ಒಂದ್ ಸೆಲ್ಫಿ ಕೇಳಿದ್ದಕ್ಕೆ ಹೀಗ್ ಮಾಡೋದಾ: ಶಾರುಖ್ ವರ್ತನೆಗೆ ಅಭಿಮಾನಿಗಳ ಬೇಸರ

By Shruthi KrishnaFirst Published May 3, 2023, 11:34 AM IST
Highlights

ಏರ್ಪೋರ್ಟ್‌ನಲ್ಲಿ ಶಾರುಖ್ ಖಾನ್ ಅಭಿಮಾನಿ ಜೊತೆ ನಡೆದುಕೊಂಡ ರೀತಿಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪಠಾಣ್ ಸಕ್ಸಸ್ ಖುಷಿಯಲ್ಲಿದ್ದಾರೆ. ಸಾಲು ಸಾಲು ಸೋಲಿನ ನಂತರ ಶಾರುಖ್ ಅವರಿಗೆ ಪಠಾಣ್ ಮೂಲಕ ದೊಡ್ಡ ಸಕ್ಸಸ್ ಸಿಕ್ಕಿದೆ. ಸೋಲಿನ ಸುಳಿಯಲ್ಲಿದ್ದ ಶಾರುಖ್ ಕೆಲವು ವರ್ಷ ಸಿನಿಮಾ ಮಾಡುವುದನ್ನೆ ಬಿಟ್ಟಿದ್ದರು. ಇದೀಗ ಮತ್ತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಶಾರುಖ್ ಖಾನ್ ಇತ್ತೀಚೆಗಷ್ಟೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ಏರ್ಪೋರ್ಟ್‌ನಿಂದ ಹೊರ ಬರುವಾಗ ಶಾರುಖ್ ನೋಡಲು ಅಭಿಮಾನಿಗಳು ಮುಗಿಬಿದ್ದರು. ನೆಚ್ಚಿನ ನಟನ ಜೊತೆ ಸೆಲ್ಫಿ ಕ್ಲಿಕ್ಕಸಿಕೊಳ್ಳಲು ಅಭಿಮಾನಿಗಳು ಮುಂದಾದರು. ಆದರೆ ಶಾರುಖ್ ನಡೆದುಕೊಂಡ ರೀತಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 

ಏರ್ಪೋರ್ಟ್‌ನಿಂದ ಹೊರ ಬಂದ ಶಾರುಖ್ ಖಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಯೊಬ್ಬ ಮೊಬೈಲ್ ಹಿಡಿದು ಪಕ್ಕದಲ್ಲಿ ಬಂದ. ಆಗ ಶಾರುಖ್ ಆತನನ್ನು ತಳ್ಳಿ ಮುಂದೆ ಸಾಗಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಶಾರುಖ್ ವರ್ತನೆ ನೋಡಿ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ಗೆಲ್ಲೋ ವರೆಗೂ ಮಾತ್ರ ಅಭಿಮಾನಿಗಳು ಬೇಕು ಸೆಲ್ಫಿ ಕೇಳಿದ್ದಕ್ಕೆ ಹೀಗ್ ಮಾಡಿದ್ದು ಸರಿನಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಂದು ಸೆಲ್ಫಿ ಕೊಟ್ಟಿದ್ದರೆ ಏನ್ ಆಗುತ್ತಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅನಾವಶ್ಯಕ ಅ್ಯಟಿಟ್ಯೂಡ್ ಎಂದು ಹೇಳುತ್ತಿದ್ದಾರೆ. 

ವೈವಾಹಿಕ ಜೀವನದಲ್ಲಿ ಹ್ಯಾಪಿಯಾಗಿರಲು ಬಾಲಿವುಡ್ ಕಪಲ್ ಶಾರುಖ್ ಖಾನ್-ಗೌರಿ ಖಾನ್ ಟಿಪ್ಸ್‌

Latest Videos

ಶಾರುಖ್ ಏರ್ಪೋರ್ಟ್‌ನಿಂದ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಹೊರ ಬಂದರು. ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಲುಕ್‌ನಲ್ಲಿ ಶಾರುಖ್ ಕಾಣಿಸಿಕೊಂಡಿದ್ದಾರೆ.  ಸದಾ ಸ್ಟೈಲಿಶ್ ಆಗಿಯೇ ಕಾಣಿಸಿಕೊಳ್ಳುವ ಶಾರುಖ್ ಪಠಾಣ್ ಸಕ್ಸಸ್ ಬಳಿಕ ಮತ್ತಷ್ಟು ಸ್ಟೈಲಿಶ್ ಆಗಿದ್ದಾರೆ. ಸಿನಿಮಾ ಶೂಟಿಂಗ್ ನಡುವೆಯೂ ಶಾರುಖ್ ಐಪಿಎಲ್‌ನಲ್ಲೂ ಬ್ಯುಸಿಯಾಗಿದ್ದಾರೆ.

ರಿಲೀಸ್‌ಗೂ ಮೊದಲೇ ಶಾರುಖ್ 'ಜವಾನ್' ಸಿನಿಮಾ ಲೀಕ್; ಕಟ್ಟುನಿಟ್ಟಿನ ಆದೇಶ ನೀಡಿದ ದೆಹಲಿ ಹೈಕೋರ್ಟ್​

ಶಾರುಖ್ ಖಾನ್ ಸದ್ಯ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಡಂಕಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಾಪ್ಸಿ ಪನ್ನು ಜೊತೆ ಶಾರುಖ್ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಶಾರುಖ್ ತಾಪ್ಸಿ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಶಾರುಖ್ ಖಾನ್ ಆಟ್ಲಿ ಕುಮಾರ್ ನಿರ್ದೇಶನದ ಜವಾನ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸೌತ್ ಸ್ಟಾರ್ ನಯನತಾರಾ ನಟಿಸುತ್ತಿದ್ದಾರೆ. ನಯನತಾರಾಗೆ ಇದು ಮೊದಲ ಹಿಂದಿ ಸಿನಿಮಾವಾಗಿದ್ದು ಮೊದಲ ಬಾರಿಗೆ ಶಾರುಖ್ ಖಾನ್ ನಟಿಸುತ್ತಿದ್ದಾರೆ. 

click me!