
2021 ರ ಡಿಸೆಂಬರ್ ತಿಂಗಳಿನಲ್ಲಿ ತೆರೆಗೆ ಬಂದಿದ್ದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ: ದಿ ರೈಸ್' ಭಾರತದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಸುಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ: ದಿ ರೈಸ್' (Pushpa: The Rise ) ಪ್ರಸ್ತುತ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಇಲ್ಲಿಯೂ ಮುನ್ನಡೆ ಕಾಯ್ದುಕೊಂಡಿದೆ.
ಈ ಚಲನಚಿತ್ರದ ಸಂಭಾಷಣೆಗಳು, ಹಾಡುಗಳು ಅದರಲ್ಲಿಯೂ ಶ್ರೀವಲ್ಲಿ (Shreevalli) ಹಾಡು ಸಾಮಾಜಿಕ ಜಾಲತಾಣದಲ್ಲಿಯೂ ಚಿಂದಿ ಉಡಾಯಿಸಿದೆ. ಈ ಹಾಡಿಗೆ ರೀಲ್ಸ್ ಮಾಡದವರೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಇದು ಸೌಂಡ್ ಮಾಡಿದ್ದು, ಈಗಲೂ ಇದರ ಕ್ರೇಜ್ ನಿಂತಿಲ್ಲ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಈ ಹಾಡಿಗೆ ರೀಲ್ಸ್ ಮಾಡಲಾಗುತ್ತಿದ್ದು, ಅವು ವೈರಲ್ (Viral) ಆಗುತ್ತಿವೆ.
Pushpa 2 ರಶ್ಮಿಕಾ ಮಂದಣ್ಣಗೆ ಗೇಟ್‌ಪಾಸ್ ಕೊಟ್ಟ ಅಲ್ಲು ಅರ್ಜುನ್; ಸಾಯಿ ಪಲ್ಲವಿ ಎಂಟ್ರಿ ನೆಟ್ಟಿಗರು ಖುಷ್
ಈಗ ಈ ಚಿತ್ರ ರಷ್ಯದಲ್ಲಿಯೂ ಸಕತ್ ಸೌಂಡ್ ಮಾಡುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ರಷ್ಯದಲ್ಲಿಯೂ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ.
'ಪುಷ್ಪ: ದಿ ರೈಸ್' ಡಿಸೆಂಬರ್ 8 ರಂದು ರಷ್ಯಾದಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೊಂಡು ತಿಂಗಳಾಗುತ್ತಾ ಬಂದರೂ ಅಲ್ಲಿ 774 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರನ್ ಆಗುತ್ತಿವೆ. ಈ ಚಲನಚಿತ್ರವು ರಷ್ಯಾದ (Russia) ಗಲ್ಲಾಪೆಟ್ಟಿಗೆಯಲ್ಲಿ 25 ದಿನಗಳಲ್ಲಿ 10 ಮಿಲಿಯನ್ ರೂಬಲ್‌ಗಳನ್ನು ಗಳಿಸಿದೆ ಎನ್ನಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ ಸುಮಾರು 13 ಕೋಟಿ ರೂಪಾಯಿಗಳನ್ನು ಇದು ಗಳಿಸಿದೆ.
ಬಾಹುಬಲಿ-2 ಅನ್ನು ಹಿಂದಿಕ್ಕಿ ರಷ್ಯಾದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತೀಯ ಚಲನಚಿತ್ರ (Indian Film) ಎನಿಸಿಕೊಂಡಿದೆ.
'ಬೇಶರಂ ರಂಗ್'ಗೆ ಭಾರಿ ಟ್ವಿಸ್ಟ್: ಕಳಚಿ ಹೋಗುತ್ತಾ ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ?
