
ರಶ್ಮಿಕಾ ಮಂದಣ್ಣನಿಗೆ ಕಿರಿಕ್ ಮಾಡಿ ಮಾಡಿ ಸುಸ್ತಾದಂತಿದೆ. ಟ್ರೋಲ್ ಬೋರಾದಂತಿದೆ. ಇಷ್ಟೂ ಸಮಯ ಬೈತಿದ್ದ ನೆಟಿಜನ್ಸ್‌ಸಹ ಇದೀಗ ರಶ್ಮಿಕಾನ ಹೊಗಳೋಕೆ ಶುರು ಮಾಡಿದ್ದಾರೆ. ಅಂಥಾ ಕೆಲಸ ಏನ್ ಮಾಡಿದ್ದಾರೆ ರಶ್ಮಿಕಾ? ರಶ್ಮಿಕಾ ಮಂದಣ್ಣ ಟ್ರೋಲಿಗೆ ಗುರಿಯಾದಷ್ಟು ಬೇರೆ ಯಾವ ದಕ್ಷಿಣ ಭಾರತೀಯ ನಟಿಯೂ ಟೀಕೆಗೆ ಒಳಗಾಗಿಲ್ಲವೋ ಏನೋ. ತಿಳಿದೋ ತಿಳಿಯದೆಯೋ ಒಂದಿಲ್ಲೊಂದು ಎಡವಟ್ಟು ಮಾಡುತ್ತಲೋ, ಉಡಾಫೆಯ ಹೇಳಿಕೆ ಕೊಡೋ ಮೂಲಕವೋ ರಶ್ಮಿಕಾ ನೆಗೆಟಿವ್ ಫೀಡ್ ಬ್ಯಾಕ್ ಪಡೆಯುತ್ತಲೇ ಇದ್ದಾರೆ. ಈ ವರ್ಷ ಆಕೆ ಚಡ್ಡಿ ಜಾಹೀರಾತಿನಲ್ಲಿ ವಿಕಿ ಕೌಶಲ್ ಜೊತೆ ಕಾಣಿಸಿಕೊಂಡಾಗ ಜನ ಬಾಯಿಗೆ ಬಂದ ಹಾಗೆ ಮಾತಾಡಿಕೊಂಡರು. ಆಮೇಲೆ ಏನೇನಕ್ಕೋ ಟ್ರೋಲ್‌ಗೆ ತುತ್ತಾದರು. ರೀಸೆಂಟ್ ಆಗಿ ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಆಕೆಯ ಹೇಳಿಕೆ ತೀವ್ರ ಟೀಕೆಗೆ ಗುರಿಯಾಯ್ತು. ಕಾಂತಾರ ಸಿನಿಮಾ ತಾನು ನೋಡಿಲ್ಲ ಅಂದಿದ್ದಕ್ಕೂ ಜನ ಬೈದರು. ಈಗ ಈ ನಟಿಗೆ ಕೊಂಚ ಬುದ್ಧಿ ಬಂದ ಹಾಗಿದೆ ಅಂತ ನೆಟಿಜನ್ಸ್ ಮಾತಾಡ್ತಿದ್ದಾರೆ. ಕಾರಣ ಈ ಹುಡುಗಿ ಇದೀಗ ಒಂದೊಳ್ಳೆ ಕೆಲ್ಸ ಮಾಡಿ ಶಹಭಾಷ್ ಹುಡ್ಗಿ ಅಂತ ಬೆನ್ನು ತಟ್ಟಿಸಿಕೊಳ್ತಿದ್ದಾರೆ. ಅದು ಈಕೆ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಕೈಗೊಳ್ತಿರೋ ಜಾಗೃತಿ ಅಭಿಯಾನ.
ರಶ್ಮಿಕಾ ಮಂದಣ್ಣನ ಹೊಸ ಮುಖವನ್ನು ಅವರ ಇನ್‌ಸ್ಟಾ ಪೋಸ್ಟ್ ಪರಿಚಯಿಸಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯವಶ್ಯಕ. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಅಂತ ರಶ್ಮಿಕಾ ಈಗ ಜಾಗೃತಿ ಮೂಡಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣರ ಇನ್ಸ್ಟಾಗ್ರಾಮ್ ಖಾತೆಯಲ್ಲೀಗ ಅವರ ಹೆಸರು ಉಲ್ಟಾ ಆಗಿದೆ. ಇದಕ್ಕೆ ಒಂದೊಳ್ಳೆ ಕಾರಣ ಇದೆ. ಅದು ಒಳ್ಳೆ ಕಾರಣ ಅನ್ನೋದೇ ತುಂಬಾ ವಿಶೇಷವಾಗಿದೆ. ಈಗ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಬೇಕು. ಅವರಿಗೂ ಅದರ ಹಕ್ಕು ಇದೆ ಅಂತ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ತನ್ನ ಹೆಸರನ್ನ ಉಲ್ಟಾ ಬರೆದಿದ್ದಾರೆ ರಶ್ಮಿಕಾ. ಇದರ ಅರ್ಥ ಇಷ್ಟೇ. ಶಿಕ್ಷಣ ಕಲಿಯದೇ ಇರೋ ಹೆಣ್ಣುಮಕ್ಕಳಿಗೆ ಅಕ್ಷರಗಳು ಹೀಗೆ ಕಾಣುತ್ತವೆ. ಅದಕ್ಕೇನೆ ಅದರ ಬಗ್ಗೆ ಜಾಗೃತಿ ಮೂಡಿಸಲು ಹೆಸರನ್ನ ಉಲ್ಟಾ ಬರೆದಿರೋದಾಗಿಯೆ ರಶ್ಮಿಕಾ ಹೇಳಿಕೊಂಡಿದ್ದಾರೆ.
