
ನಟ ಯಶ್ ಈಗ ಕೇವಲ ಕರ್ನಾಟಕದ ನಟನಾಗಿ ಉಳಿಯದೇ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದಲೇ ಬಾಲಿವುಡ್ನಿಂದ ಹಿಡಿದು ಎಲ್ಲಾ ಕಡೆಗಳ ಸ್ಟಾರ್ ನಟರು ಯಶ್ ಅವರ ಬಗ್ಗೆ ಹೊಗಳಿಕೆಯ ಮಾತನಾಡುವುದು ಸಹಜವೇ. ಅದರಲ್ಲಿಯೂ ಬಾಲಿವುಡ್ ಬಾದಶಾಹ ಎಂದೇ ಖ್ಯಾತಿ ಪಡೆದಿರುವ ಶಾರುಖ್ ಖಾನ್ ಅವರನ್ನೂ ಒಂದು ಹಂತದಲ್ಲಿ ಮಣಿಸಿದವರು ಯಶ್. ಅದು 'ಕೆಜಿಎಫ್ ಚಾಪ್ಟರ್ 1' ಬಿಡುಗಡೆ ಸಂದರ್ಭ. ಆ ಸಮಯದಲ್ಲಿ ಶಾರುಖ್ ಖಾನ್ ಅವರ 'ಝೀರೊ' ಚಿತ್ರ ಕೂಡ ಬಿಡುಗಡೆಯಾಗಿತ್ತು. ಆದರೆ ಯಶ್ ಚಿತ್ರದ ಮುಂದೆ ಶಾರುಖ್ ಚಿತ್ರ ಮಂಡಿಯೂರಿತು. ಮೊದಲ ಯತ್ನದಲ್ಲಿಯೇ ಯಶ್ ಬಾಕ್ಸಾಫೀಸ್‌ನಲ್ಲಿ ಬಾಲಿವುಡ್ ಕಿಂಗ್ರನ್ನು ಸೋಲಿಸಿದ್ದರು. ಆಗಲೇ ಶಾರುಖ್ ಅವರಿಗೆ ಯಶ್ ಬಗ್ಗೆ ಹೊಟ್ಟೆಕಿಚ್ಚು ಎಂದೇ ಭಾವಿಸಿದ ದಿನಗಳೂ ಇವೆ. ಆದರೆ ಶಾರುಖ್ ಅವರು, ಮುಂದಿನ ದಿನಗಳಲ್ಲಿ ಯಶ್ ಬಗ್ಗೆ ಒಳ್ಳೆಯ ಮಾತುಗಳನ್ನಾಗಿ ಈ ಸುದ್ದಿಯನ್ನು ಅಲ್ಲಗಳೆದಿದ್ದರು.
ಶಾರುಖ್ ಅವರು, ದಕ್ಷಿಣದ ನಟರ ಜೊತೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದಾರೆ. ಇದೀಗ ಅವರು ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಶ್ ಅವರ ಬಗ್ಗೆ ಪ್ರಸ್ತಾಪಿಸಿದ್ದು, ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಅಲ್ಲಿ ಭಾಗವಹಿಸಿದ್ದ ಶಾರುಖ್, ದಕ್ಷಿಣದ ಕೆಲವು ನಟರ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಯಶ್ ಅವರ ಹೆಸರನ್ನೂ ಪಡೆದುಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ, ಯಶ್ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಮುಂಬೈನಲ್ಲಿ ಇದ್ದಾಗ, ಶಾರುಖ್ ಖಾನ್ ಮನೆಗೆ ಭೇಟಿ ಕೊಟ್ಟಿದ್ದರು ಎಂದು ಕೂಡ ಹೇಳಲಾಗಿತ್ತು. ಅದಕ್ಕೆ ತಕ್ಕಂತೆಯೇ, ಯಶ್ ಹಲವು ವೇದಿಕೆಗಳಲ್ಲಿ ಶಾರುಖ್ ಖಾನ್ ಬಗ್ಗೆ ಮಾತಾಡಿದ್ದರು. ಅವರು ಈ ಚಿತ್ರ ನೋಡಬೇಕು ಎಂದಿದ್ದರು.
ಚಹಾ ಮಾರುತ್ತಿದ್ದ ಯಶ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ನಟನ ರೋಚಕ ಸ್ಟೋರಿ ಇದು...
ಅಂದಹಾಗೆ ಶಾರುಖ್ ಅವರಿಗೆ 2023-24 ಸಕ್ಸಸ್ ತಂದುಕೊಟ್ಟ ವರ್ಷ. ಪಠಾಣ್, ಜವಾನ್ ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಇದೀಗ 2025ರಲ್ಲಿ ಮತ್ತೊಮ್ಮೆ ನಸೀಬು ಪರೀಕ್ಷೆ ಮಾಡಲು ಹೊರಟಿದ್ದಾರೆ ಕಿಂಗ್ ಖಾನ್. ಪಠಾಣ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆ ಮುಂದಿನ ಸಿನಿಮಾಗೆ ಕೈಜೋಡಿಸಿದ್ದು, ಇದಕ್ಕೆ ಕಿಂಗ್ ಎಂದು ಹೆಸರಿಡಲಾಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆಯೂ ದುಬೈನಲ್ಲಿ ಮಾತನಾಡಿರುವ ಅವರು, ನಾನು ಇಲ್ಲಿ ಶೂಟಿಂಗ್ಗೆ ಬಂದವನಲ್ಲ. ಒಂದೆರಡು ತಿಂಗಳ ಬಳಿಕ ಮುಂಬೈನಲ್ಲಿ ಶೂಟಿಂಗ್ ನಡೆಯಲಿದೆ. ಸದ್ಯ ಚಿತ್ರದ ಬಗ್ಗೆ ಏನೂ ಹೇಳಬಾರದು ಎಂದು ನಿರ್ದೇಶಕರ ಆದೇಶವಿರುವ ಕಾರಣ ಏನೂ ಹೇಳಲಾರೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.