ಶಾರುಖ್ ಖಾನ್ ಅವರಿಗೆ ಸೋಫಾ ಖರೀದಿಸಲು ದುಡ್ಡಿಲ್ಲದ ಸಮಯದಲ್ಲಿ ಗೌರಿ ಖಾನ್ ಮಾಡಿದ ಪಣವೇನು ಎಂಬ ಬಗ್ಗೆ ನಟ ಈಗ ಬಹಿರಂಗಗೊಳಿಸಿದ್ದಾರೆ.
ಸದ್ಯ ನಟ ಶಾರುಖ್ ಖಾನ್, ಬಾಲಿವುಡ್ನಲ್ಲಿ ಕಮ್ಬ್ಯಾಕ್ ಮಾಡಿ ಪಠಾಣ್ (Pathaan) ಮೂಲಕ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಅವರ ಜವಾನ್ ಚಿತ್ರದ ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. ಅದೇ ರೀತಿ ಅವರ ಪತ್ನಿ ಗೌರಿ ಖಾನ್ ಕೂಡ ಇನ್ಟೀರಿಯರ್ ಡಿಸೈನ್ ಮೂಲಕ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಇದೀಗ ನೂರಾರು ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ ಈ ದಂಪತಿ. ಆದರೆ ಹಿಂದೊಮ್ಮೆ ಹಲವಾರು ಯಶಸ್ವಿ ಸೆಲೆಬ್ರಿಟಿಗಳಂತೆ ಈ ದಂಪತಿ ಕೂಡ ಹಣಕ್ಕಾಗಿ ತೊಂದರೆ ಅನುಭವಿಸಿದವರೇ. ಇವರು ಕೈಯಲ್ಲಿ ಹಣವಿಲ್ಲದೇ ಹಿಂದೊಮ್ಮೆ ಹಲವಾರು ತೊಂದರೆಗಳನ್ನು ಅನುಭವಿಸಿದ್ದಾರೆ. ಅವುಗಳು ಹಲವಿದ್ದರೂ, ಇದೀಗ ಅಂಥದ್ದೇ ಒಂದು ನೋವಿನ ದಿನಗಳನ್ನು ಗೌರಿ ಖಾನ್ ಶೇರ್ ಮಾಡಿಕೊಂಡಿದ್ದಾರೆ. ಕಾಫಿ ಟೇಬಲ್ ಬುಕ್ ಮೈ ಲೈಫ್ ಇನ್ ಡಿಸೈನ್ (Life in Design) ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. ಅದು ತಾವು ಸೋಫಾ ಖರೀದಿಸಲು ಹೋಗಿದ್ದ ಸಂದರ್ಭದಲ್ಲಿ ಆಗಿರುವ ಘಟನೆ ಆಗಿದೆ.
ಹೌದು. ಶಾರುಖ್ ಖಾನ್ ಮತ್ತು ಗೌರಿ ದಂಪತಿ ಮನೆಗೊಂದು ಸೋಫಾ (Sofa) ಖರೀದಿಸಲು ಹೋಗಿದ್ದರು. ಆಗ ಗೌರಿ ಖಾನ್ ಗರ್ಭಿಣಿಯಾಗಿದ್ದರು. ಮೊದಲ ಮಗು ಆರ್ಯನ್ ಖಾನ್ ನಿರೀಕ್ಷೆಯಲ್ಲಿದ್ದರು. ನಾವು ಮೊದಲ ಮನೆ ಖರೀದಿಸಿದ್ದೆವು. ಹಾಗಾಗಿ ಮನೆಗೆ ಅಗತ್ಯ ವಸ್ತುಗಳನ್ನು ಜೋಡಿಸುತ್ತಿದ್ದೆವು. ನಾವು ನಮ್ಮಲ್ಲಿದ್ದ ಹಣದಿಂದ ಸ್ವಲ್ಪ ವಸ್ತುಗಳನ್ನು ಖರೀಸಿದಲು ನಿರ್ಧರಿಸಿದ್ದೆವು. ಈ ಸಂದರ್ಭದಲ್ಲಿ ಮನೆಗೆ ಬೇಕಾಗುವ ಸಾಮಾನು ನೋಡಲು ಹೋದಾಗ ಒಂದು ಸೋಫಾ ಕಣ್ಣಿಗೆ ಬಿದ್ದಿತ್ತು. ಅದನ್ನು ಖರೀದಿಸಲು ಹೋಗಿದ್ದೆವು. ಆದರೆ ಅದರ ಬೆಲೆ ಕೇಳಿ ದಿಗಿಲಾಯಿತು. ಸ್ವಲ್ಪ ಡಿಸೈನ್ ಇದ್ದ ಕಾರಣ ಈ ಸೋಫಾಕ್ಕೆ ಇಷ್ಟೊಂದು ಬೆಲೆ ಇದ್ದುದು ಕಂಡು ಅಚ್ಚರಿಯಾಯಿತು ಎಂದಿದ್ದಾರೆ ಶಾರುಖ್.
Twinkle Khanna: ಹೊಟ್ಟೆಯೊಳಗೆ ಫುಲ್ ಗ್ಯಾಸ್ ಇದ್ದಾಗ್ಲೇ ಶಾರುಖ್ ಎತ್ತಿಕೊಂಡು ಬಿಟ್ರಪ್ಪೋ...
