಪಾಯಿ ಗಳಿಸಿದೆ. ಬಾಲಿವುಡ್​ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ.  ಜವಾನ್​ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ.  ಈ ಚಿತ್ರದಲ್ಲಿ ಎಂಟು ವಿಭಿನ್ನ ಶೇಡ್​ಗಳಲ್ಲಿ ನಾಯಕ ನಟ ಶಾರುಖ್​ ಕಾಣಿಸಿಕೊಂಡಿದ್ದರೆ,  ಕಾಳಿ ಗಾಯಕ್ವಾಡ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಘಟಾನುಘಟಿ ತಾರೆಯರ ದಂಡು ಈ ಚಿತ್ರದಲ್ಲಿದೆ.   ಚಿತ್ರದ ನಿರ್ಮಾಪಕರಾದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಸ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಜವಾನ್ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ 1004.92 ಕೋಟಿ ಗಳಿಸಿದೆ. 18 ದಿನಗಳಲ್ಲಿ ಚಿತ್ರ ಈ ಸಾಧನೆ ಮಾಡಿದೆ.

ಇದರ ನಡುವೆಯೇ ಈಗ ಜವಾನ್​-2 ಬಗ್ಗೆ ಸಕತ್​ ಚರ್ಚೆಯಾಗುತ್ತಿದೆ.  ಇದಕ್ಕೆ ಕಾರಣವೂ ಇದೆ. ಜವಾನ್‌ ಚಿತ್ರದ  ಕ್ಲೈಮ್ಯಾಕ್ಸ್‌ ಮುಗಿದ ಮೇಲೆ ಪಾರ್ಟ್ 2 ಬರುವ ರೀತಿಯಲ್ಲಿ ಒಂದು ದೃಶ್ಯವನ್ನು ತೋರಿಸಲಾಗಿದೆ.   ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಡಬಲ್ ರೋಲ್​ನಲ್ಲಿದ್ದು, ಓಪನ್ ಎಂಡಿಂಗ್​​ನಲ್ಲಿ ಕನ್​ಕ್ಲೂಡ್ ಆಗಿದೆ. ಕೊನೆಯ ಸೀನ್​ನಲ್ಲಿ ಶಾರುಖ್ ಖಾನ್ ಅವರು ಆಜಾದ್ ಹಾಗೂ ವಿಕ್ರಮ್ ರಾಥೋಡ್ ಆಗಿ ಬರಲಿದ್ದಾರೆ ಎಂಬ ಹಿಂಟ್ ಕೊಟ್ಟಿದ್ದಾರೆ. ಇದರ ನಡುವೆಯೇ ಶಾರುಖ್​ ಖಾನ್​ ಹ್ಯಾಟ್ರಿಕ್​ ಹೀರೋ ಆಗುವ ಕನಸು ಕಾಣುತ್ತಿದ್ದಾರೆ. ಅದು ಡಂಗಿ ಎನ್ನುವ ಚಿತ್ರದ ಮೂಲಕ.  ಹ್ಯಾಟ್ರಿಕ್​ ಚಿತ್ರ ಡಂಗಿ ಕುರಿತು ಹೇಳುವುದಾದರೆ, ಸಿನಿಮಾದಲ್ಲಿ ಶಾರುಖ್ ಖಾನ್‌ಗ ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ.  ದಿಯಾ ಮಿರ್ಜಾ ಕೂಡ ಇದ್ದಾರೆ. ಹಿರಾಣಿ ಸಿನಿಮಾಗಳಲ್ಲಿ ಖಾಯಂ ಆಗಿರೋ ನಟ ಬೊಮನ್ ಇರಾನಿ ಇಲ್ಲೂ ಇದ್ದಾರೆ. ಇನ್ನುಳಿದಂತೆ ಪ್ರೀತಂ ಸಂಗಿತ ಕೊಟ್ಟಿದ್ದಾರೆ. ಸ್ವತಃ ರಾಜ್‌ಕುಮಾರ್ ಹಿರಾನಿ ಈ ಚಿತ್ರವನ್ನ ಸಂಕಲನ ಮಾಡಿದ್ದಾರೆ. ಒಟ್ಟಾರೆ ಡಂಕಿ ಮತ್ತೊಂದು ಹಿಟ್ ಸಿನಿಮಾ ಆಗೋ ಟಾಕ್ ಈಗಲೇ ಶುರು ಆಗಿದೆ.

