ಪಠಾಣ್ ಈಗಾಗಲೇ ಡಿಸಾಸ್ಟರ್ ಆಗಿದೆ, ನಿವೃತ್ತಿ ತೊಗೋಳಿ ಎಂದು ಹೇಳಿದ ನೆಟ್ಟಿಗನಿಗೆ ಶಾರುಖ್ ಖಾನ್ ಕೊಟ್ಟ ಉತ್ತರ ವೈರಲ್ ಆಗಿದೆ.
ಬಾಲಿವುಡ್ ಸ್ಟಾರ್ ಸದ್ಯ ಪಠಾಣ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಪಠಾಣ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಪಠಾಣ್ ಸಿನಿಮಾದಿಂದ ಎರಡು ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿವಾದ ನಡುವೆಯೂ ಪಠಾಣ್ ಭಾರಿ ನಿರೀಕ್ಷೆ ಸೃಷ್ಟಿಸಿದೆ. ಈ ನಡುವೆ ಶಾರುಖ್ ಖಾನ್ ಅಭಿಮಾನಿಗಳ ಜೊತೆ ಸಂವಾದ ಮಾಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಆಸ್ಕ್ ಮಿ ಎನಿಥಿಂಗ್ ಎಂದು ಹ್ಯಾಷ್ ಟ್ಯಾಗ್ ಹಾಕಿ ಪ್ರಶ್ನೆ ಕೇಳುವಂತೆ ಕೇಳಿದ್ದಾರೆ. ಶಾರುಖ್ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು ಪ್ರಶ್ನೆ ಕೇಳುತ್ತಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ಶಾರುಖ್ ಪ್ರೀತಿಯಿಂದ ಉತ್ತರ ನೀಡುತ್ತಿದ್ದಾರೆ.
ಪಾಸಿಟಿವ್ ಜೊತೆಗೆ ನೆಗೆಟಿವ್ ಪ್ರಶ್ನೆಗಳಿಗೂ ಶಾರುಖ್ ತಾಳ್ಮೆಯಿಂದನೇ ಉತ್ತರ ನೀಡುತ್ತಿದ್ದಾರೆ. ನೆಟ್ಟಿಗನೊಬ್ಬ ಶಾರುಖ್ ಖಾನ್‌ಗೆ, ಪಠಾಣ್ ಈಗಾಗಲೇ ಡಿಸಾಸ್ಟರ್ ಆಗಿದೆ, ನಿವೃತ್ತಿ ತೊಗೋಳಿ' ಎಂದು ಹೇಳಿದ್ದಾರೆ. ನೆಟ್ಟಿಗನ ಮಾತಿಗೆ ಶಾರುಖ್ ಕೊಟ್ಟ ಉತ್ತರ ಅಭಿಮಾನಿಳ ಹೃದಯ ಗೆದ್ದಿದೆ. ಕಿಂಗ್ ಖಾನ್ ಕೂಲ್ ಆಗಿಯೇ ಉತ್ತರ ನೀಡಿದ್ದಾರೆ. 'ದೊಡ್ಡವರ ಜೊತೆ ಹೀಗೆ ಮಾತನಾಡಬಾರದು' ಎಂದು ಹೇಳಿದ್ದಾರೆ. ಶಾರುಖ್ ಈ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಸ್ಕ್ರೀನ್ ಶಾಟ್ ಶೇರ್ ಮಾಡಿ ಶಾರುಖ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Beta badhon se aise baat nahi karte!! https://t.co/G5xPYBdUCK
— Shah Rukh Khan (@iamsrk)ಅಭಿಮಾನಿಯೊಬ್ಬ ಕಿಂಗ್ ಖಾನ್‌ಗೆ ಅಲಿಯಾ ಭಟ್ ಯಾಕೆ ಕೇವಲ SR ಎಂದು ಕರೆಯುತ್ತಾರೆ ಎಂದು ಕೇಳಿದ್ದಾರೆ. ಇದಕ್ಕೆ ಶಾರುಖ್, ರೊಮ್ಯಾಂಟಿಕ್, ಬಹುಶಃ ಸೀನಿಯರ್ ಅಂತ, ಗೌರವ್, ಅಥವಾ ಕೇವಲ ಶಾರುಖ್ ಅಂತ ಇರಬಹುದು' ಎಂದು ಹೇಳಿದ್ದಾರೆ.
ಮುಗಿಯದ ಸಂಕಷ್ಟ, ಶಾರುಖ್ ಪಠಾಣ್ ವಿರುದ್ಧ ಹಾಡು ಕದ್ದ ಆರೋಪ; 'ಬೇಷರಂ ರಂಗ್' ಪಾಕ್ ಹಾಡಿನ ಕಾಪಿನಾ?
'ಸರ್, ಪ್ರೀತಿ, ಮದುವೆ ಎಲ್ಲಾ ಒಂದೇ ಸರಿ ಬರುತ್ತೆ ಆದರೆ ಎಕ್ಸಾಮ್ ಮಾತ್ರ ಪದೇ ಪದೇ ಬರುತ್ತೆ ಯಾಕೆ?' ಎಂದು ಕೇಳಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಶಾರುಖ್ ಪ್ರೀತಿಯ ಉತ್ತರ ನೀಡಿದ್ದಾರೆ. 'ಜೀವನದಲ್ಲಿ ಯಾವುದು ಮಜಾ ಕೊಡುವುದಿಲ್ಲವೋ ಅದು ಪದೇ ಪದೇ ಬರುತ್ತದೆ. ಲೈಫ್ ಅಂದರೆ ಹಾಗೆ ಸಹೋದರ' ಎಂದು ಹೇಳಿದ್ದಾರೆ. ಶಾರುಖ್ ಖಾನ್ ಅವರ ಅನೇಕ ಉತ್ತರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಾಳೆ ಪಾರ್ನ್ ಸಿನಿಮಾನೂ ಮಾಡ್ತೀರಿ; ಶಾರುಖ್ 'ಪಠಾಣ್' ವಿರುದ್ಧ 'ಶಕ್ತಿಮಾನ್' ಮುಖೇಶ್ ಖನ್ನಾ ಕಿಡಿ
ಅಂದಹಾಗೆ ಬಹುನಿರೀಕ್ಷೆಯ ಪಠಾಣ್ ಸಿನಿಮಾ ಜನವರಿ 25ರಂದು ರಿಲೀಸ್ ಆಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಜೊತೆ ಬಾಲಿವುಡ್ ನ ಮತ್ತೋರ್ವ ಖ್ಯಾತ ನಟ ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಬಂದಿರುವ ಪಠಾಣ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ತೆರೆಮೇಲೆ ಬರುತ್ತಿದ್ದು ಪಠಾಣ್ ಆಗಿ ಹೇಗೆ ಅಬ್ಬರಿಸಿದ್ದಾರೆ ಎನ್ನುವ ಕುತೂಹಲಕ್ಕೆ ಜನವರಿ 25ರಂದು ತೆರೆಬೀಳಲಿದೆ.