ಕಳೆದ 95 ದಿನಗಳಿಂದ ಶಾರುಖ್ ಖಾನ್ ಅವರ ದರ್ಶನಕ್ಕಾಗಿ ಅವರ ಮನೆಯ ಎದುರು ಕಾಯುತ್ತ ಕುಳಿತಿದ್ದ ಅಭಿಮಾನಿಯೊಬ್ಬನ ಆಸೆಯನ್ನು ಕೊನೆಗೂ ಈಡೇರಿಸಿದ್ದಾರೆ ನಟ.
ಅತಿರೇಕದ ಅಭಿಮಾನಿಯೊಬ್ಬನ ಬದುಕು ಬಾಲಿವುಡ್ ನಟ ಶಾರುಖ್ ಖಾನ್ನನ್ನು ಕಣ್ತುಂಬ ನೋಡಿ ಕೊನೆಗೂ ಸಾರ್ಥಕವಾಗಿದೆ! ಜಾರ್ಖಂಡ್‌ನ ಮೊಹಮ್ಮದ್ ಅನ್ಸಾರಿ ಎಂಬಾತ ಮೂರು ತಿಂಗಳು ಹುಚ್ಚನಂತೆ ಶಾರುಖ್ ಖಾನ್ ಮನೆಯ ಎದುರು ಕುಳಿತು ನಟನ ತಪಸ್ಸು ಮಾಡುತ್ತಿದ್ದ. ಶಾರುಖ್ ದರ್ಶನಕ್ಕಾಗಿ ಅವರ ಮನೆ ಮನ್ನತ್ ಎದುರು ಕಾಯುತ್ತಿದ್ದ. ನಾನು ಒಮ್ಮೆ ಶಾರುಖ್ ಖಾನ್ರನ್ನು ಭೇಟಿಯಾಗಲೇ ಬೇಕು ಎಂದು ಹಠ ಹಿಡಿದು ಕೂತಿದ್ದ. ಕೈಯಲ್ಲಿ ಫಲಕ ಹಿಡಿದಿದ್ದು, ಅದರಲ್ಲಿ ಎಷ್ಟನೇ ದಿನ ಎಂಬುದನ್ನು ದಿನವೂ ಬದಲಿಸುತ್ತಿದ್ದ. ತನ್ನ ಕಂಪ್ಯೂಟರ್ ಸೆಂಟರ್ ಅನ್ನು ಮುಚ್ಚಿ ನಟನ ದರ್ಶನಕ್ಕಾಗಿ ಬಂದು ಕೂತಿದ್ದ. ಕೊನೆಗೂ ಅಭಿಮಾನಿಗಳ ತಪಸ್ಸಿಗೆ ಶಾರುಖ್ ಒಲಿದಿದಿದ್ದಾರೆ! ಬರೋಬ್ಬರಿ 95 ದಿನಗಳ ಬಳಿಕ ದರ್ಶನ ಕೊಟ್ಟಿದ್ದಾರೆ!
ಶಾರುಖ್ ಖಾನ್ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಇರುವ ನಾಯಕ. ನಾನು ಅವರ ದೊಡ್ಡ ಅಭಿಮಾನಿ. ಅವರನ್ನು ಭೇಟಿಯಾಗಲೇ ಬೇಕು ಎಂದು ಬಂದಿದ್ದೇನೆ. ಶಾರುಖ್ ಭೇಟಿ ಮಾಡಿಯೇ ವಾಪಸ್ ಹೋಗುತ್ತೇನೆ. ಶಾರುಖ್ ಖಾನ್ ಚಿತ್ರಗಳು ನನಗೆ ಕಷ್ಟದ ಸಮಯದಲ್ಲಿ ಸ್ಫೂರ್ತಿ ನೀಡಿವೆ. ಅವರ ಜನ್ಮದಿನಕ್ಕಾಗಿ ಇಲ್ಲಿ ಕಾಯುವುದು ನನ್ನ ಪ್ರೀತಿ ಮತ್ತು ಕೃತಜ್ಞತೆಯನ್ನು ತೋರಿಸುವ ಮಾರ್ಗವಾಗಿದೆ ಎಂದು ಹೇಳಿದ್ದರು. ಈಗ ಶಾರುಖ್ ಭೇಟಿ ನೀಡಿ ಕೈಕುಲುಕಿದ್ದಾರೆ. ಏಳೇಳು ಜನ್ಮಗಳು ಪಾವನ ಆಯಿತು ಎನ್ನುವಂತೆ ತನ್ನ ನೆಚ್ಚಿನ ನಟನನ್ನು ಈಗ ಕಣ್ತುಂಬಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ!