ಜವಾನ್​ನಲ್ಲಿ ನಯನತಾರಾಗೆ ಮೋಸ? ಟ್ವೀಟ್​ನಲ್ಲಿ ಬೆಣ್ಣೆ ಸವರಿ ನಟಿಯನ್ನು ಸಮಾಧಾನಪಡಿಸಿದ ಶಾರುಖ್

ಇದೀಗ ಸಿನಿಮಾ 1000 ಕೋಟಿ ಕ್ಲಬ್ ಸೇರಿಕೊಂಡಿರುವ ಹಿನ್ನೆಲೆಯಲ್ಲಿ ಅಮುಲ್ ಇಂಡಿಯಾ ಡೆಲಿಷಿಯಸ್ ಪೋಸ್ಟ್ ಶೇರ್ ಮಾಡಿದೆ.  ಅಮುಲ್ ಇಂಡಿಯಾ ಪೋಸ್ಟ್ ಮಾಡಿದ್ದು ಜವಾನ್ ಸಾವಿರ ಕೋಟಿ, ಅಮುಲ್ ಅಟ್ಲಿ ಬಟರ್ಲಿ ಡೆಲಿಷಿಯಸ್ ಎಂದು ಪೋಸ್ಟ್ ಮಾಡಿದ್ದು, ಇದರಲ್ಲಿ ಶಾರುಖ್​ ಅಮುಲ್​ ಬೇಬಿಯಾಗಿ ಮಿಂಚಿದ್ದಾರೆ. ಇದು ಸಕತ್​ ವೈರಲ್​ ಆಗುತ್ತಿದೆ.

ಇನ್ನು, ಜವಾನ್ ಸಕ್ಸಸ್ ದಾಖಲಿಸಿ ಸಾಕಷ್ಟು ದುಡ್ಡು ಬಾಚಿಕೊಂಡಿದೆ. ಈಗ ಜನರಿಗಾಗಿ ನೀವು ಏನು ಮಾಡುವ ಪ್ಲಾನ್ ಹಾಕಿಕೊಂಡಿದ್ದೀರಾ ಎಂಬ ಪ್ರಶ್ನೆ" ಶಾರುಖ್ ಖಾನ್ ಅವರಿಗೆ ಕೇಳಲಾಗಿತ್ತು. ಅದಕ್ಕೆ ಶಾರುಖ್​ ಅವರು,  "ನಮ್ಮ ರೆಡ್ ಚಿಲ್ಲೀಸ್' ಸಂಸ್ಥೆಯಿಂದ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ನಮ್ಮ ಇಡೀ ಕುಟುಂಬವು ಈ ಬಗ್ಗೆ ಉತ್ಸುಕತೆಯಿಂದ ಮಾತನಾಡುತ್ತಿದೆ. ಮೀರ್ ಫೌಂಡೇಶನ್ ವತಿಯಿಂದ ಕೆಲಸ ಮಾಡುವ ಎಲ್ಲ ಜನರಿಗೆ ಸಿನಿಮಾ ತೋರಿಸುವ ಪ್ಲಾನ್ ಮಾಡಿಕೊಂಡಿದ್ದೇವೆ. ನಮ್ಮ ಎಲ್ಲ ಪಾಲುದಾರರೊಂದಿಗೆ ಈ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ. ನಮ್ಮ ಯಾವುದೇ ಕೆಲಸದಿಂದ ನಮ್ಮೆಲ್ಲರ ಮುಖದಲ್ಲಿ ನಗು ತರಿಸಲು ಸಾಧ್ಯವಾದರೆ ಅದು ನಿಜವಾದ ಎಂಟರ್‌ಟೈನ್ಮೆಂಟ್. ಇದನ್ನು ನಾನು ನಮ್ಮ Red Chillies Entertainment ಸಂಸ್ಥೆಗೆ ಹೇಳುತ್ತಿದ್ದೇನೆ. ನೀವು ಐಡಿಯಾ ಕೊಟ್ಟಿದ್ದಕ್ಕೆ ನಿಮಗೆ ಥ್ಯಾಂಕ್ಸ್' ಎಂದಿದ್ದಾರೆ ನಟ ಶಾರುಖ್ ಖಾನ್. ಅಂದಹಾಗೆ ಈ 'ಜವಾನ್' ಚಿತ್ರವನ್ನು ಗೌರಿ ಖಾನ್ ಮತ್ತು ಶಾರುಖ್ ಖಾನ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. 

ರಿಸೆಪ್ಷನ್​ ದಿನ ಪತ್ನಿ ಗೌರಿಗೆ ಬುರ್ಖಾ ಹಾಕ್ಕೋ, ನಮಾಜ್​ ಮಾಡೋಣ ಅಂದೆ: ಆ ದಿನದ ಘಟನೆ ವಿವರಿಸಿದ ಶಾರುಖ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!