ಸಲ್ಮಾನ್​ ಬಳಿಕ ಶಾರುಖ್​ಗೂ ಜೀವ ಬೆದರಿಕೆ: ಶಾಕಿಂಗ್​ ನ್ಯೂಸ್​ಗೆ ನೆಟ್ಟಿಗರು ತಮಾಷೆ ಮಾಡ್ತಿರೋದ್ಯಾಕೆ ನೋಡಿ!

By Suchethana D  |  First Published Nov 7, 2024, 10:45 PM IST

ಸಲ್ಮಾನ್​ ಬಳಿಕ ಶಾರುಖ್​ಗೂ ಜೀವ ಬೆದರಿಕೆ ಬಂದಿದೆ. 50 ಲಕ್ಷ ರೂಪಾಯಿಗೆ ಡಿಮಾಂಡ್​  ಮಾಡಲಾಗಿದ್ದು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. 
 


ಕೊಲೆ ಬೆದರಿಕೆ ಪ್ರಕರಣಗಳು ಮುಂಬೈ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ವಿವಿಧ ಸೆಲೆಬ್ರಿಟಿಗಳಿಗೆ ಈ ರೀತಿ ಬೆದರಿಕೆ ಬರುವುದು ಮಾಮೂಲಾಗಿಬಿಟ್ಟಿದೆ. ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಕಡೆಯಿಂದ ನಟ ಸಲ್ಮಾನ್​ ಖಾನ್​ಗೆ ಇದಾಗಲೇ ಹಲವಾರು ಬಾರಿ ಕೊಲೆ ಬೆದರಿಕೆ ಬಂದದ್ದೂ ಅಲ್ಲದೇ, ಗುಂಡಿನ ದಾಳಿಯೂ ನಡೆದ ಬೆನ್ನಲ್ಲೇ ಸಲ್ಮಾನ್​ ಖಾನ್​ ಸಮೀಪವರ್ತಿ ಎನ್ನುವ ಕಾರಣಕ್ಕೆ ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದಿಕಿ ಅವರನ್ನು ಹತ್ಯೆ ಮಾಡಲಾಗಿದೆ. ಈ ಘಟನೆ ಬಳಿಕ ಕೊಲೆ ಬೆದರಿಕೆ ಎನ್ನುವುದನ್ನೇ ಕೆಲವು ವ್ಯಕ್ತಿಗಳು ಆಟ ಮಾಡಿಕೊಂಡಂತೆ ಕಾಣಿಸುತ್ತಿದೆ. ಇದೀಗ ಶಾರುಖ್​ ಖಾನ್​ ಸರದಿ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿತ್ತು. ಅದಾದ ಬಳಿಕ ಅವರ  ಭದ್ರತೆಯನ್ನು ಹೆಚ್ಚಿಸಲಾಗಿತ್ತು.  ದಿನದ 24 ಗಂಟೆ ಆರು ಶಸ್ತ್ರಸಜ್ಜಿತ ಸಿಬ್ಬಂದಿ ಅವರ ಜೊತೆ ಇರುತ್ತಾರೆ. ಆದರೆ ಇದೀಗ ಸಲ್ಮಾನ್​ ಖಾನ್​ ಗಲಾಟೆಯ ಬಳಿಕ ಶಾರುಖ್​ ಅವರಿಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ. ಮುಂಬೈನ ಬಾಂದ್ರಾ ಪೊಲೀಸರಿಗೆ  ಕರೆ ಮಾಡಿರುವ ವ್ಯಕ್ತಿ ಐವತ್ತು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ.    ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನತ್ತಿ ಹೋಗಿರುವ ಪೊಲೀಸರಿಗೆ ಛತ್ತೀಸ್‌ಗಢದ  ರಾಯಪುರದ ಫೈಜಾನ್ ಖಾನ್ ಎಂಬಾತನ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ  ಕರೆ ಬಂದಿರುವುದು ತಿಳಿದಿದೆ.  ಇದಾಗಲೇ ಆತನನ್ನು ಬಂಧಿಸಿ  ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  ತಾನು ವಕೀಲ ಎಂದು ಹೇಳಿಕೊಂಡಿರುವ ಆತ, ನನ್ನ ಮೊಬೈಲ್ ಕಳ್ಳತನವಾಗಿದೆ. ಈ ಬಗ್ಗೆ ದೂರು ಕೂಡ ದಾಖಲಿಸಿದ್ದೇನೆ, ಈಗ  ಶಾರುಖ್ ಖಾನ್‌ ಅವರಿಗೆ ಅದೇ ಫೋನ್​ನಿಂದ ಯಾರೋ ಬೆದರಿಕೆ ಹಾಕುತ್ತಿದ್ದಾರೆ ಎಂದಿದ್ದಾನೆ.

