ಶಾರುಖ್ ಖಾನ್ ಪುತ್ರ ಅಬ್ರಾಮ್ ಖಾನ್ ಅಪ್ಪನ ಸಿಗ್ನೇಚರ್ ಪೋಸ್ ನೀಡಿದ್ದು, ಕಾರ್ಯಕ್ರಮ ವೀಕ್ಷಣೆ ಮಾಡಿದ ಶಾರುಖ್ ಕಣ್ಣೀರಾಗಿದ್ದಾರೆ. ವಿಡಿಯೋ ವೈರಲ್ ಆಗಿದೆ.
1995ರಲ್ಲಿ ಬಿಡುಗಡೆಯಾದ ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ಚಿತ್ರದಲ್ಲಿನ ನಟನ ಸಿಗ್ನೇಚರ್ ಪೋಸ್ ಇಂದಿಗೂ ಸಕತ್ ಸದ್ದು ಮಾಡುತ್ತಲೇ ಇರುತ್ತದೆ. ತಮ್ಮ ಎರಡೂ ಬಾಹುಗಳನ್ನು ಚಾಚಿಕೊಂಡರೆ ಇಂದಿಗೂ ಯುವತಿಯರೂ ಶಾರುಖ್ಗೆ ಫಿದಾ ಆಗುವುದು ಇದೆ. ಇದೇ ಪೋಸ್ ಕೊಟ್ಟು ಹಲವರು ಫೋಟೋಶೂಟ್ ಮಾಡಿಸಿಕೊಳ್ಳುವುದೂ ಇದೆ. ಇದೀಗ ಪಠಾಣ್ ಮತ್ತು ಜವಾನ್ ಚಿತ್ರದ ಬಳಿಕ ಡಂಕಿಯ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡುವ ನಿರೀಕ್ಷೆಯಲ್ಲಿರುವ ನಟ ಶಾರುಖ್, ಇತ್ತೀಚೆಗೆ ಆಕ್ಷನ್ ಚಿತ್ರದ ಕಡೆ ಗಮನ ಹರಿಸಿದ್ದರೂ, ಅವರು ಸದಾ ರೊಮ್ಯಾಂಟಿಕ್ ಹೀರೋ ಎಂದೇ ಖ್ಯಾತಿ ಪಡೆದವರು. ಅದರಲ್ಲಿಯೂ ಅವರ ಈ ಸಿಗ್ನೇಚರ್ ಪೋಸ್ಗೆ ಮರುಳಾಗದವರೇ ಇಲ್ಲ.
ಇದೀಗ ಅಪ್ಪನ ಹಾದಿ ಹಿಡಿದಿದ್ದಾನೆ ಮಗ ಅಬ್ರಾಮ್. ಮೊನ್ನೆ ಅಂದರೆ 15 ರಂದು ಮುಂಬೈನ ಅತ್ಯಂತ ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಶಾಲೆಯ ಶಾಲಾ ವಾರ್ಷಿಕೋತ್ಸವವಿತ್ತು. ಹಲವು ಸೆಲೆಬ್ರಿಟಿಗಳ ಮಕ್ಕಳು ಕಲಿಯುತ್ತಿರುವುದು ಇದೇ ಶಾಲೆಯಲ್ಲಿ. ಶಾರುಖ್ ಖಾನ್ ಕಿರಿಯ ಪುತ್ರ ಅಬ್ರಾಮ್ ನಾಟಕದಲ್ಲಿ ಪಾಲ್ಗೊಂಡಿದ್ದ. ಅದರಲ್ಲಿ ಆತನದ್ದು ಚಿಕ್ಕ ರೋಲ್. ಆ ಸಮಯದಲ್ಲಿ ಅಪ್ಪನ ಸಿಗ್ನೇಚರ್ ಪೋಸ್ ಕೊಟ್ಟಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದ ಶಾರುಖ್ ಮತ್ತು ಗೌರಿ ಖಾನ್ ಚಪ್ಪಾಳೆ ತಟ್ಟಿದ್ದೂ ಅಲ್ಲದೇ ಭಾವುಕರೂ ಆಗಿದ್ದು ಅದರ ವಿಡಿಯೋ ಕೂಡ ರಿಲೀಸ್ ಆಗಿದೆ.
