ಐಶ್ವರ್ಯ ರೈಯನ್ನು ಅಭಿಷೇಕ್ ಬಚ್ಚನ್ ಮದ್ವೆಯಾಗಿದ್ದೇಕೆ? ಕಾಫಿ ವಿತ್ ಕರಣ್ನಲ್ಲಿ ನಟ ಹೇಳಿದ್ದೇನು? ಇಲ್ಲಿದೆ ವಿವರ
ಸದ್ಯ ಬಿ-ಟೌನ್ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಸುದ್ದಿ. ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದಾಗಿನಿಂದ ಒಂದರ ಮೇಲೊಂದು ಘಟನೆಗಳು ಇವರಿಬ್ಬರೂ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎನ್ನುವತ್ತಲೇ ಬೆರಳು ಮಾಡಿ ತೋರಿಸುತ್ತಿದೆ.
ಅಷ್ಟಕ್ಕೂ ಅಭಿಷೇಕ್ ಅವರು ಐಶ್ವರ್ಯ ರೈಯನ್ನು ಮದ್ವೆಯಾಗಿದ್ದೇಕೆ ಎನ್ನುವ ಬಗ್ಗೆ ಇದೀಗ ಮತ್ತೆ ಚರ್ಚೆ ಶುರುವಾಗಿದೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಮದ್ವೆಯಾದದ್ದು 2007ರಲ್ಲಿ, ಅಂದರೆ 16 ವರ್ಷಗಳ ಹಿಂದೆ. ಇವರದ್ದು ಪ್ರೇಮ ವಿವಾಹ. ಅಷ್ಟಕ್ಕೂ ಐಶ್ವರ್ಯ ರೈ ಅವರು ಅಭಿಷೇಕ್ಗಿಂತ ಮೂರು ವರ್ಷ ಚಿಕ್ಕವರು. ಈಚೆಗಷ್ಟೇ ಐಶ್ವರ್ಯ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, ಅಭಿಷೇಕ್ ಅವರಿಗೆ ಈಗ 47 ವರ್ಷ ವಯಸ್ಸು. ಐಶ್ವರ್ಯಾ ಮತ್ತು ಅಭಿಷೇಕ್ ಮದುವೆಗೆ ಮುನ್ನವೇ ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಆ ಬಳಿಕ ಇಬ್ಬರ ಮದುವೆಯಾಗಿತ್ತು. ಈ ಮದುವೆ ಅಮಿತಾಭ್ ಅವರ ಪುತ್ರಿ ಶ್ವೇತಾ ಅವರಿಗೆ ಇಷ್ಟವಿರಲಿಲ್ಲ. ಅವರಿಗೆ ಅಭಿಷೇಕ್ ಅವರ ಮಾಜಿ ಲವರ್ ಕರಿಷ್ಮಾ ಕಪೂರ್ ಅವರನ್ನು ಅಣ್ಣನಿಗೆ ಕೊಟ್ಟು ಮದ್ವೆ ಮಾಡಿಸಬೇಕು ಎಂದುಕೊಂಡಿದ್ದರು. ಹೀಗೆ ಬಚ್ಚನ್ ಕುಟುಂಬದ ಕೆಲವರ ವಿರೋಧದ ನಡುವೆ ಈ ಮದುವೆ ನಡೆದಿತ್ತು.
ಐಶ್-ಅಭಿಷೇಕ್ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಸೊಸೆಯನ್ನು ಅನ್ಫಾಲೋ ಮಾಡಿದ ಅಮಿತಾಭ್? ಅಸಲಿಯತ್ತೇನು?
ಇವರು ಮದುವೆಯಾದ ಸಂದರ್ಭದಲ್ಲಿ ಐಶ್ವರ್ಯ ರೈ ಅವರು ಮಿಸ್ಸ್ ವರ್ಲ್ಡ್ ಪಟ್ಟ ಪಡೆದಿದ್ದೂ ಅಲ್ಲದೇ, ಚಿತ್ರರಂಗದ ಉತ್ತುಂಗದಲ್ಲಿದ್ದರು. ಇವರು ಇಷ್ಟು ಫೇಮಸ್ ಎನ್ನೋ ಕಾರಣಕ್ಕೆ ಅಭಿಷೇಕ್ ವಯಸ್ಸಿನಲ್ಲಿ ಹಿರಿಯವಳಾದರೂ ಮದ್ವೆಯಾದರು ಎಂದು ಹಲವರುಹೇಳುತ್ತಿದ್ದರೆ, ಅಮಿತಾಭ್ ಅವರ ಮಗ ಎನ್ನುವ ಕಾರಣಕ್ಕೆ ಐಶ್ವರ್ಯ ಈ ಮದುವೆಗೆ ಒಪ್ಪಿಕೊಂಡರು ಎಂದು ಹೇಳಲಾಗುತ್ತಿತ್ತು.
ಈ ಹೇಳಿಕೆ ದಿನಕ್ಕೊಂದು ರೂಪ ಪಡೆಯುತ್ತಿದ್ದ ನಡುವೆಯೇ ಖುದ್ದು ಅಭಿಷೇಕ್ ಅವರು, ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ, ತಾವು ಏಕೆ ಐಶ್ವರ್ಯ ಅವರನ್ನು ಮದ್ವೆಯಾಗಿದ್ದು ಎಂಬ ಬಗ್ಗೆ ವಿವರಿಸಿದ್ದರು. ನಾನು ಅಮಿತಾಭ್ ಬಚ್ಚನ್ ಅವರ ಮಗ ಅಥವಾ ನಾನು ಸ್ಟಾರ್ ಎಂಬ ಕಾರಣಕ್ಕಾಗಿ ಐಶ್ವರ್ಯಾ ನನ್ನನ್ನು ಮದುವೆಯಾಗಲಿಲ್ಲ. ಅಲ್ಲದೆ ಆಕೆ ಜಗತ್ತಿನ ಅತ್ಯಂತ ಬ್ಯೂಟಿಫುಲ್ ಗರ್ಲ್ ಎಂಬ ಕಾರಣಕ್ಕೆ ಅಥವಾ ಆಕೆ ಬಾಲಿವುಡ್ನ ಉತ್ತುಂಗದಲ್ಲಿ ಇದ್ದಳು ಎನ್ನುವ ಕಾರಣಕ್ಕೆ ಮದುವೆಯಾಗಲಿಲ್ಲ. ಬದಲಿಗೆ ನಾವು ಪ್ರೀತಿಯಲ್ಲಿ ಇದ್ದೆವು. ಹಲವು ವರ್ಷ ಪರಸ್ಪರ ಪ್ರೀತಿಸುತ್ತಿದ್ದೆವು. ಅದಕ್ಕಾಗಿಯೇ ಮದ್ವೆಯಾಗಿದ್ದೇ ವಿನಾ ಈ ರೀತಿ ರೂಮರ್ಸ್ ಹರಡಬೇಡಿ ಎಂದಿದ್ದರು.