Tap to resize

Latest Videos

undefined

ಭಾರತದ ನಂ.1 ಶ್ರೀಮಂತ ಯುಟ್ಯೂಬರ್​ ಮಹಿಳೆ! ಖಿನ್ನತೆಗೆ ಜಾರಿದ್ದಾಕೆ ಅಡುಗೆ ಮಾಡಿ ಕೋಟ್ಯಧಿಪತಿಯಾದರು

 ಅಷ್ಟಕ್ಕೂ ಕರೆ ಮಾಡಿದ ವ್ಯಕ್ತಿಯ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ,  ಆತ ನನ್ನನ್ನು “ಹಿಂದೂಸ್ತಾನಿ” ಎಂದು ಕರೆಯಲು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇಷ್ಟೊಂದು ಸೀರಿಯಲ್​ ವಿಷಯವಾದರೂ ಈ ವಿಷಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿ 50 ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿರುವುದಕ್ಕೆ! 7,300 ಕೋಟಿ ರೂಪಾಯಿ ಒಡೆಯನಿಗೆ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿರುವುದನ್ನು ನೋಡಿದರೆ ಈಗ ಯಾವುದೇ ಮಾಮೂಲಿ ಕಳ್ಳ ಇರಬೇಕು, ಕೊಲೆಯಂತೂ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. 50 ಲಕ್ಷ ರೂಪಾಯಿಗಳನ್ನು ಶಾರುಖ್​ ಖಾನ್​ ಭಿಕ್ಷುಕರಿಗೇ ಕೊಡುವಂತೆ ಕೊಟ್ಟು ಬಿಡುತ್ತಾರೆ ಎಂದು ಮತ್ತೆ ಕೆಲವರು ಹೇಳಿದ್ದರೆ, ಈತ ಇನ್ನೂ ಈ ಫೀಲ್ಡ್​ಗೆ ಹೊಸಬ ಇರಬೇಕು ಎಂದು ತಮಾಷೆ  ಮಾಡುತ್ತಿದ್ದಾರೆ.

ನೆಟ್ಟಿಗರು ಏನೇ ತಮಾಷೆ ಮಾಡಿದರೂ, ಸದ್ಯ ಕೊಲೆ ಬೆದರಿಕೆ ಎನ್ನುವುದು ತಮಾಷೆಯ ವಿಷಯವಲ್ಲ. ಇತ್ತೀಚಿಗೆ ಇಂಥ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಹಲವು ಸಂದರ್ಭಗಳಲ್ಲಿ ತಪ್ಪಿತಸ್ಥರನ್ನು ಸುಲಭದಲ್ಲಿ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಇದನ್ನೇ ಅರಿತುಕೊಂಡಿರುವ ಕಿಡಿಗೇಡಿಗಳು ಇಂಥ ಕೃತ್ಯದಲ್ಲಿ ತೊಡಗುತ್ತಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಿದರೆ ಇದು ಎಲ್ಲರಿಗೂ ಪಾಠವಾಗಲಿದೆ ಎಂದು ಹಲವರು ಕಮೆಂಟಿಗರು ಹೇಳುತ್ತಿದ್ದಾರೆ. 

ಗಂಭೀರ ಕಾಯಿಲೆಯ ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಅರ್ಜುನ್​ ಕಪೂರ್​! ಮಲೈಕಾ ಬಿಡಲು ಇದೇ ಕಾರಣನಾ?

 

click me!