ಬಾಲಿವುಡ್ ಅಂಗಳದಲ್ಲಿ ಹಾಗೆ ಸುದ್ದಿಯಾಗಿದ್ದು, ತಮ್ಮ ವಿರದ್ಧ ಗೌರಿ ಖಾನ್ ಸೇರಿದಂತೆ ಹಲವರು ಸಿಟ್ಟಗೆದ್ದಿದ್ದು ಸ್ವತಃ ಪ್ರಿಯಾಂಕಾಗೆ ಗೊತ್ತಾಗಿತ್ತು. ಆ ಕಾರಣಕ್ಕೆ, ಆ ಕಾಲದಿಂದಲೂ ನಟಿ ಪ್ರಿಯಾಂಕಾ ಚೋಪ್ರಾ ಆಗಾಗ..
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಗ್ಗೆ ಯಾರಿಗೂ ಏನೂ ಹೇಳ್ಬೇಕಿಲ್ಲ. ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು ನಟಿ ಪ್ರಿಯಾಂಕಾ ಚೋಪ್ರಾ. ಇದೀಗ ಅಮೆರಿಕಾದ ಸೊಸೆಯಾಗಿರುವ ಪ್ರಿಯಾಂಕಾ, ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಅಥವಾ ಭಾರತದ ಯಾವುದೇ ಭಾಷೆಯ ಚಿತ್ರಗಳನ್ನು ಒಪ್ಪಿಕೊಳ್ಳದೇ ಕೇವಲ ಹಾಲಿವುಡ್ ಸಿನಿಮಾರಂಗಕ್ಕಷ್ಟೇ ಸೀಮಿತರಾಗಿದ್ದಾರೆ ಪ್ರಿಯಾಂಕಾ ಚೋಪ್ರಾ. ಕಾರಣ, ಶೂಟಿಂಗ್ ಕಾರಣಕ್ಕೆ ಅವರಿಗೆ ಬಹಳಷ್ಟು ದಿನಗಳು ಪತಿ ನಿಕ್ ಬಿಟ್ಟಿರಲು ಸಾಧ್ಯವಿಲ್ಲವಂತೆ!
ಅದಿರಲಿ, ಇಲ್ಲಿನ ವಿಷಯ ಏನಪ್ಪಾ ಅಂದ್ರೆ, ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಟ ಶಾರುಖ್ ಖಾನ್ (Shah Rukh Khan) ಅವರಿಬ್ಬರೂ ಒಂದು ಕಾಲದಲ್ಲಿ ಭಾರೀ ಆಪ್ತರಾಗಿದ್ದರು. ಈ ಕಾರಣಕ್ಕೆ ಗೌರಿ ಖಾನ್ ಸಹ ತುಂಬಾ ಅಪ್‌ಸೆಟ್ ಆಗಿ ಪ್ರಿಯಾಂಕಾ ವಿರುದ್ಧ ತಿರುಗಿ ಬಿದ್ದಿದ್ದರು. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಎಂಬುದನ್ನು ಎಲ್ಲರೂ ಮರೆತಂತೆ ಮಾತನಾಡುತ್ತಿದ್ದರು. ಕೇವಲ ಪ್ರಿಯಾಂಕಾ ತಪ್ಪಿದೆ, ಶಾರುಖ್ ಖಾನ್‌ರನ್ನು ಅವಳೇ ಬುಟ್ಟಿಗೆ ಹಾಕಿಕೊಂಡಿದ್ದಾರೆ ಎನ್ನುವಂತೆ ಪಿಗ್ಗಿಗೆ ಮಾತ್ರ ಮನೆಹಾಳಿ ಪಟ್ಟ ಕಟ್ಟಿದ್ದರು.
undefined
ಸಲ್ಮಾನ್ ಖಾನ್‌ಗೆ ಪ್ರಪೋಸ್ ಮಾಡಿ ತಿರಸ್ಕರಿಸಲ್ಪಟ್ಟ ಬಿಗ್ ಬಾಸ್ ಸ್ಪರ್ಧಿ; ಬೇಕಿತ್ತಾ ಇದು?
