ಕುತೂಹಲ ಮೂಡಿಸಿದ ಶಾರುಖ್​​ ದೀಪಿಕಾ ಹೊಸ ಪ್ರೊಮೋ: ಪಠಾಣ್​ 2 ಅಲ್ವಂತೆ! ಹಾಗಿದ್ರೆ ಇದೇನು?

By Suvarna News  |  First Published Dec 31, 2023, 5:08 PM IST

ಕುತೂಹಲ ಮೂಡಿಸಿದ ಶಾರುಖ್​​ ದೀಪಿಕಾ ಹೊಸ ಪ್ರೊಮೋ: ಇದು ಪಠಾಣ್​ 2 ಪ್ರೊಮೋ ಅಲ್ಲ. ಹಾಗಿದ್ದರೆ ಇದೇನು ಗೊತ್ತಾ?  
 


ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್​ ಚಿತ್ರ ಬ್ಲಾಕ್​ಬಸ್ಟರ್​ ಎಂದು ಸಾಬೀತಾಗಿತ್ತು. ಇದರಲ್ಲಿ ಇವರಿಬ್ಬರ ಕೆಮೆಸ್ಟ್ರಿಗೆ ಸಿನಿ ಪ್ರಿಯರು ಮನಸೋತರು. ನಾಲ್ಕೈದು ವರ್ಷಗಳಿಂದ ಒಂದರ ಮೇಲೊಂದು ಫ್ಲಾಪ್​ ಚಿತ್ರ ನೀಡಿದ್ದ ಶಾರುಖ್​ ಖಾನ್​ ಫೀನಿಕ್ಸ್​ ಪಕ್ಷಿಯಂತೆ ಪಠಾಣ್​ ಮೂಲಕ ಮತ್ತೆ ಚಿಗುರಿದರು. ಜೊತೆಗೆ ಮಕಾಡೆ ಮಲಗಿದ್ದ ಬಾಲಿವುಡ್​ಗೆ ಜೀವ ತುಂಬಿದರು. ಇದಾದ ಬಳಿಕ ಜೋಡಿ ಜವಾನ್​ನಲ್ಲಿಯೂ ಚಿಂದಿ ಉಡಾಯಿಸಿತು. ಇದು ಕೂಡ ಬ್ಲಾಕ್​ಬಸ್ಟರ್ ಆಯಿತು. ಇದಾದ ಬಳಿಕ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಪ್ರೊಮೋ ಒಂದು ಹರಿದಾಡುತ್ತಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಮತ್ತೊಂದು ಯೋಜನೆಗಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಹಿಂಟ್​ ನೀಡಲಾಗಿದೆ. ಇದರಲ್ಲಿ ಯಾವುದೋ ಪ್ರಾಜೆಕ್ಟ್​ ಒಂದರ ಬಗ್ಗೆ ಹುಡುಕುತ್ತಿರುವ ದೀಪಿಕಾ ಕೊನೆಗೂ ನನಗೆ ಪ್ರಾಜೆಕ್ಟ್​ ಸಿಕ್ಕಿತು ಎನ್ನುತ್ತಾರೆ. ಇನ್ನೊಂದು ಕಡೆ ಶಾರುಖ್​ ಖಾನ್​ ಕಾಣಿಸಿಕೊಳ್ಳುತ್ತಾರೆ. ಇದನ್ನು ನೋಡಲು ಹಲವರು ಪಠಾಣ್​ 2 ಬರುತ್ತಿದೆ ಎಂದಿದ್ದರೆ, ಅದೂ ಅಲ್ಲ ಎಂದು ಇದಾಗಲೇ ಸ್ಪಷ್ಟಪಡಿಸಲಾಗಿದೆ.  

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿ ತೆರೆಯ ಮೇಲೆ ತುಂಬಾ ಇಷ್ಟವಾಗಿದೆ. ದೀಪಿಕಾ ಪಡುಕೋಣೆ ತನ್ನ ಚೊಚ್ಚಲ ಚಿತ್ರ 'ಓಂ ಶಾಂತಿ ಓಂ' ನಲ್ಲಿ ಕಿಂಗ್ ಖಾನ್ ಜೊತೆ ಪರದೆಯನ್ನು ಹಂಚಿಕೊಳ್ಳುವ ಮೂಲಕ ಕೋಲಾಹಲವನ್ನು ಸೃಷ್ಟಿಸಿದರು. ಇದರ ನಂತರ, ಚೆನ್ನೈ ಎಕ್ಸ್‌ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರಗಳಲ್ಲಿ ಅವರ ಜೋಡಿ ತುಂಬಾ ಇಷ್ಟವಾಯಿತು. ಈ ವರ್ಷ, ಶಾರುಖ್ ಅವರ ಎರಡು ಬ್ಲಾಕ್‌ಬಸ್ಟರ್ ಚಿತ್ರಗಳಾದ ಪಠಾಣ್ ಮತ್ತು ಜವಾನ್‌ನಲ್ಲಿ ದೀಪಿಕಾ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಈಗ ಮತ್ತೊಮ್ಮೆ ಇವರ ಜೋಡಿ ಭದ್ರವಾಗಿದೆ. 

