ಮಲಯಾಳಂ ಕಿರುತೆರೆಯ ನಟ ಕ್ರಿಸ್ ವೇಣುಗೋಪಾಲ್ ಮತ್ತು ನಟಿ ದಿವ್ಯಾ ಶ್ರೀಧರ್ ಮದುವೆ ಚರ್ಚೆ ನಿನ್ನೆ ಜೋರಾಗಿತ್ತು. ಇದೀಗ ಕ್ರಿಸ್ ತನ್ನ ಮೊದಲ ಹೆಂಡತಿ ಬಗ್ಗೆ ಮಾತಾಡಿದ್ದಾರೆ. ಆಕೆ ಕೊಡ್ತಿದ್ದ ಹಿಂಸೆ ಬಗ್ಗೆ ವಿವರಿಸಿದ್ದಾರೆ.
ಬೆಳ್ಳನೆ ಗಡ್ಡ ಬಿಟ್ಕೊಂಡು ವಯಸ್ಸಾದ ಸನ್ಯಾಸಿ ಥರ ಕಾಣ್ತಿದ್ದ ನಟ ಕ್ರಿಸ್ ವೇಣುಗೋಪಾಲ್ ಮದುವೆ ಆದದ್ದು ಸೋಷಿಯಲ್ ಮೀಡಿಯಾದಲ್ಲೆಲ್ಲ ಭಲೇ ಚರ್ಚೆ ಆಯ್ತು. ಅವರು ಮದುವೆಯಾದ ನಟಿ ದಿವ್ಯಾ ಅವರ ಮುಂದೆ ಯಂಗ್ ಆಗಿ ಕಾಣ್ತಿದ್ದದ್ದು ಸಾಕಷ್ಟು ಟ್ರೋಲಿಗರಿಗೂ ಒಳ್ಳೆ ಪಾರ್ಟಿ ಕೊಟ್ಟಾಂಗಾಗಿತ್ತು. ಇವರಿಬ್ಬರ ನಡುವೆ ಸಿಕ್ಕಾಪಟ್ಟ ವಯಸ್ಸಿನ ಅಂತರ ಇದೆ, ಅಪ್ಪ ಮಗಳು ಮದುವೆ ಆಗೋ ಥರ ಕಾಣ್ತಿದೆ ಅಂತೆಲ್ಲ ಜನ ಮಾತಾಡ್ಕೊಂಡರು. ಆದರೆ ಇಂದು ಈ ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ತಾವಿಬ್ಬರೂ ಮದುವೆ ಆಗೋದಕ್ಕೆ ಏನು ಕಾರಣ ಅನ್ನೋದನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಜನ ಇಷ್ಟೆಲ್ಲ ಮಾತಾಡಿದ್ರಲ್ಲಾ, ಅದರಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನೋದನ್ನು ಸರಿಯಾಗಿ ವಿವರಿಸಿ ತಿಳಿಸಿಕೊಟ್ಟಿದ್ದಾರೆ. ಸದ್ಯ ಇವರಿಬ್ಬರ ಮಾತಿನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮುಂದೆ ಹೋಗಿದೆ. ನಿನ್ನೆ ಕ್ರಿಸ್ ಬಗ್ಗೆ ಬಾಯಿಗೆ ಬಂದ ಹಾಗೆ ತಮಾಷೆ ಮಾಡಿಕೊಂಡು ನಗ್ತಿದ್ದವರೂ ಇದೀಗ ಅವರ ಮಾತು ಕೇಳಿ ಕೊಂಚ ಸಿಂಪತಿ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ಇಲ್ಲಿ ಕ್ರಿಸ್ ಮಾತಾಡಿದ್ದು ತನ್ನ ಮೊದಲ ಮದುವೆ ಬಗ್ಗೆ. ಜೊತೆಗೆ ತಾನು ಯಾಕಾಗಿ ಎರಡನೇ ಮದುವೆ ಆದೆ ಅನ್ನೋದರ ಬಗ್ಗೆ. ಕಳೆದ ಬುಧವಾರ ವೇಣುಗೋಪಾಲ್ ಹಾಗೂ ದಿವ್ಯ ಪರಸ್ಪರ ಒಪ್ಪಿ ಮದುವೆ ಆಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಗುರುವಾಯೂರಿನಲ್ಲಿ ಇಬ್ಬರ ವಿವಾಹ ನೆರವೇರಿತ್ತು.
