Pathan Song;'ಬೇಷರಂ ರಂಗ್' ವಿವಾದದ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ಶಾರುಖ್ ಖಾನ್

By Shruthi Krishna  |  First Published Dec 16, 2022, 11:27 AM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ 'ಬೇಷರಂ ರಂಗ್' ಹಾಡಿನ ವಿವಾದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 


ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ 'ಬೇಷರಂ ರಂಗ್' ಹಾಡಿನ ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೇಷರಂ ರಂಗ್ ಹಾಡು ರಿಲೀಸ್ ಆದ ಬೆನ್ನಲ್ಲೇ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದೆ. ಹಾಡು ಅಶ್ಲೀಲವಾಗಿದೆ, ಕೇಸರಿ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಪಠಾಣ್ ಸಿನಿಮಾ ಬೈಕಾಟ್‌ಗೆ ಕೆರೆಕೊಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪಠಾಣ್ ಬೈಕಾಟ್   ಈ ಬಗ್ಗೆ ಈಗ ಮೊದಲ ಬಾರಿಗೆ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಪಠಾಣ್ ಸಿನಿಮಾ ಬಗ್ಗೆ ಉಲ್ಲೇಖಿಸದೇ ಶಾರುಖ್ ಪರೋಕ್ಷವಾಗಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದರು.  ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022 ಕಾಣಿಸಿಕೊಂಡಿದ್ದ ಶಾರುಖ್ ಈ ಬಗ್ಗೆ ಮಾತನಾಡಿದ್ದಾರೆ. 

ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡು ವಿವಾದಕ್ಕೀಡಾಗಿರುವಂತೆಯೇ ಈ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಶಾರುಖ್ ಖಾನ್, ಏನೇ ಆದರು ನಾವು ಪಾಸಿಟಿವ್ ಆಗಿ ಇರುತ್ತೇವೆ ಎಂದು ಹೇಳಿದ್ದಾರೆ. 

Tap to resize

Latest Videos

'ಜಗತ್ತು ನಾರ್ಮಲ್ ಆಗಿದೆ. ನಾವೆಲ್ಲರೂ ಸಂತೋಷವಾಗಿದ್ದೇವೆ, ನಾನು ಅತ್ಯಂತ ಸಂತೋಷವಾಗಿದ್ದೇನೆ. ಮತ್ತು ನಾನು, ನೀವೆಲ್ಲರೂ ಮತ್ತು ಎಲ್ಲಾ ಸಕಾರಾತ್ಮಕ ಜನರು ಇದ್ದಾರೆ. ಎಂದು ಹೇಳಲು ನನಗೆ ಯಾವುದೇ ಅಭ್ಯಂತರವಿಲ್ಲ' ಎಂದು ಹೇಳಿದರು. 'ವಿವಿಧ ಜಾತಿ, ಬಣ್ಣ, ಧರ್ಮಗಳ ಜನರು ಪರಸ್ಪರ ಅರಿತುಕೊಳ್ಳಲು ಸಿನಿಮಾ ಉತ್ತಮ ವೇದಿಕೆಯಾಗಿದೆ' ಎಂದು ಶಾರುಖ್ ಹೇಳಿದ್ದಾರೆ. ಪಠಾಣ್ ಚಿತ್ರದ 'ಬೇಷರಮ್ ರಂಗ್' ಹಾಡಿನ ವಿವಾದ ಭುಗಿಲೆದ್ದ ಬೆನ್ನಲ್ಲೇ ಶಾರುಖ್ ಈ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ. 