Tap to resize

Latest Videos

ಆದರೆ ಇವರಿಬ್ಬರೂ ನಟಿಸ್ತಿರೋ ಈ ಪ್ರಾಜೆಕ್ಟ್​ ಯಾವುದು ಎಂದು ಫ್ಯಾನ್ಸ್​ ತಲೆಗೆ ಹುಳು ಬಿಟ್ಟುಕೊಂಡಿದ್ದಾರೆ.  ಅಷ್ಟಕ್ಕೂ ಇದು ಯಾವುದೇ ಚಿತ್ರದ ಬಗ್ಗೆ ಅಲ್ಲ. ಇದು ಜಾಹೀರಾತಿನ ಪ್ರೊಮೋ. ಈ ಬಾರಿ ಕಾರು ಕಂಪನಿಯೊಂದರ ಜಾಹೀರಾತಿನಲ್ಲಿ ಇಬ್ಬರೂ ಸ್ಟಾರ್‌ಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ದೊಡ್ಡ ಕಾರ್ ಬ್ರಾಂಡ್ ದೀಪಿಕಾ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡಿದೆ. ಈ ಮೊದಲು ಶಾರುಖ್ ಆ ಕಂಪನಿಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ದೀಪಿಕಾ ಮತ್ತು ಶಾರುಖ್ ಕಂಪನಿಯ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಮೂಲಗಳು ಹೇಳಿವೆ.  

ಶಾರುಖ್ ಖಾನ್​​ಗೆ ಡಬಲ್​ ಶಾಕ್​ ನೀಡಿದ ಪ್ರಭಾಸ್​! ಮುಂಗಡ ಬುಕಿಂಗ್​ನಲ್ಲೂ ದಾಖಲೆ, ಕಟೌಟ್​ನಲ್ಲೂ ಹೊಸ ರೆಕಾರ್ಡ್​

ಈ ಜಾಹೀರಾತಿನ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಇಬ್ಬರೂ ಸೂಪರ್‌ಸ್ಟಾರ್‌ಗಳು ಕಂಪೆನಿಯ ಕಾರಿನ ವೈಶಿಷ್ಟ್ಯಗಳನ್ನು ವಿವರಿಸುತ್ತಿದ್ದಾರೆ. ಈ ಜಾಹೀರಾತಿನ ಟೀಸರ್ ಕಳೆದ ಶುಕ್ರವಾರ ರಾತ್ರಿ ಬಿಡುಗಡೆಯಾಗಿದೆ. ಸಂಪೂರ್ಣ ಜಾಹೀರಾತು ಇನ್ನೂ ಬಿಡುಗಡೆಯಾಗಿಲ್ಲ. ಜಾಹೀರಾತಿನ ಟೀಸರ್‌ನಲ್ಲಿ ಇಬ್ಬರು ಸ್ಟಾರ್‌ಗಳು 'ಸೂಪರ್ ಪತ್ತೇದಾರಿ' ಅವತಾರದಲ್ಲಿ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಿದ್ದಾರೆ.

ಅಂದಹಾಗೆ, ದೀಪಿಕಾ ಪಡುಕೋಣೆಗೆ ಈ ವರ್ಷ ತುಂಬಾ ಒಳ್ಳೆಯದು. ಜವಾನ್ ಮತ್ತು ಪಠಾಣ್‌ನಂತಹ ಚಿತ್ರಗಳ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದ ದೀಪಿಕಾಗೆ 2024 ಕಡಿಮೆ ವಿಶೇಷವಲ್ಲ. ಅವರ 'ಫೈಟರ್' ಚಿತ್ರ ಜನವರಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಅವರು ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಅದೇ ಸಮಯದಲ್ಲಿ, ಶಾರುಖ್ ಖಾನ್ ಇತ್ತೀಚಿನ ದಿನಗಳಲ್ಲಿ 'ಡಂಕಿ' ಚಿತ್ರದ ಬಗ್ಗೆ ಚರ್ಚೆಯಲ್ಲಿದ್ದಾರೆ.

'ಫೈಟರ್'​ ಹಾಡು ರಿಲೀಸ್​: ದೀಪಿಕಾ ಬೋಲ್ಡ್​ ಅವತಾರ ನೋಡಿ ಬಿಚ್ಚಿದ್ರೆ ಮಾತ್ರ ಬೆಲೆನಾ ಕೇಳಿದ ನೆಟ್ಟಿಗರು!

click me!