ಅಚ್ಚರಿಗೊಂಡ ಶಾರುಖ್ ಖಾನ್ ಸೋಫಾ ಖರೀದಿಗೆ ಅಷ್ಟೊಂದು ದುಡ್ಡು ಇಲ್ಲದೇ ವಾಪಸ್ ಬಂದರೆ ಗೌರಿ ಖಾನ್ ಮಾತ್ರ ಅಲ್ಲಿಯೇ ಒಂದು ಪಣ ತೊಟ್ಟರಂತೆ. ನಾವಿದ್ದ ಪರಿಸ್ಥಿತಿಯಲ್ಲಿ ನಾವು ಡಿಸೈನರ್ ಸೋಫಾ ಖರೀದಿಸಲು ಸಾಧ್ಯವಿರಲಿಲ್ಲ ಎಂಬ ಕಾರಣಕ್ಕೆ ಗೌರಿ ಅಂದೇ ಡಿಸೈನಿಂಗ್ ಕೆಲಸ ಮಾಡುವ ಪಣತೊಟ್ಟಳು ಎಂದಿದ್ದಾರೆ ಶಾರುಖ್. ಗೌರಿಯ ಖಾನ್ ಅವರ ಡಿಸೈನಿಂಗ್ ಲೈಫ್ ಶುರುವಾಗಿದ್ದು ಅಲ್ಲಿಂದಲೇಯಂತೆ! 'ಆರಂಭದಲ್ಲಿ ನಾನು ಎಲ್ಲೋ ಹೊರಗಡೆ ಹೋಗಿದ್ದಾಗ ಲೆದರ್ ಖರೀದಿಸಿಕೊಂಡು ಬಂದೆ. ನಂತರ ಬಡಗಿ ಬಳಿ ಒಂದು ಸೋಫಾ ಮಾಡಿಸಿದೆವು. ಇದಕ್ಕಾಗಿ ಗೌರಿ ಖಾನ್ ನೋಟ್ಬುಕ್ನಲ್ಲಿ (Notebook) ಒಂದು ಡಿಸೈನ್ ರೆಡಿ ಮಾಡಿದ್ದಳು' ಎಂದು ನೆನಪು ಮೆಲುಕು ಹಾಕಿದ್ದಾರೆ.
ಹೊಸ ಮನೆ ಮನ್ನತ್ (Mannath) ಖರೀದಿಸಿದಾಗ ಕೈಯಲ್ಲಿದ್ದ ಹಣವೆಲ್ಲ ಖಾಲಿಯಾಗಿತ್ತು. ಆ ಸಂದರ್ಭ ಮನೆಯಲ್ಲಿ ಡಿಸೈನ್ ಮಾಡಲು ಹಣವಿರಲಿಲ್ಲ. ಹಾಗಾಗಿ ಮತ್ತೆ ಗೌರಿ ಖಾನ್ ಡಿಸೈನರ್ ಕೆಲಸವನ್ನು ಮಾಡಬೇಕಾಯಿತು. ನಿಧಾನವಾಗಿ ಮನೆಗೆ ಅಗತ್ಯವಸ್ತುಗಳನ್ನು ಸೇರಿಸಿ ಅದನ್ನು ಬಂಗಲೆಯಾಗಿ ಬದಲಾಯಿಸಿದೆವು. ಅಷ್ಟು ದೊಡ್ಡ ಮನೆಗೆ ತಾನೇ ಡಿಸೈನ್ ಮಾಡಿದ್ದಕ್ಕಾಗಿ ಗೌರಿ ಖಾನ್ ಅವರನ್ನು ಅವರ ಸ್ನೇಹಿತರು ಹಾಗೂ ಸಂಬಂಧಿಕರು ಹೊಗಳಿದ್ದರು. ನಂತರ ಗೌರಿ ಖಾನ್ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಲೇ ಇದ್ದಾಳೆ. ಡಿಸೈನರ್ಗೆ ಬೇಕಾದ ಅಗತ್ಯ ವಿಚಾರಗಳನ್ನು ನಿಧಾನವಾಗಿ ಕಲಿಯಲಾರಂಭಿಸಿದಳು ಎಂದು ಶಾರುಖ್ ಖಾನ್ ಪತ್ನಿ ಬಗ್ಗೆ ಹೇಳಿದ್ದಾರೆ.
ಅಂದಹಾಗೆ, ಗೌರಿ ಖಾನ್ ಈ ಹಿಂದೆ ಡ್ರೀಮ್ ಹೋಮ್ಸ್ ವಿತ್ ಗೌರಿ ಖಾನ್ ಎಂಬ ಶೋ ನಡೆಸುತ್ತಿದ್ದರು. ಅದರಲ್ಲಿ ಅವರು ಸೆಲೆಬ್ರಿಟಿಗಳ ಮನೆಯನ್ನು ರೀ ಡಿಸೈನ್ ಮಾಡಿಕೊಡುತ್ತಿದ್ದರು. ಇನ್ನು ಇವರ ಡಿಸೈನ್ಗಳನ್ನು ನೆಟ್ಟಿಗರು ನೆಟ್ಫ್ಲಿಕ್ಸ್ನಲ್ಲಿ ಬಂದ ಫ್ಯಾಬುಲಸ್ ಲೈಫ್ ಆಫ್ ಬಾಲಿವುಡ್ (Bollywood) ವೈವ್ಸ್ನಲ್ಲಿ ನೋಡಿದ್ದಾರೆ.
Gauri Khan: ಭಾರಿ ಸುದ್ದಿಯಾಗ್ತಿದೆ ಶಾರುಖ್ ಮನೆ ಡಸ್ಟ್‌ಬಿನ್! ಯಾಕೆ ಅಂತೀರಾ?