
ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅದ್ಭುತ ನೋಟಕ್ಕಾಗಿ ಆಗಾಗ್ಗೆ ಸುದ್ದಿಯಾಗುತ್ತಾರೆ. ಸುಹಾನಾ ಇದಾಗಲೇ ಎರಡು ಚಿತ್ರಗಳಲ್ಲಿ ನಟಿಸಿದ್ದು ಅಪ್ಪನ ಜೊತೆ ಕಿಂಗ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2026ರಂದು ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸ್ಟಾರ್ ಕಿಡ್ ಅದರಲ್ಲಿಯೂ ಶಾರುಖ್ ಮಗಳಾಗಿರುವುದರಿಂದ ಸುಹಾನಾರ ಜನಪ್ರಿಯತೆಗೆ ಯಾವುದೇ ಕಮ್ಮಿಯಿಲ್ಲ. ನೋಡಿದವರು ಆಹಾ! ದಂತದ ಬೊಂಬೆ ಎನ್ನುತ್ತಾರೆ. ಸುಹಾನಾ ಖಾನ್ಗೆ ಈಗ 24 ವರ್ಷ ವಯಸ್ಸು. ಇದಾಗಲೇ ಬಿಕಿನಿ ಡ್ರೆಸ್ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್ ಮತ್ತು ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಸುದ್ದಿ ಹಳೆಯದ್ದಾಗಿದೆ. ಅಗಸ್ತ್ಯ ಕೂಡ 24 ವರ್ಷದವನೇ. ಹಾಗೆ ನೋಡಿದರೆ ಸುಹಾನಾ ಅಗಸ್ತ್ಯನಿಂದ ಆರು ತಿಂಗಳು ದೊಡ್ಡವರು. ಸುಹಾನಾ 2000ನೇ ಸಾಲಿನ ಮೇ ತಿಂಗಳಿನಲ್ಲಿ ಹುಟ್ಟಿದ್ದರೆ, ಅಗಸ್ತ್ಯ ಹುಟ್ಟಿರುವುದು ಅದೇ ಸಾಲಿನ ನವೆಂಬರ್ನಲ್ಲಿ.
ಇದಾಗಲೇ ಸುಹಾನಾ ಸಾಕಷ್ಟು ಪಾರ್ಟಿಗಳಲ್ಲಿ ಪಾರ್ಟಿವೇರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಗಸ್ತ್ಯ ನಂದಾ ಜೊತೆಯೂ ಹಲವಾರು ರೀತಿಯ ಹಾಟ್ ಡ್ರೆಸ್ಗಳಲ್ಲಿ ಕಾಣಿಸಿಕೊಂಡು, ಬಿಕಿನಿಯಲ್ಲಿಯೂ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದರ ನಡುವೆಯೇ, ಫಂಕ್ಷನ್ ಒಂದರಲ್ಲಿ ಶಾರುಖ್ ಖಾನ್ ಅವರು ತಮ್ಮ ಪುತ್ರಿಯ ಹೊಕ್ಕಳು ಕಾಣದಂತೆ ಡ್ರೆಸ್ ಅನ್ನು ಎಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ನೆಟ್ಫ್ಲಿಕ್ಸ್ ಪಂಕ್ಷನ್ ಇದಾಗಿದೆ. ವೇದಿಕೆ ಮೇಲೆ ಬಂದಾಗ, ಸುಹಾನಾರ ಟಾಪ್ ಸ್ವಲ್ಪ ಮೇಲಕ್ಕೆ ಸರಿದಿತ್ತು. ಅದರಲ್ಲಿ ಹೊಕ್ಕಳು ಕಾಣಿಸುತ್ತಿತ್ತು. ಅದನ್ನು ಸರಿ ಮಾಡಿ, ಹೊಕ್ಕಳನ್ನು ಮುಚ್ಚಿದ್ದಾರೆ.
