ಸಮಂತಾರಿಂದ ದೂರವಾದ್ಮೇಲೆ KISS ಕೊಟ್ಟವರೆಷ್ಟು? ನಾಗಚೈತನ್ಯ ಬಾಯಿಬಿಟ್ಟ ರಹಸ್ಯ

Published : May 02, 2023, 05:53 PM IST
ಸಮಂತಾರಿಂದ ದೂರವಾದ್ಮೇಲೆ KISS ಕೊಟ್ಟವರೆಷ್ಟು? ನಾಗಚೈತನ್ಯ ಬಾಯಿಬಿಟ್ಟ ರಹಸ್ಯ

ಸಾರಾಂಶ

ಸಮಂತಾ ಮತ್ತು ನಾಗಚೈತನ್ಯ ಜೋಡಿ ದೂರವಾಗಿ ಮೂರು ವರ್ಷಗಳು ಕಳೆದಿವೆ. ಆದರೂ ಇವರ ಡಿವೋರ್ಸ್​ ಸುದ್ದಿ ಚರ್ಚೆಯಲ್ಲಿದ್ದು ಇದೀಗ ಕಿಸ್​ ಕುರಿತು ನಾಗಚೈತನ್ಯ ಮನಬಿಚ್ಚಿ ಮಾತನಾಡಿದ್ದಾರೆ.   

ಹಿಂದೊಮ್ಮೆ ಇದ್ದರೆ ಇಂಥ ಜೋಡಿ ಇರಬೇಕು ಎಂದು ಹೇಳಿದ್ದು ನಟ ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ರುತ್​ ಪ್ರಭು ಸ್ಟಾರ್​ ಜೋಡಿಗಳ ಕುರಿತು.  ಆದರೆ ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿತು ಈ ಜೋಡಿ.  2020ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದು ಇದಾಗಲೇ ಮೂರು ವರ್ಷ ಗತಿಸಿದೆ. ಆದರೆ ಇವರ ಡಿವೋರ್ಸ್​ ಸುದ್ದಿ ಮಾತ್ರ ಇಂದಿಗೂ ಸದ್ದು ಮಾಡುತ್ತಲೇ ಇದೆ.  ಟಾಲಿವುಡ್ ಸ್ಟಾರ್ ನಾಗಚೈತನ್ಯ, ಸಮಂತಾ ಅವರಿಂದ ದೂರ ಆದ ಬಳಿಕ ಡೇಟಿಂಗ್ (Dating) ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು.  ಇಬ್ಬರೂ ಲಂಡನ್ ಹೋಟೆಲ್‌ ಒಂದರಲ್ಲಿ ಸಿಕ್ಕಿ ಕೂಡ ಬಿದ್ದಿದ್ದರು.  ಇದೇ ಕಾರಣಕ್ಕೆ ನಾಗಚೈತನ್ಯ ವಿಚ್ಛೇದನದ ಬಳಿಕ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.  

ಅದೇ ಇನ್ನೊಂದೆಡೆ, ಸಮಂತಾ (Samantha Ruth Prabhu) ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಇದೇ ತಿಂಗಳು ರಿಲೀಸ್ ಆಗಲಿದೆ. ಶಾಕುಂತಲಂ (Shakuntalam) ಪ್ರಚಾರ ನಿಮಿತ್ತ  ಸಂದರ್ಶನಗಳನ್ನು ನೀಡುತ್ತಿರೋ ಸಮಂತಾ,   ಪತಿ ನಾಗ ಚೈತನ್ಯ ಅವರ ಬಗ್ಗೆಯೂ ಮಾತನಾಡಿದ್ದರು. ಅವರಿಂದ ತಾವು ದೂರ ಆದ ಬಳಿಕ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದ ನಟಿ, ನನ್ನ ಜೀವನದಲ್ಲಿ ಏನನ್ನು ಬದಲಾಯಿಸಿಕೊಳ್ಳಲು ಬಯಸುವುದಿಲ್ಲ ಅಲ್ಲದೇ ತೊಂದರೆಗೆ ಸಿಲುಕಿಕೊಳ್ಳಲು ಬಯಸಲ್ಲ ಎಂದಿದ್ದರು.  ನಾನು ಏನನ್ನೂ ಮರೆಯಲು ಬಯಸುವುದಿಲ್ಲ ಏಕೆಂದರೆ ಎಲ್ಲವೂ ನನಗೆ ಜೀವನದಲ್ಲಿ ಏನನ್ನಾದರೂ ಕಲಿಸಿದೆ, ಆದ್ದರಿಂದ ನಾನು ಮರೆಯಲು ಬಯಸುವುದಿಲ್ಲ ಎನ್ನುವ ಮೂಲಕ  ನಾಗ ಚೈತನ್ಯ ಅವರ ಮೇಲೆ ಇನ್ನೂ ಇರುವ ಪ್ರೀತಿಯನ್ನು ತೋರಿಸಿದ್ದರು.

ನಟಿ ಸಮಂತಾರಿಂದ ಬೇರ್ಪಟ್ಟಿದ್ದಕ್ಕೆ ನಾಗಚೈತನ್ಯ ಹೇಳ್ತಿರೋದೇನು?

