ಅಮ್ಮ ಕೊನೆಯುಸಿರೆಳೆವಾಗ ತುಂಬಾ ಹರ್ಟ್ ಮಾಡಿದ್ದೆ: ತಾಯಿಯ ಕೊನೆ ಕ್ಷಣದ ಬಗ್ಗೆ ಶಾರುಖ್ ಭಾವುಕ ಮಾತು

By Shruiti G KrishnaFirst Published Sep 12, 2022, 5:27 PM IST
Highlights

ಐಸಿಯುನಲ್ಲಿದ್ದ ತನ್ನ ತಾಯಿಯನ್ನು ಉಳಿಕೊಳ್ಳಲು ಶಾರುಖ್ ತುಂಬಾ ಪ್ರಯತ್ನ ಪಟ್ಟಿದ್ದರು. 1991ರಲ್ಲಿ ಶಾರುಖ್ ತಾಯಿ ನಿಧನಹೊಂದಿದರು. ತಾಯಿಯ ಕೊನೆಯಕ್ಷಣದಲ್ಲಿ ತುಂಬಾ ಹರ್ಟ್ ಮಾಡಿದ್ದೆ ಎಂದು ಹೇಳಿದ್ದಾರೆ. 

ಶಾರುಖ್ ಖಾನ್ ಇಂದು ಸ್ಟಾರ್ ನಟನಾಗಿ ಬೆಳೆದಿದ್ದಾರೆ. ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದಾರೆ. ಇಡೀ ವಿಶ್ವವೇ ಶಾರುಖ್ ಅವರನ್ನು ಪ್ರೀತಿಸುತ್ತದೆ, ಗೌರವ ನೀಡುತ್ತೆ. ಇಷ್ಟು ದೊಡ್ಡ ಮಟ್ಟದ ಸಕ್ಸಸ್, ಪ್ರೀತಿ, ಮೆಚ್ಚುಗೆಗಳಿಸಿದ್ದನ್ನು ನೋಡಲು ಅವರ ತಂದೆ-ತಾಯಿ ಜೊತೆಯಲ್ಲಿಲ್ಲ. ಹೌದು ಶಾರುಖ್ ಈ ವಿಚಾರದಲ್ಲಿ ನತದೃಷ್ಟ ಎಂದರೆ ತಪ್ಪಿಲ್ಲ. ಚಿತ್ರರಂಗದಲ್ಲಿ ಯಶಸ್ಸು ಕಾಣುವ ಮೊದಲೇ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡರು. ತಂದೆ ಮಿರ್ ತಾಜ್ ಮೊಹಮ್ಮದ್ ಹಾಗೂ ತಾಯಿ ಲತೀಫ್ ಫಾತಿಮಾ ಅವರನ್ನು ಶಾರುಖ್ ಬಹುಬೇಗ ಕಳೆದುಕೊಂಡರು. ಈ ಬಗ್ಗೆ ಶಾರಖ್ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. 2014ರಲ್ಲಿ ಪ್ರಸಾರವಾಗುತ್ತಿದ್ದ ಅನುಪಮ್ ಖೇರ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲಿ ಶಾರುಖ್ ತನ್ನ ತಾಯಿ ಕೊನೆಯ ಕ್ಷಣಗಳ ಬಗ್ಗೆ ಬಹಿರಂಗ ಪಡಿಸಿದ್ದರು. ತಾಯಿಯ ಕೊನೆಕ್ಷಣದಲ್ಲಿ ತುಂಬಾ ಹರ್ಟ್ ಮಾಡಿದ್ದೆ ಎಂದು ಹೇಳಿದ್ದರು. 