undefined
ಸೈಕೋ ಜಯಂತ್ ವರ್ತನೆಗೆ ಚಿನ್ನುಮರಿ ಕಣ್ಣೀರು, ನೀನೇ ಮಾಡ್ಕೊಂಡಿದ್ದು, ಅನುಭವಿಸು ಅಂತಿರೋ ನೆಟ್ಟಿಗರು
ಇಬ್ಬರ ಮದುವೆ ಬಗ್ಗೆ ಕೆಲವರು ಅಪಹಾಸ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ವೇಣು ಗಡ್ಡ, ಕೂದಲು ಬೆಳ್ಳಗಾಗಿದೆ. ಹಾಗಾಗಿ ಆತನಿಗೆ ಬಹಳ ವಯಸ್ಸಾಗಿದೆ. ದಿವ್ಯಾಗೆ ಇನ್ನು ಚಿಕ್ಕ ವಯಸ್ಸು. ಹಣ, ಅಂತಸ್ತು ಇಂತಹ ಕಾರಣಕ್ಕೆ ಮದುವೆ ಆಗಿದ್ದಾರೆ ಎಂದು ಕೆಲವರು ದಿವ್ಯಾ ಅವರನ್ನು ಟ್ರೋಲ್ ಮಾಡ್ತಿದ್ದರು. ಕೆಲವರು ಕ್ರಿಸ್ ವೇಣುಗೋಪಾಲ್ ವಯಸ್ಸು 65 ಎಂದು ಕಾಮೆಂಟ್ ಮಾಡಿದ್ದರು.
ಇದಕ್ಕೆ ಕಾರಣ ಅವರ ವೇಷಭೂಷಣ. ಎಪ್ಪತ್ತು ಎಂಭತ್ತರಹರೆಯದವರೂ ಕೂದಲಿಗೆ ಕಲರ್ ಹಾಕ್ಕೊಂಡು ಮೇಕಪ್ಪು ಮಾಡ್ಕೊಂಡು ಯಂಗ್ ಆಗಿ ಕಾಣಿಸಲು ಹವಣಿಸೋ ಕಾಲ ಇದು. ಆದರೆ ಪಾಪ ಕ್ರಿಸ್ ಅವರಿಗೆ ಬಹಳ ಬೇಗ ಕೂದಲು ಬೆಳ್ಳಗಾಗಿ ಬಿಟ್ಟಿದೆ. ಅವರು ಅದಕ್ಕೆ ಬಣ್ಣ ಹಚ್ಚೋ ಗೋಜಿಗೇ ಹೋಗಿಲ್ಲ. ಹೀಗಾಗಿ ಜನ ಅವರಿಗೆ ಬಹಳ ವಯಸ್ಸಾಗಿದೆ ಅನ್ನೋಹಾಗೆ ಮಾತಾಡ್ತಿದ್ದಾರೆ. ಆದರೆ ಆತನ ವಯಸ್ಸು 49 ವರ್ಷ, ನನಗೆ 40 ವರ್ಷ ಎಂದು ದಿವ್ಯಾ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮದುವೆ ಬಗ್ಗೆ ಟ್ರೋಲ್ ವ್ಯಕ್ತವಾದ ಹಿನ್ನೆಲೆಯಲ್ಲಿ ಆಕೆ ಪ್ರತಿಕ್ರಿಯಿಸಿದ್ದಾರೆ.
