ಕೇರಳ ಮಾಜಿ ಸಿಎಂ ಸಂದರ್ಶನ ಸೇರಿದಂತೆ 'ಕೇರಳ ಸ್ಟೋರಿ'ಗೆ 10 ಕಡೆ ಕತ್ತರಿ

By Kannadaprabha NewsFirst Published May 3, 2023, 10:49 AM IST
Highlights

ಭಾರೀ ವಿವಾದ ಸೃಷ್ಟಿಸಿರುವ 'ದ ಕೇರಳ ಸ್ಟೋರಿ' ಸಿನಿಮಾಗೆ 'ಎ' ಸರ್ಟಿಫಿಕೇಟ್‌ ನೀಡಿರುವ ಕೇಂದ್ರ ಚಲನಚಿತ್ರ ಸೆನ್ಸಾರ್‌ ಮಂಡಳಿಯು, ಚಿತ್ರದಲ್ಲಿ ಕೇರಳದ ಮಾಜಿ ಸಿಎಂ ವಿ.ಎಸ್‌. ಅಚ್ಯುತಾನಂದನ್‌ ಸಂದರ್ಶನದ ಸೇರಿದಂತೆ 10 ದೃಶ್ಯಗಳಿಗೆ ಕತ್ತರಿ ಹಾಕಿದೆ.

ನವದೆಹಲಿ: ಭಾರೀ ವಿವಾದ ಸೃಷ್ಟಿಸಿರುವ 'ದ ಕೇರಳ ಸ್ಟೋರಿ' ಸಿನಿಮಾಗೆ 'ಎ' ಸರ್ಟಿಫಿಕೇಟ್‌ ನೀಡಿರುವ ಕೇಂದ್ರ ಚಲನಚಿತ್ರ ಸೆನ್ಸಾರ್‌ ಮಂಡಳಿಯು, ಚಿತ್ರದಲ್ಲಿ ಕೇರಳದ ಮಾಜಿ ಸಿಎಂ ವಿ.ಎಸ್‌. ಅಚ್ಯುತಾನಂದನ್‌ ಸಂದರ್ಶನದ ಸೇರಿದಂತೆ 10 ದೃಶ್ಯಗಳಿಗೆ ಕತ್ತರಿ ಹಾಕಿದೆ. ಟೀವಿ ಸಂದರ್ಶನವೊಂದರಲ್ಲಿ 'ಕೇರಳದ ಯುವಕರು ಇಸ್ಲಾಂಗೆ ಮತಾಂತರವಾಗುವತ್ತ ಪ್ರಭಾವಿತರಾಗುತ್ತಿರುವುದರಿಂದ ಮುಂದಿನ ಎರಡು ದಶಕಗಳಲ್ಲಿ ಕೇರಳ ಬಹುಪಾಲು ಮುಸ್ಲಿಂ ರಾಜ್ಯವಾಗಲಿದೆ' ಎಂದು ಅಚ್ಯುತಾನಂದನ್‌ ಹೇಳಿದ್ದ ದೃಶ್ಯವನ್ನು ಸಿನಿಮಾದಿಂದ ತೆಗೆದು ಹಾಕಲಾಗಿದೆ.

ಅಲ್ಲದೇ ಸಿನಿಮಾದಲ್ಲಿ ಹಿಂದೂ ದೇವರುಗಳ ಕುರಿತು ಸೂಕ್ತವಲ್ಲದ ರೀತಿಯ ಸಂಭಾಷಣೆ, ಹಾಗೂ ಭಾರತೀಯ ಕಮ್ಯುನಿಸ್ಟರು ದೊಡ್ಡ ಕಪಟಿಗಳು ಎಂಬ ಸಂಭಾಷಣೆಯಿಂದ ಭಾರತೀಯ ಎಂಬ ಪದವನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ. ಚಿತ್ರ ಮೇ.5 ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು ಸುದೀಪ್ತೊ ಸೇನ್‌ ನಿರ್ದೇಶಿಸಿದ್ದಾರೆ.

Latest Videos

The Kerala Story: 32 ಸಾವಿರ ಹುಡುಗಿಯರ ನಾಪತ್ತೆ: ಬೆಚ್ಚಿ ಬೀಳಿಸಿದ ಟ್ರೇಲರ್​!