undefined
ಇದು ಕೊನೆ ಮಾತು... ನಾನು ಸತ್ರೆ ನಿಮಗೇ ಶಾಪ ತಟ್ಟೋದು... ಗುರುಪ್ರಸಾದರ ಹಳೆ ವಿಡಿಯೋ ವೈರಲ್
ಅಷ್ಟಕ್ಕೂ ಚಿತ್ರ ತಾರೆಯರ ಮೇಲಿನ ಅಭಿಮಾನ ಎಂದರೆ ಸುಮ್ಮನೇ ಅಲ್ಲ. ಚಿತ್ರ ನಟರನ್ನು ಕಣ್ಣಿಗೆ ಕಾಣುವ ದೇವರು ಎಂದು ಎಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಅವರನ್ನು ನೋಡಲು ಪ್ರಾಣವನ್ನೂ ಪಣಕ್ಕಿಡುವವರೂ ಇದ್ದಾರೆ. ಅವರ ದರ್ಶನ ಭಾಗ್ಯವೊಂದೇ ತಮ್ಮ ಏಳೇಳು ಜನ್ಮದ ಪುಣ್ಯ ಎಂದುಕೊಳ್ಳುವ ಅತಿರೇಕದ ಅಭಿಮಾನಿಗಳಿಗೂ ಕೊರತೆಯೇನಿಲ್ಲ. ಇದೇ ಕಾರಣಕ್ಕೆ, ಚಿತ್ರತಾರೆಯರನ್ನೇ, ತಮ್ಮ ನೆಚ್ಚಿನ ನಟರನ್ನೇ ಅನುಸರಿಸಿ ರಕ್ತಪಾತ ಹರಿಸುತ್ತಿರುವವರೂ ಇದ್ದಾರೆ, ಲಾಂಗು- ಮಚ್ಚು ಬೀಸುತ್ತಾ ಅಪರಾಧ ಮಾಡುವವರೂ ಇದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರೂ ಇದ್ದಾರೆ, ಮದ್ಯ ವ್ಯಸನ- ಸ್ಟೈಲ್ ಸ್ಟೈಲಾಗಿ ಸ್ಮೋಕಿಂಗ್ ಮಾಡುವವರೂ ಇದ್ದಾರೆ, ಗುಟಕಾದಂಥ ಕೆಟ್ಟ ವ್ಯಸನಗಳಿಗೆ ದಾಸರಾಗುವವರೂ ಇದ್ದಾರೆ. ಅಪರಾಧ ಪ್ರಪಂಚದ ಒಳಹೊಕ್ಕವರು ಸಿಕ್ಕಿಬಿದ್ದಾಗ ಪೊಲೀಸರು ಕೇಳಿದಾಗ ಬಹುತೇಕ ಮಂದಿ ಹೇಳುವುದು ಇದನ್ನೇ. ಆ ಚಿತ್ರ ನೋಡಿ ಪ್ರೇರೇಪಿತನಾದೆ ಎನ್ನುವುದೇ. ಅದಕ್ಕೆ ತಕ್ಕಂತೆ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುವ ಸಲುವಾಗಿ ರಕ್ತಪಾತ ಹರಿಸುವ ಚಿತ್ರಗಳು ಇಂದು ಯಥೇಚ್ಛವಾಗಿ ಬರುತ್ತಿವೆ. ಇದು ಅಭಿಮಾನದ ಅತಿರೇಕಕ್ಕೆ ಇರುವ ಸಾಕ್ಷಿ. ಎಷ್ಟೆಂದರೂ ಯುವ ಸಮುದಾಯ ಒಳ್ಳೆಯದ್ದಕ್ಕಿಂತ ಕೆಟ್ಟದ್ದನ್ನೇ ಸ್ವೀಕರಿಸುವುದು ಹೆಚ್ಚಲ್ಲವೆ?
ಇದೇ ರೀತಿ ಹಿಂದೊಮ್ಮೆ ಯುವಕನೊಬ್ಬ ಗುಟ್ಕಾ ತಿನ್ನುತ್ತಾ ಸಿಕ್ಕಿಬಿದ್ದಾಗ, ಶಾರುಖ್ ಖಾನ್ ತಿಂದ್ರೆ ಏನೂ ಆಗಲ್ಲಾ, ನಾನು ತಿಂದ್ರೆ ಸಾಯ್ತೀನಾ ಕೇಳಿದ್ದ. ಇಂಥ ಅತಿರೇಕದ ಅಭಿಮಾನಿಗಳಲ್ಲಿ ಪೈಕಿ ಜಾರ್ಖಂಡ್‌ನ ಮೊಹಮ್ಮದ್ ಅನ್ಸಾರಿ ಕೂಡ ಒಬ್ಬಾತ. ಈತ ಸುಮಾರು 36 ದಿನಗಳಿಂದ ಶಾರುಖ್ ಖಾನ್ ದರ್ಶನಕ್ಕಾಗಿ ಅವರ ಮನೆ ಮನ್ನತ್ ಎದುರು ಕಾಯುತ್ತಿದ್ದಾನೆ! ನಾನು ಒಮ್ಮೆ ಶಾರುಖ್ ಖಾನ್ರನ್ನು ಭೇಟಿಯಾಗಲೇ ಬೇಕು ಎಂದು ಹಠ ಹಿಡಿದು ಕೂತಿದ್ದಾನೆ. ಇದರ ವಿಡಿಯೋ ವೈರಲ್ ಆಗಿದೆ. ತಾನು ಜಾರ್ಖಂಡ್‌ನ ಮೊಹಮ್ಮದ್ ಅನ್ಸಾರಿ ಎಂದು ಹೇಳಿಕೊಂಡಿರೋ ಈತ ಕೈಯಲ್ಲಿ ಫಲಕ ಹಿಡಿದಿದ್ದಾನೆ. ಅದರಲ್ಲಿ ಎಷ್ಟನೇ ದಿನ ಎಂಬುದನ್ನು ನೋಡಬಹುದಾಗಿದೆ. 35 ದಿನ ಎಂದು ಬರೆದುಕೊಂಡಿದ್ದಾನೆ. ನಿನ್ನೆ ಈ ವಿಡಿಯೋ ವೈರಲ್ ಆಗಿದ್ದು, ಈತನ ಅಭಿಮಾನಕ್ಕೆ ಪರ-ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಎಲ್ಲರೆದರೂ ಐಶ್ವರ್ಯಳನ್ನು ಒಂಟಿಯಾಗಿ ಬಿಟ್ಟು, ನಿಮ್ರಿತ್ ಪಕ್ಕ ಕುಳಿತ ಅಭಿಷೇಕ್! ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್