ನಟಿ ಸನಾ ಖಾನ್ ಅವರಿಗೆ ರಾಖಿ ಸಾವಂತ್ ಇಸ್ಲಾಂ ಧರ್ಮದ ಕುರಿತು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಅವರಿಗೆ ಮಾತನಾಡಲು ಬಿಡದೇ ಮಧ್ಯೆ ಪ್ರವೇಶಿಸಿದ ಅವರ ಪತಿ ಮುಫ್ತಿ ಅನಾಸ್ ಸೈಯದ್ಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡದ 'ಕೂಲ್' ಸಿನಿಮಾದಲ್ಲಿ ನಟಿಸಿರುವ ನಟಿ ಸನಾ ಖಾನ್ ಸಿನಿಮಾ ಬಿಟ್ಟು ಹಿಜಾಬ್ ಧರಿಸುವ ನಿರ್ಧಾರಕ್ಕೆ ಬಂದು ಮೂರು ವರ್ಷಗಳ ಹಿಂದೆ ಬಹಳ ಸುದ್ದಿಯಾಗಿದ್ದರು. ಬಾಲಿವುಡ್ (Bollywood) ಸಿನಿಮಾಗಳ ಜೊತೆಗೆ ಸನಾ ಖಾನ್ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೂಲ್ (Cool) ಸಿನಿಮಾದಲ್ಲಿ ಸನಾ ನಟಿಸಿದ್ದಾರೆ. ಇಷ್ಟೆಲ್ಲಾ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾ ಬಿಡುವ ನಿರ್ಧಾರ ಮಾಡಿದ್ದು, ಅವರ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಸಿನಿಮಾರಂಗ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿದ್ದ ಸನಾ ಖಾನ್ ಸಮಾಜ ಸೇವೆ ಮಾಡಲು ಮತ್ತು ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ಬಿಡುತ್ತಿದ್ದೇನೆ ಎಂದಿದ್ದರು. ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಹೇಳಿದ್ದ ಅವರು, 'ನನ್ನ ಹಳೆಯ ಜೀವನದಲ್ಲಿ ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಮನಸ್ಸಿಗೆ ಶಾಂತಿ ಇರಲಿಲ್ಲ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ, ಅದು ತುಂಬಾ ಕಠಿಣವಾಗಿತ್ತು. ಆದ್ದರಿಂದ ಈ ಹಾದಿ ಹಿಡಿದೆ ಎಂದಿದ್ದರು.
ಹೀಗೆ ಮಿನಿ ಸ್ಕರ್ಟ್, ಬಿಕಿನಿ ಎಲ್ಲವನ್ನೂ ಬಿಟ್ಟು ಹಿಜಾಬ್ ಧರಿಸಿದ್ದ 34 ವರ್ಷದ ನಟಿ ಸನಾ ಈಗ ಮಗುವಿನ ತಾಯಿ. ಈಕೆ, 2020ರ ನವೆಂಬರ್ 20 ರಂದು ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ (Mufti Anas Sayed)ಅವರನ್ನು ವಿವಾಹವಾದರು. ಅನಾಸ್ ಸೈಯದ್ ಸೌಂದರ್ಯವರ್ಧಕ, ಪರ್ಸನಲ್ ಕೇರ್ ಲೈನ್ ನ ಸಂಸ್ಥಾಪರಾಗಿದ್ದಾರೆ. ಕಳೆದ ಜೂನ್ನಲ್ಲಿ ಈ ದಂಪತಿ ಮಗುವಿನ ಪಾಲಕರಾಗಿದ್ದಾರೆ. ಕಳೆದ ತಿಂಗಳು ನಟಿ ಎದೆಹಾಲಿನ ಮಹತ್ವವನ್ನು ಸಾರಿದ್ದರು. 'ನಿಮ್ಮ ಮಗುವಿಗೆ ಆಹಾರ ನೀಡುವುದು ವಿಶ್ವದ ಅತ್ಯಂತ ಸುಂದರವಾದ ಭಾವನೆಗಳಲ್ಲಿ ಒಂದಾಗಿದೆ. ಇದು ನಿಮ್ಮನ್ನು ಮಗುವಿನೊಂದಿಗೆ ಇನ್ನಷ್ಟು ಸಂಪರ್ಕಿಸುತ್ತದೆ ಮತ್ತು ಇದು ನಿಜವಾಗಿಯೂ ಮಾಂತ್ರಿಕವಾಗಿದೆ' ಎಂದು ಸನಾ ಹೇಳಿದ್ದರು. 'ನಾನು ಹಾಲುಣಿಸಲು ಪ್ರಾರಂಭಿಸಿದಾಗ, ನಾನು ಈ ದೇಹದಲ್ಲಿ ಇಷ್ಟು ವರ್ಷಗಳ ಕಾಲ ಹೇಗೆ ವಾಸಿಸುತ್ತಿದ್ದೇನೆ ಎಂದು ಅಚ್ಚರಿಯಾಗುತ್ತದೆ. ತಾಯಿಯಾದ ನಂತರವೇ ಹಾಲು ಉತ್ಪಾದಿಸಲು ಪ್ರಾರಂಭವಾಗುವುದು ಎಷ್ಟು ಅಚ್ಚರಿಯಲ್ಲವೆ ಎಂದು ಪ್ರಶ್ನಿಸಿದ್ದರು.