ಸಾಯಿಬಾಬಾ... ನನ್ನ ಕೋರಿಕೆ ಈಡೇರಿಸು... ಶಿರಡಿಯಲ್ಲಿ ಪುತ್ರಿ ಜೊತೆ ಶಾರುಖ್ ವಿಶೇಷ ಪೂಜೆ!
ಅಬ್ರಾಮ್ ಹೀಗೆ ಅಪ್ಪನ ಭಂಗಿಯಲ್ಲಿ ನಿಂತಾಗ ಆ ಸಮಯಕ್ಕೆ ಸರಿಯಾಗಿ ಶಾರುಖ್ ಖಾನ್ರ ಡಿಡಿಎಲ್ಜೆ ಸಿನಿಮಾದ ಸಂಗೀತ ಹಿನ್ನೆಲೆಯಲ್ಲಿ ಮೊಳಗುತ್ತದೆ. ಆಗ ಹುಡುಗಿಯೊಬ್ಬಾಕೆ ಬಂದು ಅಬ್ರಾಮ್ನನ್ನು ಅಪ್ಪಿಕೊಳ್ಳುತ್ತಾಳೆ. ಇದನ್ನು ನೋಡಿ ಚಪ್ಪಾಳೆಗಳ ಸುರಿಮಳೆಯೇ ಆಗಿದೆ. ಅಂದಹಾಗೆ, ಶಾರುಖ್ ಖಾನ್ ಹಾಗೂ ಗೌರಿ ಖಾನ್ರ ಮೂರನೇ ಮಗ ಅಬ್ರಾಮ್. ಮೊದಲ ಮಗ ಆರ್ಯನ್ ಖಾನ್ ಸಿನಿಮಾ ಕುರಿತ ಪದವಿ ಪಡೆದಿದ್ದು ನಿರ್ದೇಶಕನಾಗುವ ಹಾದಿಯಲ್ಲಿದ್ದಾರೆ. ಶಾರುಖ್ ಖಾನ್ರ ಪುತ್ರಿ ಸುಹಾನಾ ಖಾನ್ ಸಹ ನ್ಯೂಯಾರ್ಕ್ನಲ್ಲಿಯೇ ಸಿನಿಮಾ ಶಿಕ್ಷಣ ಪಡೆದಿದ್ದು, ಈಗಾಗಲೇ ಒಂದು ಕಿರು ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ದಿ ಆರ್ಚಿಸ್’ ಸಿನಿಮಾದಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ.
ಶಾರುಖ್ ಖಾನ್ ಪುತ್ರ ಮಾತ್ರವೇ ಅಲ್ಲದೆ, ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಪುತ್ರಿ ಆದ್ಯಾ ಸೇರಿದಂತೆ ಇನ್ನೂ ಹಲವು ಸೆಲೆಬ್ರಿಟಿಗಳ ಮಕ್ಕಳು ಧೀರೂಬಾಯ್ ಅಂಬಾನಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದು, ನಿನ್ನೆಯ ಶಾಲಾ ವಾರ್ಷಿಕೋತ್ಸವದಲ್ಲಿ ಅವರೆಲ್ಲ ಭಾಗಿಯಾಗಿದ್ದರು. ಐಶ್ವರ್ಯಾ ರೈ ಪುತ್ರಿ ಸಹ ನಿನ್ನೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದರು.
ಡಂಕಿಯಲ್ಲಿ ಸೆಕ್ಸ್-ಗಿಕ್ಸ್ ಇಲ್ಲಾ ತಾನೆ- ಅಪ್ಪನೊಟ್ಟಿಗೆ ನೋಡ್ಬೋದಾ? ನೆಟ್ಟಿಗನ ಪ್ರಶ್ನೆಗೆ ಶಾರುಖ್ ಹೇಳಿದ್ದೇನು?