ರಶ್ಮಿಕಾ - ದೇವರಕೊಂಡ ಸೇರಿ ಬಾಲಿವುಡ್‌ನಲ್ಲಿ ಇವರು ಮಾಡಲಿಲ್ಲ ಕಮಾಲ್!
'ನೀವು ನನ್ನನ್ನು ಸ್ಕ್ರೀನ್ ಮೇಲೆ ನೋಡೋದಕ್ಕೂ ಮೊದಲು ಕಣ್ತುಂಬ ದೊಡ್ಡ ಕನಸುಗಳನ್ನು ತುಂಬಿಕೊಂಡಿರುವ ಚಿಕ್ಕ ಹುಡುಗಿ. ನನ್ನ ಬದುಕಿನಲ್ಲಿ ಬಂದು ಅವಕಾಶಗಳು, ಕಲಿಕೆ, ನನ್ನ ಪರಿಶ್ರಮ ಎಲ್ಲ ನನ್ನನ್ನು ಇಲ್ಲೀವರೆಗೆ ತಂದು ನಿಲ್ಲಿಸಿದೆ. ಒಬ್ಬ ಹುಡುಗಿ ತನ್ನ ಮುಂದಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕಾದರೆ, ತನ್ನ ಮುಂದಿರೋ ಅವಕಾಶಗಳೇನು ಅಂತ ತಿಳಿಯಬೇಕಾದರೆ ಆಕೆಗೆ ಶಿಕ್ಷಣ ಸಿಗಬೇಕು. ಶಿಕ್ಷಣ ಆಕೆಯಲ್ಲಿ ತುಂಬುವ ಧೈರ್ಯ ದೊಡ್ಡದು. ಆಕೆ ಬದುಕಲ್ಲಿ ಬೆಳಕಾಗಿ ಬರುವ ಶಿಕ್ಷಣ ಆಕೆ ಬದುಕಿನಲ್ಲಿ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಮ್ಮ ದೇಶದಲ್ಲಿ ಇನ್ನೂ ಎಷ್ಟೋ ಜನ ಹೆಣ್ಣುಮಕ್ಕಳು ಶಿಕ್ಷಣ(Education)ದಿಂದ ವಂಚಿತರಾಗಿದ್ದಾರೆ. ಒಬ್ಬ ಹುಡುಗಿ ಶಾಲೆ ಕಲಿತರೂ ದೇಶಕ್ಕಾಗುವ ಲಾಭ ದೊಡ್ಡದು' ಅಂತ ರಶ್ಮಿಕಾ ಸ್ಪೂರ್ತಿ(Inspiration) ತುಂಬುವ ಮಾತುಗಳನ್ನು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಜೊತೆ ತನ್ನ ಬಾಲ್ಯದ ಫೋಟೋವನ್ನೂ ರಶ್ಮಿಕಾ ಹಂಚಿಕೊಂಡಿದ್ದಾರೆ. 'ನಿಮ್ಮ ಬಾಲ್ಯದ ಫೋಟೋ(Photo) ಚೆನ್ನಾಗಿದೆ. ನಿಮ್ಮ ಈ ಹೊಸ ಅಭಿಯಾನಕ್ಕೆ ಒಳ್ಳೆಯದಾಗಲಿ' ಅಂತ ಜನ ಹಾರೈಸುತ್ತಿದ್ದಾರೆ. ಇನ್ನೂ ಕೆಲವರು, 'ರಶ್ಮಿಕಾನ ಬರೀ ಟ್ರೋಲ್(Troll) ಮಾಡೋದಲ್ಲ, ಆಕೆ ಮಾಡಿರೋ ಒಳ್ಳೆ ಕೆಲಸವನ್ನೂ ನೋಡ್ರೋ' ಅಂತ ಕಮೆಂಟ್ ಮಾಡ್ತಿದ್ದಾರೆ.
ಬಾ ರೇ ಬಾ..!ರಶ್ಮಿಕಾ ಮಂದಣ್ಣ ಮತ್ತೊಂದು ಹಿಂದಿ ಚಿತ್ರ ರಿಲೀಸ್, ತರಾಟೆಗೆ ತೆಗೆದುಕೊಳ್ಳಲು ಕನ್ನಡಿಗರು ರೆಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.