ದಿ ಕೇರಳ ಸ್ಟೋರಿಗೆ ನಿಷೇಧ ಕೋರಿದ್ದ ಅರ್ಜಿ ತಿರಸ್ಕಾರ

ಕೇರಳದಲ್ಲಿ 32 ಸಾವಿರ ಮಹಿಳೆಯರನ್ನು ಇಸ್ಲಾಂಗೆ ಮತಾಂತರ ಮಾಡಿ ಐಸಿಸ್‌ ಸೇರಿಸಿದ್ದಾರೆ ಎಂಬ ಕಥಾ ಹಂದರವನ್ನು ಹೊಂದಿರುವ 'ದಿ ಕೇರಳ ಸ್ಟೋರಿಸ್‌' ಚಿತ್ರವನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಈ ಚಿತ್ರದಲ್ಲಿ ದೃಶ್ಯ ಹಾಗೂ ಧ್ವನಿ ಮಾಧ್ಯಮದ ಮೂಲಕ ಕೋಮುಗಲಭೆ ಸೃಷ್ಟಿಸಿ ದ್ವೇಷ ಹರಡುವಿಕೆ ಮಾಡಿದ್ದಾರೆ ಎಂದು ಅರ್ಜಿದಾರ ಕಪಿಲ್‌ ಸಿಬಲ್‌ (Kapil sibal) ಹಾಗೂ ನಿಜಾಂ ಪಾಷ (Nizam Pasha) ಸುಪ್ರೀಂ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ಮಾಡಿದ ನ್ಯಾ. ಕೆ.ಎಂ.ಜೋಸೆಫ್‌ (K.M. Joseph) ಹಾಗೂ ನ್ಯಾ. ಬಿ.ವಿ.ನಾಗರತ್ನ (B.V. Nagaratna), ದ್ವೇಷ ಭಾಷಣ ಮಾಡಲು ಹಲವಾರು ಮಾರ್ಗಗಳಿದೆ. ಅಲ್ಲದೇ ಈ ಚಿತ್ರಕ್ಕೆ ಕೇಂದ್ರ ಸೆನ್ಸಾರ್‌ ಮಂಡಳಿಯ ಮಾನ್ಯತೆ ಕೂಡ ದೊರೆತಿದೆ. ಇದು ಒಂದು ವೇದಿಕೆ ಮೇಲೆ ನಿಂತು ದ್ವೇಷ ಭಾಷಣ ಮಾಡಿದ ಹಾಗಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿದರು. ಜೊತೆಗೆ ಇಂಥ ಅರ್ಜಿಯನ್ನು ಸೂಕ್ತ ಸಂಸ್ಥೆಗಳ ಮುಂದೆ ಹಾಗೂ ಮೊದಲು ಹೈಕೋರ್ಟ್‌ನಲ್ಲಿ (High court) ಪ್ರಶ್ನಿಸಿ ಎಂದು ಹೇಳಿ ಅರ್ಜಿ ವಜಾ ಮಾಡಿತು.

'ದಿ ಕೇರಳ ಸ್ಟೋರಿ' ಸಿನಿಮಾ ವಿರುದ್ಧ ಆಕ್ರೋಶ, ಬ್ಯಾನ್‌ಗೆ ಹೆಚ್ಚಿದ ಒತ್ತಾಯ; ಅಂತದ್ದೇನಿದೆ ಈ ಚಿತ್ರದಲ್ಲಿ?

ತಮಿಳುನಾಡಿನಲ್ಲೂ ವಿರೋಧ ಗುಪ್ತಚರ ವರದಿ

ಇನ್ನೊಂದೆಡೆ ತಮಿಳುನಾಡಿನಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಕೇರಳದಲ್ಲಿ ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರೆ, ತಮಿಳುನಾಡಿನಲ್ಲಿ 'ದಿ ಕೇರಳ ಸ್ಟೋರಿ' (The Kerala Story) ಸಿನಿಮಾ ಬಿಡುಗಡೆ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡಿನಲ್ಲಿ ಈ ಸಿನಿಮಾ ಬಿಡುಗಡೆಯಾದರೆ ಕೆಲವು ಸಮುದಾಯಗಳಿಂದ ವಿರೋಧ ವ್ಯಕ್ತವಾಗಲಿದೆ ಎನ್ನಲಾಗಿದೆ. ಹಾಗಾಗಿ ತಮಿಳುನಾಡಿನಲ್ಲಿ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಅನುಮತಿ ನೀಡದಂತೆ ರಾಜ್ಯ ಗುಪ್ತಚರ ಸಂಸ್ಥೆ (intelligence department) ಸರ್ಕಾರಕ್ಕೆ ಶಿಫಾರಸು ಮಾಡಿದೆ.

click me!