ಬಾಲಿವುಡ್ ಅಂಗಳದಲ್ಲಿ ಹಾಗೆ ಸುದ್ದಿಯಾಗಿದ್ದು, ತಮ್ಮ ವಿರದ್ಧ ಗೌರಿ ಖಾನ್ ಸೇರಿದಂತೆ ಹಲವರು ಸಿಟ್ಟಗೆದ್ದಿದ್ದು ಸ್ವತಃ ಪ್ರಿಯಾಂಕಾಗೆ ಗೊತ್ತಾಗಿತ್ತು. ಆ ಕಾರಣಕ್ಕೆ, ಆ ಕಾಲದಿಂದಲೂ ನಟಿ ಪ್ರಿಯಾಂಕಾ ಚೋಪ್ರಾ ಆಗಾಗ ಒಂದು ಐಟಮ್‌ಅನ್ನು ಜಗತ್ತಿಗೆ ತೋರಿಸುತ್ತ ಇರುತ್ತಾರೆ. ಅದು ನಟ ಶಾರುಖ್ ಖಾನ್ ಅವರು ನಟಿ ಪ್ರಿಯಾಂಕಾ ಚೋಪ್ರಾಗೆ ಕೊಟ್ಟ ಗಿಫ್ಟ್. ಅದನ್ನು ಪದೇಪದೇ ಹಾಕಿಕೊಂಡು ಪ್ರದರ್ಶಿಸುವ ಮೂಲಕ ನಟಿ ಪ್ರಿಯಾಂಕಾ ಅವರು, ತಮ್ಮ ಕಡೆಯಿಂದ ಮಾತ್ರವಲ್ಲ, ನಟ ಶಾರುಖ್ ಕಡೆಯಿಂದಲೂ ಲ್ ಇತ್ತು ಎಂಬುದನ್ನು ಪ್ರೂವ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಹಾಗಂತ ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಬರುತ್ತವೆ. ಆದರೆ, ಅದ್ಯಾಕೆ ಹಾಗೆ ಶಾರುಖ್ ಕೊಟ್ಟ ಜರ್ಕಿನ್‌ಅನ್ನು ಪ್ರಿಯಾಂಕಾ ಧರಿಸಿ, ಇದು ನನಗೆ ಶಾರುಖ್ ಕೊಟ್ಟಿದ್ದು ಅಂತ ಕಂಡಕಂಡವರಿಗೆ ಹೇಳಿಕೊಂಡು ಓಡಾಡುತ್ತಾರೆ ಎಂಬುದು ಅವರಿಗೆ ಮಾತ್ರ ಖಚಿತವಾಗಿ ಗೊತ್ತು. ಎಕೆಂದರೆ, ಪ್ರಿಯಾಂಕಾ ಆಗಿರಲಿ ಅಥವಾ ಶಾರುಖ್ ಆಗಿರಲಿ, ಇನ್ಯಾರೇ ಆಗಿರಲಿ, ಅವರವರ ಮನಸ್ಸಿನಲ್ಲಿ ಏನೇನಿದೆ ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟ!
ಹೇಳಿ, ಉಪೇಂದ್ರ ಈ ಡೈಲಾಗ್‌ಗೆ 'ಬುದ್ಧಿವಂತ' ಅಂತೀರಾ ಅಥವಾ ಇನ್ನೇನೋ ಹೆಸರಿಡ್ತೀರಾ?
ಆದರೆ, ಶಾರುಖ್ ಧರಿಸುತ್ತಿದ್ದ ಜರ್ಕಿನ್ ಪ್ರಿಯಾಂಕಾ ಪಾಲಾಗಿರುವುದು ಖಚಿತ ಎನ್ನಲಾಗುತ್ತದೆ. ಕಾರಣ, ಅದನ್ನು ಮೊದಲು ಬಹಳಷ್ಟು ವೇಳೆ ನಟ ಶಾರುಖ್ ಧರಿಸಿದ್ದನ್ನು ನೋಡಿದವರಿದ್ದಾರೆ. ಈಗ ಅದೇ ಜರ್ಕಿನ್ ಪ್ರಿಯಾಂಕಾರ ಮೈಮೇಲೆ ಆಗಾಗ ರಾರಾಜುಸುತ್ತದೆ. ಅವರೇನಾದರೂ ಮಾಡಿಕೊಳ್ಳಲಿ ಬಿಡಿ, ಆದರೆ, ಸುದ್ದಿ ಬೇಕಾಗಿರುವ ಕಿವಿಗಳಿಗೆ ಇದೊಂದು ಸುದ್ದಿ ತುಂಬಾ ವರ್ಷಗಳಿಂದ ಆಗಾಗ ಬೀಳುತ್ತಲೆ ಇರುತ್ತದೆ. ಈ ಸಂಗತಿ ಸೋಷಿಯಲ್ ಮೀಡಿಯಾಗಳಲ್ಲಿ ಪದೇಪದೇ ಚರ್ಚೆ ಆಗುತ್ತಲೇ ಇರುತ್ತದೆ. ಇಷ್ಟು ಮಾತ್ರ ಸತ್ಯ!