SANA KHAN: ನಟನೆ ಬಿಟ್ಟು ಹಿಜಾಬ್ ಧರಿಸಿದ ಕನ್ನಡದ 'ಕೂಲ್' ನಟಿಯೀಗ ಗರ್ಭಿಣಿ
ಇದೀಗ ನಟಿ ಸನಾ ಖಾನ್ ಮತ್ತು ಅವರ ಪತಿ ಮುಫ್ತಿ ಅವರು ಒಟ್ಟಿಗೇ ಕಾಣಿಸಿಕೊಂಡಾಗ ಪಾಪರಾಜಿಗಳು ಅವರನ್ನು ಸುತ್ತುವರೆದಿದ್ದಾರೆ. ನಂತರ ಈಗ ಸದ್ಯ ಹಾಟೆಸ್ಟ್ ವಿಷ್ಯ ಆಗಿರುವುದು ಡ್ರಾಮಾ ಕ್ವೀನ್ ರಾಖಿ ಸಾವಂತ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಸುದ್ದಿ. ಈಗಲೂ ರಾಖಿಯ ಡ್ರಾಮಾ ಮುಂದುವರೆದೇ ಇದೆ. ಮೆಕ್ಕಾ, ಮದೀನಾಕ್ಕೆ ಹೋಗಿ ಬಂದದ್ದೂ ಆಗಿದೆ. ರಾಖಿಯಿಂದ ಫಾತೀಮಾ ಆಗಿರುವುದಾಗಿ ಹೇಳಿ ಗಂಡನನ್ನು ಜೈಲಿಗೆ ತಳ್ಳಿದ್ದೂ ಆಗಿದೆ. ಆದರೂ ಈಗ ದಿನಕ್ಕೊಂದು ವೇಷ ತೊಟ್ಟು ಸುದ್ದಿಯಾಗಿದ್ದಾರೆ. ಅವರ ಬಗ್ಗೆ ನಟಿ ಸನಾ ಖಾನ್ ಅವರನ್ನು ಪಾಪರಾಜಿಗಳು ಪ್ರಶ್ನಿಸಿದ್ದಾರೆ. ಸನಾ ಖಾನ್ ಅವರನ್ನು ಉದ್ದೇಶಿಸಿ ಪ್ರಶ್ನೆ ಕೇಳುವುದು ತಿಳಿಯುತ್ತಿದ್ದಂತೆಯೇ ಅವರ ಪತಿ ಮುಫ್ತಿ ಅವರು ಪತ್ನಿಯನ್ನು ಮುಂದಕ್ಕೆ ಕಳುಹಿಸಿದ್ದಾರೆ.
ನಂತರ ರಾಖಿ ವಿಷಯವಾಗಿ ಅವರಿಗೆ ಪ್ರಶ್ನೆ ಕೇಳಲಾಗಿದೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಈಗ ಡ್ರಾಮಾ ಮಾಡ್ತಿರೋ ರಾಖಿ ಬಗ್ಗೆ ನಿಮಗೇನು ಎನ್ನಿಸುತ್ತದೆ ಎಂದು. ಈ ಪ್ರಶ್ನೆಗೆ ನಟಿ ಸನಾ ಖಾನ್ ಉತ್ತರ ನೀಡಬೇಕು ಎನ್ನುವಷ್ಟರಲ್ಲಿಯೇ ಪತಿ ಮಧ್ಯೆ ಪ್ರವೇಶಿಸಿ, ಈ ವಿವಾದಕ್ಕೆ ನಮ್ಮನ್ನು ಎಳೆಯಬೇಡಿ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ. ಸನಾ ಖಾನ್ ಏನನ್ನೋ ಹೇಳಲು ಹೋದಾಗ ಅವರ ಪತಿ ಮತ್ತಷ್ಟು ಹೇಳಿ ಅವರಿಬ್ಬರೂ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿ ಎನ್ನುವುದು ನಮ್ಮ ಆಸೆ ಎಂದಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಸನಾ ಖಾನ್ ಒಬ್ಬ ನಟಿಯಾಗಿ ಏನು ಮಾತನಾಡಬೇಕು ಎನ್ನುವುದು ಅವರಿಗೂ ತಿಳಿದಿದೆ. ಅವರಿಗೂ ಒಂದಿಷ್ಟು ಮಾತನಾಡುವ ಸ್ವಾತಂತ್ರ್ಯ ಕೊಡಿ, ಎಂಥ ಗಂಡ ನೀವು ಎಂದೆಲ್ಲಾ ಪ್ರಶ್ನಿಸಿದ್ದಾರೆ. ಪತ್ನಿಯನ್ನು ಮುಂದಕ್ಕೆ ಕಳುಹಿಸಿದಂತೆ ಮಾಡಿ ನಂತರ ಎಲ್ಲದ್ದಕ್ಕೂ ಮಧ್ಯೆ ಪ್ರವೇಶ ಮಾಡಿದ ನಿಮ್ಮಂಥ ಗಂಡನನ್ನು ನೋಡಿದರೆ ಸನಾ ಖಾನ್ ಬಗ್ಗೆ ಅಯ್ಯೋ ಎನಿಸುತ್ತದೆ ಎಂದಿದ್ದಾರೆ. ಇನ್ನುಕೆಲವರು ಪತ್ನಿ ಯಾವುದೇ ವಿವಾದಕ್ಕೆ ಸಿಲುಕದಿರಲಿ ಎನ್ನುವ ಕಾರಣಕ್ಕೆ ಪತಿ ರಕ್ಷಣೆ ಮಾಡಿದ್ದಾರೆ ಅಷ್ಟೇ ಎನ್ನುತ್ತಿದ್ದಾರೆ.
ಚಪ್ಪಲಿ ಆಯ್ತು ಈಗ ಗಣೇಶನ ದರ್ಶನಕ್ಕೆ ಟೈಟಾಗಿ ಬಂದ್ರಾ ಫರಾ ಖಾನ್? ಮಸೀದಿ ವಿಷ್ಯ ಎಳೆದುತಂದ ಫ್ಯಾನ್ಸ್!