ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಗೆ ಧನ್ಯವಾದ ಹೇಳಿದ ಕ್ಯಾನ್ಸರ್ ಪೀಡಿತ ಹೀನಾ ಖಾನ್

Published : Feb 04, 2025, 11:53 AM IST
ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಗೆ ಧನ್ಯವಾದ ಹೇಳಿದ ಕ್ಯಾನ್ಸರ್ ಪೀಡಿತ ಹೀನಾ ಖಾನ್

ಸಾರಾಂಶ

ಬಾಲಿವುಡ್ ನಟಿ ಹೀನಾ ಖಾನ್ ತಮ್ಮ ಮೂರನೇ ಹಂತದ ಕ್ಯಾನ್ಸರ್‌ನ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಆರಂಭಿಕ ಚಿಕಿತ್ಸೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಆಯುಷ್ಮಾನ್ ಯೋಜನೆಯ ಪ್ರಯೋಜನಗಳನ್ನು ಶ್ಲಾಘಿಸಿದರು.

ಸ್ತನ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಹೀನಾ ಖಾನ್‌ ತಮ್ಮನ್ನು ಬಾಧಿಸುತ್ತಿರುವ ಮೂರನೇ ಹಂತದ ಕ್ಯಾನ್ಸರ್‌ ಜೊತೆ ತಮ್ಮಹೋರಾಟದ ಬಗ್ಗೆ ಮಾತನಾಡಿದ್ದಾರೆ. ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು ಆರಂಭದಲ್ಲಿಯೇ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವುದು ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದರು. ಜೊತೆಗೆ ಜನರ ಆರೋಗ್ಯದ ಬಗ್ಗೆ ಕಾಳಜಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಆಯುಷ್ಮಾನ್ ಯೋಜನೆ' ಎಷ್ಟೊಂದು ಪ್ರಯೋಜನಕಾರಿ ಎಂದು ಶ್ಲಾಘಿಸಿದ್ದಲ್ಲದೇ ಆ ಯೋಜನೆಗಾಗಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. ಈ ಯೋಜನೆಯಿಂದಾಗಿ ಜನರು ಸಕಾಲದಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆಯಬಹುದಾಗಿದೆ. 

ನನಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ, ನನ್ನ ಚಿಕಿತ್ಸೆ 2-3 ದಿನಗಳಲ್ಲಿ ಪ್ರಾರಂಭವಾಯಿತು. ಸಮಯವನ್ನು ವ್ಯರ್ಥ ಮಾಡಬಾರದು ಎಂಬುದು ನನಗೆ ತಿಳಿದಿತ್ತು. ಇದೇ ವೇಳೆ ಆಯುಷ್ಮಾನ್ ಭಾರತ್ ನಂತಹ ಸರ್ಕಾರದ ಯೋಜನೆಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಅದನ್ನು ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮತ್ತು ಇತರ ಹಲವು ಆಸ್ಪತ್ರೆಗಳಲ್ಲಿ ನೋಡಿದ್ದೇನೆ. ಜನರಿಗೆ ಈಗ ಸಕಾಲಿಕ ಚಿಕಿತ್ಸೆ ಪಡೆಯುವ ಅವಕಾಶವಿದೆ ಇದು ಬಹಳ ಮುಖ್ಯ ಎಂದು ರೋಗನಿರ್ಣಯದ ನಂತರ ತಾವು ಎಷ್ಟು ಬೇಗ ಚಿಕಿತ್ಸೆ ಪ್ರಾರಂಭಿಸಿದೆ ಎಂಬುದನ್ನು ನಟಿ ಹಿನಾ ಖಾನ್ ಹಂಚಿಕೊಂಡರು.

ಹೀನಾ ಖಾನ್ ಅವರು ಕಳೆದ ವರ್ಷ ಜೂನ್‌ನಲ್ಲಿ ಮೊದಲ ಬಾರಿ ತಮಗೆ ಕ್ಯಾನ್ಸರ್ ಇರುವುದರ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ತಮ್ಮ ಅಭಿಮಾನಿಗಳೊಂದಿಗೆ ಇನ್ಸ್ಟಾಗ್ರಾಮ್‌ನಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದರು. 