ಎಲ್ಲಾ ಕ್ಯಾಮೆರಾ ಕಣ್ಣುಗಳೂ ತಮ್ಮ ಮೇಲೆ ಇರುತ್ತವೆ ಎನ್ನುವುದು ಶಾರುಖ್ಗೆ ಗೊತ್ತಿರುವ ನಡುವೆಯೇ ಮಗಳ ಡ್ರೆಸ್ ಸರಿ ಮಾಡಿದ್ದು, ಅದೀಗ ವೈರಲ್ ಆಗಿದೆ. ಒಬ್ಬ ಅಪ್ಪನಾಗಿ ಶಾರುಖ್ ತಮ್ಮ ಪುತ್ರಿಯ ಎಷ್ಟೊಂದು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಅಪ್ಪ ಎಷ್ಟೇ ದೊಡ್ಡ ಸ್ಟಾರ್ ಆಗಿರಲಿ, ಆತ ಅಪ್ಪನೇ, ಆತನಿಗೂ ಕೆಲವು ಜವಾಬ್ದಾರಿಗಳು ಇರುತ್ತವೆ. ಮಕ್ಕಳ ವಿಷಯದಲ್ಲಿ ನಟ ಶಾರುಖ್ ಕೂಡ ಅಪ್ಪನಾಗಿ ಬಹಳ ಕಾಳಜಿ ಮಾಡುತ್ತಿದ್ದಾರೆ. ಎಲ್ಲರಿಗೂ ಇಂಥ ಅಪ್ಪ ಸಿಗಬೇಕು ಎಂದು ಹಲವರು ಕಮೆಂಟ್ಗಳಲ್ಲಿ ಹೇಳುತ್ತಿದ್ದಾರೆ. ಮತ್ತೆ ಕೆಲವರು ಬೇರೆಲ್ಲಾ ಕಂಡರೆ ಓಕೆನಾ, ನಿಮ್ಮ ಮಗಳ ಫೋಟೋಗಳನ್ನು ನೋಡಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ.
'ದಂತದ ಬೊಂಬೆ' ಶಾರುಖ್ ಪುತ್ರಿ ಸುಹಾನಾಳ ದೇಹದ ಯಾವ್ಯಾವ ಭಾಗಕ್ಕೆ ಕತ್ತರಿ ಬಿದ್ದಿದೆ ನೋಡಿ...
ಕೆಲ ದಿನಗಳ ಹಿಂದೆ ಸುಹಾನಾ ಅವರ ಹಳೆಯ ಫೋಟೋ ವೈರಲ್ ಆಗಿತ್ತು. ಅದನ್ನು ನೋಡಿ ಹಲವರು ಶಾಕ್ಗೆ ಒಳಗಾಗಿದ್ದರು. ಏಕೆಂದರೆ ಈಗಿನ ದಂತದ ಬೊಂಬೆ ಎಂದು ಕರೆಸಿಕೊಳ್ಳುವ ಸುಹಾನಾ ಹಿಂದೆ ಇಷ್ಟೊಂದು ಪ್ಲಾಸ್ಟಿಕ್ ಸರ್ಜರಿ ಬಳಕೆಯಾಗಿದ್ಯಾ ಎನ್ನುವ ಕಾರಣಕ್ಕೆ. ಅಂದಹಾಗೆ, ಸುಹಾನಾ ಖಾನ್ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಬಿಳಿ ಬಣ್ಣದ ತ್ವಚೆಗಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೈಬಣ್ಣ ಅಂದಗೊಳಿಸಿಕೊಳ್ಳಲು ಕೆಲವೊಂದು ಚಿಕಿತ್ಸೆ ಮೊರೆ ಹೋಗಿದ್ದಾರೆ. ಬೋಟೊಕ್ಸ್ ಮತ್ತು ಫಿಲ್ಲರ್ಸ್ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದಾರೆ. ಬಳಕುವ ಬಳ್ಳಿಯಂತಿರುವ ಸುಹಾನಾ ದೇಹದ ಮೇಲೂ ಹಲವರ ಕಣ್ಣು ಹೋಗಿದ್ದು ಇದೆ. ಆ ಭಾಗಕ್ಕೂ ಈಕೆ ಚಿಕಿತ್ಸೆ ಮಾಡಿಸಿಕೊಂಡಿರಲು ಸಾಕು ಎಂದು ಹೇಳುವುದು ಉಂಟು. ಆದರೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಟ್ಟಿನಲ್ಲಿ ಈ ದಂತದ ಬೊಂಬೆಯ ಹಿಂದಿರುವುದು ಪ್ಲಾಸ್ಟಿಕ್ ಸರ್ಜರಿ ಕಮಾಲ್ ಎನ್ನುವುದು ಅಂತೂ ದಿಟ ಆಗಿದೆ.
ನನಗೆ 8 ಮಕ್ಕಳು ಬೇಕಿತ್ತು... ಆದ್ರೆ... ನಟಿ ಪ್ರಿಯಾಂಕಾ ಉಪೇಂದ್ರ ರಿವೀಲ್ ಮಾಡಿದ ಗುಟ್ಟೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.