ಆದರೆ ಇದೀಗ ಸಮಂತಾ ಅವರ ಜೊತೆ ಸಂಬಂಧ ಮುರಿದುಕೊಂಡ ಬಳಿಕ ನಾಗಚೈತನ್ಯ  ಕಿಸ್ಸಿಂಗ್ ವಿಚಾರವಾಗಿ ಶಾಕಿಂಗ್ ಹೇಳಿಕೆ ನೀಡಿದ್ದು, ಇದೀಗ ಭಾರಿ ವೈರಲ್​ ಆಗುತ್ತಿದೆ. ಯೂಟ್ಯೂಬರ್ ಇರ್ಫಾನ್ ಜೊತೆ ಸಂದರ್ಶನ ಕಾರ್ಯಕ್ರಮದಲ್ಲಿ ಈ ವಿಷಯವನ್ನು ನಟ ನಾಗಚೈತನ್ಯ ಬಹಿರಂಗಪಡಿಸಿದ್ದಾರೆ.  ಈ ವೇಳೆ ಯೂಟ್ಯೂಬರ್​ ತಮ್ಮ ಸಂದರ್ಶನದ ಭಾಗವಾಗಿರುವ ಟ್ರೂತ್​ ಆ್ಯಂಡ್​ ಡೇರ್ ಗೇಮ್ (Truth and Dare Game) ಆಡುವಾಗ  ನಾಗ ಚೈತನ್ಯ  ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಇದುವರೆಗೂ ನೀವೂ ಎಷ್ಟು ಜನರಿಗೆ ಕಿಸ್ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅರೆಕ್ಷಣ ನಕ್ಕ ನಾಗಚೈತನ್ಯ ಕೌಂಟ್​ ಮಾಡುವಂತೆ ಮಾಡಿದ್ದಾರೆ. ಆಮೇಲೆ,  "ಅಬ್ಬಾ ನನಗೆ ಗೊತ್ತಿಲ್ಲಪ್ಪ. ನಾನು ಎಣಿಕೆ ಮಾಡಿಲ್ಲ ಎನ್ನುವ ಮೂಲಕ ಕೌಂಟ್​ಲೆಸ್ ಎಂದು ನಕ್ಕಿದ್ದಾರೆ. ಅರ್ಥಾತ್​ ಲೆಕ್ಕವಿಲ್ಲದಷ್ಟು ಬಾರಿ ಅವರು ಕಿಸ್​ (Kiss) ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. 

ಇದೇ ವೇಳೆ  ನಾಗ ಚೈತನ್ಯ ಅವರಿಗೆ ಯೂಟ್ಯೂಬರ್​,  ನಿಮ್ಮ ಜೀವನದ ಯಾವ ನಿರ್ಧಾರದ ಬಗ್ಗೆ ನಿಮಗೆ ಹೆಚ್ಚು ವಿಷಾದವಿದೆ ಎಂದು ಕೇಳಿದ ಪ್ರಶ್ನೆಗೆ ನಾಗ ಚೈತನ್ಯ ಉತ್ತರ ನೀಡಿದ್ದಾರೆ. ನೇರವಾಗಿಯೇ ಉತ್ತರಿಸಿದ ನಾಗ ಚೈತನ್ಯ, ನನ್ನ ಜೀವನದ ಯಾವುದೇ ನಿರ್ಧಾರದ ಬಗ್ಗೆಯೂ ನನಗೆ ವಿಷಾದ ಇಲ್ಲ. ಎಲ್ಲವೂ ಒಂದು ರೀತಿಯ ಪಾಠ ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಇನ್ನೊಂದು ಸಂದರ್ಶನದಲ್ಲಿಯೂ (Interview) ನಾಗ ಚೈತನ್ಯ ಅವರಿಗೆ ಇದೇ ಪ್ರಶ್ನೆ ಎದುರಾಗಿತ್ತು. ಆಗ ಅವರು,  ಸಮಂತಾ ಅವರ ಬಗ್ಗೆ ನಟ ಏನಾದರೂ ಸುಳಿವು ನೀಡಬಹುದೇ ಎಂದುಕೊಳ್ಳಲಾಗಿತ್ತು. ಆದರೆ ಅದಕ್ಕೆ ಉತ್ತರಿಸಿದ ನಾಗಚೈತನ್ಯ ಅವರು,  ನನ್ನ ಜೀವನದ ಯಾವುದೇ ನಿರ್ಧಾರದ ಬಗ್ಗೆಯೂ ನನಗೆ ವಿಷಾದ ಇಲ್ಲ. ಎಲ್ಲವೂ ಒಂದು ರೀತಿಯ ಪಾಠ ಎಂದು ಹೇಳಿ ಮುಂದೆ ಯಾವ ಪ್ರಶ್ನೆಗೂ ಅವಕಾಶ ನೀಡಲಿಲ್ಲ ಎಂದಿದ್ದರು. ಇದರಿಂದಾಗಿ ನಾಗ ಚೈತನ್ಯಗೆ ಸಮಂತಾ ಅವರಿಂದ ವಿಚ್ಛೇದನ ಪಡೆದ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ಕಾಣುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ದೂರವಾದ್ರೂ ಹೊಟ್ಟೆ ಬಳಿ ನಾಗಚೈತನ್ಯ ಕುರುಹು: ಯಾಕಪ್ಪಾ ಇದು ಅಂತಿದ್ದಾರೆ ಫ್ಯಾನ್ಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!