ಎಲ್ಲರಿಗೂ ನಮಸ್ಕಾರ, ಇತ್ತೀಚಿನ ಊಹಾಪೋಹಾಗಳನ್ನು ಉದ್ದೇಶಿಸಿ, ನಾನು ಎಲ್ಲಾ ಹಿನಾಹೋಲಿಕ್ಸ್ ಮತ್ತು ನನ್ನನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಪ್ರತಿಯೊಬ್ಬರೊಂದಿಗೆ ಕೆಲವು ಪ್ರಮುಖ ಸುದ್ದಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ಸವಾಲಿನ ರೋಗನಿರ್ಣಯದ ಹೊರತಾಗಿಯೂ, ನಾನು ಚೆನ್ನಾಗಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ನಾನು ಬಲಶಾಲಿ, ದೃಢನಿಶ್ಚಯಿ ಮತ್ತು ಈ ರೋಗವನ್ನು ಜಯಿಸಲು ಸಂಪೂರ್ಣವಾಗಿ ಬದ್ಧಳಾಗಿದ್ದೇನೆ. ನನ್ನ ಚಿಕಿತ್ಸೆ ಈಗಾಗಲೇ ಪ್ರಾರಂಭವಾಗಿದೆ, ಮತ್ತು ಇದರಿಂದ ಇನ್ನಷ್ಟು ಬಲಶಾಲಿಯಾಗಿ ಹೊರಹೊಮ್ಮಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾನು ಸಿದ್ಧನಿದ್ದೇನೆ ಎಂದು ಹೀನಾ ಖಾನ್‌ ಹೇಳಿದ್ದಾರೆ. 

ಈ ಸಮಯದಲ್ಲಿ ಗೌರವ ಮತ್ತು ಗೌಪ್ಯತೆಯನ್ನು ನಾನು ಕೋರುತ್ತೇನೆ. ನಿಮ್ಮ ಪ್ರೀತಿ, ಶಕ್ತಿ ಮತ್ತು ಆಶೀರ್ವಾದಗಳಿಗೆ ನಾನು ಕೃತಜ್ಞಳಾಗಿದ್ದೇನೆ. ನಾನು ಈ ಪಯಣವನ್ನು  ಮಾಡುವಾಗ ನಿಮ್ಮ ವೈಯಕ್ತಿಕ ಅನುಭವಗಳು ಮತ್ತು ಬೆಂಬಲಿತ ಸಲಹೆಗಳು ನನಗೆ ಅರ್ಥವಾಗುತ್ತವೆ. ನಾನು, ನನ್ನ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆಗೆ ದೃಢನಿಶ್ಚಯದಿಂದ ಮತ್ತು ಸಕಾರಾತ್ಮಕವಾಗಿ ಉಳಿದಿದ್ದೇನೆ. ಸರ್ವಶಕ್ತನ ಅನುಗ್ರಹದಿಂದ, ನಾನು ಈ ಸವಾಲನ್ನು ಜಯಿಸುತ್ತೇನೆ ಮತ್ತು ಸಂಪೂರ್ಣವಾಗಿ ಆರೋಗ್ಯವಾಗಿರುತ್ತೇನೆ ಎಂದು ನಾವು ನಂಬುತ್ತೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳು, ಆಶೀರ್ವಾದಗಳು ಮತ್ತು ಪ್ರೀತಿಯನ್ನು ಕಳುಹಿಸಿ ಎಂದು ಅವರು ಹೇಳಿದರು.

ಹೀನಾ ಖಾನ್ ಅವರು 'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ',  'ಕಸೌಟಿ ಜಿಂದಗೀ ಕೇ' ಮುಂತಾದ ಹಿಂದಿ ಧಾರವಾಹಿಗಳಲ್ಲಿ ನಟಿಸಿದ್ದಾರೆ ಹಾಗೂ ಹಿಂದಿ ಬಿಗ್ಬಾಸ್‌ನಲ್ಲಿಯೂ ಅವರು ಭಾಗವಹಿಸಿದ್ದರು. ಕೆಲ ದಿನಗಳ ಹಿಂದೆ ತಮ್ಮ ಗೆಳೆಯ ತಮ್ಮ ಈ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಪ್ರತಿಕ್ಷಣವೂ ಜೊತೆಯಾಗಿಒ ಬದುಕುವ ಆತ್ಮವಿಶ್ವಾಸ ತುಂಬಿದ ವಿಚಾರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ ಅಮ್ಮನಂತೆ ಆರೈಕೆ ಮಾಡಿದ ಗೆಳೆಯ ರಾಕಿ ಜೈಸ್ವಾಲ್ ಬಗ್ಗೆ ಕ್ಯಾನ್ಸರ್ ಪೀಡಿತ ನಟಿ ಹೀನಾ ಖಾನ್ ಮಾತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?