1981ರಲ್ಲಿ ತಂದೆ ನಿಧನ

ಅನುಪಮ್ ಖೇರ್ ಅವರ ಕುಚ್ ಬಿ ಹೋ ಸಕ್ತಾ ಹೈ ಶೋನಲ್ಲಿ ಶಾರುಖ್ ಖಾನ್ ತನ್ನ ಪೋಷಕರ ಸಾವಿನ ಬಗ್ಗೆ ಮಾತನಾಡಿದ್ದರು. ಶಾರುಖ್ ತಂದೆ ಗಂಟಲು ಕ್ಯಾನ್ಸರ್ ನಿಂದ ನಿಧನಹೊಂದಿರು. 1981ರಲ್ಲಿ ಶಾರುಖ್ ತಂದೆಯನ್ನು ಕಳೆದುಕೊಂಡರು. ಆಸ್ಪತ್ರೆಯಿಂದ ಮನೆಗೆ ಮರಳಿದೆ ಕೆಲವೇ ಗಂಟೆಯಲ್ಲಿ ತಂದೆ ತೀರಿಹೋದರು ಎಂದು ಶಾರುಖ್ ವಿವರಿಸಿದರು. 'ನಾನು ವೆನಿಲ್ಲಾ ಐಸ್ ಕ್ರೀಮ್ ತಿನ್ನುತ್ತಿರುವುದನ್ನು ನೋಡಿದ್ದು ಅವರ ಕೊನೆಯ ದೃಶ್ಯವಾಗಿತ್ತು. ಮರುದಿನ ಬೆಳಗ್ಗೆ ಅವರು ನಿಧನಹೊಂದಿದಾಗ ಅವರ ತಣ್ಣನೆಯ ಪಾದ ಮುಟ್ಟಿದಾಗ ಅವರ ಮುಖ ನೋಡಲು ಆಗುತ್ತಿರಲಿಲ್ಲ' ಎಂದು ಹೇಳಿದರು.  

1991ರಲ್ಲಿ ತಾಯಿಯನ್ನು ಕಳೆದುಕೊಂಡ ಶಾರುಖ್  
   
ಇನ್ನು ತಾಯಿಯ ಅಂತಿಮ ದಿನಗಳ ಬಗ್ಗೆಯೂ ವಿವರಿಸಿದರು. ತಂದೆಯನ್ನು ಕಳೆದುಕೊಂಡು 10 ವರ್ಷಕ್ಕೆ ತಾಯಿಯನ್ನು ಶಾರುಖ್ ಕಳೆದುಕೊಂಡರು. 1991ರಲ್ಲಿ ಶಾರುಖ್ ತಾಯಿ ನಿಧನಹೊಂದಿದರು. ತಂದೆಯನ್ನು ಕಳೆದುಕೊಂಡು ಕಷ್ಟಕ್ಕೆ ಸಿಲುಕ್ಕಿದ್ದ ಶಾರುಖ್ ಕುಟುಂಬ ತಾಯಿಯನ್ನು ಕಳೆದುಕೊಂಡು ಮತ್ತಷ್ಟು ಕಷ್ಟ ಅನುಭವಿಸುವಂತಾಯಿತು ಎಂದರು. ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದರು ಎನ್ನುವ ಹಾಗೆ ಇದ್ದರು. ಆದರೆ ಒಂದು ದಿನ ದಿಡೀರ್ ಆರೋಗ್ಯ ಕೈ ಕೊಟ್ಟಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಮಧುಮೇಹ ಇರುವುದು ಗೊತ್ತಾಯಿತು. ಬಳಿಕ ಒಂದೇ ತಿಂಗಳಿಗೆ ಅಮ್ಮ ನಿಧನಹೊಂದಿರು' ಎಂದು ಶಾರುಖ್ ಹೇಳಿದರು. 

ತಾಯಿಯನ್ನು ಉಳಿಸಿಕೊಳ್ಳಲು ಕಷ್ಟಪಟ್ಟಿದ್ದ ಕಿಂಗ್ ಖಾನ್ 

ಐಸಿಯುನಲ್ಲಿದ್ದ ತನ್ನ ತಾಯಿಯನ್ನು ಉಳಿಕೊಳ್ಳಲು ಶಾರುಖ್ ತುಂಬಾ ಪ್ರಯತ್ನ ಪಟ್ಟಿದ್ದರು. ತಾಯಿಗಾಗಿ  ದೆಹಲಿಯ ಬಾತ್ರಾ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿಯೂ ಪ್ರಾರ್ಥನೆ ಮಾಡಿದ್ದ ಬಗ್ಗೆ ಬಹಿರಂಗ ಪಡಿಸಿದ್ದರು. 'ಅಮ್ಮ ಐಸಿಯುನಲ್ಲಿ ಇದ್ದರು. ನಮಗೆ ಐಸಿಯುಗೆ ಹೋಗಲು ಅನುಮತಿ ಇರಲಿಲ್ಲ. ಯಾರೋ ಒಬ್ಬರು ನನಗೆ ಹೇಳಿದರು, ನೀವು ಪ್ರಾರ್ಥನೆ ಮಾಡುತ್ತೀರಿ ಅಲ್ಲಾ ನಿಮ್ಮ ಮಾತುಗಳನ್ನು ಕೇಳುವುದರಲ್ಲಿ ನಿರತರಾಗಿರುತ್ತಾರೆ ಎಂದು. ನಾನು ದುವಾವನ್ನು 100 ಬಾರಿ ಹೇಳಿದೆ. ನಾನು ಪ್ರಾರ್ಥನೆ ಮಾಡುವಾಗಲೇ ವೈದ್ಯರು ಬಂದು ಐಸಿಯುಗೆ ಹೋಗಬಹುದು ಎಂದು ಹೇಳಿದರು. ಇದರ ಅರ್ಥ ಕೊನೆಯ ಕ್ಷಣಗಳು ಅಂಥ' ಎಂದು ಹೇಳಿದರು.