'ಸಿನಿಮಾವು ಏಕತೆ, ಸಹೋದರತ್ವ ಮತ್ತು ಮಾನವೀಯ ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತದೆ. ಸಹೋದರತ್ವದ ಮಾನವೀಯತೆಯ ಅಪಾರ ಸಾಮರ್ಥ್ಯವನ್ನು ಸಿನಿಮಾ ಮುನ್ನೆಲೆಗೆ ತರುತ್ತದೆ. ಮನುಕುಲದ ದೊಡ್ಡ ಸ್ವಭಾವದ ಬಗ್ಗೆ ಮಾತನಾಡುವ ಪ್ರತಿ-ನಿರೂಪಣೆಯನ್ನು ಉಳಿಸಿಕೊಳ್ಳಲು ಸಿನಿಮಾ ಅತ್ಯುತ್ತಮ ವೇದಿಕೆಯಾಗಿದೆ ಎಂದು ಶಾರುಖ್ ಹೇಳಿದರು. 

Boycott Pathaan ಅಶ್ಲೀಲವಾಗಿ ಕಾಣಿಸಿಕೊಂಡ ದೀಪಿಕಾ; ಶಾರುಖ್ 'ಪಠಾಣ್' ಚಿತ್ರ ಬಹಿಷ್ಕಾರಕ್ಕೆ ಒತ್ತಡ

ಪಠಾಣ್ ಹಾಡಿನ ಮೂಲಕ ಕಿಂಗ್ ಖಾನ್ ಶಾರುಖ್​ ಖಾನ್​ ಅನೇಕ ವರ್ಷಗಳ ಬಳಿಕ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿದ್ದ ಪಠಾಣ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿ ಕೆಲವೇ ಕೆಲವೇ ಗಂಟೆಗೆ ಮಿಲಿಯನ್ ಗಟ್ಟಲೇ ವ್ಯೂವ್ಸ್ ಪಡೆದುಕೊಂಡಿದೆ. ಈ ಹಾಡನ್ನು ಸಿಕ್ಕಾಪಟ್ಟೆ ಗ್ಲಾಮರಸ್​ ಆಗಿ ಚಿತ್ರಿಸಲಾಗಿದೆ. ಈ ಹಾಡಿನಲ್ಲಿ ನಟಿ ದೀಪಿಕಾ ಬಿಕಿನಿ ಹಾಗೂ ಸ್ವಿಮ್ ಸೂಟ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ದೀಪಿಕಾ ಬೋಲ್ಡ್ ಅವತಾರ ಕಂಡು ನೆಟ್ಟಿಗರು ಸಖತ್ ಹಾಟ್ ಎನ್ನುತ್ತಿದ್ದಾರೆ. ಹಾಗಾಗಿ ಅನೇಕರು ಇದೊಂದು ‘ಅಶ್ಲೀಲ ಸಾಂಗ್​’ ಎಂದು ಕರೆಯುತ್ತಿದ್ದಾರೆ. 

'ಬೇಷರಂ ರಂಗ್' ವಿವಾದ; ಕೇಸರಿ ಬಿಕಿನಿ ಧರಿಸಿ 'ನಾಚಿಕೆಯಿಲ್ಲದ ಬಣ್ಣ' ಎಂದ ದೀಪಿಕಾ ವಿರುದ್ಧ ನೆಟ್ಟಿಗರ ಕಿಡಿ

ಅಂದಹಾಗೆ ಪಠಾಣ್ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳ ಹೆೇಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೋ ಹಾಗೆ ಶಾರುಖ್ ಕೂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗ್ಯಾಪ್‌ನ ಬಳಿಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಲ್ಲದೆ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್​ ಖಾನ್​ ಅವರಿಗಿದೆ. ಈ ಚಿತ್ರಕ್ಕಾಗಿ ಶಾರುಖ್ ತುಂಬಾ ಶ್ರಮಪಟ್ಟಿದ್ದು ದೇಹ ಹುರಿಗೊಳಿಸಿ 6 ಪ್ಯಾಕ್​​ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಶಾರುಖ್ ಅವರ 6 ಪ್ಯಾಕ್ ದರ್ಶನ ಆಗಿದೆ. ಈ ವಯಸ್ಸಿನಲ್ಲೂ ಶಾರುಖ್ ಫಿಟ್ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

click me!