ಪುಷ್ಪ: ದಿ ರೈಸ್ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇದು ಆಂಧ್ರಪ್ರದೇಶ ರಾಜ್ಯದ ಶೇಷಾಚಲಂ ಬೆಟ್ಟಗಳಲ್ಲಿ ಮಾತ್ರ ಬೆಳೆಯುವ ಅಪರೂಪದ ಮರವಾದ ಕೆಂಪು ಚಂದನವನ್ನು ಕಳ್ಳಸಾಗಣೆ ಮಾಡುವ ಗ್ಯಾಂಗ್ ಕುರಿತು ಕಥೆಯನ್ನು ಹೊಂದಿದೆ. ಇದು ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಕೆಲಸಗಾರ ಅರ್ಜುನ್ನ ಸುತ್ತಲೂ ಹೆಣೆದಿರುವ ಕಥೆ. ಸಿನಿಮಾದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನದ ಸ್ಮಗ್ಲರ್ (Smuggler) ಆಗಿ ಕಾಣಿಸಿಕೊಂಡಿದ್ದಾರೆ. ಎರಡನೇ ಭಾಗದಲ್ಲಿ ಅದೇ ಲುಕ್ ಅನ್ನು ಕೆಲವು ಬದಲಾವಣೆಗಳೊಂದಿಗೆ ಮುಂದುವರಿಸಲಾಗುತ್ತದೆ.
ಈ ಚಿತ್ರ ಬಿಡುಗಡೆಯಾದ ನಂತರ, ಭಾರತದಲ್ಲಿ ಸುಮಾರು 490 ಕೋಟಿ ರೂ. ಗಳಿಕೆ ಮಾಡಿದೆ. ಈ ಚಿತ್ರಕ್ಕಾಗಿ ಅಲ್ಲು ಅರ್ಜುನ್ (Allu Arjun) 125 ಕೋಟಿ ವರೆಗೆ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಪುಷ್ಪ-1ರ ಉತ್ಸಾಹದಲ್ಲೀಗ ಪುಷ್ಪ-2 ಕೂಡ ತೆರೆ ಮೇಲೆ ಬರಲಿದೆ. ಜನವರಿ ಮೂರನೇ ವಾರದಿಂದ ಪುಷ್ಪ 2 ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ. ಅಲ್ಲು ಅರ್ಜುನ್ ಬ್ಯಾಂಕಾಕ್‌ನಲ್ಲಿ ಬೃಹತ್ ಸೆಟ್‌ಗಳಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಬ್ಯಾಂಕಾಕ್‌ನಲ್ಲಿ ಒಂದು ತಿಂಗಳು ಶೂಟಿಂಗ್ ನಡೆಸಲು ತಯಾರಿ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಶೇ.40ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ. ಬ್ಯಾಂಕಾಕ್ ನ ದಟ್ಟ ಅರಣ್ಯದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. 'ಪುಷ್ಪ 2' ಸಿನಿಮಾದಲ್ಲಿ ರೋಚಕ ಫೈಟಿಂಗ್ ಸೀನ್ ಕೂಡ ಇದೆ. ಸಿಂಹದ ಕಾದಾಟದ ದೃಶ್ಯವನ್ನು ಸುಕುಮಾರ್ ಒಂದು ರೇಂಜ್ ನಲ್ಲಿ ಡಿಸೈನ್ ಮಾಡಿದ್ದಾರೆ. ಈ ಒಂದು ದೃಶ್ಯದ ಚಿತ್ರೀಕರಣಕ್ಕಾಗಿ ಚಿತ್ರತಂಡ ಥಾಯ್ಲೆಂಡ್‌ಗೆ ತೆರಳಲಿದೆ ಎಂದು ಹೇಳಲಾಗುತ್ತಿದೆ.
ಇಷ್ಟೇ ಅಲ್ಲದೇ, ಈ ಸಿನಿಮಾದ ಹಾಡುಗಳು 2022ರಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಹಾಡುಗಳ ಲಿಸ್ಟ್‌ನಲ್ಲಿ ಟಾಪ್ ಸ್ಥಾನ ಪಡೆದುಕೊಂಡಿವೆ. ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಶ್ರೀವಲ್ಲಿ ಹಾಡು ಯೂಟ್ಯೂಬ್ನಲ್ಲಿ ಮೊದಲ ಸ್ಥಾನದಲ್ಲಿದೆ. ಈ ಚಿತ್ರದ 'ಶ್ರೀವಲ್ಲಿ', 'ಸಾಮಿ ಸಾಮಿ' ಹಾಗೂ 'ಊ ಅಂಟಾವ ಮಾವ' ಹಾಡುಗಳು ಟಾಪ್ ಲಿಸ್ಟ್‌ನಲ್ಲಿ ಇವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.