ಸುಶಾಂತ್ ಸಿಂಗ್ ಸಹೋದರಿ ಮೀತು ಸಿಂಗ್ ಮತ್ತೊಮ್ಮೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಬಾಲಿವುಡ್ ನಾಶಮಾಡಲು ಸುಶಾಂತ್ ಸಿಂಗ್ ಅನ್ನೋ ಬ್ರಹ್ಮಾಸ್ತ್ರ ಸಾಕು ಹೇಳಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಹೊಂದಿ ಎರಡು ವರ್ಷದ ಮೇಲಾಯಿತು. ಆದರೂ ಸುಶಾಂತ್ ಸಾವಿನ ಹಿಂದಿನ ಅಸಲಿ ಕಾರಣ ಇನ್ನು ಬಹಿರಂಗವಾಗಿಲ್ಲ. ಇನ್ನು ಕೂಡ ಈ ಬಗ್ಗೆ ತನಿಕೆ ನಡೆಯುತ್ತಿದ್ದು ಅಂತಿಮ ವರದಿಯಾಗಿ ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಸುಶಾಂತ್ ಸಿಂಗ್ ಕಳೆದುಕೊಂಡ ಕುಟುಂಬ ಇನ್ನು ಸುಶಾಂತ್ ನೆನಪಲ್ಲೇ ಇದೆ. ಆಗಾಗ ಬಾಲಿವುಡ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ಸುಶಾಂತ್ ಸಿಂಗ್ ಸಹೋದರಿ ಮೀತು ಸಿಂಗ್ ಮತ್ತೊಮ್ಮೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಕರಣ್ ಜೋಹರ್ ನಿರ್ಮಾಣದಲ್ಲಿ ಬಂದ ರಣಬೀರ್ ಮತ್ತು ಅಲಿಯಾ ನಟನೆಯ ಬ್ರಹ್ಮಾಸ್ತ್ರ ಸಿನಿಮಾದ ವಿರುದ್ಧ ಮೀತು ಸಿಂಗ್ ಪರೋಕ್ಷವಾಗಿ ವ್ಯಂಗ್ಯವಾಗಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ಬಳಿಕ ಕರಣ್ ಜೋಹರ್ ಮತ್ತು ಸ್ಟಾರ್ ಕಿಡ್ ಗಳ ವಿರುದ್ಧ ಬಾರಿ ವಿರೋಧ ವ್ಯಕ್ತವಾಗಿತ್ತು. ಬಾಲಿವುಡ್‌ನಲ್ಲಿ ನೆಪೋಟಿಸಂವಿದೆ ಎಂದು ಸುಶಾಂತ್ ಸಹೋದರಿಯರು ಹಾಗೂ ಕಂಗನಾ ರಣಾವತ್ ಆಕ್ರೋಶ ಹೊರಹಾಕಿದ್ದರು. ಸುಶಾಂತ್ ಸಿಂಗ್ ಅವರನ್ನು ಹೊರಗಿನವರು ಎಂದು ಪರಿಗಣಿಸಲಾಗಿತ್ತು, ಸಿನಿಮಾ ಅವಕಾಶಗಳು ಸಿಗದಂತೆ ಮಾಡುತ್ತಿದ್ದರು ಎಂದು ಕರಣ್ ಜೋಹರ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿತ್ತು. ನೆಟ್ಟಿಗರು ಕೂಡ ಬಾಲಿವುಡ್ ವಿರುದ್ಧ ಟೀಕಾಸ್ತ್ರ ಮಾಡಿದ್ದರು.
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್‌ನಲ್ಲಿ ಹೇಳಿಕೊಳ್ಳುವಂತ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಸಾಲು ಸಾಲು ಸಿನಿಮಾಗಳು ಸೋಲು ಕಂಡಿವೆ. ಸೋಲಿನ ಸುಳಿಯಲ್ಲಿರುವ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಕೊಂಚ ಸಮಾಧಾನ ತಂದಿದೆ. ಕರಣ್ ಜೋಹರ್ ನಿರ್ಮಾಣದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನವೇ 75 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಸುದ್ದಿ ವೈರಲ್ ಆದ ಬೆನ್ನಲ್ಲೇ ಸುಶಾಂತ್ ಸಿಂಗ್ ಸಹೋದರಿ ಬ್ರಹ್ಮಾಸ್ತ್ರ ಬಗ್ಗೆ ಪರೋಕ್ಷವಾಗಿ ಬರೆದುಕೊಂಡಿದ್ದಾರೆ.