ಇನ್ನು ವೇಣು ಗೋಪಾಲ್ ತಮ್ಮ ಮೊದಲ ಮಡದಿ ಬಗ್ಗೆ ಮಾತನಾಡಿರುವ ಮಾತುಗಳು ವೈರಲ್ ಆಗುತ್ತಿದೆ. ತಾವು ಯಾಕೆ ಆಕೆಯಿಂದ ದೂರಾಗಿದ್ದು ಎಂದು ಹೇಳಿದ್ದಾರೆ. 'ನನ್ನ ಮದುವೆ ಜೀವನ ಬರೀ ಟಾಕ್ಸಿಕ್ ಅಲ್ಲ. ಅದಕ್ಕಿಂತಲೂ ಘೋರವಾಗಿತ್ತು ಎಂದು ವೇಣುಗೋಪಾಲ್ ನೆನಪಿಸಿಕೊಂಡಿದ್ದಾರೆ. ನನ್ನ ಮೊದಲ ಮದುವೆ ಸಂಬಂಧ ಹೇಗಿತ್ತು ಅಂದ್ರೆ ನಾನು ನಮ್ಮ ಫ್ಯಾಮಿಲಿ ಜೊತೆ ಇರುವುದಕ್ಕೆ ಆಗುತ್ತಿರಲಿಲ್ಲ. ನಾನು ನನ್ನ ಹೆತ್ತವರನ್ನು ನೋಡಿಕೊಳ್ಳದೇ ಹೇಗಿರಲಿ. ಅದನ್ನು ಒಪ್ಪಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ ಎಂದು ವೇಣುಗೋಪಾಲ್ ಹೇಳಿಕೊಂಡಿದ್ದಾರೆ. ನನ್ನ ಮನೆಗೆ ನೆಂಟರು ಬರುವಂತಿಲ್ಲ, ಫೋನ್ ಮಾಡುವಂತಿಲ್ಲ, ಹೊರಗೆ ಹೋಗುವಂತಿಲ್ಲ.
ಐಶ್ವರ್ಯಾ ರೈ ಬರ್ತ್ ಡೇಗೆ ವಿಶ್ ಮಾಡದ ಬಚ್ಚನ್ ಕುಟುಂಬ, ಸಿಟ್ಟಲ್ಲಿ ಹೀಗೆ ಮಾಡೋದಾ ಫ್ಯಾನ್ಸ್!
ನಾನು ಮನೆಯ ಸಾಕು ಪ್ರಾಣಿಯಂತಾಗಿದ್ದೆ. ನಾನು ಯಾವುದೋ ಜೇಡ ಅಲ್ಲ, ಒಂದು ಗಾಜಿನ ಪಂಜರದಲ್ಲಿ ಇರುವುದಕ್ಕೆ. ನಾನು ಮನುಷ್ಯ, ಬಹಳ ನೋವಿನಿಂದ 6 ವರ್ಷಗಳ ಹಿಂದೆ ಆ ಜೀವನದಿಂದ ಹೊರ ಬಂದುಬಿಟ್ಟೆ ಎಂದು ಅವರು ತಿಳಿಸಿದ್ದರು. 2019ರಲ್ಲಿ ನಾನು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದೆ. 2022ರಲ್ಲಿ ಡಿವೋರ್ಸ್ ಸಿಕ್ಕಿತ್ತು. 9 ತಿಂಗಳ ಬಳಿಕ ನಾನು ಮತ್ತೊಬ್ಬರ ಜೊತೆ ಜೀವನ ಹಂಚಿಕೊಳ್ಳಲು ನಿರ್ಧರಿಸಿದೆ' ಎಂದಿದ್ದಾರೆ ವೇಣುಗೋಪಾಲ್.
ಸೋ ಸದ್ಯ ಇದರಿಂದಾದರೂ ಇವರಿಬ್ಬರ ಬಗ್ಗೆ ಟ್ರೋಲ್ ಮಾಡೋದು ಕಡಿಮೆ ಆಗಬಹುದೇನೋ. ಟ್ರೋಲ್, ವಿವಾದ ಏನೇ ಇರಲಿ, ಮದುವೆ ಆದವರು ಸುಖವಾಗಿರಲಿ ಅಂತ ಕೆಲವು ಒಳ್ಳೆ ಮನಸ್ಸಿನವರು ಹಾರೈಸುತ್ತಿದ್ದಾರೆ.