Ganesh Chaturthi 2022; ಶಾರುಖ್ ಮನೆಯಲ್ಲಿ ಅದ್ದೂರಿ ಗಣೇಶ ಸಂಭ್ರಮ, ಮೋದಕ ತಿಂದು ಹೇಳಿದ್ದೇನು?

ಕೊನೆಯ ಕ್ಷಣದಲ್ಲಿ ಅಮ್ಮನಿಗೆ ಹರ್ಟ್ ಮಾಡಿದ್ದೆ- ಶಾರುಖ್ 

'ಒಬ್ಬ ವ್ಯಕ್ತಿ ಜಗತ್ತು ಬಿಟ್ಟು ಹೋಗುತ್ತಾರೆ ಎಂದರೆ ಅವರು ತೃಪ್ತರಾದಾಗ ಮಾತ್ರ ಎಂದು ನಾನು ನಂಬಿದ್ದೆ. ಹಾಗಾಗಿ ನನ್ನ ಮಕ್ಕಳನ್ನು ಬಿಟ್ಟು ಹೋಗಬೇಕೆಂದು ಯಾರಾದರು ಕೇಳಿದ್ರೆ ನಾನು ಅವರ ಭವಿಷ್ಯದ  ಬಗ್ಗೆ ಸಂಪೂರ್ಣವಾಗಿ ತೃಪ್ತರಾಗದ ಹೋರತು ಖಂಡಿತ ಸಾಧ್ಯವಿಲ್ಲ ಎಂದು ಹೇಳುತ್ತೇನೆ, ಹಾಗಂತ ಭಾವಿಸಿದ್ದೆ. ಹಾಗಾಗಿ ನನ್ನ ತಾಯಿ ಐಸಿಯುನಲ್ಲಿದ್ದಾಗ ಅಮ್ಮನ ಪಕ್ಕದಲ್ಲಿ ಕುಳಿತು ತುಂಬಾ ತಪ್ಪು ಮಾಡಿದ್ದೆ' ಎಂದು ಹೇಳಿದ್ದರು.

ಸಲ್ಮಾನ್ ಖರೀದಿಸಬೇಕಿದ್ದ ಮನ್ನತ್ ಬಂಗಲೆ ಶಾರುಖ್ ಪಾಲಾಗಿದ್ದು ಹೇಗೆ? ಇಂಟ್ರಸ್ಟಿಂಗ್ ವಿಚಾರ ಬಹಿರಂಗ

'ನಾನು ಅವರನ್ನು ನೋಯಿಸುತ್ತಲೇ ಇದ್ದೆ. ನೀನು ಹೋದರೆ ನಾನು ನನ್ನ ತಂಗಿಯನ್ನು ನೋಡಿಕೊಳ್ಳುವುದಿಲ್ಲ, ನಾನು ಓದುವುದಿಲ್ಲ, ನಾನು ಕೆಲಸ ಮಾಡುವುದಿಲ್ಲ ಹೀಗೆ ಮೂರ್ಖನಾಗಿ ನಡೆದುಕೊಂಡಿದ್ದೆ. ಆದರೆ ಇದೆಲ್ಲ ಬಾಲಿಶ ನಂಬಿಕೆ ಎಂದು ಭಾವಿಸುತ್ತೇನೆ. ಆದರೆ ಅಮ್ಮ ಹೋಗಲು ಸಿದ್ಧರಾಗಿದ್ದರು. ಬಹುಶಃ ಅಮ್ಮ ನಾನು ನನ್ನ ತಂಗಿಯನ್ನು ನೋಡಿಕೊಳ್ಳುತ್ತೇನೆ, ಜೀವನದಲ್ಲಿ ಸರಿಯಾಗಿ ಇರುತ್ತೇನೆ ಎಂದು ತೃಪ್ತಿ ಹೊಂದಿದ್ದರು. ಈ ಬಗ್ಗೆ ದೇವರಿಗೂ ಚೆನ್ನಾಗಿ ಗೊತ್ತಿತ್ತು' ಎಂದು ಶಾರುಖ್ ಹೇಳಿದರು.      

click me!