ರಿಯಾ ಚಕ್ರವರ್ತಿ ಡ್ರಗ್ಸ್ ಖರೀದಿಸಿ ಸುಶಾಂತ್‌ಗೆ ಕೊಡುತ್ತಿದ್ದರು; NCB
ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ಫೋಟೋ ಶೇರ್ ಮಾಡಿ, ಬ್ರಹ್ಮಾಸ್ತ್ರ ಬಗ್ಗೆ ಬರೆದುಕೊಂಡಿರುವ ಮೀತು ಸಿಂಗ್, 'ಬಾಲಿವುಡ್ ನಾಶಮಾಡಲು ಸುಶಾಂತ್ ಸಿಂಗ್ ಅನ್ನೋ ಬ್ರಹ್ಮಾಸ್ತ್ರ ಸಾಕು. ಬಾಲಿವುಡ್ ಯಾವಾಗಲು ಸಾರ್ವಜನಿಕರನ್ನು ಡಿಕ್ಟೇಟ್ ಮಾಡಲು ಬಯಸುತ್ತದೆ. ಪರಸ್ಪರ ನಮ್ರತೆ ಮತ್ತು ಗೌರವ ತೋರಿಸುವುದನ್ನು ಎಂದಿಗೂ ನಿಲ್ಲಿಸಿಲ್ಲ. ನೈತಿಕ ಮೌಲ್ಯಗಳಿಂದ ಸಮೃದ್ಧವಾಗಿರುವ ನಮ್ಮ ದೇಶದ ಮುಖವಾಗಿರುವ ಇಂಥ ಜನರನ್ನು ನಾವು ಹೇಗೆ ದೂರಮಾಡುವುದು. ಸಾರ್ವಜನಿಕರನ್ನು ಗೆಲ್ಲುವ ಅವರ ವಿಷಾದಕರ ಪ್ರಯತ್ನ ವಿಫಲವಾಗಿದೆ. ಗುಣಮಟ್ಟ ಮತ್ತು ನೈತಿಕ ಮೈಲ್ಯಗಳು ಮೆಚ್ಚುಗೆ ಮತ್ತು ಗೌರವವನ್ನು ಗೆಲ್ಲುವ ಏಕೈಕ ವಿಷಯವಾಗಿದೆ' ಎಂದು ಹೇಳಿದ್ದಾರೆ.
Sushant Singh Death Anniversary; ಸುಶಾಂತ್ ಇಲ್ಲದೇ 2 ವರ್ಷ, ಸಹೋದರಿಯ ಭಾವುಕ ಪತ್ರ
ಇತ್ತೀಚೆಗಷ್ಟೆ ನಟಿ ಕಂಗನಾ ರಣಾವತ್ ಕೂಡ ಬ್ರಹ್ಮಾಸ್ತ್ರ ಚಿತ್ರದ ವಿರುದ್ಧ ಮಾತನಾಡಿದ್ದರು. ಅಲ್ಲದೆ ನಿರ್ಮಾಪಕ ಕರಣ್ ಜೋಹರ್ ಅವರನ್ನು ಪ್ರಶ್ನಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಕಂಗನಾ, 'ಕರಣ್ ಜೋಹರ್ ಅವರಂತರನ್ನು ಜನರು ಅವರ ನಡವಳಿಕೆಯನ್ನು ಪ್ರಶ್ನಿಸಬೇಕು. ಅವರು ತಮ್ಮ ಚಲನಚಿತ್ರ ಸ್ಕ್ರಿಪ್ಟ್‌ಗಳಿಗಿಂತ ಹೆಚ್ಚಾಗಿ ಪ್ರತಿಯೊಬ್ಬರ ಲೈಂಗಿಕ ಜೀವನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರು ವಿಮರ್ಶೆಗಳು, ಸ್ಟಾರ್ ಗಳನ್ನು ಮತ್ತು ಫೇಕ್ ಕಲೆಕ್ಷನ್ ಮತ್ತು ಟಿಕೆಟ್‌ಗಳನ್ನು ಕೊಂಡುಕೊಳ್ಳುತ್ತಾರೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ಈ ಸಮಯದಲ್ಲಿ ಕರಣ್ ಜೊಹರ್ ಹಿಂದೂ ಧರ್ಮ ಮತ್ತು ದಕ್ಷಿಣ ಅಲೆಯ ಮೇಲೆ ಸವಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ ಕಂಗನಾ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದು ಬ್ರಾಹ್ಮಾಸ್ತ್ರ ಕಲೆಕ್ಷನ್ ಫೇಕ್ ಎಂದು ಹೇಳಿದ್ದಾರೆ. ಕೋಟಿ ಕೋಟಿ ಬಾಚಿಕೊಂಡಿರುವ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ನಕಲಿ ಎನ್ನುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂಥ ಪೋಸ್ಟ್ ಗಳನ್ನು ಕಂಗನಾ ಶೇರ್ ಮಾಡಿದ್ದಾರೆ.